ಭಕ್ತರ ಬೇಡಿಕೆಗಳನ್ನು ಕ್ಷಣದಲ್ಲೇ ಈಡೇರಿಸುವ ಬಲಮುರಿ ಗಣಪತಿ ದೇವಸ್ಥಾನ ಎಲ್ಲಿದೆ?
ಹುಬ್ಬಳ್ಳಿ, ಏಪ್ರಿಲ್ 30: ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಗಾಂಧಿನಗರದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವುಳ್ಳ ಬಲಮುರಿ ಶ್ರೀಗಣಪತಿ ಹಾಗೂ ಶ್ರೀವೀರಭದ್ರೇಶ್ವರ ದೇವಸ್ಥಾನಗಳು ಭಕ್ತರ ಆರಾಧ್ಯ ಕೇಂದ್ರ ಆಗಿವೆ. ಒಂದೇ ಆವರಣದಲ್ಲಿ ಈ ದೇವಸ್ಥಾನಗಳಿದ್ದು ಬೇಡಿದವರಿಗೆ ಬೇಡಿದನ್ನು ಕೊಡುವ ದೈವಿ ಪುರುಷರಾಗಿದ್ದರೆ. ಇಂದು ಈ ದೇವಸ್ಥಾನ ಸಕಲ ಭಕ್ತರ ಆರಾಧ್ಯ ಕೇಂದ್ರ ಆಗಿದೆ.
ಆರಂಭದಲ್ಲಿ ಗಾಂಧಿನಗರದಲ್ಲಿ ಖಾಲಿ ಜಾಗ ಇತ್ತು. ಸ್ಥಳೀಯರು ಸೇರಿಕೊಂಡು ಮಹಿಳಾ ಸಂಘ ಹಾಗೂ ಗುರು ಹಿರಿಯರು ಜೊತೆಯಲ್ಲಿ ಸಾಮಾಜ ಮುಖಿಯಾಗಿ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದರು. ನಂತರ ಇದೇ ಜಾಗಯಲ್ಲಿ ಒಂದು ಧಾರ್ಮಿಕ ಕೇಂದ್ರ ಆಗಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು. ಕೆಲವರ ವಿರೋಧದ ನಡುವೆ ದೊಡ್ಡ ಮಟ್ಟದ ಧಾರ್ಮಿಕ ಕೇಂದ್ರ ನಿರ್ಮಾಣದ ನಿರ್ಧಾರ ತೆಗೆದುಕೊಳ್ಳಲಾಯಿತು.

ಸ್ಥಳೀಯ ನಾಯಕರು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಶ್ರೀ ಗಣಪತಿ ದೇವಸ್ಥಾನ ನಿರ್ಮಾಣದ ಸಂಕಲ್ಪದೊಂದಿಗೆ ಆರಂಭ ಆಯಿತು. ಕೇವಲ ಗಾಂಧಿನಗರ ಅಷ್ಟೇ ಅಲ್ಲ ಹುಬ್ಬಳ್ಳಿ ಧಾರವಾಡ ಸೇರಿದಂತೆ ಸುತ್ತಲಿನ ಭಕ್ತರು ಆಗಮಿಸಲು ಆರಂಭಿಸಿದರು. 1996ರಲ್ಲಿ ಶ್ರಿ ಬಲಮುರಿ ಗಣಪತಿ ದೇವಸ್ಥಾನ ನಿರ್ಮಾಣ ಮಾಡಲಾಯಿತು. ಬಲಮುರಿ ಗಣೇಶನ ವಿಗ್ರಹ ಪ್ರತಿಷ್ಟಾಪನೆ ಅತ್ಯಂತ ವಿಜೃಂಭಣೆಯಿಂದ ಸಹ ನಡೆಸಲಾಯಿತು.
ಈ ದೇವಸ್ಥಾನ ಮನೆಗೆ ಶಕ್ತಿ, ಧೈರ್ಯ, ಜ್ಞಾನ, ಬುದ್ಧಿವಂತಿಕೆ, ವಿಜಯ ಮತ್ತು ರಕ್ಷಣೆಯನ್ನು ನೀಡುತ್ತದೆ. ಇದಲ್ಲದೇ, ಇದು ಅಡೆತಡೆಗಳನ್ನು ನಿವಾರಿಸುತ್ತದೆ, ಶತ್ರುಗಳ ಮೇಲೆ ಜಯವನ್ನು ನೀಡುತ್ತದೆ, ತಂತ್ರ-ಮಂತ್ರದಲ್ಲಿ ಯಶಸ್ಸು, ರೋಗಗಳಿಂದ ಮುಕ್ತಿ ಮತ್ತು ಉದ್ಯೋಗದಲ್ಲಿ ಯಶಸ್ಸನ್ನು ಕರುಣಿಸುವ ಆರಾಧ್ಯ ದೈವ ಆಗಿದ್ದಾನೆ. ನಂತರ ಬಂದ ಅನೇಕ ಅಡೆತಡೆಗಳನ್ನು ನಿವಾರಣೆ ಮಾಡಿ ಭಕ್ತರು ದಿನೇ ದಿನೇ ಹೆಚ್ಚಾದರು.

ಇದೇ ದೇವಸ್ಥಾನದ ಆವರಣದಲ್ಲಿ ಇನ್ನೊಂದು ದೇವಸ್ಥಾನ ನಿರ್ಮಾಣ ಆಗಲಿ ಎಂಬುದು ಭಕ್ತರ ಆಶಯ ಆಗಿತ್ತು. ಅದರಂತೆ 2003ರಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಹ ನಿರ್ಮಾಣ ಮಾಡಲಾಯಿತು. 2014ರಲ್ಲಿ ರಥದ ನಿರ್ಮಾಣ ಮಾಡಿ ಅದೇ ವರ್ಷ ಶ್ರೀ ಬಸವ ಜಯಂತಿ ದಿನಂದಂದು ರಥೋತ್ಸವ ಆರಂಭಕ್ಕೆ ಸಲಹೆ ಸೂಚನೆಗಳ ನೀಡಿದ ಪ್ರಯುಕ್ತ ಅದೇ ವರ್ಷದಿಂದ ಜಾತ್ರಾ ಮಹೋತ್ಸವ ಆರಂಭ ಆಯಿತು. ಅಂದಿನಿಂದ ಇಂದಿನವರೆಗೂ ಭಕ್ತಿ ಭಾವದಿಂದ ರಥೋತ್ಸವ ನಡೆಸಿಕೊಂಡು ಬರಲಾಯಿತು.
ಈ ಎರಡು ದೇವಸ್ಥಾನಗಳಿಗೆ ಭಕ್ತರ ದಂಡೆ ಹೆಚ್ಚಾಯಿತು. ಯಾವುದೇ ಶುಭ ಕಾರ್ಯ ಮಾಡಬೇಕೆಂದರೆ ಜನಪ್ರತಿನಿಧಿಗಳು ಹಾಗೂ ಉದ್ಯಮಿಗಳು ಹಾಗೂ ಗಣ್ಯರು ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಗಣಪತಿ ದೇವರ ಆಶೀರ್ವಾದ ಪಡೆದೇ ಆರಂಭ ಮಾಡುತ್ತಾರೆ.
ಕಲಿಯುಗದಲ್ಲಿಯೂ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಬಲ್ಲ ಬಲಮುರಿ ಗಣಪತಿ ಪ್ರಸಿದ್ಧಿ ಆಗಿದೆ. ದೈವಾದಿ ಪುರಷನಾಗಿ ಪ್ರಸಿದ್ಧಿ ಪಡೆದು ಭಕ್ತರ ಮನದಲ್ಲಿ ಮನೆ ಮಾಡಿರುವ ಬಲಮುರಿ ಶ್ರೀ ಗಣಪತಿ ಹಾಗೂ ವೀರಭದ್ರೇಶ್ವರ ಜಾತ್ರೆ ಈ ಭಾಗದಲ್ಲಿಯೇ ಖ್ಯಾತಿ ಪಡೆದಿದೆ. ಈ ದೇವಸ್ಥಾನಗಳ ಅಭಿವೃದ್ಧಿಗಾಗಿ ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿರುವ ಎಸ್.ಬಿ ಸವದತ್ತಿ ಅವರು ತಮ್ಮ ತನು ಮನ ಧನದಿಂದ ಹಗಲಿರುಳು ಶ್ರಮಿಸಿ ಒಂದು ಹಂತಕ್ಕೆ ತಂದಿದ್ದಾರೆ.
ಯಾವುದೇ ಕಾರ್ಯ ಸಿದ್ಧಿ ಆಗಬೇಕು ಎಂದರೆ ಗುರಿ ಮತ್ತು ಛಲದೊಂದಿಗೆ ಮುಂದಾದ ಸವದತ್ತಿ ಅವರು ಹಿಡಿದ ಕಾರ್ಯ ಕೈಬಿಡದೇ ಯಾವುದೇ ಟೀಕೆ ಟಿಪ್ಪಣಿಗಳು ಬಂದರೂ ಅದಕ್ಕೆ ಕಿವಿಕೊಡದೇ ಸೇವೆ ಮಾಡಿ ಉಭಯ ದೇವಸ್ಥಾನಗಳ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ನಿಂತಿದ್ದಾರೆ. ಈಗ ರಚನೆಗೊಂಡಿರುವ ಕಮಿಟಿಯಮ್ನ ಪದಾಧಿಕಾರಿಗಳ ಹಾಗೂ ಭಕ್ತರ ಜೊತೆಗೆ ಅನೇಕ ಸಾಮಾಜಿಕ ಕಾರ್ಯ, ಜಾತ್ರಾ ಮಹೋತ್ಸವನ್ನು ಅತ್ಯಂತ ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ಯೋಜನೆ ಹಾಕಿಕೊಂಡಿದೆ. ವಸತಿ ಗೃಹಗಳು, ಕಲ್ಯಾಣ ಮಂಟಪ ಸೇರಿದಂತೆ ಅಗತ್ಯ ಸೌಕರ್ಯ ನಿರ್ಮಾಣಕ್ಕೆ ಮುಂದಾಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ












Click it and Unblock the Notifications