Best Summer Destinations: ಸೆಲೆಬ್ರಿಟಿಗಳು ಮೆಚ್ಚಿದ ದಕ್ಷಿಣ ಭಾರತದ ಈ 5 ಗಿರಿಧಾಮಗಳನ್ನು ನೀವು ನೋಡಲೇಬೇಕು

ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ ಜನರು ತಂಪಾಗಿರುವ ಪ್ರದೇಶಗಳನ್ನು ಹುಡುಕುತ್ತಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಪ್ರವಾಸ ಎಂದರೆ ಮಾಲ್ಡೀವ್ಸ್‌, ದುಬೈ ಅಥವಾ ಲಂಡನ್‌ ಈ ತರಹದ ಪ್ರದೇಶಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುತ್ತವೆ. ಆದರೆ ಇಂತಹ ಗದ್ದಲದಿಂದ ದೂರವಿರಲು, ಶಾಂತಿಯುತವಾಗಿರುವ ಮತ್ತು ಖಾಸಗಿಯಾಗಿ ವಿಶ್ರಾಂತಿ ನೀಡುವ ತಾಣಗಳನ್ನೂ ಅವರು ಆಯ್ಕೆ ಮಾಡುತ್ತಾರೆ.

ದಕ್ಷಿಣ ಭಾರತದ ಕೆಲವು ಸುಂದರವಾದ ಗಿರಿಧಾಮಗಳು ಈಗ ಸೆಲೆಬ್ರಿಟಿಗಳ ಮೆಚ್ಚಿನ ತಾಣಗಳಾಗಿ ಗುರುತಿಸಿಕೊಂಡಿವೆ. ಇಲ್ಲಿ ಜನಸಂದಣಿ ಕಡಿಮೆ ಇರುತ್ತದೆ, ಪ್ರಕೃತಿ ವಾತಾವರಣ ಚೆನ್ನಾಗಿರುತ್ತದೆ ಮತ್ತು ಖಾಸಗಿತನ ಯಾವುದೆ ತೊಂದರೆ ಆಗುವುದಿಲ್ಲ. ಮೇಲಾಗಿ ಇಲ್ಲಿ ಬೇಸಿಗೆಯಲ್ಲಿ ತಂಪಾದ ವಾತಾವರಣಕ್ಕಾಗಿ ಈ ಸ್ಥಳಗಳು ಸೂಕ್ತವಾದ ಪ್ರದೇಶಗಳಾಗಿವೆ.

ದಕ್ಷಿಣ ಭಾರತದ ಐದು ಹಿಲ್‌ ಸ್ಟೇಷನ್‌ಗಳು ಕಳಗಿನಂತಿವೆ:

1. ಊಟಿ

ಬೇಸಿಗೆಯಲ್ಲಿ ಅತ್ಯಂತ ಜನಪ್ರಿಯವಾದ ಹಿಲ್ ಸ್ಟೇಷನ್‌ಗಳಲ್ಲಿ ಊಟಿ ಒಂದಾಗಿದೆ. ತಂಪಾದ ಹವಾಮಾನಕ್ಕಾಗಿ ಪ್ರಸಿದ್ಧವಾದ ಊಟಿ ಸೆಲೆಬ್ರಿಟಿಗಳಿಗೂ ಇಷ್ಟದ ಜಾಗವಾಗಿದೆ. ಹಲವಾರು ಬಾಲಿವುಡ್‌ ನಟರು ಇಲ್ಲಿ ಸಿನಿಮಾ ಶೂಟಿಂಗ್‌ ಹಾಗೂ ವಿಶ್ರಾಂತಿಗಾಗಿ ಬರುತ್ತಾರೆ. ಹೆರಿಟೇಜ್‌ ಹೋಟೆಲ್‌ಗಳು ಮತ್ತು ಮಂಜಿನ ವಾತಾವರಣವು ವಿಶ್ರಾಂತಿಗೆ ಸೂಕ್ತ. ಖಾಸಗಿ ವಿಲ್ಲಾಗಳೂ ಇಲ್ಲಿ ಲಭ್ಯ.

Best Summer Destinations

2. ಕೂನೂರು

ಊಟಿಗಿಂತ ಶಾಂತಿಯುತ ಮತ್ತು ಸುಂದರವಾದ ಗಿರಿಧಾಮವಾಗಿದೆ. ಊಟಿಯಿಂದ ಕೇವಲ 19 ಕಿ,ಮೀ ದೂರದಲ್ಲಿರುವ ಈ ಕೂನೂರು ಕಡಿಮೆ ಜನಸಂದಣಿ ಮತ್ತು ಹೆಚ್ಚು ಪ್ರಶಾಂತವಾಗಿರುತ್ತದೆ. ಮಂಜಿನ ಬೆಟ್ಟಗಳು, ಚಹಾ ತೋಟಗಳು ಇಲ್ಲಿ ಪ್ರಮುಖ ಆಕರ್ಷಣೆ ಆಗಿದೆ ಆದ್ದರಿಂದ ಬೇಸಿಗೆಕಾಲದಲ್ಲಿ ವಿಶ್ರಾಂತಿಗೆ ಇದು ಸೂಕ್ತ. ಅಮೀರ್ ಖಾನ್ ಬೇಸಿಗೆಯಲ್ಲಿ ತಮ್ಮ ಸಮಯವನ್ನು ಇಲ್ಲಿ ಕಳೆಯುತ್ತಾರೆ ಎಂದು ಹೇಳಲಾಗುತ್ತದೆ. ಈ ಜಾಗವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರವಾಗದಿರುವುದು ಇದರ ವಿಶೇಷತೆ.

ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು

3. ಮುನ್ನಾರ್‌

ಕೇರಳದ ಮುನ್ನಾರ್‌ ಹಸಿರು ಚಹಾ ತೋಟಗಳು ಮತ್ತು ತಂಪಾದ ಹವಾಮಾನದಿಂದ ಕೂಡಿರುವ ಸುಂದರವಾದ ಗಿರಿಧಾಮವಾಗಿದೆ. ಇಲ್ಲಿ ಹೆಚ್ಚಿನವರು ಸೈಟ್‌ಸೀಯಿಂಗ್‌ಗಿಂತ ರಿಸಾರ್ಟ್‌ನಲ್ಲಿ ಉಳಿದು ವಿಶ್ರಾಂತಿ ಪಡೆಯುಲು ಇಷ್ಟಪಡುತ್ತಾರೆ. ದೀಪಿಕಾ ಪಡುಕೋಣೆ ಮತ್ತು ಜಾನ್ವಿ ಕಪೂರ್ ಇಲ್ಲಿನ ಲಕ್ಸುರಿ ರೆಸಾರ್ಟ್‌ಗಳಲ್ಲಿ ಸಮಯವನ್ನು ಕಳೆದು ಪ್ರಕೃತಿಯನ್ನು ಆಸ್ವಾದಿಸಿದ್ದಾರೆ ಹೇಳಲಾಗುತ್ತದೆ.

Best Summer Destinations

4. ಕೂರ್ಗ್‌

ಬೆಂಗಳೂರಿನ ಸಮೀಪದಲ್ಲಿರುವ ಕೊಡಗು ಕರ್ನಾಟಕದ ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಒಂದು ಸುಂದರ ಗಿರಿಧಾಮವಾಗಿದೆ. ಬೇಸಿಗೆಯ ವಿರಾಮಕ್ಕೆ ಅತ್ಯಂತ ಸೂಕ್ತವಾದ ತಾಣ. ಇಲ್ಲಿನ ಕಾಫಿ ತೋಟಗಳು, ದಟ್ಟ ಅರಣ್ಯ ಮತ್ತು ಶಾಂತ ಪರಿಸರ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿನ ಐಷಾರಾಮಿ ಖಾಸಗಿ ವಿಲ್ಲಾಗಳು ಮತ್ತು ರೆಸಾರ್ಟ್‌ಗಳು ವಿಶ್ರಾಂತಿ ಪಡೆಯಲು ಅನುಕೂಲಕರವಾಗಿವೆ.

ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ

5. ವಯನಾಡ್‌

ಪ್ರಕೃತಿಯ ಮಡಿಲಲ್ಲಿ ಸಂಪೂರ್ಣ ವಿಶ್ರಾಂತಿ ಪಡೆಯಲು ಕೇರಳದ ವಯನಾಡ್ ಅತ್ಯಂತ ಸೂಕ್ತ ತಾಣ. ಇಲ್ಲಿನ ಪರಿಸರ ಸ್ನೇಹಿ ರೆಸಾರ್ಟ್‌ಗಳು, ದಟ್ಟ ಅರಣ್ಯ ಮತ್ತು ಆಹ್ಲಾದಕರ ಹವಾಮಾನವು ಬೇಸಿಗೆಯ ಬೇಗೆಯನ್ನು ಮರೆಸಿ ಮನಸ್ಸಿಗೆ ಮುದ ನೀಡುತ್ತವೆ.

Best Summer Destinations

ಈ ತರಹ ಪ್ರವಾಸದ ಹೊಸ ಆಯಾಮ

ದಕ್ಷಿಣ ಭಾರತದ ಈ ಗಿರಿಧಾಮಗಳು ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ನೆಚ್ಚಿನ 'ಪ್ರವಾಸ'ದ ತಾಣಗಳಾಗಿ ಹೊರಹೊಮ್ಮುತ್ತಿವೆ. ಇಲ್ಲಿ ಅಬ್ಬರದ ಪ್ರಚಾರಕ್ಕಿಂತ ಮನಸ್ಸಿನ ನೆಮ್ಮದಿಯೇ ಮುಖ್ಯ. ಮಾಲ್ಡೀವ್ಸ್ ಮತ್ತು ದುಬೈ ಪ್ರವಾಸಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸದ್ದು ಮಾಡುತ್ತಿದ್ದರೆ, ಇಲ್ಲಿ ತಂಪಾದ ಬೆಟ್ಟಗಳು ನಿಜವಾದ ವಿಶ್ರಾಂತಿಯ ತಾಣಗಳಾಗಿ ಮಾರ್ಪಟ್ಟಿವೆ. ಮಂಜಿನ ಮುಂಜಾನೆ, ತಂಪಾದ ಗಾಳಿ ಮತ್ತು ಪ್ರಕೃತಿಯ ಮಡಿಲಲ್ಲಿ ಕಳೆಯುವ ಅಮೂಲ್ಯ ಕ್ಷಣಗಳೇ ಈ ತಾಣಗಳ ನಿಜವಾದ ವೈಶಿಷ್ಟ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+