Bengaluru-Pune Expressway: ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್ ವೇ ಹೊಸ ಅಪ್ಡೇಟ್
Bengaluru-Pune Expressway: ನಿರ್ಮಾಣ ಹಂತದಲ್ಲಿರುವ ಬಹುನಿರೀಕ್ಷಿತ ಹೆದ್ದಾರಿಗಳಲ್ಲಿ ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್ ವೇ ಕೂಡ ಒಂದಾಗಿದೆ. ಇದು ನಿರ್ಮಾಣ ಆದರೆ ಎಷ್ಟು ಸಮಯ ಉಳಿತಾಯ ಆಗಲಿದೆ? ಕರ್ನಾಟಕದ ಯಾವೆಲ್ಲಾ ಭಾಗಗಳಲ್ಲಿ ಹಾದು ಹೋಗಲಿದೆ? ಏನೆಲ್ಲಾ ಪ್ರಯೋಜನೆಗಳಾಗಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಪ್ರಮುಖ ಪಾತ್ರವಹಿಸಲಿದೆ. 700 ಕಿಲೋ ಮೀಟರ್ ಉದ್ದದ ಈ ಮಹತ್ವಾಕಾಂಕ್ಷೆಯ ಎಕ್ಸ್‌ಪ್ರೆಸ್‌ವೇ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 15ರಿಂದ 7 ಗಂಟೆವರೆಗೆ ಕಡಿತಗೊಳಿಸಲಿದೆ.

ಭಾರತ್‌ಮಾಲಾ ಪರಿಯೋಜನ ಹಂತ 2 ಉಪಕ್ರಮದ ಭಾಗವಾಗಿರುವ ಈ ಎಕ್ಸ್‌ಪ್ರೆಸ್ ವೇ ಅನ್ನು 50,000 ಕೋಟಿ ರೂಪಾಯಿ ವೆಚ್ಚದದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 6 ಲೇನ್‌ಗಳ ಹೆದ್ದಾರಿ ಇದಾಗಲಿದ್ದು, ಗರಿಷ್ಠ ವೇಗದ ಮಿತಿ ಗಂಟೆಗೆ 120 ಕೀಲೋ ಮೀಟರ್ ಆಗಿದೆ. ಈ ಮೂಲಕ ಎರಡು ನಗರಗಳ ನಡುವೆ ಅತೀ ಕಡಿಮೆ ಸಮಯದ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ.
12 ಜಿಲ್ಲೆಗಳ ಮೂಲಕ ಹಾದುಹೋಗಲಿದೆ: ಮೂಲಗಳ ಪ್ರಕಾರಣ ಈ ಎಕ್ಸ್‌ಪ್ರೆಸ್‌ವೇ ಪುಣೆಯಲ್ಲಿ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇಯೊಂದಿಗೆ ಸಂಪರ್ಕ ಸಾಧಿಸಲಿದ್ದು, ಈ ಮೂಲಕ ಎರಡು ಪ್ರಮುಖ ನಗರಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಇದು ಮಹಾರಾಷ್ಟ್ರದ ಸಾಂಗ್ಲಿ, ಸತಾರ ಮತ್ತು ಪುಣೆ ಹಾಗೂ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು ಸೇರಿ ಒಟ್ಟು 12 ಜಿಲ್ಲೆಗಳ ಮೂಲಕ ಹಾದುಹೋಗಲಿದೆ.
ಕರ್ನಾಟಕದ ಯಾವೆಲ್ಲಾ ಜಿಲ್ಲೆಗಳಲ್ಲಿ ಹಾದುಹೋಗಲಿದೆ?
* ಬೆಳಗಾವಿ
* ಬಾಗಲಕೋಟೆ
* ಗದಗ
* ಕೊಪ್ಪಳ
* ವಿಜಯನಗರ
* ದಾವಣಗೆರೆ
* ಚಿತ್ರದುರ್ಗ
* ತುಮಕೂರು
* ಬೆಂಗಳೂರು
ಮಹರಾಷ್ಟ್ರದ ಯಾವೆಲ್ಲಾ ಜಿಲ್ಲೆಗಳಲ್ಲಿ ಹಾದುಹೋಗಲಿದೆ?
* ಸಾಂಗ್ಲಿ
* ಸತಾರ
* ಪುಣೆ
ಕಾಮಗಾರಿ ಪೂರ್ಣ ಯಾವಾಗ?: ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮಹಾನಗರ ಪ್ರದೇಶದ ಮುತ್ತಗಡಹಳ್ಳಿ ಪ್ರದೇಶದಲ್ಲಿ ಪ್ರಸ್ತಾವಿತ ಉಪಗ್ರಹ ರಿಂಗ್ ರಸ್ತೆಯಲ್ಲಿ ಕೊನೆಗೊಳ್ಳುತ್ತದೆ. ಈ ಹೆದ್ದಾರಿ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, 2028ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಈ ಹೊಸ ಎಕ್ಸ್‌ಪ್ರೆಸ್‌ವೇ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿ ಪರ್ಯಾಯ ಮತ್ತು ವೇಗದ ಮಾರ್ಗವನ್ನು ಒದಗಿಸುತ್ತದೆ.
ಏನೆಲ್ಲಾ ಪ್ರಯೋಜನಾಗಳಿವೆ?: ಇದು ಒಂದು ವೇಳೆ ಸಂಪೂರ್ಣವಾದರೆ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಗಳು ಆಗಲಿವೆ. ಅದರಲ್ಲೂ ಆರ್ಥಿಕ ಕ್ಷೇತ್ರದಲ್ಲಿ ಬೆಳವಣಿಗೆ ಆಗಲಿದೆ. ಪುಣೆ ಮತ್ತು ಬೆಂಗಳೂರು ನಡುವೆ ಪ್ರಮಾಣ ಮಾಡುವ ಪ್ರಯಾಣಿಕರಿಗೆ ಸಮಯ ಉಳಿತಾಯ ಆಗುತ್ತದೆ ಮತ್ತು ವ್ಯವಹಾರಗಳಿಗೆ ಹೆಚ್ಚು ಸಹಾಯಕವಾಗಲಿದೆ ಎಂದು ಹೇಳಲಾಗುತ್ತಿದೆ.
* ರಿಯಲ್ ಎಸ್ಟೇಟ್: ಈ ಹೆದ್ದಾರಿ ನಿರ್ಮಾಣ ಆದ್ರೆ, ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡು ರಾಜ್ಯಗಳಲ್ಲೂ ರಿಯಲ್ ಎಸ್ಟೇಟ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೂಡಿಕೆಗಳನ್ನು ಆಕರ್ಷಿಸುತ್ತದೆ ಮತ್ತು ನಗರಾಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಕಾಗಿದೆ.
* ಆರ್ಥಿಕ ಬೆಳವಾಣಿಗೆ: ಈ ಎಕ್ಸ್‌ಪ್ರೆಸ್‌ವೇ ವ್ಯಾಪಾರ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಲಿದೆ. ಅಲ್ಲದೆ, ಪ್ರಾದೇಶಿಕ ಆರ್ಥಿಕತೆ ಅಭಿವೃದ್ಧಿಗೆ ಹೆಚ್ಚು ಸಹಾಯಕವಾಗಲಿದೆ.
* ಉದ್ಯೋಗ ಸೃಷ್ಟಿ: ಈ ಯೋಜನೆಯು ನಿರ್ಮಾಣ ಹಂತದಲ್ಲಿದ್ದು, ಇದು ಪೂರ್ಣಗೊಂಡರೆ ಸಂಬಂಧಿತ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ತೆರೆದುಕೊಳ್ಳುವ ಸಾಧ್ಯತೆಯಿದೆ.












Click it and Unblock the Notifications