ಆಹಾ! ಚಾಮರಾಜನಗರ ಜಿಲ್ಲೆಯಲ್ಲಿ ಚಾರಣ

Malai Mahadeshwara Temple
ಚಾಮರಾಜನಗರ, ಮಾ. 6 : ಚಾಮರಾಜನಗರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪಾಂಡವಪುರ ತಾಲ್ಲೂಕು ಕುಂತಿಬೆಟ್ಟ, ಮಲೆಮಹದೇಶ್ವರ ಬೆಟ್ಟ, ನಾಗಮಲೈವರೆಗೆ ಹಾಗೂ ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಚಾರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪಾಂಡವಪುರ ತಾಲ್ಲೂಕು ಕುಂತಿಬೆಟ್ಟ ಚಾರಣದ ಮೊದಲನೆಯ ಬ್ಯಾಚ್ ಮಾ. 9 ರಿಂದ 19ರ ತನಕ, ಎರಡನೆಯ ಬ್ಯಾಚ್ ಮಾ. 11 ರಿಂದ ಮಾ. 13 ರವರೆಗೆ, ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೈವರೆಗೆ ಚಾರಣದ ಮೊದಲನೆಯ ಬ್ಯಾಚ್ ಮಾ.13 ರಿಂದ ಮಾ. 15ರ ವರೆಗೆ, ಎರಡನೆಯ ಬ್ಯಾಚ್ ಮಾ. 15 ರಿಂದ ಮಾ. 17ರ ವರೆಗೆ, ಶ್ರೀ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಚಾರಣದ ಮೊದಲನೆಯ ಬ್ಯಾಚ್ ಮಾ. 18 ರಿಂದ ಮಾ. 20ರ ತನಕ, ಎರಡನೆಯ ಬ್ಯಾಚ್ ಮಾ. 20 ರಿಂದ ಮಾ 22ವರೆಗೆ ನಡೆಯಲಿದೆ.

ಚಾರಣ ಕಾರ್ಯಕ್ರಮಗಳಲ್ಲಿ ಪಾಂಡವಪುರ ತಾಲ್ಲೂಕು ಕುಂತಿಬೆಟ್ಟ ಚಾರಣ ಸಾಹಸ ಕ್ರೀಡೆಯಲ್ಲಿ ಚಂದ್ರಡ್ಯಾಮ್‌ಲ್ಲಿ ನಡೆಯುವ ಜಲ ಸಾಹಸ, ಶಿಲಾರೋಹಣ, ನದಿ ದಾಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಚಾಮರಾಜನಗರ ಜಿಲ್ಲೆಯ ಯುವಕ,ಯುವತಿ ಹಾಗೂ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು 15 ರಿಂದ 35 ವರ್ಷ ಒಳಪಟ್ಟ ಕೊಳ್ಳೇಗಾಲ, ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ತಾಲ್ಲೂಕುಗಳಿಗೆ ಒಳಪಡುವ ಯುವ ಜನರು ಭಾಗವಹಿಸಲು ಅವಕಾಶವಿದ್ದು ಈ ಚಾರಣ ಕಾರ್ಯಕ್ರಮಕ್ಕೆ ಭಾಗವಹಿಸುವವರಿಗೆ ದಿನಭತ್ಯೆ, ಪ್ರಯಾಣಭತ್ಯೆಯನ್ನು ಇಲಾಖೆ ವತಿಯಿಂದ ಭರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08226-224932ನ್ನು ಸಂಪರ್ಕಿಸುವಂತೆ ಚಾಮರಾಜನಗರ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+