Russia-Ukraine War : ಉಕ್ರೇನ್-ರಷ್ಯಾ ಸೇನೆಗಳ ಬಲಾಬಲ ಹೇಗಿದೆ?

ಉಕ್ರೇನ್‌ನಲ್ಲಿ ರಷ್ಯಾವು ಸಮರವನ್ನು ಆರಂಭಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆಯು ಕಳೆದ ಹಲವಾರು ದಿನಗಳಿಂದ ಹೊಗೆಯಾಡುತ್ತಿದೆ. ಇದಕ್ಕೆ ಸಂಬಂಧಿಸಿದಂ ತೆ ಯುರೋಪ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಮಾತುಕತೆಯ ಮಟ್ಟದಿಂದಲೇ ಪರಿಹಾರ ಕಂಡುಕೊಳ್ಳುವಂತೆ ಎರಡೂ ದೇಶಗಳಿಗೆ ಸೂಚಿಸಿದ್ದವು.

ಏತನ್ಮಧ್ಯೆ, ರಷ್ಯಾ ಉಕ್ರೇನ್‌ನ ಎರಡು ಪ್ರದೇಶಗಳನ್ನು ಪ್ರತ್ಯೇಕ ದೇಶವಾಗಿ ಗುರುತಿಸಿದೆ. ಇದರ ನಂತರ, ಅಮೆರಿಕ ಮತ್ತು ಯುರೋಪ್ ಸೇರಿದಂತೆ ಇತರ ದೇಶಗಳು ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿದವು.

ಎರಡೂ ಸೇನೆಗಳ ಬಲಾಬಲ ಹೀಗಿದೆ:
*ರಷ್ಯಾವು 900,000 ಸಕ್ರಿಯ ಸೈನ್ಯವನ್ನು ಹೊಂದಿದ್ದರೆ ಉಕ್ರೇನ್ ಕೇವಲ 196,660 ಸೈನಿಕರನ್ನು ಹೊಂದಿದೆ.

Russia -Ukraine War: Comparison of Ukraine and Russia Military Strengths (2022) In Kannada

*ರಷ್ಯಾವು ಉಕ್ರೇನ್‌ಗಿಂತ ಹತ್ತು ಪಟ್ಟು ಹೆಚ್ಚು ಸೈನಿಕರನ್ನು ಹೊಂದಿದೆ. ಉಕ್ರೇನ್‌ನಲ್ಲಿ ಎರಡು ಯುದ್ಧ ನೌಕೆಗಳಿದ್ದರೆ ರಷ್ಯಾದ ನೌಕಾಪಡೆಯಲ್ಲಿ 74 ಯುದ್ಧ ನೌಕೆಗಳು ಹಾಗೂ 51 ಜಲಾಂತರ್ಗಾಮಿ ನೌಕೆಗಳು ಕಾರ್ಯ ನಿರ್ವಹಿಸುತ್ತಿವೆ.

*ಇನ್ನು ಫೀಲ್ಡ್‌ನಲ್ಲಿ ಉಕ್ರೇನ್ 125,600 ಸೈನಿಕರನ್ನು ಹೊಂದಿದ್ದರೆ, ರಷ್ಯಾವು 280,000 ಸೈನಿಕರನ್ನು ಹೊಂದಿದೆ.

*ಉಕ್ರೇನ್ 900,000 ಮೀಸಲು ಸಿಬ್ಬಂದಿಯನ್ನು ಹೊಂದಿದೆ, ಕಳೆದ ಐದು ವರ್ಷಗಳಲ್ಲಿ ರಷ್ಯಾದಲ್ಲಿ ಎರಡು ಮಿಲಿಯನ್ ಮಂದಿ ಮಿಲಿಟರಿ ತರಬೇತಿ ಪಡೆದಿದ್ದಾರೆ.

*ರಷ್ಯಾವು ಉಕ್ರೇನ್‌ಗಿಂತ ಮೂರು ಪಟ್ಟು ಹೆಚ್ಚು ಫಿರಂಗಿಗಳನ್ನು ಹೊಂದಿದೆ. ಹಾಗೆಯೇ ಏಳು ಪಟ್ಟು ಹೆಚ್ಚು ಶಸ್ತ್ರ ಸಜ್ಜಿತ ವಾಹನಗಳನ್ನು ಹೊಂದಿದೆ.

*ಇನ್ನು ರಷ್ಯಾವು ಯುದ್ಧ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳನ್ನು ಉಕ್ರೇನ್‌ಗಿಂತ ಹತ್ತು ಪಟ್ಟು ಹೆಚ್ಚು ಹೊಂದಿದೆ.

*ಉಕ್ರೇನ್ 400ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹೊಂದಿದೆ, ಇದರಲ್ಲಿ ವಿಮಾನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದಾಗಿದೆ, ಆದರೆ ಇದೂ ಕೂಡ ರಷ್ಯಾ ಹೊಂದಿರುವ ಕ್ಷಿಪಣಿಗಳ ಸಂಖ್ಯೆಯ ಹತ್ತನೇ ಒಂದು ಭಾಗದಷ್ಟಿದೆ.

*ರಷ್ಯಾವು 500ಕ್ಕೂ ಹೆಚ್ಚು ಭೂ ಆಧಾರಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಂದಿದೆ. ರಷ್ಯಾವು ಉಕ್ರೇನ್ ಮೇಲೆ ದೂರದಿಂದ ದಾಳಿ ನಡೆಸಲು ಕ್ರೂಸ್ ಕ್ಷಿಪಣಿಗಳನ್ನು ಬಳಕೆ ಮಾಡಿದೆ ಎನ್ನಲಾಗುತ್ತಿದೆ.

ಆಕ್ರಮಣದ ಉದ್ದೇಶವಿಲ್ಲ ಎಂದ ರಷ್ಯಾ:
ನಿರ್ಬಂಧಗಳ ಹೊರತಾಗಿಯೂ, ರಷ್ಯಾ ಇಂದು ಯುದ್ಧ ಘೋಷಿಸಿದೆ. ಸುದ್ದಿ ಸಂಸ್ಥೆ AFP ಪ್ರಕಾರ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಔಪಚಾರಿಕವಾಗಿ ಯುದ್ಧವನ್ನು ಘೋಷಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಡೀ ವಿಶ್ವವೇ ಸ್ಥಬ್ಧಗೊಂಡಿದೆ. ಯುದ್ಧವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯು ವ್ಲಾಡಿಮಿರ್ ಪುಟಿನ್ ಅವರನ್ನು ಕೇಳಿದೆ. ಅದೇ ಸಮಯದಲ್ಲಿ, ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್ ಸೈನ್ಯ ಶರಣಾಗತಿ:
ಅದೇ ಸಮಯದಲ್ಲಿ, ರಷ್ಯಾದ ಯುದ್ಧದ ಘೋಷಣೆಯ ನಂತರ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನಿಯನ್ ಸೇನೆಯು ಶರಣಾಗಬೇಕು ಮತ್ತು ಯುದ್ದಕ್ಕೆ ಪ್ರಚೋದನೆ ನೀಡದೆ ಹಿಂದಿರುಗಬೇಕು ಎಂದು ಒತ್ತಾಯಿಸಿದ್ದಾರೆ. ಅದೇ ಸಮಯದಲ್ಲಿ, ನ್ಯಾಟೋ ದೇಶಗಳ ಬಗ್ಗೆಯೂ ಮಾತನಾಡಿರುವ ಪುಟಿನ್, ನಾವು ಎಲ್ಲಾ ರೀತಿಯ ಪರಿಣಾಮಗಳಿಗೆ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಯಾರಾದರೂ ಕಾರ್ಯಾಚರಣೆಗೆ ಅಡ್ಡಿಪಡಿಸಿದರೆ, ಅದರ ಪರಿಣಾಮಗಳನ್ನು ಎದುರಿಸಲು ಅವರು ಸಿದ್ಧರಾಗಿರಬೇಕು ಎಂದವರು ಎಚ್ಚರಿಸಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ವಿನಾಶಕಾರಿ ಎಂದ ಅಮೆರಿಕ:
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುವುದಾಗಿ ಘೋಷಿಸಿದ ಬೆನ್ನಲ್ಲೇ, ರಷ್ಯಾದ ಸೇನಾ ಪಡೆಗಳ ಅನಗತ್ಯ ದಾಳಿಗೆ ಒಳಗಾಗಿರುವ ಉಕ್ರೇನ್ ಜನರೊಂದಿಗೆ ವಿಶ್ವದ ಪ್ರಾರ್ಥನೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಅಧ್ಯಕ್ಷ ಪುಟಿನ್ ವಿನಾಶಕಾರಿ ಎಂದು ಸಾಬೀತುಪಡಿಸುವ ಪೂರ್ವ ಯೋಜಿತ ಯುದ್ಧವನ್ನು ಆಯ್ಕೆ ಮಾಡಿದ್ದಾರೆ ಎಂದವರು ಬಣ್ಣಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+