ತಾಲಿಬಾನ್, ಅಲ್ ಖೈದಾ, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗಳ ಒಳ ಜಗಳದ ಸೀಕ್ರೆಟ್

ಕಾಬೂಲ್, ಆ. 20: ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನೇ ಉರುಳಿಸಿ ತಾಲಿಬಾನ್‌ಗಳು ಅತಿಕ್ರಮಿಸಿಕೊಂಡಿದ್ದಾರೆ. ತಾಲಿಬಾನ್ ಏಳಿಗೆ ಸಹಿಸದ ಇಸ್ಲಾಮಿಕ್ ಸ್ಟೇಟ್ ಅಫ್ಘಾನಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧತೆ ಮಾಡಿಕೊಂಡಿದೆ ಎಂದು ಅಮೆರಿಕ ಸರ್ಕಾರದ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಸುಳಿವು ಕೊಟ್ಟಿದ್ದಾರೆ. ಉಗ್ರರೆಲ್ಲಾ ಒಂದೇ ಅಲ್ಲವೇ? ಅಲ್‌ ಕೈದಾ, ಇಸ್ಲಾಮಿಕ್ ಸ್ಟೇಟ್, ತಾಲಿಬಾನ್ ಮೂರೂ ಉಗ್ರ ಸಂಘಟನೆಗಳು ಆಗಿದ್ದರೂ, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ ನೋಡಿ.

ಅಂದಹಾಗೆ 20 ವರ್ಷಗಳ ಬಳಿಕ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಅತಿಕ್ರಮಿಸಿಕೊಂಡಿದ್ದಾರೆ. ಸೌಮ್ಯ ಸ್ವಭಾವದ ಆಡಳಿತ ನಡೆಸುವ ಭರವಸೆ ನೀಡಿದ್ದಾರೆ. ಅಮೆರಿಕ ಸೇನಾ ಪಡೆಗಳನ್ನು ಓಡಿಸಿದ ಆ. 19 ಅನ್ನು ಸ್ವಾತಂತ್ರ್ಯ ದಿನವನ್ನಾಗಿ ತಾಲಿಬಾಲಿಗಳು ಆಚರಣೆ ಮಾಡಿದ್ದಾರೆ. ಇನ್ನೊಂದಡೆ ಅಫ್ಘಾನಿಸ್ತಾನ ಉತ್ತರ ಪ್ರಾಂತ್ಯ ವಶಪಡಿಸಿಕೊಳ್ಳಲು ತಾಲಿಬಾನಿಗಳ ಪ್ರಯತ್ನ ಮುಂದುವರೆದಿದೆ. ಇದರ ನಡುವೆ ಅಮೆರಿಕದಿಂದ ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಸಂಘಟನೆಗಳ ವಿಚಾರಕ್ಕೆ ಬಂದರೆ ಅವುಗಳ ವಿಚಾರಧಾರೆಯಲ್ಲಿ ಭಿನ್ನಾಭಿಪ್ರಾಯಗಳಿವೆ

ಸಂಘಟನೆಗಳ ವಿಚಾರಕ್ಕೆ ಬಂದರೆ ಅವುಗಳ ವಿಚಾರಧಾರೆಯಲ್ಲಿ ಭಿನ್ನಾಭಿಪ್ರಾಯಗಳಿವೆ

ತಾಲಿಬಾನಿಗಳ ಎದುರಾಳಿಗಳು ಅಫ್ಘಾನಿಸ್ತಾನದಲ್ಲಿ ಉಗ್ರ ಸ್ಫೋಟ ಮಾಡುವ ಸಾಧ್ಯತೆಯಿದೆ ಎಂದು ಅಮೆರಿಕ ಸರ್ಕಾರದ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಅಫ್ಘಾನಿನಲ್ಲಿರುವ ಅಮೆರಿಕದ ಪ್ರಜೆಗಳನ್ನು ತ್ವರಿತಗತಿಯಲ್ಲಿ ಸುರಕ್ಷಿತವಾಗಿ ತನ್ನ ದೇಶಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನೇ ಉರುಳಿಸಿ ಆಕ್ರಮಿಸಿಕೊಂಡ ತಾಲಿಬಾನಿಗಳ ವಿರುದ್ಧ ಇದೀಗ ಬೇರೆ ಉಗ್ರ ಸಂಘಟನೆಗಳು ಸಮರಕ್ಕೆ ಸಜ್ಜಾಗಿವೆ. ವಿಶ್ವ ಭೂಪಟದಲ್ಲಿ ಅಪಾಯಕಾರಿ ಉಗ್ರ ಸಂಘಟನೆಗಳು ಎಂದೇ ಗುರುತಿಸಿಕೊಂಡಿರುವ ಇಸ್ಲಾಮಿಕ್ ಸ್ಟೇಟ್, ತಾಲಿಬಾನ್, ಅಲ್ ಖೈದಾ ಉಗ್ರರು ಒಂದೇ ಎಂದೇ ಪರಿಗಣಿಸಲಾಗಿದೆ. ಆದರೆ ಸಂಘಟನೆಗಳ ವಿಚಾರಕ್ಕೆ ಬಂದರೆ ಅವುಗಳ ವಿಚಾರಧಾರೆಯಲ್ಲಿ ಭಿನ್ನಾಭಿಪ್ರಾಯಗಳಿವೆ.

ಅಲ್ ಖೈದಾ ಉಗ್ರ ಸಂಘಟನೆ

ಅಲ್ ಖೈದಾ ಉಗ್ರ ಸಂಘಟನೆ

ಅಲ್ ಖೈದಾ ಉಗ್ರ ಸಂಘಟನೆ ಪಾಲಿಸುವುದು ವಹಾಬಿಸಮ್. ಅರಬ್ ರಾಷ್ಟ್ರದಲ್ಲಿ 18ನೇ ಶತಮಾನದಲ್ಲಿ ಜನ್ಮ ತಾಳಿದ ರಾಜಕೀಯ ಹಾಗೂ ಧಾರ್ಮಿಕ ಚಳವಳಿ. ಸುನ್ನಿ ಮುಸ್ಲಿಂ ಸಮುದಾಯದಲ್ಲಿರುವ ಧಾರ್ಮಿಕ ಭ್ರಷ್ಟಾಚಾರ ತೊಡೆದು ಹಾಕುವ ಉದ್ದೇಶದಿಂದ ಜನ್ಮ ತಾಳಿದ್ದು. ಇದರಲ್ಲಿ ಅಲ್ ಖೈದಾ ನಂಬಿಕೆ ಇಟ್ಟಿದೆ. ಇನ್ನು ಅಲ್ ಖೈದಾ ಸ್ಥಾಪನೆಯಾಗಿದ್ದು 1988ರಲ್ಲಿ, ಪಾಕಿಸ್ತಾನದಲ್ಲಿ. ಒಸಮಾ ಬಿನ್ ಲಾಡೆನ್ ಇದರ ಸಂಸ್ಥಾಪಕ. ಸೋವಿಯತ್ ಪಡೆಗಳು ಅಫ್ಘಾನ್ ತೊರೆಯುವ ಸಂದರ್ಭದಲ್ಲಿ ಅಲ್ ಖೈದಾ ಉಗ್ರ ಸಂಘಟನೆಯನ್ನು ಸ್ಥಾಪಿಸಲಾಯಿತು. ಜಿಹಾದ್ ಮೂಲಕ ವಿಶ್ವ ಇಸ್ಲಾಂ ಒಪ್ಪಿಕೊಳ್ಳುವಂತೆ ಮಾಡುವುದು. ಇಸ್ಲಾಂ ಧರ್ಮವನ್ನು ವಿರೋಧಿಸುವವರ ವಿರುದ್ಧ ಪ್ರತಿಯೊಬ್ಬ ಮುಸ್ಲಿಂ ಜಿಹಾದ್ (ಯುದ್ಧ ಮಾಡಬೇಕು ಎಂಬುದು ಅಲ್ ಖೈದಾ ಸಂಘಟನೆ ಇಟ್ಟಿರುವ ನಂಬಿಕೆ. ಪಾಶ್ಚಿಮಾತ್ಯರು ಮತ್ತು ಅವರ ಸಂಸ್ಕೃತಿಯಿಂದ ಇಸ್ಲಾಂ ಧರ್ಮಕ್ಕೆ ಧಕ್ಕೆ ಬರುತ್ತಿದೆ. ಹೀಗಾಗಿ ಇಸ್ಲಾಂ ಧರ್ಮ ಸ್ಥಾಪನೆ ಮಾಡಿ ಷರಿಯಾ ಕಾನೂನು ಜಾರಿಗೆ ತರುವುದು ಇದರ ಉದ್ದೇಶ. 2001 ನವೆಂಬರ್ 9ರಂದು ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿದ್ದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ಮಾಡಿತ್ತು. ಆನಂತರ ಅಮೆರಿಕ ಸೇನೆ ಅಲ್ ಖೈದಾ ಉಗ್ರರ ಮೇಲೆ ದಾಳಿ ನಡೆಸಿ ಇದರ ಸಂಸ್ಥಾಪಕ ಒಸಮಾ ಬಿನ್ ಲಾಡೆನ್‌ನನ್ನು ಹತ್ಯೆ ಮಾಡಿತ್ತು. ಅಫ್ಘಾನ್‌ನಲ್ಲಿ ಪ್ರಜಾಪ್ರಭುತ್ವ ಸರ್ಕಾರ ಸ್ಥಾಪನೆಗೆ ನಾಂದಿ ಹಾಡಿತ್ತು.

ತಾಲಿಬಾನ್ ಉಗ್ರ ಸಂಘಟನೆ

ತಾಲಿಬಾನ್ ಉಗ್ರ ಸಂಘಟನೆ

ತಾಲಿಬಾನ್‌ಗಳು ಕೂಡ ಉಗ್ರರೆಂದೇ ವಿಶ್ವ ಪರಿಗಣಿಸಿದೆ. ಆದರೆ, ತಾಲಿಬಾನ್‌ಗಳು ಹಾಗೂ ಅಲ್ ಖೈದಾ ಉಗ್ರರು ಒಂದೇ ಅಲ್ಲ. ಇದರ ತತ್ವ ಹಾಗೂ ವಿಚಾರ ಧಾರೆಯಲ್ಲಿ ಅಲ್‌ ಖೈದಾಗೆ ಹೋಲಿಸಿದರೆ ತುಂಬಾ ಭಿನ್ನತೆ ಹೊಂದಿದೆ. ಎಲ್ಲಾ ದೇಶಗಳಲ್ಲಿ ಇರುವ ಇಸ್ಲಾಂ ಧರ್ಮದ ನಂಬಿಕೆಗಳಿಗಿಂತಲೂ ತಾಲಿಬಾನ್‌ಗಳದ್ದು ತೀರ ಭಿನ್ನತೆ ಹೊಂದಿದೆ. ತಾಲಿಬಾನ್ ಅಂದರೆ ಅರೇಬಿಕ್ ಭಾಷೆಯಲ್ಲಿ ವಿದ್ಯಾರ್ಥಿ ಎಂದರ್ಥ. ತಾಲಿಬಾನ್ ಪ್ರಾರಂಭವಾಗಿದ್ದು 1994ರಲ್ಲಿ. ಇದಾಗಿ ಎರಡನೇ ವರ್ಷದಲ್ಲಿ ಅಫ್ಘಾನ್‌ನಲ್ಲಿ ಆಳ್ವಿಕೆಗೆ ಬಂದ ಸಂಘಟನೆ. 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಆಳ್ವಿಕೆ ಮಾಡಿದರು. ಷರಿಯಾ ಕಾನೂನು ಜಾರಿಗೆ ತರುವ ಮೂಲಕ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಶಾಂತಿ ಹಾಗೂ ಭದ್ರತೆ ಕಾಪಾಡುವುದು ತಾಲಿಬಾನ್‌ಗಳ ಏಕೈಕ ಗುರಿ. ಜನರು ಬದುಕಬೇಕಾದರೆ ಇವರು ಜಾರಿ ಮಾಡುವ ಕಠಿಣ ಕಾನೂನುಗಳನ್ನು ಪಾಲಿಸಲೇಬೇಕು. ಹತ್ತು ವರ್ಷ ತುಂಬಿದ ನಂತರ ಮಹಿಳೆಯರು ಶಿಕ್ಷಣ ಪಡೆಯಬಾರದು. ಟಿ.ವಿ. ನೋಡಬಾರದು, ಸಾಮಾಜಿಕ ಜಾಲತಾಣ ಬಳಸಲೇಬಾರದು ಎಂಬುದು ತಾಲಿಬಾನಿಗಳು ಜಾರಿಗೊಳಿಸಿರುವ ನಿಯಮಗಳ ಮಾದರಿ. ತಾಲಿಬಾನ್ ಒಂದು ಗುಂಪು ಅಲ್ಲ. ಇಂತಹ ಅನೇಕ ಗುಂಪುಗಳಿವೆ. ಪಾಕಿಸ್ತಾನದಲ್ಲಿ ಕೂಡ ತಾಲಿಬಾನ್ ತನ್ನ ಪ್ರಾಬಲ್ಯ ಹೊಂದಿದೆ. ಷರಿಯಾ ಕಾನೂನು ಉಲ್ಲಂಘಿಸಿ ಶಾಲೆಗೆ ಹೋಗಿದ್ದನ್ನು ವಿರೋಧಿಸಿ ಮಲಾಲ ಯೂಸುಫ್‌ರನ್ನು ಕೊಲ್ಲಲು ಯತ್ನಿಸಿದ್ದು ಇದೇ ತಾಲಿಬಾನಿಗಳೇ. ವಿಪರ್ಯಾಸವೆಂದರೆ ಪಾಕಿಸ್ತಾನಿ ಹಾಗೂ ಅಫ್ಘಾನ್ ತಾಲಿಬಾನ್ ಸಂಘಟನೆಗಳ ಹೆಸರು ಒಂದೇ ಆದರೂ ಎರಡೂ ಪರಸ್ಪರ ಶತ್ರು ಸಂಘಟನೆಗಳು ! ಎರಡು ಸಂಘಟನೆಗಳ ನಡುವೆ ಅನೇಕ ಸಂಘರ್ಷಗಳು ಈ ಹಿಂದೆ ಆಗಿವೆ.

ಐಸಿಸ್ ಉಗ್ರ ಸಂಘಟನೆ

ಐಸಿಸ್ ಉಗ್ರ ಸಂಘಟನೆ

ಇಸ್ಲಾಮಿಕ್ ಸ್ಟೇಟ್ ಹೆಸರಿನ ಐಸಿಸ್ ಉಗ್ರ ಸಂಘಟನೆ ಅಧಿಕೃತವಾಗಿ ಜನ್ಮ ತಾಳಿದ್ದು 2014ರಲ್ಲಿ. ಇದರ ಪ್ರಮುಖ ನಾಯಕ ಅಬುಬಕ್ಕರ್ ಆಲ್ ಬಗ್ದಾದಿಯಾದ ಬಳಿಕ ತಾಲಿಬಾನ್‌ಗಳ ಕಮಾಂಡರ್‌ಗಳು ಕೂಡ ಐಸಿಸ್‌ನತ್ತ ವಾಲಿದರು. ಹೀಗಾಗಿ ಅಲ್ ಖೈದಾ, ಇಸ್ಲಾಮಿಕ್ ಸ್ಟೇಟ್, ತಾಲಿಬಾನ್‌ಗಳು ಉಗ್ರ ಸಂಘಟನೆಗಳು ಆಗಿದ್ದರೂ ತೀರ ಭಿನ್ನತೆ ಹೊಂದಿವೆ. ಅಲ್ ಖೈದಾ ಹಾಗೂ ತಾಲಿಬಾನಿಗಳು ಸಾಂಪ್ರದಾಯಿಕ ಗೊರಿಲ್ಲಾ ಯುದ್ಧ ತಂತ್ರವನ್ನು ಬಳಸುತ್ತಾರೆ. ಹೀಗಾಗಿ ಇವರನ್ನು ಎದರಿಸುವುದು ತುಂಬಾ ಕಷ್ಟಕರ. ಇನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರದ್ದು ಟಿಪಿಕಲ್ ಆರ್ಮಿ ಸೇನೆಯಂತೆ ಕಾರ್ಯ ನಿರ್ವಹಣೆ ಮಾಡುತ್ತದೆ. ತನ್ನ ಶಕ್ತಿ ಹೆಚ್ಚಿಸಿಕೊಳ್ಳಲು ಇಸ್ಲಾಮಿಕ್ ಸ್ಟೇಟ್ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುತ್ತದೆ. ಯು ಟ್ಯೂಬ್, ಟ್ವಿಟ್ಟರ್, ವಾಟ್ಸಪ್ ಮೂಲಕ ಭಯೋತ್ಪಾದಕ ಕೃತ್ಯ ಎಸಗಲು ಪ್ರೇರಣೆ ನೀಡುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿ ವಿರುದ್ಧ ಯುದ್ಧ ಮಾಡುತ್ತದೆ. ಗುರಿ ಒಂದೇ ಆಗಿದ್ದರೂ ವಿಶ್ವದ ಮೂರು ಪ್ರಮುಖ ಉಗ್ರ ಸಂಘಟನೆಗಳ ಕಾರ್ಯಶೈಲಿ, ಚಟುವಟಿಕೆ ಭಿನ್ನತೆ ಹೊಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+