75ನೇ ಸ್ವಾತಂತ್ರ್ಯ ದಿನ: ಭಾರತದ ಆರು ಸೇನಾ ಯೋಧರಿಗೆ ಶೌರ್ಯ ಚಕ್ರ

ನವದೆಹಲಿ, ಆಗಸ್ಟ್ 14: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಉಗ್ರರ ಹುಟ್ಟಡಗಿಸಿದ ಭಾರತೀಯ ಸೇನಾ ಸಿಬ್ಬಂದಿಗೆ ದೇಶದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕಳೆದ ವರ್ಷ ಯೋಧರ ಸಾಧನೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ.

ಭಾರತೀಯ ಸೇನೆಯ ಪ್ರಕಾರ, ಮೇಜರ್ ಅರುಣ್ ಕುಮಾರ್ ಪಾಂಡೆ, ಮೇಜರ್ ರವಿಕುಮಾರ್ ಚೌಧರಿ, ಕ್ಯಾಪ್ಟನ್ ಅಶುತೋಷ್ ಕುಮಾರ್ (ಮರಣೋತ್ತರ), ಕ್ಯಾಪ್ಟನ್ ವಿಕಾಸ್ ಖಾತ್ರಿ, ರೈಫಲ್ ಮ್ಯಾನ್ ಮುಖೇಶ್ ಕುಮಾರ್ ಮತ್ತು ಸಿಪಾಯಿ ನೀರಜ್ ಅಹ್ಲಾವತ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆ ದಿನದಂದು ನಾಲ್ಕು ಸೇನಾ ಸಿಬ್ಬಂದಿಗೆ ಬಾರ್ ಟು ಸೇನಾ ಪದಕವನ್ನು ನೀಡುವುದಕ್ಕೆ ಹಾಗೂ 116 ಇತರರನ್ನು ಸೇನಾ ಪದಕಕ್ಕಾಗಿ ಹೆಸರಿಸಲಾಗಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. ಭಾರತೀಯ ಸೇನೆ ಪ್ರಕಾರ, ರಾಷ್ಟ್ರೀಯ ರೈಫಲ್ಸ್‌ನ 44 ನೇ ಬೆಟಾಲಿಯನ್‌ನ ಮೇಜರ್ ಪಾಂಡೆ ಕಳೆದ ವರ್ಷ ಜೂನ್ 9 ಮತ್ತು 10 ರಂದು ಜಮ್ಮು ಮತ್ತು ಕಾಶ್ಮೀರದ ಹಳ್ಳಿಯಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ನಡೆಸಿದರು. ಇಬ್ಬರು ಹಾರ್ಡ್‌ಕೋರ್ ಭಯೋತ್ಪಾದಕರ ಹುಟ್ಟಗಿಸುವಲ್ಲಿ "ಅಪ್ರತಿಮ ಧೈರ್ಯ" ತೋರಿಸಿದ್ದರು.

Shaurya Chakra Given to Six Army men for anti-terror operations in Jammu and Kashmir

ಮೇಜರ್ ಚೌಧರಿ:

ಕಳೆದ ಜೂನ್ ತಿಂಗಳಿನಲ್ಲಿ 13 ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವಲ್ಲಿ ನಾಲ್ಕು ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು. ಈ ನಾಲ್ಕೂ ಕಾರ್ಯಾಚರಣೆಯ ನೇತೃತ್ವವನ್ನು ರಾಷ್ಟ್ರೀಯ ರೈಫಲ್ಸ್ ನ 55ನೇ ಬೆಟಾಲಿಯನ್‌ನ ಮೇಜರ್ ಚೌಧರಿ ವಹಿಸಿದ್ದು "ಅಸಾಧಾರಣ ದೈರ್ಯವನ್ನು ಪ್ರದರ್ಶಿಸಿದ್ದರು.

ಕ್ಯಾಪ್ಟನ್ ಕುಮಾರ್:

ಕಳೆದ ವರ್ಷ ನವೆಂಬರ್ 8ರಂದು ಸಹ ಸೈನಿಕರೊಬ್ಬರ ಜೀವ ಉಳಿಸುವಲ್ಲಿ ಮತ್ತು ಅತ್ಯುನ್ನತ ವೃತ್ತಿಪರ ಚಾಣಾಕ್ಷತನ ಪ್ರದರ್ಶಿಸಿದಕ್ಕಾಗಿ ಮದ್ರಾಸ್ ರೆಜಿಮೆಂಟ್‌ನ 18 ನೇ ಬೆಟಾಲಿಯನ್‌ನ ಕ್ಯಾಪ್ಟನ್ ಕುಮಾರ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಲಾಗಿದೆ.

ಕ್ಯಾಪ್ಟನ್ ವಿಕಾಸ್ ಖಾತ್ರಿ:

ಕಳೆದ ವರ್ಷ ಡಿಸೆಂಬರ್ 12 ಮತ್ತು 13ರ ರಾತ್ರಿ ಜಮ್ಮು ಮತ್ತು ಕಾಶ್ಮೀರದ 12,000 ಅಡಿ ಎತ್ತರದ ಸವಾಲಿನ ಭೂಪ್ರದೇಶದಲ್ಲಿ "ಪ್ರದೇಶ ಪ್ರಾಬಲ್ಯ ಗಸ್ತು" ವಿಶೇಷ ಕಾರ್ಯದ ಭಾಗವಾಗಿ ರಾಷ್ಟ್ರೀಯ ರೈಫಲ್ಸ್‌ನ 16ನೇ ಬೆಟಾಲಿಯನ್‌ನ ಕ್ಯಾಪ್ಟನ್ ವಿಕಾಸ್ ಖಾತ್ರಿ ಅವರನ್ನು ನಿಯೋಜಿಸಲಾಗಿತ್ತು. ದೃಢ ಧೈರ್ಯ ಮತ್ತು ಶೌರ್ಯವನ್ನು ತೋರಿದ ಅವರು ಭಾರೀ ಪ್ರತೀಕಾರದ ಹೊರತಾಗಿಯೂ ಒಬ್ಬ ವಿದೇಶಿ ಭಯೋತ್ಪಾದಕರನ್ನು ಹಿಮ್ಮೆಟ್ಟಿಸಿದ್ದರು ಎಂದು ಸೇನೆಯು ಹೇಳಿದೆ.

ರೈಫಲ್‌ಮ್ಯಾನ್ ಕುಮಾರ್:

ಜಮ್ಮು ಮತ್ತು ಕಾಶ್ಮೀರದ ದೂರದ ಹಳ್ಳಿಯಲ್ಲಿ ಭಯೋತ್ಪಾದಕರು ಅಡಗಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಅದರ ಆಧಾರದ ಮೇಲೆ ಜುಲೈ 16ರ ರಾತ್ರಿ ನಡೆಸಿದ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ರೈಫಲ್ಸ್‌ನ ಒಂಬತ್ತನೇ ಬೆಟಾಲಿಯನ್‌ನ ರೈಫಲ್‌ಮ್ಯಾನ್ ಕುಮಾರ್ ಸಹ ಪ್ರಮುಖ ಪಾತ್ರ ವಹಿಸಿದ್ದರು. ಉಗ್ರ ಸ್ವಭಾವದಲ್ಲಿ ಹಲ್ಲೆಗೆ ಮುಂದಾದ ಉಗ್ರರೊಂದಿಗೆ ಕುಮಾರ್ ದೈಹಿಕವಾಗಿ ಕುಸ್ತಿ ಮಾಡಿದ್ದರು. ಗುಂಡೇಟಿನ ಗಾಯದ ಹೊರತಾಗಿಯೂ ಆತ ಭಯೋತ್ಪಾದಕನ ಮೇಲೆ ತನ್ನ ಶಸ್ತ್ರಾಸ್ತ್ರದಿಂದ ದಾಳಿ ಮಾಡುತ್ತಲೇ ಇದ್ದರು" ಎಂದು ಸೇನೆ ಹೇಳಿದೆ.

"ಅವರು ಗಾಯಗಳನ್ನು ಗಮನಿಸದೆ, ರೈಫಲ್ ಮ್ಯಾನ್ ಮುಖೇಶ್ ಕುಮಾರ್ ಭಯೋತ್ಪಾದಕರನ್ನು ಪಾಯಿಂಟ್-ಬ್ಲಾಂಕ್ ವ್ಯಾಪ್ತಿಯಿಂದ ತಟಸ್ಥಗೊಳಿಸಿದರು. ಇದರಿಂದಾಗಿ ನಮ್ಮ ಪಡೆಗಳಿಗೆ ಹಾಗೂ ನಾಗರಿಕರಿಗೆ ಯಾವುದೇ ಗಾಯವಾಗದಂತೆ ನೋಡಿಕೊಳ್ಳಲಾಯಿತು" ಎಂದು ಸೇನೆ ಹೇಳಿದೆ.

ಸಿಪಾಯಿ ಅಹ್ಲಾವತ್:

ಕಳೆದ ವರ್ಷ ಜೂನ್ 20 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ "ಕರ್ತವ್ಯದ ಬದ್ಧತೆ ಮತ್ತು ಉಕ್ಕಿನ ಶಕ್ತಿಯನ್ನೂ ಮೀರಿದ ಅಸಾಧಾರಣ ಶೌರ್ಯ" ತೋರಿಸಿದಕ್ಕಾಗಿ ಸಿಪಾಯಿ ಅಹ್ಲಾವತ್ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಒಬ್ಬ ಉಗ್ರ ಪಾಕಿಸ್ತಾನಿ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ. ಈ ಘಟನೆಯ ಬಗ್ಗೆ ವಿವರ ನೀಡಿದ ಸೇನೆಯು, ಭಯೋತ್ಪಾದಕರ ಗುಂಪೊಂದು ತಪ್ಪಿಸಿಕೊಳ್ಳುವ ಸಲುವಾಗಿ ಸೈನಿಕರ ಒಳ ವಲಯದ ಕಡೆಗೆ ಮನಬಂದಂತೆ ಗುಂಡಿನ ದಾಳಿ ನಡೆಸಿತು.

"ಒಬ್ಬ ಭಯೋತ್ಪಾದಕನನ್ನು ಸ್ಥಳದಲ್ಲಿಯೇ ನಿರ್ಣಾಮ ಮಾಡಲಾಯಿತು. ಎರಡನೇ ಭಯೋತ್ಪಾದಕ ಸಿಪಾಯ್ ಅಹ್ಲಾವತ್ ಕಡೆಗೆ ಭಾರೀ ಗುಂಡಿನ ದಾಳಿ ನಡೆಸಿದರು. ಗಂಭೀರ ಅಪಾಯದ ಹೊರತಾಗಿಯೂ, ಅವರು ತಮ್ಮ ಸ್ಥಾನವನ್ನು ಹಿಡಿದಿಡಲು ಅದಮ್ಯ ಧೈರ್ಯ ತೋರಿಸಿದರು. ಅಹ್ಲಾವತ್ ಧೈರ್ಯಶಾಲಿ ಕ್ರಮಗಳು ಪಾಕಿಸ್ತಾನಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಕಾರಣವಾಯಿತು," ಎಂದು ಸೇನೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+