ಮಾರ್ಚ್ 31ರಿಂದ ಈ ಮಾರ್ಗದಲ್ಲಿ ವಾರಕ್ಕೆ 24,000 ಬಾರಿ ವಿಮಾನಗಳ ಕಾರ್ಯಾಚರಣೆ-ಕಾರಣ ಏನು?
ನವದೆಹಲಿ, ಮಾರ್ಚ್, 22: ಇದೀಗ ಬಿಸಿಲಿನ ಝಳಕ್ಕೆ ಜನ ಬೇಸತ್ತು ಹೋಗಿದ್ದಾರೆ. ಇನ್ನು ಇದೀಗ ಬೇಸಿಗೆ ಆರಂಭವಾದ ಹಿನ್ನೆಲೆ ಜನರ ಪ್ರಯಾಣದ ಹಿತದೃಷ್ಟಿಯಿಂದ ಭಾರತದ ವಿಮಾನಯಾನ ಸಂಸ್ಥೆಗಳು ದೇಶದ ಈ ಮಾರ್ಗಗಳಲ್ಲಿ ವಾರಕ್ಕೆ 24,275 ಬಾರಿ ಕಾರ್ಯಾಚರಣೆ ನಡೆಸಲು ಮುಂದಾಗಿವೆ. ಹಾಗಾದರೆ ಸಂಪೂರ್ಣ ಮಾಹಿತಿ ಇಲ್ಲಿದೆ ಗಮನಿಸಿ.
ಇದೀಗ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಲಿದ್ದು, ಈ ಝಳಕ್ಕೆ ಜನರು ಬೆಂದು ಬೆಂಡಾಗಿದ್ದಾರೆ. ಇನ್ನು ಕೆಲವೆಡೆ ಮಾತ್ರ ಆಗಾಗ ಮಳೆ ಬೀಳುತ್ತಿದೆ ಅಷ್ಟೇ. ಇನ್ನು ಈ ಬಿಸಿಲಿನ ಬೇಗೆಯಿಂದ ಜನರು ಬೇಸತ್ತಿರುವುದನ್ನು ಗಮನಿಸಿರುವ ವಿಮಾನಯಾನ ಸಂಸ್ಥೆಗಳು ಉತ್ತಮ ನಿರ್ಧಾರಕ್ಕೆ ಬಂದಿವೆ. ಆ ನಿರ್ಧಾರ ಏನ್ನುವ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಇದೇ ಮಾರ್ಚ್ 31ರಿಂದ ಈ ಕಾರ್ಯಾಚರಣೆ ಆರಂಭ ಆಗಲಿದೆ. ಕಳೆದ ವರ್ಷ ಇದೇ ವೇಳೆಗೆ ಹೋಲಿಕೆ ಮಾಡಿದರೆ, ಶೇಕಡಾ 6ರಷ್ಟು ಹೆಚ್ಚು ವಿಮಾನಗಳ ಹಾರಾಟ ನಡೆಸಲು ವಿಮಾನಯಾನ ಸಂಸ್ಥೆ ನಿರ್ಧಾರ ಮಾಡಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಪ್ರಕಾರ, ಚಳಗಾಲದಲ್ಲಿ ವಿಮಾನಗಳು ವಾರಕ್ಕೆ 23,732 ಬಾರಿ ಕಾರ್ಯಾಚರಣೆ ನಡೆಸಿದ್ದವು. ಇಂಡಿಗೊ, ಏರ್ ಇಂಡಿಯಾ ಮತ್ತು ವಿಸ್ತಾ ತನ್ನ ಕಾರ್ಯಾಚರಣೆಯೇ ಹೆಚ್ಚಿದೆ. ಆದರೆ ಸ್ಪೇಸ್ ಜೆಟ್ 2024ರ ಬೇಸಿಗೆಗೆ ತನ್ನ ಕಾರ್ಯಾಚರಣೆಯನ್ನು ಕಡಿಮೆ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೇಸಿಗೆ ಹಿನ್ನೆಲೆ ಭಾರತದ ವಿಮಾನಯಾನ ಸಂಸ್ಥೆಗಳು 37 ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುತ್ತಿವೆ. ಇದರಲ್ಲಿ ಅಮೆರಿಕ, ಐರೋಪ್ಯ ರಾಷ್ಟ್ರಗಳು, ಉಝ್ಬೇಕಿಸ್ತಾನ್, ಮಾಲ್ಡೀವ್ಸ್, ಜಾರ್ಜಿಯಾ ಹಾಗೂ ಅಝರ್‌ಬೈಜಾನ್ ಪ್ರಮುಖ ರಾಷ್ಟ್ರಗಳು ಒಳಗೊಂಡಿವೆ. ದೇಶದ 27 ವಿಮಾನ ನಿಲ್ದಾಣಗಳ ಮೂಲಕ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಚಾಚರಣೆ ನಡೆಸುತ್ತಿವೆ.
ದೇಶದ ವಿಮಾನಯಾನ ಸಂಸ್ಥೆಗಳು ವಾರದಲ್ಲಿ 1,922 ಬಾರಿ ಅಂತಾರಾಷ್ಟ್ರೀಯ ಹಾರಾಟ ನಡೆಸುತ್ತವೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 5.1ರಷ್ಟು ಹೆಚ್ಚಳ ಆಗಿದೆ. ಆಕಾಶ ಏರ್ ಸಂಸ್ಥೆಯು ಮಾರ್ಚ್ 28ರಿಂದ ತನ್ನ ಅಂತಾರಾಷ್ಟ್ರೀಯ ಹಾರಾಟ ನಡೆಸಲಿದೆ. ದೇಶದ 125 ವಿಮಾನ ನಿಲ್ದಾಣಗಳಿಂದ ಈ ಬೇಸಿಗೆಯಲ್ಲಿ 24,275 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಇದರಲ್ಲಿ ಆಜಂನಗರ, ಅಲಿಗಢ, ಚತ್ರಕೂಟ, ಗೋಡಿಯಾ, ಜಲಗಾಂವ್, ಮಹ್ರಾದಬಾದ್ ಹಾಗೂ ಪತ್ತೋರಗಢದಲ್ಲಿ ಹೊಸ ವಿಮಾನ ನಿಲ್ದಾಣಗಳ ಮೂಲಕವೂ ವಿಮಾನ ಕಾರ್ಯಾಚರಣೆ ನಡೆಸಲಿವೆ ಎಂದು ಡಿಜಿಸಿಎ ಮಾಹಿತಿ ನೀಡಿದೆ.
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ಶೇಕಡಾ 13.82ರಷ್ಟು ವಿಮಾನಯಾನ ಪ್ರಯಾಣ ಹೆಚ್ಚಿಸಿದೆ. ಏರ್ ಇಂಡಿಯಾ ಶೇಕಡಾ 4.59ರಷ್ಟು ಕಾರ್ಯಾಚರಣೆ ಹೆಚ್ಚಿಸಲಿದೆ. ವಿಸ್ತಾರ ಶೇಕಡಾ 25.22ರಷ್ಟು, ಆಕಾಶ ಏರ್ ಶೇಕಡಾ 14.30ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications