40 ಸಾವಿರಕ್ಕೆ 10 ಜ್ಯೋತಿರ್ ಲಿಂಗಗಳ ದರ್ಶನ!!!

ಪ್ರವಾಸವು ಬೆಂಗಳೂರು, ಹುಬ್ಬಳ್ಳಿ, ಕೂಡಲಸಂಗಮ, ಬಿಜಾಪುರ ಮಾರ್ಗವಾಗಿ ಪರ್ಲಿ ವೈದ್ಯನಾಥ, ಔಂಧನಾಗನಾಥ, ಗ್ರೀನೇಶ್ವರ, ಓಂಕಾರೇಶ್ವರ, ಉಜೈನಿ, ವಾರಣಾಸಿ (ಕಾಶಿ ವಿಶ್ವನಾಥ). ಕೇದರ್‌ನಾಥ, ಸೋಮನಾಥ, ತ್ರಿಂಬಕೇಶ್ವರ ಮತ್ತು ಭೀಮಾಶಂಕರ ಈ ಎಲ್ಲಾ 10 ಜ್ಯೋರ್ತಿರ್ಲಿಂಗ ಕ್ಷೇತ್ರಗಳ ದರ್ಶನದೊಂದಿಗೆ ಪಂಡರಾಪುರ, ತುಳಜಾಪುರ, ಔರಂಗಬಾದ್, ಅಜಂತಾ, ಎಲ್ಲೋರ, ದೌಲತಬಾದ್ ಕೋಟೆ, ಕಝರಾಹೋ, ಅಲಹಾಬಾದ್, ಗಯಾ, ಅಯೋಧ್ಯ, ಹರಿದ್ವಾರ್, ಋಷಿಕೇಶ, ಬದರಿನಾಥ, ಡೆಹ್ರಾಡೂನ್, ಚಂಡೀಘಡ, ಕುರುಕ್ಷೇತ್ರ ದೆಹಲಿ, ಆಗ್ರಾ, ಜೈಪುರ, ಅಜಮೀರ್, ಮೌಂಟ್ ಅಬು, ಅಹಮದಾಬಾದ್, ದ್ವಾರಕಾ, ಪಂಚವಟಿ, ಶಿರಡಿ, ಮಹಾಬಲೇಶ್ವರ, ಕೊಲ್ಹಾಪುರ, ಹುಬ್ಬಳ್ಳಿ ಮೂಲಕ ಬೆಂಗಳೂರು ತಲುಪುವರು.
10 ಜ್ಯೋರ್ತಿರ್ಲಿಂಗಗಳ ಕ್ಷೇತ್ರ ದರ್ಶನವು ಈ ಪ್ರವಾಸದಲ್ಲಿ ಒಳಗೊಂಡಿರುವುದು ಬಹು ವಿಶೇಷವಾಗಿದೆ. 2 +2 ಆಸನಗಳ ಐಷಾರಾಮದ ಹವಾನಿಯಂತ್ರಿತ (ಎ/ಸಿ) ಹೈಟೆಕ್ ವಾಹನದಲ್ಲಿ ಹೊರಡುವ ಪ್ರವಾಸದಲ್ಲಿ ಊಟ, ಉಪಹಾರ, ಪ್ರತ್ಯೇಕ ವಸತಿ ಸೇರಿ ಪ್ರತಿಯೊಬ್ಬರಿಗೆ ರು. 37,000 ದರ ನಿಗದಿಯಾಗಿದ್ದು , ವಿಶೇಷವಾಗಿ ಬ್ಯಾಂಕ್ ಉದ್ಯೋಗಿಗಳೂ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರಿಗೆ ಎಲ್‌ಟಿಸಿ ಸೌಲಭ್ಯವಿದೆ. ವಯೋಮಾನ 65 ಕ್ಕಿಂತ ಹೆಚ್ಚಿನ ವಯಸ್ಕರರಿಗೆ ಸಾರಿಗೆ ದರದಲ್ಲಿ ಶೇ.20 ರಷ್ಟು ರಿಯಾಯಿತಿ ಇರುತ್ತದೆ. ಏಪ್ರಿಲ್ 15 ರಂದು ಬೆಳಿಗ್ಗೆ 9.15 ಗಂಟೆಗೆ ಪ್ರಾರಂಭವಾಗುವ ಪ್ರವಾಸವು ಮೇ 14 ರಂದು ಬೆಳಿಗ್ಗೆ 6.30 ಗಂಟೆಗೆ ಬೆಂಗಳೂರಿಗೆ ವಾಪಸ್ಸು ಆಗುವುದರೊಂದಿಗೆ ಸುಖಕರ ಪ್ರವಾಸವು ಮುಕ್ತಾಯಗೊಳ್ಳುವುದು.
ಪ್ರವಾಸಕ್ಕೆ ಹಣವನ್ನು ಪಾವತಿಸಲು ಅನುಕೂಲವಾಗಲೆಂದು ನಿಗಮವು 3 ಸುಲಭ ಕಂತುಗಳಲ್ಲಿ ರು 10,000 ರಂತೆಯೂ ಕಟ್ಟಬಹುದಾಗಿದೆ. ಪ್ರಥಮ ಕಂತು ಸ್ವೀಕರಿಸಲು ತಕ್ಷಣದಿಂದ ಜಾರಿಯಲ್ಲಿರುತ್ತದೆ.
ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
ಕೆ.ಎಸ್.ಟಿ.ಡಿ.ಸಿ ಕಚೇರಿ, ಬಾದಾಮಿ ಹೌಸ್ ಕಟ್ಟಡ,
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ ಕಚೇರಿ)ಎದುರು,
ಬೆಂಗಳೂರು-2
ವೆಬ್ ತಾಣ: http://karnatakaholidays.net/
ದೂರವಾಣಿ ಸಂಖ್ಯೆ : (080)2221 2098,
(080)2222 2400,
(080)4132 9211,
(080)2235 2901/902/903/
9845342325












Click it and Unblock the Notifications