ಓದುಗರ ಓಲೆ : ಜಿಹಾದ್ ಎಂದು ರಕ್ತಹರಿಸಿದ್ದು ಯಾರು?
ಮೈಸೂರಿನ 'ಬುದ್ಧಿಜೀವಿ'ಯೊಬ್ಬರು ಆಸ್ತಿಕರನ್ನು ಕೆಣಕಿರುವ ಸಂಗತಿ ನಿಮಗೆ ತಿಳಿದಿದೆ. ಆಯುಧ ಹಿಡಿದಿರುವ ದೇವರು, ದೇವತೆಯನ್ನು ಪೂಜಿಸಬೇಡಿ. ಪೂಜಿಸಿದರೆ ಆ ದೇವತೆಯಲ್ಲಿರುವ ಉಗ್ರ ಸ್ವರೂಪ ನಿಮ್ಮಲ್ಲೂ ಆವಾಹನೆಯಾಗುತ್ತದೆ ಎಂದು ತಮ್ಮ 'ವಾಕ್ ಸ್ವಾತಂತ್ರ್ಯ'ವನ್ನು ಬೇಕಾಬಿಟ್ಟಿಯಾಗಿ ಬಳಸಿರುವ ಮೈಸೂರಿನ ಸಾಹಿತಿ ಕೆಎಸ್ ಭಗವಾನ್ ಅವರ ಚಿಂತನೆಗೆ ಒನ್ಇಂಡಿಯಾ ಕನ್ನಡದ ಓದುಗ ಮೌರ್ಯ ಅವರು ರೇಷ್ಮೆ ಶಾಲಿನಲ್ಲಿ ಬಾರಿಸಿದ್ದಾರೆ. ಅವರ ಪತ್ರ ಇಲ್ಲಿದೆ ಓದಿರಿ.
ಈ ಭಗವಾನ್ ಎಂಬ ಮನುಷ್ಯ ಎಲ್ಲರಿಗೂ ಗೊತ್ತಿರುವ ಹಾಗೆ ಒಬ್ಬ ಲದ್ದಿ ಜೀವಿ. ನಮ್ಮ ದೇವರುಗಳು ಆಯುಧ ಹಿಡಿದಿರುವ ಸಂಕೇತ ದುಷ್ಟರ ನಿಗ್ರಹ ಹಾಗು ಧರ್ಮದ ರಕ್ಷಣೆಯ ಸಂಕೇತವಾಗಿ. ಅದೆಲ್ಲಕ್ಕೂ ಮುಖ್ಯವಾಗಿ ನಮ್ಮ ಸಂಸ್ಕೃತಿಯಲ್ಲಿ ಮೂಲತಃ ವಿಗ್ರಹ ಎಂಬುದು ನಮ್ಮ ನಂಬಿಕೆಗೆ ಒಂದು ಸಂಕೇತ. ಅನಂತ ವಿಶ್ವದಲ್ಲಿ ಎಲ್ಲೆಲ್ಲೂ ಪಸರಿಸಿರುವ ದೈವತ್ವವನ್ನು ಒಂದು ಕಡೆ ಸಾಕ್ಷಾತ್ಕರಿಸಿ ಪೂಜಿಸುವ ಪದ್ಧತಿ ಅಷ್ಟೇ.

ಅದನ್ನು ನಾವು ನಮ್ಮ ಜೀವನದ ಪ್ರತಿಬಿಂಬ ಎಂಬಂತೆ ನೋಡುತ್ತೇವೆ. ನಮ್ಮ ಆದ್ಯಾತ್ಮ ಹೇಳುತ್ತದೆ ನಂಬಿಕೆಯಿಟ್ಟು ಧ್ಯಾನಿಸಿದಾಗ ನಿನ್ನಲ್ಲಿ ಉದ್ಭವಿಸುವ ಶಕ್ತಿಯೇ ದೇವರು ಎಂದು. ಆ ಶಕ್ತಿಯ ಅತ್ಯುನ್ನತ ಮಟ್ಟವೇ ಮುಕ್ತಿ. ಅದನ್ನು ಪಡೆಯಲು ಇರುವ ದಾರಿಗಳಿಗೆ ಯೋಗ ಎನ್ನುವರು. [ಆಯುಧ ಹಿಡಿದ ಹಿಂದೂ ದೇವರ ಪೂಜೆ ಮಾಡಬೇಡಿ]
ಅದನ್ನು ಸನ್ಯಾಸಿಯಾಗಿ ಎಲ್ಲ ಆಕಾರ ವಿಕಾರಗಳನ್ನು ನಿಗ್ರಹಿಸಿ ಸಾಕ್ಷಾತ್ಕಾರ ಪಡೆಯುವುದು ಒಂದು ಪ್ರಕಾರವಾದರೆ, ಮತ್ತೊಂದು ಸಾಮಾಜಿಕ ಜೀವನದಲ್ಲೇ ಭಾಗಿಯಾಗಿದ್ದು ಒಳ್ಳೆಯತನ, ನಿರ್ಲಿಪ್ತ ಶುದ್ದ ಮನಸ್ಸಿನಿಂದ ಬದುಕಿ ಮುಕ್ತಿ ಪಡೆಯುವುದು ಮತ್ತೊಂದು ದಾರಿ. ಅದನ್ನು ಕರ್ಮಯೋಗ ಎನ್ನುತ್ತಾರೆ. ಅಂದರೆ ಸಂಸಾರ ಸಹಿತನಾಗಿಯೇ ದೈವಿಕ ಮನಸ್ತಿತಿಯಲ್ಲಿ ಬದುಕುವುದು. ಹೀಗೆ ನಮ್ಮ ಸಂಸ್ಕೃತಿ ಸತ್ಯವನ್ನು ನಾನಾ ವಿಧಗಳಲ್ಲಿ ಹೇಳುತ್ತದೆ. ಅದೇ ನಮ್ಮ ವೈವಿಧ್ಯತೆಗೆ ಕಾರಣ.
ಆದರೆ ನಮ್ಮ ಪೂರ್ವಜರ ಈ ಮಹಾನ್ ಕೊಡುಗೆ, ಮುಂದೆ ಕೆಲ ಸ್ವಾರ್ಥಿ ಜಾತಿ ಜನಕರ ಮರ್ಮಗಳಿಗೆ ಬಲಿಯಾಗಿ ಅರೆಪ್ರಜ್ಞಾವಸ್ಥೆಯಲ್ಲಿದೆ. ನಿಜವಾದ ಭಾರತೀಯ ಇಂತಹ ಹೊಲಸು ಜಾತಿ, ಮೂಢನಂಬಿಕೆಗಳನ್ನು, ಮೂರ್ಖ ಪದ್ಧತಿ ಸಂಪ್ರದಾಯಗಳನ್ನು ಮರೆತು ನಮ್ಮ ಸಂಸ್ಕೃತಿಯ ಹಿರಿಮೆಯನ್ನರಿತು ಬಾಳುತ್ತಾನೆ. ಅದನ್ನು ಬಿಟ್ಟು ಇನ್ನು ತನ್ನ ಜಾತಿಯ ಅಭಿಮಾನವನ್ನು ಪೋಷಿಸುತ್ತಲೇ ಇದ್ದಾರೆ ನಮ್ಮ ದೇಶಕ್ಕೆ ಅವನೇ ಮೊದಲ ಶತ್ರು. [ಮತ್ತೊಂದು ವಿವಾದ ಹುಟ್ಟುಹಾಕಿದ ಯೋಗೇಶ್ ಮಾಸ್ಟರ್]
ಅದೆಲ್ಲ ಸರಿ, ಯೇಸು ಪೈಗಂಬರ್ ಇಬ್ಬರು ಯಾವುದೇ ಆಯುದಗಳನ್ನು ಹಿಡಿದಿಲ್ಲ ನಿಜ. ಆದರೆ ಅವರ ಸ್ಪೂರ್ತಿಯಿಂದಲೇ ತಾನೇ ಅವುಗಳು ತಮ್ಮ ಆದಿಯಿಂದಲೂ ಕ್ರುಸೇಡ್, ಜಿಹಾದ್ ಎಂದು ರಕ್ತಪಾತ ಹರಿಸಿರುವುದು. ನಾವೇನಾದರೂ ಅವರಂತೆ ಧರ್ಮಯುದ್ದ ಎಂದು ನಿಂತಿದ್ದರೆ ಭಾರತದಲ್ಲಿ ಮಾತ್ರವಲ್ಲ, ಇಡಿ ಏಷಿಯಾದಲ್ಲಿ ಇರಾನ್ ನಿಂದ ಹಿಡಿದು ಲಾವೋಸ್ ವಿಯೆಟ್ನಾಂವರೆಗೂ ಬರಿ ಹಿಂದೂ ಧರ್ಮವೇ ಇರುತ್ತಿತ್ತು.
ಹಾಗೆಯೇ ಬುದ್ಧ ಬೋಧಿಸಿದ್ದು ನಮ್ಮ ಸಂಸ್ಕೃತಿಯ ಹೃದಯವನ್ನಷ್ಟೇ. ಅಂದಿನ ಪುರೋಹಿತರು ಅಡವಿಟ್ಟುಕೊಂಡಿದ್ದ ನಮ್ಮ ಸಂಸ್ಕೃತಿಯನ್ನು ಅವರ ಸಂಕೋಲೆಗಳಿಂದ ಬಿಡಿಸಿದವನು ಆ ಮಹಾತ್ಮ. ಆತನನ್ನು ಆ ಜೆರುಸಲೆಂ ಜನರೊಂದಿಗೆ ಹೋಲಿಸಬೇಡಿ.












Click it and Unblock the Notifications