ಪತ್ರ: ಕರ್ನಾಟಕ ಕಂಡ ದಕ್ಷ ಅಧಿಕಾರಿ ರವಿ ಡಿ. ಚೆನ್ನಣ್ಣನವರ್
ಕರ್ನಾಟಕದ ಸಿಂಗಂ ಖ್ಯಾತಿಯ , ದಕ್ಷ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರ ಬಗ್ಗೆ ನನ್ನ ಅಭಿಪ್ರಾಯವನ್ನು ತಿಳಿಸಲು ಅತ್ಯಂತ ಹೆಮ್ಮೆ ಎನಿಸುತ್ತದೆ. ಈ ನಾಡು ಕಂಡ ಹೆಮ್ಮೆಯ ಪುತ್ರರಲ್ಲಿ ಇವರೂ ಇಬ್ಬರು.
ವೃತ್ತಿಯಲ್ಲಿ ಐಪಿಎಸ್ ದರ್ಜೆಯ ಅಧಿಕಾರಿಯಾಗಿ ಧಾರವಾಡ, ಹಾಸನ, ಶಿವಮೊಗ್ಗ ಹಾಗೂ ಪ್ರಸಕ್ತ ಮೈಸೂರಿನಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ ರವಿ ಡಿ. ಚೆನ್ನಣ್ಣನವರ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು. ತಮ್ಮ ಅನುಭವವನ್ನು ಸಮಾಜದೊಂದಿಗೆ ಹಂಚಿಕೊಳ್ಳುವುದರ ಜೊತೆಗೆ ಮಕ್ಕಳನ್ನು , ಯುವಕರನ್ನು ಹುರಿದುಂಬಿಸಿ ಉತ್ತಮ ರಾಷ್ಟ್ರ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಬಗ್ಗೆ ಹಾಗೂ ಇವರ ಕಾರ್ಯವೈಖರಿಯ ಬಗ್ಗೆ ಅಪಾರ ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ.
ಪೋಲಿಸ್ ಅಂಥ ಹೆಸರು ಕೇಳಿದರೇನೇ ಮಾರುದ್ದ ಓಡುವ ಜನಸಾಮಾನ್ಯರು ಇವರ ಹೆಸರನ್ನು ಕೇಳಿದರೆ ಅತ್ಯಂತ ಪ್ರೀತಿ, ಗೌರವ ತೋರುತ್ತಾರೆ. ಅದೇನು ಸಾಮರ್ಥ್ಯ! ಅದೇನು ಮಾತಿನ ವೈಖರಿ! ತಮ್ಮ ಕಾರ್ಯವೈಖರಿಯ ಮೂಲಕ ಯುವಜನತೆಯಲ್ಲಿ ಸ್ಫೂರ್ತಿ ತುಂಬುವ ವ್ಯಕ್ತಿತ್ವ ಇವರದ್ದು. ಯಾವುದೇ ಸ್ಥಳದಿಂದ ಇವರ ವರ್ಗಾವಣೆಯಾದರೂ ಅಲ್ಲಿನ ಜನರು ರವಿ ಅವರನ್ನು ಬೀಳ್ಕೊಡುವುದು ಕಣ್ಣೀರು, ಒಲ್ಲದ ಮನಸ್ಸಿನಿಂದಲೇ. ಅಷ್ಟರ ಮಟ್ಟಿಗೆ ಜನರೊಟ್ಟಿಗೆ ಆತ್ಮೀಯ ಒಡನಾಟ ಹೊಂದಿರುವವರು ರವಿ.

ಇತ್ತೀಚೆಗಷ್ಟೇ ತಮ್ಮ ಹಿರಿಯ ಮುಖ್ಯಪೇದೆಯೊಬ್ಬರು ನಿವೃತ್ತಿಯಾದಾಗ ಅವರಿಗೆ ಅತ್ಯಂತ ಪ್ರೀತಿಯಿಂದ ಹಾಗೂ ಪೂಜ್ಯಭಾವನೆಯಿಂದ ಅವರನ್ನು ತಮ್ಮ ಸಹುದ್ಯೋಗಿಗಳೊಂದಿಗೆ ಬೀಳ್ಕೊಟ್ಟರು. ಯುವಜನತೆ ಹೇಗೆ ಸಿನಿಮಾ ನಟ-ನಟಿಯರನ್ನು ತಮ್ಮ ರೋಲ್ ಮಾಡೆಲ್ ಗಳೆಂದುಕೊಂಡಂತೆ ಇಂಥ ದಕ್ಷ ಹಾಗೂ ಉತ್ತಮ ಆಡಳಿತ ನಡೆಸುವರನ್ನು ಕೂಡ ತಮ್ಮ ರೋಲ್ ಮಾಡೆಲ್ ಎಂದು ಭಾವಿಸಬೇಕಿದೆ. ರವಿಯವರು ಹಲವಾರು ಮಕ್ಕಳಿಗೆ, ಯುವಕರಿಗೆ ಹಾಗೂ ಹಿರಿಯರಿಗೆ ಸ್ಪೂರ್ತಿ ಅನ್ನೋದರಲ್ಲಿ ಎರಡು ಮಾತಿಲ್ಲ.
"ವೃತ್ತಿಯಲ್ಲಿ ಸಿಂಗಂ ಆಗಿ , ಮಕ್ಕಳಿಗೆ ಭರವಸೆಯಾಗಿ,
ಯುವಕರಲ್ಲಿ ಕಿಚ್ಚಾಗಿ, ಹಿರಿಯರಿಗೆ ನಂಬಿಕೆಯಾಗಿ,
ಕನ್ನಡನಾಡಿಗೆ ಬೆಳಕಾಗಿರುವ ಈ ಸೂರ್ಯನೇ ರವಿ ಡಿ,ಚೆನ್ನಣ್ಣನವರ್
ನಿಮ್ಮ ಈ ನಿರಂತರ ಸೇವೆ ನಮ್ಮ ಕರುನಾಡಿಗಿರಲಿ. ಹಾದಿ ತಪ್ಪಿದವರನ್ನು ನಿಮ್ಮ ಸಲಹೆಗಳಿಂದ ಸರಿದಾರಿಗೆ ತನ್ನಿ. ಇನ್ನೂ ಹಲವು ಸಿಂಗಂಗಳಿಗೆ ನೀವು ನಿರಂತರ ಪ್ರೇರಣೆಯೇ ಸರಿ.












Click it and Unblock the Notifications