Bengaluru To Puducherry: ಬೆಂಗಳೂರಿನಿಂದ ಪಾಂಡಿಚೇರಿಗೆ ಭೇಟಿ ನೀಡುವವರು ಗಮನಿಸಬೇಕಾದ ಪ್ರಮುಖಾಂಶಗಳು
Bengaluru To Puducherry: ಕರ್ನಾಟಕದ ಪಕ್ಕದ ರಾಜ್ಯ ತಮಿಳುನಾಡಿನ ಪಾಂಡಿಚೇರಿಯಲ್ಲಿ ಅತ್ಯದ್ಭತ ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ. ಇವುಗಳು ಬೇಸಿಗೆ ರಜೆ ಕಳೆಯಲು ಹೇಳಿ ಮಾಡಿಸಿದ ತಾಣಗಳಾಗಿವೆ. ಮಾರ್ಚ್, ಏಪ್ರಿಲ್‌ನಲ್‌ನಲ್ಲಿ ಬೆಂಗಳೂರಿನಿಂದ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಹಾಗಾದ್ರೆ ಇಲ್ಲಿ ಯಾವೆಲ್ಲಾ ತಾಣಗಳನ್ನು ನೋಡಬಹದು ಹಾಗೂ ಮಾರ್ಗಗಳ ವಿವರನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇಲ್ಲಿಗೆ ಕುಟುಂಬ, ಒಬ್ಬರು ಅಥವಾ ಸ್ನೇಹಿತರೊಂದಿಗೂ ಪ್ರವಾಸ ಕೈಗೊಳ್ಳಬಹುದಾಗಿದೆ. ಬೆಂಗಳೂರಿನಿಂದ ಪಾಂಡಿಚೇರಿಗೆ ರಸ್ತೆ ಮೂಲಕ ಪ್ರವಾಸ ಕೈಗೊಳ್ಳುವುದಾದ್ರೆ, ರೋಮಾಂಚನಕಾರಿ ಅತ್ಯದ್ಭುತ ತಾಣಗಳು, ಸುಂದರವಾದ ರಸ್ತೆಗಳು ಮತ್ತು ಪ್ರಶಾಂತ ಕಡಲತೀರಗಳಿಗೂ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ.

ಮಾರ್ಗ 1: ಬೆಂಗಳೂರಿನಿಂದ ಪಾಂಡಿಚೇರಿಗೆ ರಸ್ತೆ ಪ್ರವಾಸ ಬೆಳೆಸುವುದೇ ಒಂಥರಾ ಮಜಾ. ಈ ರಸ್ತೆ ಪ್ರಯಾಣವು ರಮಣೀಯ ನೋಟಗಳು, ವೈವಿಧ್ಯಮಯ ಸಾಂಸ್ಕೃತಿಕ ಅನುಭವಗಳು ಮತ್ತು ಮರೆಯಲಾಗದ ನೆನಪುಗಳನ್ನು ಕಟ್ಟಿಕೊಡುತ್ತದೆ. ಬೆಂಗಳೂರಿನಿಂದ ಇಲ್ಲಿಗೆ 316.4 ಕಿಲೋ ಮೀಟರ್ ಆಗಲಿದ್ದು, ರಸ್ತೆ ಮೂಲಕ ತಲುಪಲು 6.6 ಗಂಟೆ ಬೇಕಾಗುತ್ತದೆ. ಬೆಂಗಳೂರಿನಿಂದ ಹೊರಟರೆ, ಹೊಸೂರು, ಕೃಷ್ಣಗಿರಿ, ಚೆಂಗಂ, ತಿರುವಣ್ಣಾಮಲೈ, ತಿಂಡಿವನಂ ಮೂಲಕ ಪಾಂಡಿಚೇರಿಗೆ ತಲುಪಬಹುದು.
ಮಾರ್ಗ 2: ಬೆಂಗಳೂರಿನಿಂದ ಹೊಸೂರು, ಅಂಬೂರು, ವೆಲ್ಲೂರು, ಆರ್ಕಾಟ್, ತಿಂಡಿವನಂ ಮೂಲಕವೂ ಪಾಂಡಿಚೇರಿಗೆ ತಲುಪಬಹುದಾಗಿದೆ. ಈ ಮಾರ್ಗದಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಸಾಗಬೇಕಾಗುತ್ತದೆ. ಬೆಂಗಳೂರಿನಿಂದ 358 ಕಿಲೋ ಮೀಟರ್ ಆಗಲಿದ್ದು, ತಲುಪಲು 7.75 ಗಂಟೆ ಬೇಕಾಗುತ್ತದೆ. ಈ ಮಾರ್ಗದಲ್ಲಿ ಬರುವ ವೆಲ್ಲೂರಿನ ವೆಲ್ಲೂರು ಕೋಟೆಯು 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲ್ಪಟ್ಟ ದಕ್ಷಿಣ ಭಾರತದ ಶ್ರೀಮಂತ ಇತಿಹಾಸದ ಸಂಕೇತವಾಗಿದೆ.
ಮಾರ್ಗ 3: ಬೆಂಗಳೂರಿನಿಂದ ಹೊಸೂರು, ಅಂಬೂರು, ವೆಲ್ಲೂರು, ಆರ್ಕಾಟ್, ಮಹಾಬಲಿಪುರಂ, ಮರಕ್ಕಣಂ ಮೂಲದ ಪಾಂಡಿಚೇರಿಗೆ ತಲುಪಬಹುದು. ಇದು ಕರಾವಳಿ ಮಾರ್ಗವಾಗಿದ್ದು, ಬೆಂಗಳೂರಿನಿಂದ 445 ಕಿ.ಮೀ. ಆಗಲಿದೆ. ಇಲ್ಲಿಗೆ ತಲುಪಲು 9 ಗಂಟೆ ಸಮಯ ಬೇಕಾಗುತ್ತದೆ. ಪೂರ್ವ ಕರಾವಳಿ ರಸ್ತೆಯಲ್ಲಿ (NH332A) ಸಾಗುವ ಮೂಲಕ ಬಂಗಾಳ ಕೊಲ್ಲಿಯ ಅದ್ಭುತ ದೃಶ್ಯವನ್ನು ನೋಡಬಹುದು. ಅಲ್ಲದೆ, ಇಲ್ಲಿ UNESCO ವಿಶ್ವ ಪರಂಪರೆಯ ತಾಣವಾದ ಮಹಾಬಲಿಪುರಂಗೆ ಭೇಟಿ ನೀಡಬಹುದಾಗಿದೆ. ಮಹಾಬಲಿಪುರಂನ ಇತಿಹಾಸ, ಕಲೆ ಮತ್ತು ನೈಸರ್ಗಿಕ ಸೌಂದರ್ಯದ ದೃಶ್ಯವನ್ನು ಕರಾವಳಿಯುದ್ದಕ್ಕೂ ಬೆಂಗಳೂರಿನಿಂದ ಪಾಂಡಿಚೇರಿಗೆ ಹೋಗುವ ಮಾರ್ಗದಲ್ಲಿ ಕಾಣಬಹುದು.
ಬೆಂಗಳೂರಿನಿಂದ ಪಾಂಡಿಚೇರಿಗೆ ಬೇಗ ತಲುಪಲು ಸಲಹೆಗಳು
* ಬೆಂಗಳೂರು ಮತ್ತು ಹೊಸೂರು ನಡುವಿನ ದಟ್ಟಣೆಯಿಂದ ತಪ್ಪಿಸಲು ಪ್ರಯಾಣ ಆರಂಭಿಸಿ.
* ರಾತ್ರಿ ವೇಳೆ ಏಕಪಥ ರಸ್ತೆಗಳಲ್ಲಿ ಚಾಲನೆ ಮಾಡುವುದು ಸೂಕ್ತ ಅಲ್ಲ.
* ಪ್ರಯಾಣದ ಮೊದಲು ನಿಮ್ಮ ಕಾರು, ಬೈಕ್ ಅಥವಾ ಇನ್ನಿತರೆ ವಾಹನಗಳ ಟೈರ್, ಇಂಧನ, ಬ್ರೇಕ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ.
* ಮಾರ್ಗಗಳ ಉದ್ದಕ್ಕೂ ಇರುವ ಟೀ ಸ್ಟಾಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇಂಧನ ಕೇಂದ್ರಗಳಲ್ಲಿ ವಿರಾಮಗಳನ್ನು ತೆಗೆದುಕೊಳ್ಳುವುದು ಉತ್ತಮ.
ಬೆಂಗಳೂರಿನಿಂದ ಪಾಂಡಿಚೇರಿಗೆ ಪ್ರಯಾಣಿಸಲು ಉತ್ತಮ ಸಮಯ: ಬೇಸಿಗೆಯಲ್ಲಿ (ಮಾರ್ಚ್‌ನಿಂದ ಜೂನ್) ವರೆಗೂ ಪ್ರಯಾಣ ಮಾಡಬಹುದು. ಆದ್ರೆ, ಬೆಂಗಳೂರಿನಿಂದ ಸ್ವಲ್ಪ ಬೇಗ ಹೊರಬೇಕಾಗುತ್ತದೆ. ಯಾಕಂದ್ರೆ ಬಿಸಿಲಿನ ಪ್ರಮಾಣ ಹೆಚ್ಚಿರುತ್ತದೆ. ಹಾಗೂ ಟ್ರಾಫಿಕ್ ಕೂಡ ಹೆಚ್ಚಾಗಿರುತ್ತದೆ.
ಪಾಂಡಿಚೇರಿಯಲ್ಲಿ ನೋಡಬಹುದಾದ ಪ್ರಮುಖ ಸ್ಥಳಗಳು: ಪಾಂಡಿಚೇರಿ ಭಾರತದ ಪೂರ್ವ ಕರಾವಳಿಯಲ್ಲಿರುವ ಒಂದು ಆಕರ್ಷಕ ಕರಾವಳಿ ಪಟ್ಟಣವಾಗಿದೆ. ಇದು ಫ್ರೆಂಚ್ ವಸಾಹತುಶಾಹಿ ವಾಸ್ತುಶಿಲ್ಪ, ಪ್ರಶಾಂತ ಕಡಲತೀರಗಳು ಮತ್ತು ಆಧ್ಯಾತ್ಮಿಕ ಸ್ಥಳಗಳಿಂದ ಕೂಡಿದೆ. ನೀವು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಪೂರ್ತಿಯಾಗಿ ವೀಕ್ಷಣೆ ಮಾಡಬೇಕೆಂದರೆ, ಬೆಂಗಳೂರಿನಿಂದ ಪಾಂಡಿಚೇರಿಗೆ ರಸ್ತೆ ಪ್ರವಾಸವನ್ನು ಅಯ್ಕೆ ಮಾಡಿಕೊಂಡರೆ ಉತ್ತಮ.
ಪ್ರೊಮೆನೇಡ್ ಬೀಚ್: ಪ್ರೊಮೆನೇಡ್ ಬೀಚ್ ಪಾಂಡಿಚೇರಿಯ ಕರಾವಳಿಯ 1.5 ಕಿಲೋ ಮೀಟರ್ ವಿಸ್ತಾರವಾಗಿದ್ದು, ಬಂಗಾಳ ಕೊಲ್ಲಿಯಲ್ಲಿ ಇದರ ಅತ್ಯದ್ಭತ ನೋಟಗಳನ್ನು ಸವಿಯಬಹುದು. ಕಲ್ಲುಗಳಿಗೆ ಅಪ್ಪಳಿಸುವ ಅಲೆಗಳ ಶಬ್ದವು ಕಿವಿಗೆ ಇಂಪಾದ ಅನುಭವವನ್ನು ನೀಡುತ್ತವೆ. ಇಲ್ಲಿಗೆ ಮುಂಜಾನೆ ಮತ್ತು ಸಂಜೆ ಭೇಟಿ ನೀಡಲು ಉತ್ತಮ ಸಮಯ. ಏಕೆಂದರೆ ನೀವು ತಂಪಾದ ಗಾಳಿ ಮತ್ತು ಸೂರ್ಯೋದಯ ಅಥವಾ ಸೂರ್ಯಾಸ್ತಗಳನ್ನು ನೋಡಬಹುದು. ಅಲ್ಲದೆ, ಬೀಚ್ ಮುಂಭಾಗವು ಮಹಾತ್ಮ ಗಾಂಧಿ ಪ್ರತಿಮೆ ಮತ್ತು ಯುದ್ಧ ಸ್ಮಾರಕದಂತಹ ಗಮನಾರ್ಹ ಹೆಗ್ಗುರುತುಗಳಿಂದ ಸುತ್ತುವರೆದಿದ್ದು, ಇತಿಹಾಸವನ್ನು ನೆನಪಿಸುತ್ತದೆ.
ಶ್ರೀ ಅರಬಿಂದೋ ಆಶ್ರಮ: ಶ್ರೀ ಅರಬಿಂದೋ ಆಶ್ರಮವು ವೈಟ್ ಟೌನ್‌ನಲ್ಲಿದ್ದು, ಜನಪ್ರಿಯ ಆಧ್ಯಾತ್ಮಿಕ ಕೇಂದ್ರವಾಗಿದೆ. ಇದನ್ನು 1926ರಲ್ಲಿ ಶ್ರೀ ಅರಬಿಂದೋ ಮತ್ತು ತಾಯಿ ಮಿರಾ ಅಲ್ಫಾಸ್ಸಾ ಅವರು ಸ್ಥಾಪಿಸಿದರು. ಆಶ್ರಮವು ಬೆಳಗ್ಗೆ 8ರಿಂದ ರಾತ್ರಿ 11:30ರ ವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತದೆ, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.
ಫ್ರೆಂಚ್ ಕ್ವಾರ್ಟರ್ (ವೈಟ್ ಟೌನ್): ವೈಟ್ ಟೌನ್ ಎಂದೂ ಕರೆಯಲ್ಪಡುವ ಫ್ರೆಂಚ್ ಕ್ವಾರ್ಟರ್, ಪಾಂಡಿಚೇರಿಯ ಅತಯದ್ಭತ ತಾಣವಾಗಿದೆ. ಇಲ್ಲಿನ ಬೀದಿಗಳು ವರ್ಣರಂಜಿತ ಫ್ರೆಂಚ್ ಶೈಲಿಯ ವಿಲ್ಲಾಗಳು, ಸುಂದರ ಕೆಫೆಗಳು ಮತ್ತು ಕಲಾ ಗ್ಯಾಲರಿಗಳಿಂದ ಕೂಡಿದೆ. ಛಾಯಾಗ್ರಾಹಕರು ಮತ್ತು ಇತಿಹಾಸ ಉತ್ಸಾಹಿಗಳಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ.
ಪ್ಯಾರಡೈಸ್ ಬೀಚ್: ಪ್ಯಾರಡೈಸ್ ಬೀಚ್ ಪಾಂಡಿಚೇರಿಯಿಂದ ಸುಮಾರು 7 ಕಿಲೋ ಮೀಟರ್ ದೂರದಲ್ಲಿದ್ದು, ಇದು ಚುನ್ನಂಬರ್ ಬೋಟ್‌ಹೌಸ್ ಬಳಿ ಇದೆ. ಇದು ಪ್ರಾಚೀನ ಮರಳನ್ನು ಹೊಂದಿರುವ ಸುಂದರ ತಾಣವಾಗಿದೆ. ಸಣ್ಣ ದೋಣಿ ಸವಾರಿಯ ಮೂಲಕ ಪ್ರವೇಶಿಸಬಹುದಾದ ಈ ಬೀಚ್ ಜಲ ಕ್ರೀಡೆಗಳು, ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಗೆ ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ದೋಣಿ ಸವಾರಿಗೆ ₹150 ಪ್ರವೇಶ ಶುಲ್ಕ ಇರಲಿದೆ.
ಸೆರೆನಿಟಿ ಬೀಚ್: ಸೆರೆನಿಟಿ ಬೀಚ್ ಪಾಂಡಿಚೇರಿಯ ಕೇಂದ್ರ ಭಾಗದಿಂದ ಕೇವಲ 10 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ ಶಾಂತವಾದ ವಾತಾವರಣವನ್ನು ಕಾಣಬಹುದು. ವಿಶೇಷವಾಗಿ ಬೆಳಗಿನ ಸಮಯದಲ್ಲಿ ವಿಶ್ರಾಂತಿ ಪಡೆಯಲು ಇದು ಸೂಕ್ತ ಸ್ಥಳವಾಗಿದೆ.
ಅದ್ಭುತವಾದ ರೆಸ್ಟೋರೆಂಟ್‌ಗಳು
1. ಕೆಫೆ ಡೆಸ್ ಆರ್ಟ್ಸ್
2. ಲೆ ಡ್ಯುಪ್ಲೆಕ್ಸ್
3. ಲಾ ಮೈಸನ್ ರೋಸ್
4. ಲೈಟ್‌ಹೌಸ್ ರೂಫ್‌ಟಾಪ್ ಗ್ರಿಲ್
5. ನ್ಯೂ ಫಾರ್ಮ್ ಫ್ರೆಶ್
ಎಲ್ಲಿ ಉಳಿಯಬೇಕು?: ಬೆಂಗಳೂರಿನಿಂದ ಪಾಂಡಿಚೇರಿಗೆ ಹೋಗುವವರು ಕ್ಲಬ್ ಮಹೀಂದ್ರಾ ಪುದುಚೇರಿ ರೆಸಾರ್ಟ್‌ನಲ್ಲಿ ವಿಶ್ರಾಂತಿಗಾಗಿ ತಂಗಬಹುದಾಗಿದೆ.
ಪುದುಚೇರಿಯಲ್ಲಿರುವ ಈ ರೆಸಾರ್ಟ್ ಕಡಲತೀರದ ಬಳಿ ಇದ್ದು, ಅದ್ಭುತವಾದ ದೃಶ್ಯದೊಂದಿಗೆ ಶಾಂತಿಯುತ ವಾತಾವರಣವನ್ನು ಒದಗಿಸುತ್ತದೆ. ಅತಿಥಿಗಳು ಒಳಾಂಗಣ ಆಟಗಳನ್ನು ಆಡಲು ಅವಕಾಶ ಕಲ್ಪಿಸಲಾಗಿದೆ. ಈ ರೆಸಾರ್ಟ್ ಅನ್ನು ವಿಶ್ರಾಂತಿ ಮತ್ತು ಮನರಂಜನೆ ತಾಣವಾಗಿದೆ. ವಸತಿ ಸೌಕರ್ಯಕ್ಕಾಗಿಯೂ ಇದನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟಿನಲ್ಲಿ ಬೆಂಗಳೂರಿನಿಂದ ಪಾಂಡಿಚೇರಿಗೆ ಹೋಗುವ ರಸ್ತೆ ಪ್ರವಾಸವು ಅತ್ಯದ್ಭುತ ಮಾರ್ಗಗಳು, ಐತಿಹಾಸಿಕ ತಾಣಗಳನ್ನು ಪರಿಚಯಿಸುತ್ತದೆ.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications