Get Updates
Get notified of breaking news, exclusive insights, and must-see stories!

Bengaluru To Badami: ಬೆಂಗಳೂರಿನಿಂದ-ಬಾದಾಮಿ ಪ್ರವಾಸದ ವೇಳೆ ನೀವು ಏನೆಲ್ಲಾ ನೋಡಬಹುದು ಗೊತ್ತಾ?

ಡಿಸೆಂಬರ್‌ ಮುಗಿದು ಜನವರಿ ಬಂತೆಂದರೆ ಸಾಕು ಬಹುತೇಕ ಮಂದಿ, ಅದರಲ್ಲೂ ಬೆಂಗಳೂರಿನ ಜನ ಕಚೇರಿ ಕೆಲಸದ ಒತ್ತಡವನ್ನು ನಿವಾರಿಸಿಕೊಳ್ಳಲೆಂದೇ ಪ್ರವಾಸ ಕೈಗೊಳ್ಳುವ ಪ್ಲಾನ್ ಮಾಡಿಕೊಂಡಿರುತ್ತಾರೆ. ನೀವು ಬೆಂಗಳೂರಿನಿಂದ-ಬದಾಮಿ ಕಡೆಗೆ ಪ್ರವಾಸ ಬೆಳೆಸುವವರಾಗಿದ್ದರೆ, ಇಲ್ಲಿ ಸೂಕ್ತ ಮಾರ್ಗೋಪಾಯಗಳನ್ನು ನೀಡಲಾಗಿದೆ ಗಮನಿಸಿ.

ಕರ್ನಾಟಕದ ಒಂದೊಂದು ಜಿಲ್ಲೆ ಒಂದೊಂದು ಇತಿಹಾಸವನ್ನು ಹೊಂದಿದ್ದು, ಆ ಒಂದೊಂದು ಕುರುಹುಗಳು ಕೂಡ ಒಂದೊಂದು ಇತಿಹಾಸವನ್ನು ಹೇಳುತ್ತವೆ. ಅಲ್ಲದೆ ಪ್ರವಾಸಿ ತಾಣಗಳ ಪ್ರಮುಖ ಆಕರ್ಷಣೆಗಳು ಕೂಡ ಆ ಅದ್ಭುತ ಕುರುಹುಗಳೇ ಆಗಿವೆ.

 Bengaluru To Badami: Best tips for traveling from Bengaluru to Badami, know details

ಯುನೆಸ್ಕೋ ಪರಂಪರೆಯ ಎರಡು ಸುಂದರವಾದ ಸ್ಥಳಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ, ಒಂದು ಹಂಪಿ ಮತ್ತೊಂದು ಇನ್ನೊಂದು ಪಟ್ಟದಕಲ್ಲು ಆಗಿದೆ. ಇನ್ನು ಇತಿಹಾಸ ಮತ್ತು ವಾಸ್ತುಶಿಲ್ಪದ ಸಂಪೂರ್ಣ ವಿಭಿನ್ನ ಅನುಭವವನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನೀವು ಪಡೆಯಬಹುದಾಗಿದೆ.

ಬಾದಾಮಿಗೆ ರೈಲು ಮತ್ತು ಬಸ್ ಮೂಲಕ ತಲುಪಬಹುದಾಗಿದೆ. ಬೆಂಗಳೂರಿನಿಂದ ಬಾದಾಮಿಗೆ 463.1 ಕಿಲೋ ಮೀಟರ್‌ ಆಗಲಿದ್ದು, ಇಲ್ಲಿಗೆ ರಾತ್ರಿ ಪ್ರಯಾಣ ಮಾಡುವುದು ಸೂಕ್ತವಾಗಿದೆ. ಬಾದಾಮಿಯು ಬಾಗಲಕೋಟೆ ಜಿಲ್ಲೆಗೆ ಸೇರಿದ್ದು, ಅಕ್ಟೋಬರ್‌ನಿಂದ ಫೆಬ್ರುವರಿವರೆಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಏಕೆಂದರೆ ಮಾರ್ಚ್‌ ತಿಂಗಳಿನಲ್ಲಿ ಬಿಸಲು ಹೆಚ್ಚಾಗಿರುತ್ತದೆ. ಆದ್ದರಿಂದ ಈ ವೇಳೆ ಅಲ್ಲಿನ ಇನ್ನಿತರ ಪ್ರಮುಖ ಸ್ಥಳಗಳ ವೀಕ್ಷಣೆ ಮಿಸ್‌ ಆಗಬಹುದು.

ಅದರಲ್ಲೂ ವಾರಾಂತ್ಯದಲ್ಲಿ ಬಾದಾಮಿಗೆ ಭೇಟಿ ನೀಡುವುದು ಇನ್ನು ಉತ್ತಮವಾಗಿದೆ. ಇನ್ನು ಇಲ್ಲಿಂದ ಪಟ್ಟದಕಲ್ಲು ಮತ್ತು ಐಹೊಳೆಗೆ ವಾಹನಗಳ ಸೌಲಭ್ಯವೂ ಕೂಡ ಇದೆ. ಹಾಗಾದರೆ ಮೊದಲು ಎಲ್ಲಿಂದ ಪ್ರವಾಸ ಮಾಡಿದರೆ ಸೂಕ್ತ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಐಹೊಳೆ ಪ್ರವಾಸ: ಐಹೊಳೆಯನ್ನು ಮೊದಲು ಅಯ್ಯಹೊಳೆ ಎಂದು ಕರೆಯಲಾಗುತ್ತಿತ್ತು. ಹಿಂದೂ ಮತ್ತು ಜೈನ ದೇವಾಲಯಗಳನ್ನುಒಳಗೊಂಡಿರುವುದು ಶಿಲ್ಪಿಗಳಿಗೆ ಅಭ್ಯಾಸ ಮಾಡಲು ವಾಸ್ತುಶಿಲ್ಪದ ಶಾಲೆಯಾಗಿದೆ. ಇಲ್ಲಿನ ದೇವಾಲಯದ ಬಗ್ಗೆ ತಿಳಿಯಬೇಕೆಂದರೆ ಸರ್ಕಾರಿ ಮಾರ್ಗದರ್ಶಕರನ್ನು ನೇಮಿಸಿಕೊಳ್ಳುವುದು ಉತ್ತಮ. ಇಲ್ಲಿನ ದೇವಾಲಯವು ಅನೇಕ ವಿಶಿಷ್ಟ ಶಿಲ್ಪಕಲೆಗಳನ್ನು ಹೊಂದಿದೆ.

ಐಹೊಳೆಯ ದೇವಾಲಯಗಳು ಸಮೀಪದಲ್ಲಿವೆ. ಆದ್ದರಿಂದ ಮಾರ್ಗದರ್ಶಕರು ಪ್ರತಿಯೊಂದು ದೇವಾಲಯಗಳ ವಿವರಗಳನ್ನು ಮತ್ತು ಅದರ ಪ್ರಾಮುಖ್ಯತೆಯನ್ನು ವಿವರಿಸುತ್ತಾರೆ. ಮತ್ತು ಇಡೀ ಸ್ಥಳಗಳನ್ನು ಪೂರ್ಣಗೊಳಿಸಲು ಸುಮಾರು 2-3 ಗಂಟೆಗಳ ಕಾಲ ಸಮಯ ಬೇಕಾಗುತ್ತದೆ.

ಪಟ್ಟದಕಲ್ಲು ಪ್ರವಾಸ: ನಂತರ ಪಟ್ಟದಕಲ್ಲಿಗೆ ಪ್ರಯಾಣ ಪ್ರಯಾಣ ಮಾಡಬಹುದು. ಪಟ್ಟದಕಲ್ಲು ಯುನೆಸ್ಕೋ ಪರಂಪರೆಯ ಪ್ರವಾಸಿ ತಾಣಕ್ಕೆ ಪರಿಗಣಿಸಲ್ಪಟ್ಟಿದೆ. ಪಟ್ಟದಕಲ್ಲು ಹಿಂದೂ ಮತ್ತು ಜೈನ ನಂಬಿಕೆಯ ಕೆಲವು ಸುಂದರವಾದ ದೇವಾಲಯಗಳನ್ನು ಹೊಂದಿದೆ. ದೇವಾಲಯಗಳು ಒರಿಸ್ಸಾ ಶೈಲಿಯ ವಾಸ್ತುಶಿಲ್ಪವನ್ನು ಒಳಗೊಂಡಿವೆ.

ಪಟ್ಟದಕಲ್ಲು ತಾಣವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಲು ಸುಮಾರು 2-3 ಗಂಟೆಗಳ ಸಮಯ ಬೇಕಾಗುತ್ತದೆ. ಇಲ್ಲಿನ ದೇವಾಲಯಗಳು ರುದ್ರರಮಣೀಯವಾಗಿವೆ. ಮತ್ತು ಪ್ರತಿಯೊಂದು ದೇವಾಲಯಗಳು ಅನನ್ಯವಾಗಿದ್ದು, ಭಾರೀ ಹಿನ್ನೆಲೆಯನ್ನು ಹೊಂದಿದೆ. ಆದ್ದರಿಂದ ಮಾರ್ಗದರ್ಶಿಯನ್ನು ನೇಮಿಸಿಕೊಳ್ಳುವುದು ಅತ್ಯಗತ್ಯವಾಗಿದೆ.

ಮಹಾಕೂಟೇಶ್ವರ ದೇವಸ್ಥಾನ: ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಮತ್ತೊಂದು ಸುಂದರವಾದ ದೇವಾಲಯವಾದ ಮಹಾಕೂಟೇಶ್ವರ ದೇವಾಲಯಕ್ಕೆ ಭೇಟಿ ನೀಡಿದಾಗ ಇಲ್ಲಿ ಕೆಲವೊಂದು ಅದ್ಭುತಗಳನ್ನು ನೋಡಬಹುದಾಗಿದೆ. ಇದು ಸಣ್ಣ ದೇವಾಲಯಗಳಿಂದ ಆವೃತವಾಗಿದೆ ಮತ್ತು ಆಸಕ್ತಿದಾಯಕವಾಗಿ ಈ ಸ್ಥಳದಲ್ಲಿ ಅನೇಕ ಚಲನಚಿತ್ರಗಳನ್ನು ಚಿತ್ರೀಕರಿಸಲಾಗಿದೆ.

ಅಲ್ಲದೆ ಇಲ್ಲಿ ಕೆಲವು ವಿಶಿಷ್ಟವಾದ ಸುಂದರವಾದ ದೇವಾಲಯವನ್ನು ಕಾಣಬಹುದಾಗಿದೆ. ಇಲ್ಲಿನ ಹಲವು ಪ್ರಸಿದ್ಧ ಪುರಾವೆಗಳು ಸಹ ಇದ್ದು, ಈ ಪೈಕಿ ಒಂದು ಸುಂದರ ಕೊಳವಿದೆ. ಈ ಕೊಳವು ಪ್ರತಿ ವಾರ ಖಾಲಿಯಾಗುತ್ತದೆ. ನಂತರ ಮತ್ತೆ ಕೊಳವು ತುಂಬುತ್ತದೆ. ಇಲ್ಲಿ ಬರೀ ಸ್ಥಳೀಯರಲ್ಲದೇ ಪ್ರವಾಸಿಗರು ಕೂಡ ಪ್ರತಿನಿತ್ಯ ಸ್ನಾನ ಮಾಡುತ್ತಲೇ ಇರುತ್ತಾರೆ.

ಬದಾಮಿ ಪ್ರವಾಸ: ಪಟ್ಟದಕಲ್ಲಿನಿಂದ ಬಾದಾಮಿಗೆ ಇರುವ ದೂರ ಸುಮಾರು 22 ರಿಂದ 23 ಕಿಲೋ ಮೀಟರ್ ಆಗುತ್ತದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕೂಡಾ ಕರ್ನಾಟಕ ಪರಂಪರೆ ಇತಿಹಾಸದಲ್ಲಿ ತನ್ನದೇ ಆದ ಪ್ರಮುಖ ಸ್ಥಾನವನ್ನು ಪಡೆದಿದೆ. ಬಾದಾಮಿಯನ್ನು ಮೊದಲು ವಾತಾಪಿ ಎಂದು ಕರೆಯಲಾಗುತ್ತಿತ್ತು. ಇದು ಚಾಲುಕ್ಯರ ರಾಜಧಾನಿಯಾಗಿತ್ತು, ಮತ್ತು ದೇವಾಲಯಗಳಿಗೆ ಪ್ರಸಿದ್ಧಿಯಾಗಿತ್ತು.

ನೀವು ಬಾದಾಮಿಯ ಬನಶಂಕರಿ ದೇವಸ್ಥಾನವನ್ನು ಕವರ್ ಮಾಡಲು ಯೋಜಿಸಬಹುದಾಗಿದೆ. ಬನಶಂಕರಿ ಅಮ್ಮನವರ ದೇವಸ್ಥಾನವನ್ನು ಚಾಲುಕ್ಯರು ನಿರ್ಮಿಸಿದ್ದಾರೆ. ಆಸಕ್ತಿದಾಯಕ ವಾಸ್ತುಶಿಲ್ಪದ ಕಲೆಗಳಿಂದ ಈ ದೇವಾಲಯದ ಸುತ್ತಲೂ ಕಾಣಬಹುದಾಗಿದೆ. ಪ್ರಮುಖವಾಗಿ ಇಲ್ಲಿ ನೀವು ಸುಂದರವಾದ ದೀಪಸ್ತಂಭ ಮತ್ತು ದೇವಾಲಯದ ಕೊಳವನ್ನು ಇಲ್ಲಿ ನೋಡಬಹುದಾಗಿದೆ.

ಬಾದಾಮಿಯಲ್ಲಿ 4 ಗುಹೆಗಳಿವೆ, ಅವುಗಳಲ್ಲಿ ಮೂರು ಹಿಂದೂ ಧರ್ಮಕ್ಕೆ ಸೇರಿವೆ. ಮತ್ತೊಂದು ಜೈನ ಧರ್ಮಕ್ ಸೇರಿದೆ ಎನ್ನಲಾಗಿದೆ. ಪ್ರತಿಯೊಂದು ಗುಹೆಗಳು ದೇವರ ಕೆತ್ತನೆಗಳೊಂದಿಗೆ ವಿಶಿಷ್ಟ ಶೈಲಿಯಲ್ಲಿವೆ. ಇನ್ನುಈ ಕೆತ್ತನೆಗಳು ಆಗಿನ ಜನರ ಜೀವನ ವಿಧಾನ ಹೇಗಿತ್ತೆಂದು ವಿವರಿಸುತ್ತವೆ. ಇಲ್ಲಿ ಕೆತ್ತನೆಗಳಲ್ಲಿ ವಿಜಯನರಸಿಂಹ ಎಂದು ಕರೆಯಲ್ಪಡುವ ನರಸಿಂಹ, ವಿಶಿಷ್ಟವಾದ ಕವಚವನ್ನು ಹೊಂದಿರುವ ಆದಿಶೇಷ, ಹಲವು ಅವತಾರಗಳನ್ನು ಹೊಂದಿರುವ ಶಿವನನ್ನು ನೋಡಬಹುದಾಗಿದೆ.

ನಂತರ ಉತ್ತರ ಶಿವಾಲಯ, ಬೆಟ್ಟದ ಕಡೆಯಿರುವ ದೊಡ್ಡ ಬಂಡೆಯ ಹಾದಿಗಳನ್ನು ನೋಡಬಹುದು. ಗುಹೆ ದೇವಾಲಯಗಳು ಮತ್ತು ಅಗಸ್ತ್ಯ ಸರೋವರದ ನೋಟವಿರುವ ಸುಂದರವಾದ ದೇವಾಲಯವನ್ನು ಹುಡುಕಲು ಸ್ವಲ್ಪ ಬೆಟ್ಟದ ಮೇಲೆ ಹೋಗಬೇಕಾಗುತ್ತದೆ. ನಂತರ ಭೂತನಾಥ ದೇವಸ್ಥಾನಕ್ಕೆ ಹೋಗಬಹುದು. ಇಲ್ಲಿ ಸೂರ್ಯಾಸ್ತದ ಸಮಯದಲ್ಲಿ ಈ ದೇವಸ್ಥಾನವನ್ನು ನೋಡಲು ಸೂಕ್ತ ಎನ್ನಬಹುದು. ಏಕೆಂದರೆ ಸೂರ್ಯನ ಬೆಳಕು ದೇವಸ್ಥಾನದ ಮೇಲೆ ಬೀಳುತ್ತದೆ. ದೇವಾಲಯವನ್ನು ಮುಚ್ಚಿದ್ದರೂ ನಾವು ಸರೋವರದ ಉತ್ತಮ ನೋಟ ಮತ್ತು ಆ ಗುಹೆಗಳ ಮೇಲಿನ ಸೂರ್ಯಾಸ್ತದೊಂದಿಗೆ ಸುಂದರವಾದ ಬಾದಾಮಿ ಗುಹೆಗಳನ್ನು ನೋಡಬಹುದು.

ಬಾದಾಮಿಯ ಊಟದ ಶೈಲಿ: ಬಾದಾಮಿಯು ತನ್ನದೇ ಆದ ವರ್ಚಸ್ಸು ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಅದರಲ್ಲೂ ವಿಶೇಷವಾಗಿ ಪಾಕಪದ್ಧತಿ ಮತ್ತು ಜೀವನ ವಿಧಾನದಲ್ಲಿ ಇದು ಕರ್ನಾಟಕದ ಇತರ ಭಾಗಗಳಿಗಿಂತ ಭಿನ್ನವಾಗಿದೆ. ಊಟದ ವಿಚಾರಕ್ಕೆ ಬಂದರೆ ಬಾದಾಮಿಯು ಹಂಪಿಗಿಂತ ಭಿನ್ನವಾಗಿ ಹೆಚ್ಚು ತಿನಿಸು ಅಥವಾ ಕೆಫೆಗಳನ್ನು ಹೊಂದಿಲ್ಲ. ಆದರೆ ಇಲ್ಲಿ ಉತ್ತರ ಕರ್ನಾಟಕ ಶೈಲಿಯ ಜೋಳ ಹಾಗೂ ಅಕ್ಕಿ ರೊಟ್ಟಿ ಊಟವನ್ನು ಸವಿಯಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+