Bengaluru To Puducherry: ಬೆಂಗಳೂರಿನಿಂದ ಪಾಂಡಿಚೇರಿ ಪ್ರವಾಸ ಕೈಗೊಳ್ಳುವವರು ಏನೆಲ್ಲಾ ಮಾಡಬಹುದು?-ಇದೇ ಸೂಕ್ತ ಸಮಯ
ಸಾಮಾನ್ಯವಾಗಿ ವರ್ಷಾಂತ್ಯ ಹಾಗೂ ಹೊಸ ವರ್ಷಕ್ಕೆ ಸಮಯ ಕಳೆಯಲು ಪ್ರವಾಸ ಮಾಡಲು ಬೆಂಗಳೂರಿನಲ್ಲಿ ವಾಸಿಸುವ ಬಹುತೇಕ ಮಂದಿ ಪ್ಲಾನ್ ಮಾಡಿಕೊಂಡಿರುತ್ತಾರೆ. ನೀವು ಒಂದು ವೇಳೆ ಪ್ರಾವಾಸಕ್ಕೆ ಪಾಂಡಿಚೇರಿಯನ್ನು ಆಯ್ಕೆ ಮಾಡಿಕೊಂಡರೆ ಇಲ್ಲಿರುವ ಅದ್ಭುತ ರುಚಿ ನೀಡುವ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಲೇಬೇಕು. ಹಾಗಾದರೆ ಪಾಂಡಿಚೇರಿಗೆ ಪ್ರಮುಖವಾಗಿ ಬೆಂಗಳೂರಿನಿಂದ ಈ ಮಾರ್ಗದಲ್ಲಿ ಪ್ರವಾಸ ಬೆಳೆಸಿದರೆ ಉತ್ತಮ.
ಪಾಂಡಿಚೇರಿ ಗೋವಾದಂತೆಯೇ ಹೆಚ್ಚು ಜನಪ್ರಿಯ ಆಗಿರುವ ಪ್ರವಾಸಿ ತಾಣವಾಗಿದೆ. ಸ್ನೇಹಿತರು ಅಥವಾ ಕುಟುಂಬದೊಂದಿದೆ ಎಂಜಾಯ್ ಮಾಡಲು, ಅಥವಾ ಏಕಾಂಗಿಯಾಗಿ ಸಮಯ ಕಳೆಯಲು ಪಾಂಡಿಚೇರಿ ಯೋಗ್ಯವಾದ ತಾಣವಾಗಿದೆ. ಇನ್ನು ಫ್ರೆಂಚ್ ಶೈಲಿಯ ರುಚಿಕರ ಭೋಜನಾ ಮಾಡಲು ಇಲ್ಲಿರುವ ರೆಸ್ಟೋರೆಂಟ್‌ಗಳಿಗೆ ನೀವು ಭೇಟಿ ನೀಡಲೇಬೇಕು. ಹಾಗಾದರೆ ಇಲ್ಲಿಗೆ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಯಾವ ಮಾರ್ಗದಲ್ಲಿ ಪ್ರವಾಸ ಬೆಳೆಸಿದರೆ ಉತ್ತಮ ಎಂದು ಇಲ್ಲಿ ತಿಳಿಯಿರಿ.

ದೀರ್ಘ ವಾರಾಂತ್ಯವಿದೆಯೇ? ಕುಟುಂಬದೊಂದಿಗೆ ವಿಶ್ರಾಂತಿಗಾಗಿ ಎಲ್ಲಿಗೆ ಹೋಗಬೇಕೆಂದು ಖಚಿತವಾಗಿಲ್ಲವೇ? ಮತ್ತೇಕೆ ತಡ ಪಾಂಡಿಚೇರಿಯೆಡೆಗೆ ರಸ್ತೆ ಮೂಲಕ ಈ ಮಾರ್ಗದಲ್ಲಿ ಪ್ರಯಾಣ ಆರಂಭಿಸಿ. ಅದರಲ್ಲೂ ಬೆಂಗಳೂರಿನ ಜನರಿಗೆ ಪಾಂಡಿಚೇರಿಯೇ ಯಾಕೆ ಉತ್ತಮ ಆಯ್ಕೆ ಆಗಿದೆ ಎಂದು ಇಲ್ಲಿ ನೀವು ತಿಳಿಯಲೇಬೇಕಿದೆ.
ಬೆಂಗಳೂರು ಮತ್ತು ಪಾಂಡಿಚೇರಿ ನಡುವಿನ ಅಂತರ ಎಷ್ಟು? ಹಾಗೂ ಬೆಂಗಳೂರಿನಿಂದ ಪಾಂಡಿಚೇರಿಗೆ ಪ್ರಯಾಣಿಸುವ ಉತ್ತಮ ಸಮಯದ ಬಗ್ಗೆಯೂ ತಿಳಿದುಕೊಳ್ಳಬೇಕಿದೆ. ಬೆಂಗಳೂರಿನಿಂದ ಪಾಂಡಿಚೇರಿಗೆ ಬಸ್, ರೈಲು, ವಿಮಾನದ ಮೂಲಕವೂ ಪ್ರಯಾಣ ಮಾಡಬಹುದಾಗಿದೆ. ಪ್ರಮುಖವಾಗಿ ಪಾಂಡಿಚೇರಿಯಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳು, ಟಾಪ್ ರೆಸಾರ್ಟ್‌ಗಳು, ಅದ್ಭುತವಾದ ಉಪಹಾರಗೃಹಗಳು, ವಿಹಾರ ಬಗ್ಗೆ ಪ್ರಯಾಣ ಸಲಹೆಗಳನ್ನು ಕೂಡ ನೀವು ತಿಳಿಯಲೇಬೇಕಿದೆ.
ಬೆಂಗಳೂರು ಮತ್ತು ಪಾಂಡಿಚೇರಿ ನಡುವಿನ ಅಂತರ
ಬೆಂಗಳೂರಿನಿಂದ-ಪಾಂಡಿಚೇರಿಗೆ ಸುಮಾರು 300-320 ಕಿ.ಮೀ ಆಗಲಿದ್ದು, ಇಲ್ಲಿಗೆ ರೈಲು, ರಸ್ತೆ ಮತ್ತು ವಾಯು ಮಾರ್ಗಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. NH 77 ಮೂಲಕ ಪಾಂಡಿಚೇರಿಯನ್ನು ತಲುಪುವುದು ಹೆಚ್ಚು ಅನುಕೂಲಕರವಾಗಿದೆ.
ಬೆಂಗಳೂರಿನಿಂದ ಪಾಂಡಿಚೇರಿಗೆ ರಸ್ತೆ ಮಾರ್ಗದ ಅನುಭವ
ಬೆಂಗಳೂರಿನಿಂದ ಪಾಂಡಿಚೇರಿಗೆ ರಸ್ತೆ ಪ್ರವಾಸವು ಅವಿಸ್ಮರಣೀಯವಾಗಿರುತ್ತದೆ. ಏಕೆಂದರೆ ಸಾಗುವ ಮಾರ್ಗದಲ್ಲಿ ಸುಂದರ ದೃಶ್ಯಗಳನ್ನು ಕಾಣಬಹುದಾಗಿದೆ. ನೀವು NH 77 ಅಥವಾ NH 75 ಅನ್ನು ಆಯ್ಕೆ ಮಾಡಬಹುದು. ಎರಡೂ ಮಾರ್ಗಗಳು 6 ಗಂಟೆ 30 ನಿಮಿಷದಿಂದ 7 ಗಂಟೆಗಳವರೆಗೆ ತೆಗೆದುಕೊಳ್ಳುತ್ತದೆ.
ಸ್ವಲ್ಪ ದೂರವಾದರೂ, ರಸ್ತೆಯ ಪರಿಸ್ಥಿತಿಗಳು ತುಂಬಾ ಚೆನ್ನಾಗಿರುವುದರಿಂದ ನೀವು NH 75 ಅನ್ನು ತೆಗೆದುಕೊಳ್ಳುವುದೇ ಉತ್ತಮ. ನೀವು ಬೆಂಗಳೂರು- ಹೊಸೂರು- ಕೃಷ್ಣಗಿರಿ- ವೆಲ್ಲೂರು- ಆರ್ಕಾಟ್- ಚೆಯ್ಯರ್- ವಂದವಾಸಿ- ತಿಂಡಿವನಂ- ಪಾಂಡಿಚೇರಿ ಮಾರ್ಗಗಳ ಬಗ್ಗೆಯೂ ತಿಳಿಯಿರಿ
ಬೆಂಗಳೂರಿನಿಂದ ಪಾಂಡಿಚೇರಿಗೆ ಪ್ರಯಾಣಿಸಲು ಉತ್ತಮ ಸಮಯ
ಪಾಂಡಿಚೇರಿಗೆ ವರ್ಷಪೂರ್ತಿ ಪ್ರವಾಸ ಮಾಡಬಹುದಾಗಿದೆ. ಅದರಲ್ಲೂ ಅಕ್ಟೋಬರ್ ಮತ್ತು ಮಾರ್ಚ್ ತಿಂಗಳ ನಡುವೆ ಪಾಂಡಿಚೇರಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಇನ್ನು ವಿಶಿಷ್ಟವಾಗಿ ಬೆಚ್ಚಗಿನ ವಾತಾವರಣದೊಂದಿಗೆ, ವಿವಿಧ ತಿಂಗಳುಗಳಲ್ಲಿ ಪಾಂಡಿಚೇರಿಗೆ ಭೇಟಿ ನೀಡಿದರೆ ಹಲವು ಪ್ರಯೋಜನಗಳನ್ನೂ ಪಡೆಯಬಹುದಾಗಿದೆ. ಆದರೆ ಅಕ್ಟೋಬರ್‌ನಿಂದ ಫೆಬ್ರವರಿ ಇದು ಇಡೀ ವರ್ಷದ ತಂಪಾದ ಅವಧಿಯಾಗಿದೆ. ಬೀಚ್ ಬಿಂಗಿಂಗ್, ಸಾಹಸ ಕ್ರೀಡೆ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಇದು ಸೂಕ್ತ ಸಮಯವಾಗಿದೆ.
ಮಾರ್ಚ್‌ನಿಂದ ಜೂನ್ -ಬಿಸಿ ಬೇಸಿಗೆ ಆದ್ದರಿಂದ ಈ ವೇಳೆ ಕಡಿಮೆ ಜನಸಂದಣಿ ಇರುತ್ತದೆ. ಇದು ಕೂಡ ನಿಮಗೆ ಉತ್ತಮ ಸಮಯ. ಹೆಚ್ಚಿನ ತಾಪಮಾನದಿಂದಾಗಿ (41-ಡಿಗ್ರಿ ಸೆಲ್ಸಿಯಸ್‌ನಷ್ಟು), ಪಾಂಡಿಚೇರಿಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಿರುತ್ತದೆ. ಜುಲೈನಿಂದ ಸೆಪ್ಟೆಂಬರ್ ಮಳೆಯನ್ನು ಇರಲಿದ್ದು, ಸಂಜೆಯ ಸಮಯದಲ್ಲಿ ಸಮುದ್ರದ ತಂಪಾದ ಗಾಳಿಯನ್ನು ಆನಂದಿಸಲು ನಿಮಗೆ ಅವಕಾಶ ಆಗಿದೆ.
ಬೆಂಗಳೂರಿನಿಂದ ಪಾಂಡಿಚೇರಿಗೆ ಬಸ್ ಮೂಲಕ ಪ್ರಯಾಣ
ಅನೇಕ ಬಜೆಟ್ ಸ್ನೇಹಿ ಪ್ರಯಾಣದ ಆಯ್ಕೆಗಳನ್ನು ನೋಡುವುದಾದರೆ, ಬೆಂಗಳೂರಿನಿಂದ ಪಾಂಡಿಚೇರಿಗೆ ಬಸ್ ಪ್ರಯಾಣಕ್ಕೆ ಹೆಚ್ಚು ಬೇಡಿಕೆಯಿದೆ. ಬಸ್‌ನಲ್ಲಿ ಆದರೆ ಪ್ರಯಾಣಕ್ಕೆ ಸರಿಸುಮಾರು 8-10 ಗಂಟೆಗಳನ್ನು ತೆಗೆದುಕೊಳ್ಳಬಹುದು. ಇನ್ನು ಪ್ರತಿ ವ್ಯಕ್ತಿಗೆ ಪ್ರಯಾಣ ದರ ಸುಮಾರು 700 ರೂಪಾಯಿ ಆಗಿದೆ. ರಾತ್ರಿಯ ಪ್ರಯಾಣಕ್ಕೆ ತುಂಬಾ ಆರಾಮದಾಯಕವಾದ AC ಸ್ಲೀಪರ್ ಬಸ್ ಅನ್ನು ತೆಗೆದುಕೊಳ್ಳಲು ಹೆಚ್ಚು ಜನ ಇಷ್ಟ ಪಡುತ್ತಾರೆ.
ರೈಲಿನಲ್ಲಿ ಪಾಂಡಿಚೇರಿಗೆ ಭೇಟಿ ನೀಡಿ
ಇನ್ನು ಕೆಲವರಿಗೆ ರೈಲು ಪ್ರಯಾಣವು ಉತ್ತಮ ಆಯ್ಕೆಯಾಗಿರುತ್ತದೆ. ನೀವು ಎರಡು ದೂರದ ರೈಲುಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು- 11005 ಪುದುಚೇರಿ ಎಕ್ಸ್‌ಪ್ರೆಸ್ ಮತ್ತು 16573 ಪುದುಚೇರಿ ಎಕ್ಸ್‌ಪ್ರೆಸ್. ನೀವು ಪ್ರಯಾಣಿಸಲು ಬಯಸುವ ದಿನದ ಆಧಾರದ ಮೇಲೆ ಈ ಆಯ್ಕೆಗಳಲ್ಲಿ ಒಂದನ್ನು ನೀವು ಆಯ್ಕೆ ಮಾಡಬಹುದು. ಇದು ಸರಾಸರಿ 10 ಗಂಟೆಗಳ ಪ್ರಯಾಣ ಆಗಿರುತ್ತದೆ. ಪ್ರತಿ ಟಿಕೆಟ್‌ನ ವೆಚ್ಚವು 300-750 ರೂಪಾಯಿ ಆಗಿರುತ್ತದೆ. ಇದು ವರ್ಗಗಗಳ ಮೇಲೆ ಆಧರಿಸಿರುತ್ತದೆ.
ವಿಮಾನ ಪ್ರಯಾಣದ ಅನುಭವ ಹೇಗಿರತ್ತೆ?
ದುರದೃಷ್ಟವಶಾತ್, ಪಾಂಡಿಚೇರಿಯ ವಿಮಾನ ನಿಲ್ದಾಣವು ಪ್ರಸ್ತುತ ವಾಣಿಜ್ಯ ವಿಮಾನಗಳಿಗಾಗಿ ಕಾರ್ಯನಿರ್ವಹಿಸುತ್ತಿಲ್ಲ. ನೀವು ಇನ್ನೂ ಚೆನ್ನೈಗೆ ಮೂಲೂಕ ಹೋಗಲು ಆಯ್ಕೆ ಮಾಡಬಹುದು ಮತ್ತು ಸುಮಾರು 3 ಗಂಟೆಗಳ ದೂರದಲ್ಲಿರುವ ಪಾಂಡಿಚೇರಿಗೆ ಚಾಲನೆ ಮಾಡಬಹುದಾಗಿದೆ.
2023ರಲ್ಲಿ ಭೇಟಿ ನೀಡಬೇಕಾದ ಉತ್ತಮ ಸ್ಥಳಗಳು
1. ಆರೋವಿಲ್ಲೆ: ಇದು ಜನಪ್ರಿಯ ಆಕರ್ಷಣೆಯ ತಾಣ ಪಾಂಡಿಚೇರಿಯ ಉತ್ತರಕ್ಕೆ 10 ಕಿಲೋ ಮೀಟರ್ ದೂರದಲ್ಲಿದೆ. ಇನ್ನು 1968ರಲ್ಲಿ ಮಿರ್ರಾ ಅಲ್ಪಾಸ್ಪಾ ಇದನ್ನು ಸ್ಥಾಪಿಸಿದರು. ಇದನ್ನು ವಾಸ್ತುಶಿಲ್ಪಿ ರೋಜರ್ ಆಂಗರ್ ವಿನ್ಯಾಸಗೊಳಿಸಿದರು. ಆರೋವಿಲ್ಲೆಯನ್ನು ಪ್ರೀತಿಯಿಂದ ಸಿಟಿ ಆಫ್ ಡಾನ್ ಎಂದೂ ಕೂಡ ಕರೆಯುತ್ತಾರೆ. ಇದೊಂದು ಬೃಹತ್ ಧ್ಯಾನ ಕೇಂದ್ರವಾಗಿದ್ದು, ಪ್ರವಾಸಿಗರ ತನ್ನ ಸೆಳೆಯುತ್ತದೆ. ದಾಖಲೆಗಳ ಪ್ರಕಾರ ಈ ಸ್ಮಾರಕವನ್ನು 124 ದೇಶಗಳ ಮಣ್ಣನ್ನು ತಂದು ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ ನಿರ್ಮಿಸಲಾಗಿದೆ ಎನ್ನುವ ಉಲ್ಲೇಖವಿದೆ.
3. ಪ್ಯಾರಡೈಸ್ ಬೀಚ್: ಪುದುಚೇರಿಯ ಅತ್ಯಂತ ರಮಣೀಯವಾದ ಕಡಲ ತೀರಗಳಲ್ಲಿ ಪ್ಯಾರಡೈಸ್ ಬೀಚ್ ಕೂಡ ಒಂದು. ತನ್ನ ಆಹ್ಲಾದಕರ ವಾತಾವರಣದಿಂದ ಈ ಬೀಚ್ ಎಂತಹವರನ್ನು ಸೆಳೆಯುತ್ತದೆ. ಅಲ್ಲದೆ, ಚುನ್ನಂಬರ್‌ನಿಂದ ದೋಣಿ ಸವಾರಿ ಮಾಡುವ ಮೂಲಕ ಸುಲಭವಾಗಿ ತಲುಪಬಹುದು. ಈ ಬೀಚ್‌ನಲ್ಲಿ ಸ್ನೇಹಿತರೊಟ್ಟಿಗೆ ಮನಸ್ಸಿಗೆ ತೃಪ್ತಿಯಾಗುವಷ್ಟು ಎಂಜಾಯ್ ಮಾಡಬಹುದಾಗಿದೆ. ಸದಾ ಜನಸಂದಣಿಯಿಂದ ಕೂಡಿರುವ ಈ ಕಡಲ ತೀರಕ್ಕೆ ವಾರಾಂತ್ಯ ಸಮಯದಲ್ಲಿ ಭೇಟಿ ನೀಡದಿರಲು ಶಿಫಾರಸ್ಸು ಮಾಡಲಾಗಿದೆ.
3. ಬೊಟಾನಿಕಲ್ ಗಾರ್ಡನ್: ಇದು ಆರಂಭದಲ್ಲಿ ಕೃಷಿಗಾಗಿ ಬೆಳೆಗಳನ್ನು ಪರೀಕ್ಷಿಸಲು ಫ್ರೆಂಚ್‌ನಿಂದ ಪ್ರಯೋಗವಾಗಿ ಪ್ರಾರಂಭವಾಯಿತು. ಇದನ್ನು ಈಗ ಬೊಟಾನಿಕಲ್ ಗಾರ್ಡನ್ ಆಗಿ ಪರಿವರ್ತಿಸಲಾಗಿದೆ ಮತ್ತು ಅಪರೂಪದ ಹೂವುಗಳು ಮತ್ತು ಸಸ್ಯಗಳಿಂದ ತುಂಬಿದೆ. ಪ್ರವೇಶ ದ್ವಾರವು ಸುಂದರವಾದ ಫ್ರೆಂಚ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಉದ್ಯಾನಗಳ ಶಾಂತ ಮತ್ತು ಸೌಂದರ್ಯವನ್ನು ಆನಂದಿಸಲು ಜನರು ಸ್ಥಳಕ್ಕೆ ಬರುತ್ತಾರೆ. ಮತ್ತು ಪಾಂಡಿಚೇರಿಗೆ ನಿಮ್ಮ ಪ್ರವಾಸದ ಸಮಯದಲ್ಲಿ ಇದು ಖಂಡಿತವಾಗಿಯೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ
ಪಾಂಡಿಚೇರಿಯಲ್ಲಿ ಟಾಪ್ ರೆಸಾರ್ಟ್‌ಗಳು
1. ಓಷನ್ ಸ್ಪ್ರೇ
2. ಲೇ ಪಾಂಡಿ
3. ವಿಂಡ್‌ಫ್ಲವರ್ ರೆಸಾರ್ಟ್ ಮತ್ತು ಸ್ಪಾ
4. ಪ್ರೋಮ್‌ನದೆ
5. ಸೇಂಟ್ ಜೇಮ್ಸ್ ಕೋರ್ಟ್ ಬೀಚ್ ರೆಸಾರ್ಟ್
ಅದ್ಭುತವಾದ ರೆಸ್ಟೋರೆಂಟ್‌ಗಳು
1. ಕೆಫೆ ಡೆಸ್ ಆರ್ಟ್ಸ್
2. ಲೆ ಡ್ಯುಪ್ಲೆಕ್ಸ್
3. ಲಾ ಮೈಸನ್ ರೋಸ್
4. ಲೈಟ್‌ಹೌಸ್ ರೂಫ್‌ಟಾಪ್ ಗ್ರಿಲ್
5. ನ್ಯೂ ಫಾರ್ಮ್ ಫ್ರೆಶ್












Click it and Unblock the Notifications