ರಾಜಕಾರಣಿಗಳಿಗಿಂತ ನಾವೇ ಹೆಚ್ಚು ಕೆಟ್ಟುಹೋಗಿದ್ದೇವೆ!

Posted By: ಮನೋಹರ್
Subscribe to Oneindia Kannada

ಕಲ್ಲು ದೇವರು ದೇವರಲ್ಲ,
ಮಣ್ಣು ದೇವರು ದೇವರಲ್ಲ,
ಮರ ದೇವರು ದೇವರಲ್ಲ,
ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ,
ಸೇತುಬಂಧ, ರಾಮೇಶ್ವರ, ಕಾಶಿ,
ಗೋಕರ್ಣ, ಕೇದಾರ ಮೊದಲಾದ ಪುಣ್ಯತೀರ್ಥ ಕ್ಷೇತ್ರಗಳಲ್ಲಿಹ ದೇವರು ದೇವರಲ್ಲ.
ತನ್ನತಾನಾರೆಂದು ತಿಳಿದೆಡೆ ತಾನೇ
ದೇವನೋಡಾ ಅಪ್ರಮಾಣ ಕೂಡಲಸಂಗಮದೇವಾ..

ಸುಭದ್ರ ಸಮಾಜ ಮತ್ತು ದೇಶ ಕಟ್ಟುವಲ್ಲಿ ರಾಷ್ಟ್ರೀಯತೆ ಮತ್ತು ದೇಶಪ್ರೇಮ:

ನಮ್ಮಲ್ಲಿ ಈ ರಾಷ್ಟ್ರೀಯತೆ ಹಾಗೂ ದೇಶಪ್ರೇಮದ ಪರಿಕಲ್ಪನೆ ಬದಲಾಗಬೇಕು. ಅದಕ್ಕಾಗಿ ನಾವಿಂದು ಹೊಸ ಭಾಷೆ ಬರೆಯಬೇಕಾಗಿದೆ. ಜಾತಿ ಧರ್ಮದ ಹೆಸರಿನಲ್ಲಿ ಕೀಳು ಹಾಗೂ ತುಷ್ಟೀಕರಣದ ರಾಜಕೀಯ ಮಾಡುತ್ತಿರುವ ರಾಜಕಾರಿಣಿಗಳು ಹಾಗೂ ರಾಜಕೀಯ ಪಕ್ಷಗಳಿಂದ ನಾವು ದೂರ ಇರಬೇಕಾಗಿದೆ.

ಕನ್ನಡ ಬಾವುಟದಲ್ಲಿ ಸತ್ಯ ಮೇವ ಜಯತೇ..ಮರೆತಿರಾ?

ಧರ್ಮ, ಜಾತಿ, ಬಹುಸಂಖ್ಯಾತ, ಅಲ್ಪಸಂಖ್ಯಾತ, ಓಲೈಕೆ, ತುಷ್ಟೀಕರಣ ಹಾಗೂ ಸತ್ಯ ಹೇಳುತ್ತೇವೆಂದು ಸುಳ್ಳು ಹೇಳುತ್ತಾ ಜನರ ಭಾವನೆಯೊಂದಿಗೆ ಆಟವಾಡುವವರನ್ನು ಬಹಿಷ್ಕರಿಸಬೇಕು. ಅಂತಹ ಜನರನ್ನು ಹಾಗೂ ರಾಜಕಾರಣಿಳನ್ನು ನಂಬಬಾರದು.

We common people are more rotten than politicians

ನಮಗೆ ಬೇಕಾಗಿರುವುದು ಒಳ್ಳೆ ಆಡಳಿತ, ಸಮಾನತೆ, ರಕ್ಷಣೆ ಮತ್ತು ನಿರ್ಭಯ ವಾತಾವರಣ. ಸರಕಾರಗಳು ಇಷ್ಟು ಕೊಟ್ಟರೆ ಸಾಕು. ಉಳಿದದ್ದನ್ನು ನೋಡಿಕೊಳ್ಳುವಸ್ಟು ಜನ ಬುದ್ಧಿವಂತರಿದ್ದಾರೆ. ಆದರೆ ರಾಜಕರಿಣಿಗಳು ಜನರನ್ನು ವಿಭಜಿಸುವ ಕೆಲಸ ಬಿಟ್ಟು ತಮ್ಮ ಕರ್ತವ್ಯದ ಕಡೆ ಗಮನ ಹರಿಸಬೇಕು. ಅಂಥಹ ಒಂದು ಹೊಸ ರಾಜಕೀಯ ವ್ಯವಸ್ಥೆಯ ಅವಶ್ಯಕತೆ ಇಂದು ನಮಗಿದೆ.

ರಾಷ್ಟ್ರಪ್ರೇಮಿ ಅಂದರೆ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಬೇಕು, ಅಕ್ಕಪಕ್ಕದವವರನ್ನು ಗೌರವಿಸಬೇಕು, ಸಾರ್ವಜನಿಕರ ಆಸ್ತಿಗೆ ಹಾನಿಮಾಡಬಾರದು, ದಂಗೆ, ಘರ್ಷಣೆ ಹೆಸರಿನಲ್ಲಿ ಸರಕಾರದ ಸ್ವತ್ತುಗಳಿಗೆ ಹಾನಿ ಮಾಡಬಾರದು, ನನ್ನ ಸರಕಾರಕ್ಕೆ, ನನ್ನ ನೆಲ ಮತ್ತು ಜಲಕ್ಕೆ ಹಾಗೂ ಮಾಡುವ ಕೆಲಸಕ್ಕೆ ಸದಾ ಪ್ರಾಮಾಣಿಕ ಗೌರವ ಕೊಡಬೇಕು ಎಂದೂ ಮೋಸ ಮಾಡಬಾರದು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

ಇದನ್ನು ಬಿಟ್ಟು ಕೇವಲ ಭಾರತ ಮಾತಾಕಿ ಜೈ, ವಂದೇ ಮಾತರಂ, ಹಿಂದೂ, ಮುಸ್ಲಿಂ, ಅಲ್ಪಸಂಖ್ಯಾತರು ಎನ್ನುತ್ತಾ ಅಂತಾರಾಷ್ಟ್ರೀಯ ಕ್ರೀಡೆಗಳು ನಡೆವಾಗ ತ್ರಿವರ್ಣ ದ್ವಜ ಹಿಡಿದು ಕುಣಿದಾಡಿದರೆ ಸಾಲದು.

ರಾಜಕಾರಣಿಗಳು ಸುಳ್ಳು ಮಾತಾಡೋದನ್ನು, ಅತಿಯಾದ ಸೊಕ್ಕನ್ನು, ವ್ಯವಹಾರದಲ್ಲಿ ಹಣ ತೊಡಗಿಸಿ ಹಣ ಮಾಡೋ ವ್ಯವಹಾರವನ್ನು ಬಿಡಬೇಕು. ಹಳೆ ರಾಜಕೀಯ ಪಕ್ಷಗಳಿಂದ ಇದು ಸಾಧ್ಯವೇ?

ಓದುಗರ ಪತ್ರ: ಅಧಿಕಾರದ ಆಸೆಗೆ ಮಹಿಳೆಯ ತೇಜೋವಧೆ ಮಾಡಿದ ಎಚ್ಡಿಕೆ

ಆದರೆ ಭಾರತ ಉಳಿಯಬೇಕಾದರೆ ಈ ಬದಲಾವಣೆ ಬೇಕು. ರಾಜಕಾರಿಣಿಗಳಿಗಿಂತ ನಾವು ಸಾಮಾನ್ಯರು ಹೆಚ್ಚು ಕೆಟ್ಟು ಹೋಗಿದ್ದೇವೆ. ನಮಗೆ ಬೇಕಾದವರ ಎಲ್ಲ ತಪ್ಪುಗಳನ್ನು ಸುಳ್ಳನ್ನು ಸಮರ್ಥಿಸಿಕೊಳ್ಳುತ್ತ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆ. ಬುದ್ದಿಜೀವಿಗಳು ಎಂಬ ಹಣೆ ಪಟ್ಟಿ ಕಟ್ಟಿಕೊಂಡು ಯಾರನ್ನೋ ಸಮಾಧಾನ ಪಡಿಸಿ ಪ್ರತಿಪಾಲಾಪೇಕ್ಷೆಯಿಂದ ನಮ್ಮನ್ನೇ ನಾವು ಮಾರಿಕೊಳ್ಳುತ್ತಿದ್ದೇವೆ.

ಸಮೃದ್ಧ ಸಮಾಜ ನಿರ್ಮಾಣಕ್ಕೆ, ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಹೊಸ ಹಾಗೂ ಪೂರ್ವಗ್ರಹ ಪೀಡಿತವಲ್ಲದ ಒಂದು ಹೊಸ ರಾಜಕೀಯ ವ್ಯವಸ್ಥೆಯ ಅವಶ್ಯಕತೆ ಇಂದು ನಮಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We common people are more rotten than politicians. We are cheating ourselves by blankly supporting falsehood. We should go beyond all the caste and creed to show our patriotism and nationalism. Write Manohar, Oneindia Kannada reader.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ