Bengaluru To Hampi: ಹಂಪಿಯಲ್ಲಿ ನೀವು ನೋಡಲೇಬೇಕಾದ ಇತಿಹಾಸ ಪ್ರಸಿದ್ಧ ತಾಣಗಳಿವು
ವಿಜಯನಗರ, ಡಿಸೆಂಬರ್, 25: 2023 ಮುಗಿದು 2024ಕ್ಕೆ ದಾಪುಗಾಲಿಡಲು ಇನ್ನೂ ಕೆಲವೇ ದಿನಗಳು ಬಾಕಿಯಿದೆ. ಸಾಮಾನ್ಯ ದಿನಗಳಲ್ಲೇ ಸಾವಿರಾರು ಪ್ರವಾಸಿಗರು ಇತ್ತ ಲಗ್ಗೆ ಇಡುತ್ತಾರೆ. ಇನ್ನು ಹೊಸವರ್ಷ ಸಮೀಪಿಸುತ್ತಿದ್ದು, ಈ ವೇಳೆ ಬೆಂಗಳೂರಿನಿಂದ ಬಹುತೇಕ ಮಂದಿ ಪ್ರವಾಸ ಕೈಗೊಳ್ಳಲು ಪ್ಲಾನ್ ಮಾಡಿಕೊಂಡಿರುತ್ತಾರೆ. ಹಾಗಾದರೆ ಈ ವೇಳೆ ಹಂಪಿಯ ಸೌಂದರ್ಯ ಸವಿಯಲು ಭಯಸುವವರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.
ವಿಜಯನಗರ ಸಾಮ್ರಾಜ್ಯ ಅಂತಲೇ ಹೆಸರುವಾಸಿಯಾಗಿರುವ ಹಂಪಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಲೇ ಇರುತ್ತಾರೆ. ಅದರಲ್ಲೂ ಹೊಸವರ್ಷದ ಸಂದರ್ಭದಲ್ಲಂತೂ ಇತ್ತ ಪ್ರಯಾಣ ಬೆಳೆಸುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಹಂಪಿಯತ್ತ ಪ್ರಯಾಣ ಬೆಳೆಸಲು ಭಯಸಿದರೆ, ಇಲ್ಲಿ ಯಾವೆಲ್ಲ ಸ್ಥಳಗಳ ಸೌಂದರ್ಯವನ್ನು ಸವಿಯಬಹುದಾಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನಿಂದ ಎಷ್ಟು ದೂರ?: ಯುನೆಸ್ಕೋ ವಿಶ್ವ ಪರಂಪರೆಯ ತಾಣ ಆಗಿರುವ ಹಂಪಿ ನಮ್ಮ ಕರ್ನಾಟದ ಹೆಮ್ಮೆಯಾಗಿದೆ. ಹಿಂದೆ ಹಂಪಿಯಲ್ಲಿ ರಸ್ತೆಗಳ ಪಕ್ಕದಲ್ಲಿ ಮುತ್ತು, ರತ್ನ, ಚಿನ್ನವನ್ನು ಸೇರುಗಳಲ್ಲಿ ಅಳೆದು ಮಾರಾಟ ಮಾಡುತ್ತಿದ್ದರು. ಆದರೆ ಈಗ ಇಲ್ಲ ಅಷ್ಟೇ. ಇನ್ನು ಈ ಇತಿಹಾಸ ಪ್ರಸಿದ್ಧ ಹಂಪಿಯು ಸಿಲಿಕಾನ್ ಟಿಸಿ ಬೆಂಗಳೂರಿನಿಂದ ಸುಮಾರು 342.2 ಕಿಲೋ ಮೀ ದೂರದಲ್ಲಿದೆ.
ಅದರಲ್ಲೂ ಪ್ರವಾಸಿಗರು ಈ ಸಂದರ್ಭದಲ್ಲಿ ಪ್ರಮುಖ ವಾರಾಂತ್ಯ ಹಾಗೂ ಇತರ ರಜೆಗಳ ಸಮಯದಲ್ಲಿ ಹಂಪಿ ಪ್ರವಾಸವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇಲ್ಲಿ ಎಲ್ಲಿ ನೋಡಿದರೂ ವಿದೇಶದವರೇ ಕಂಡುಬರುತ್ತಾರೆ. ಅಲ್ಲದೆ ಇವರು ಇಲ್ಲಿನ ಪರಂಪರೆಯನ್ನು ಉತ್ಸುಕತೆಯಿಂದ ತಿಳಿದುಕೊಳ್ಳುತ್ತಾರೆ. ಹಾಗೆಯೇ ಇನ್ನು ನೀವು ಸಹ ಕುಟುಂಬ, ಸ್ನೇಹಿತರ ಸಹಿತ ಹಂಪಿಯ ಪ್ರವಾಸ ಮಾಡಲು ಈ ಸಮಯ ಯೋಗ್ಯ ಆಗಿದೆ. ಯಾಕೆ ಅಂತೀರಾ ಇಲ್ಲಿದೆ ಮಾಹಿತಿ.
ಇವೆಲ್ಲ ಪ್ರಮುಖ ಆಕರ್ಷಣೆ ತಾಣಗಳು
ಹಂಪಿಯ ಅತ್ಯಂತ ಜನಪ್ರಿಯವಾದ ದೇವಾಲಯಗಳಲ್ಲಿ ವಿರೂಪಾಕ್ಷ ದೇವಾಲಯವು ಒಂದಾಗಿದೆ. ಇದು ಪವಿತ್ರವಾದ ತುಂಗಭದ್ರಾ ನದಿಯ ದಡದಲ್ಲಿದೆ. ಸುಮಾರು 7ನೇ ಶತಮಾನದಲ್ಲಿ ನಿರ್ಮಿಸಿದ್ದ ಈ ದೇವಾಲಯ ಅಪೂರ್ವವಾದ ವಾಸ್ತುಶಿಲ್ಪವನ್ನು ಹೊಂದಿದೆ. ಇಲ್ಲಿ ಭಗವಾನ್ ವಿರೂಪಾಕ್ಷ ಎಂದು ಕರೆಯಲಾಗುವ ಮಹಾಶಿವ ನೆಲೆಸಿದ್ದಾನೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ.
ಇನ್ನು ನಂತರ ಇಲ್ಲಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿರುವ ವಿಠಲ ದೇವಾಲಯಕ್ಕೆ ಭೇಟಿ ನೀಡಿ. ಇದು ಸುಮಾರು 16ನೇ ಶತಮಾನದ ದೇವಾಲಯ ಆಗಿದೆ. ಹಂಪಿಯ ವಾಸ್ತುಶಿಲ್ಪದ ಅಪ್ರತಿಮ ಸಂಕೇತ ಇದಾಗಿದೆ.
ಹಾಗೆಯೇ ಕರ್ನಾಟಕದ ಕೆಲವೇ ಕೆಲವು ಅರಮನೆಗಳಲ್ಲಿ ಲೋಟಸ್ ಪ್ಯಾಲೇಸ್ ಕೂಡ ಒಂದಾಗಿದ್ದು, ಹಂಪಿಯ ಆಕರ್ಷಣೆಗಳಲ್ಲಿ ಒಂದಾಗಿದೆ.
ಈ ಪ್ಯಾಲೇಸ್ ನೋಡುಗರ ಕಣ್ಣಿಗೆ ಅರಳಿದ ಕಮಲದಂತೆ ಕಂಗೊಳಿಸುತ್ತದೆ. ಇದು ವಿಜಯನಗರ ಸಾಮ್ರಾಜ್ಯದ ಮತ್ತು ರಾಜಮನೆತನದ ಮಹಿಳೆಯರಿಗೆ ಗೊತ್ತುಪಡಿಸಿದ ಪ್ರದೇಶ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಅಲ್ಲದೆ ಹಂಪಿಯ ಬೀದಿಗಳಲ್ಲಿ ಮುತ್ತು, ರತ್ನಗಳು, ಚಿನ್ನ, ಬೆಳ್ಳಿಗಳನ್ನು ಮಾರುತ್ತಿದ್ದರು ಎನ್ನುವುದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ.
ಈ ಮುತ್ತು, ರತ್ನಗಳು, ಚಿನ್ನ, ಬೆಳ್ಳಿಗಳನ್ನು ಸೇರಿನಲ್ಲಿ ಅಳೆದು ಹಂಪಿ ಬಜಾರ್‌ನಲ್ಲಿ ಮಾರಾಟ ಮಾಡುತ್ತಿದ್ದರು ಎನ್ನುವುದು ಕೂಡ ಉಲ್ಲೇಖವಾಗಿದೆ. ಇದನ್ನು ವಿರೂಪಾಕ್ಷ ಬಜಾರ್ ಅಂತಲೂ ಕೂಡ ಕರೆಯಲಾಗುತ್ತದೆ. ಇದು ವಿರೂಪಾಕ್ಷ ದೇವಾಲಯದ ಮುಂಭಾಗದಲ್ಲಿ ಇದೆ. ಹಂಪಿಯ ಹೆಗ್ಗುರುತು ಕೂಡ ಆಗಿದೆ. ಹಂಪಿ ಉತ್ಸವ ನಡೆಯುವುದು ಇಲ್ಲೇ.
ಹಂಪಿಯಲ್ಲಿ ನಿಮ್ಮ ಆಧ್ಯಾತ್ಮವನ್ನು ಹೆಚ್ಚಿಸುವ ಒಂದೊಳ್ಳೆ ಸ್ಥಳವಿದ್ದು, ಅದೇ ದೊಡ್ಡ ಶಿವಲಿಂಗ ಆಗಿದೆ. ಇದನ್ನು ಒಂದೇ ಬಂಡೆಯಿಂದ ಕೆತ್ತಲಾಗಿದೆ ಎನ್ನಲಾಗುತ್ತದೆ. ಇದು ಹಂಪಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಕಪ್ಪು ಕಲ್ಲಿನಿಂದ ಕೆತ್ತಿದ ಈ ಶಿವಲಿಂಗವು ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎನ್ನುವುದು ನಂಬಿಕೆಯಾಗಿದೆ.
ಇನ್ನು ಇಲ್ಲಿನ ಲಕ್ಷ್ಮಿ ನರಸಿಂಹ ದೇವಾಲಯವು ಹಂಪಿಯ ಹೆಗ್ಗುರುತುಗಳಲ್ಲಿ ಒಂದಾಗಿದೆ. ಶೇಷನಾಗನ ಮೇಲೆ ಕುಳಿತಿರುವ ಈ ನರಸಿಂಹನ ಪ್ರತಿಮೆಯು ಬಹಳ ಆಕರ್ಷಕ ಆಗಿದೆ. ಇದು ಹಂಪಿಯ ಅತಿದೊಡ್ಡ ಏಕಶಿಲೆಯ ಪ್ರತಿಮೆ ಎಂದು ಹೇಳಲಾಗುತ್ತದೆ. ಕೃಷ್ಣದೇವರಾಯರ ಆಳ್ವಿಕೆಯ ಸಮಯದಲ್ಲಿ ಈ ಭವ್ಯವಾದ ಪ್ರತಿಮೆಯನ್ನು ಕೆತ್ತಲಾಗಿದೆ. ಮೊಘಲರ ದಾಳಿಯಿಂದಾಗಿ ಈ ಪ್ರತಿಮೆಯು ಸ್ವಲ್ಪ ವಿರೂಪಗೊಂಡಿದೆ ಎನ್ನುವುದು ಕೂಡ ಉಲ್ಲೇಖವಾಗಿದೆ.
ಇನ್ನು ಹಂಪಿಯ ಸೌಂದರ್ಯವನ್ನು ಸವಿದು, ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಹೊಸಪೇಟೆಯಲ್ಲಿನ ನೀರಿನಿಂದ ರಂಜಿಸುವ ಹಾಗೂ ತುಂಗಾಭದ್ರ ನದಿಯ ಹರಿವಿಕೆಯನ್ನು ಕೂಡ ಕಾಣಬಹುದಾಗಿದೆ.












Click it and Unblock the Notifications