ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಡಮಾನ್ ನಲ್ಲಿ ವಿಮಾನದಲ್ಲಿ ವಿಹರಿಸಿ!

By Mahesh
|
Google Oneindia Kannada News

Andaman Beach
ನವದೆಹಲಿ, ಏ.13: ಅಂಡಮಾನ್ ದ್ವೀಪದಲ್ಲಿ ಇನ್ಮುಂದೆ ವಿಮಾನದಲ್ಲೇ ವಿಹರಿಸಬಹುದು. ಮುಂಬರುವ ಅಕ್ಟೋಬರ್ ತಿಂಗಳಿನಿಂದ ಪ್ರವಾಸಿಗರ ಅನುಕೂಲಕ್ಕಾಗಿ ಹಾಗೂ ದ್ವೀಪ ಪ್ರದೇಶಗಳ ಸೌಂದರ್ಯ ಸವಿಯಲು, ನೀರಿನ ಮೇಲೆ ಇಳಿಯಬಲ್ಲ ಹಾಗೂ ಹಾರಬಲ್ಲ ಸೀ ಪ್ಲೇನ್ ಗಳನ್ನು ಬಳಸಲಾಗುವುದು ಉದ್ದೇಶಿಸಲಾಗಿದೆ.

ದ್ವೀಪ ಸಮೂಹಕ್ಕೆ ಬರುವ ಪ್ರವಾಸಿಗರಿಗೆ ವಿಮಾನ ಸೇವೆ ಅನುಕೂಲ ಒದಗಿಸಲು ಪವನ್ ಹಂಸ್ ಹೆಲಿಕಾಪ್ಟರ್ ಲಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಆಡಳಿತ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. 8 ರಿಂದ 18 ಆಸನಗಳ ಸಾಮರ್ಥ್ಯವಿರುವ ಸಮುದ್ರಯಾನ ವಿಮಾನಕ್ಕೆ ಜಾಗತಿಕ ಟೆಂಡರ್ ಕರೆಯಲಾಗುವುದು ಎಂದು ಪವನ್ ಹೆಲಿಕಾಪ್ಟರ್ ಲಿ. ನ ಮುಖ್ಯಸ್ಥ ಆರ್ ಕೆ ತ್ಯಾಗಿ ಹೇಳಿದರು.

ಪ್ರತಿ ತಿಂಗಳು ಸೀಪ್ಲೇನ್ ಯಾನಕ್ಕೆ ಒಂದು ಕೋಟಿ ವೆಚ್ಚ ತಗುಲಲಿದೆ. ಅದನ್ನು ಸರ್ಕಾರ ಮತ್ತು ಹೆಲಿಕಾಪ್ಟರ್ ಸಂಸ್ಥೆ ಸಮನಾಗಿ ಭರಿಸಲಿವೆ. ಆರಂಭದಲ್ಲಿ ರಾಜಧಾನಿ ಪೋರ್ಟ್ ಬ್ಲೇರ್ ಸೇರಿದಂತೆ ಆಯ್ದ ಕೆಲ ಸುಂದರ ದ್ವೀಪಗಳಿಗೆ ಈ ಸೌಲಭ್ಯ ಲಭ್ಯವಿರುತ್ತದೆ. ಸುಮಾರು 8 ಸಾವಿರ ಕಿ.ಮೀ. ವಿಸ್ತಾರವಿರುವ ಕರಾವಳಿ ತೀರದ ದ್ವೀಪಗಳ ಸೌಂದರ್ಯ ಆಸ್ವಾದನೆಗೆ ಈ ಯೋಜನೆ ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಆಲ್ಲಿನ ಸರ್ಕಾರ ವ್ಯಕ್ತಪಡಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X