ಸುದೀಪ್ ವಿಚ್ಛೇದನ ಸುದ್ದಿಗೆ ಓದುಗರೊಬ್ಬರ ಪ್ರತಿಕ್ರಿಯೆ

ಯಾರನ್ನೇ ಆಗಲೀ ಸೆಲಿಬ್ರಿಟಿ ಮಾಡುವವರು ಮಹಾಜನತೆ. ಸೆಲಿಬ್ರಿಟಿ ಅನ್ನುವ ಹೆಸರಿನಲ್ಲಿ ಅವರುಗಳ ಖಾಸಗೀ ಜೀವನದಲ್ಲಿ ತಲೆ ತೂರಿಸಿ ಅವರನ್ನು ಕಂಗೆಡಿಸುವವರು ಮೊತ್ತಮೊದಲನೆಯದಾಗಿ ಮೀಡಿಯಾದವರು.

ಯಾರೇ ಆಗಿರಲಿ ಎಲ್ಲರ ಜೀವನದಲ್ಲೂ ಒಂದಲ್ಲಾ ಒಂದು ಸಮಸ್ಯೆ ಕಾಡಿಸುತ್ತಿರುತ್ತಲೇ ಇರುತ್ತದೆ. ಅವರುಗಳ ಬಾಯಿಂದ ಡೈಲಾಗ್ ಡೆಲಿವರಿ ಮಾಡಿಸುವವರು ಬೇರೆಯವರು ಅನ್ನುವುದನ್ನು ನಾವು ಮರೆಯಬಾರದು. ಅವರುಗಳನ್ನು ಅಟ್ಟಕ್ಕೇರಿಸುವುದೂ ನಾವೆ, ಅವರುಗಳ ಕಾಲೆಳೆಯುವವರೂ ನಾವೆ. ಇಂತಹ ಡಬಲ್ ಗೇಮ್ ಆಡಿಕೊಂಡು ನಾವುಗಳು ನಮ್ಮ ದೇಶವನ್ನೇ ಹಾಳು ಮಾಡಲು ಹೊರಟಿದ್ದೇವೆ.

ನಮಗೆ ತರ್ಕಬದ್ಧತೆ, ಸಾಮಾನ್ಯ ಜ್ಞಾನ (ತಿಳಿವಳಿಕೆ)ಗಳನ್ನು ಬಿಟ್ಟು ಮಿಕ್ಕೆಲ್ಲಾ ಜ್ಞಾನಗಳೂ ಇರುತ್ತವೆ. ಸಾಮಾನ್ಯ ಜ್ಞಾನವಿಲ್ಲದ ಮೇಲೆ ಬೇರೆ ಯಾವ ಜ್ಞಾನವಿದ್ದರೂ ಉಪಯೋಗವೇ ಇಲ್ಲ. ನಮ್ಮ ಜೀವನ ಸರಿಯಾಗಲು ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಗಂಡು ಹೆಣ್ಣುಗಳು ಒಬ್ಬರನ್ನೊಬ್ಬರು ಸರಿಯಾಗಿ ಅರ್ಥಮಾಡಿಕೊಳ್ಳದೇ ಇರುವುದು. (Men are sex oriented, but women are security oriented) ಇದರಿಂದಲೇ ಸಮಸ್ಯೆ ಹೆಚ್ಚಾಗಲು ಕಾರಣ. [ಟ್ವಿಟ್ಟರ್ ನಲ್ಲಿ ಮನದಾಳ ಬಿಚ್ಚಿಟ್ಟ ಕಿಚ್ಚ ಸುದೀಪ್!]

Letter to the editor on Sudeep's divorce news

ಇಂತಹ ವಿಷಯಗಳಲ್ಲಿ ಅವರಿಬ್ಬರೇ ತಮ್ಮ ತಮ್ಮ ಸಮಸ್ಯೆಗಳನ್ನು ಒಂದು ಕಡೆ ಕುಳಿತು ಸಮಾಧಾನದಿಂದ ಚರ್ಚಿಸಿ ಸರಿಪಡಿಸಿಕೊಳ್ಳಬೇಕು, ಸರಿಪಡಿಸಿಕೊಳ್ಳಬಹುದು. ಮದುವೆಯಾದ ಹೊಸದರಲ್ಲಿ ಇದು ಕಷ್ಟ ಸಾಧ್ಯ. ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ 14 ವರ್ಷಗಳಷ್ಟು ದೀರ್ಘ ದಾಂಪತ್ಯದ ನಂತರವೂ ಇವರಿಬ್ಬರಲ್ಲಿ ಬಂದಿರುವ ಸಮಸ್ಯೆ ಸರಿಹೋಗಲಿಲ್ಲವೆಂದರೆ ಅದಕ್ಕೇನಾದರೂ ಗುರುತರ ಕಾರಣವಿದ್ದೇ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ವಿಚ್ಛೇದನವೇ ಪರಿಹಾರವೆಂಬ ಅಭಿಪ್ರಾಯಕ್ಕೆ ಇಬ್ಬರೂ ಬಂದಿರಬಹುದು.

ವಿದ್ಯಾವಂತ ಮುಠ್ಠಾಳರು, ಅವಿದ್ಯಾವಂತ ಮೂರ್ಖರೇ ತುಂಬಿ ಹೋಗಿರುವ ಜಗತ್ತಿನಲ್ಲಿ ಇವೆಲ್ಲಾ ಇಂದು ಸರ್ವೇಸಾಮಾನ್ಯವಾಗಿ ಹೋಗಿರುವ ವಿಚಾರ. ನಾವುಗಳು ನಮ್ಮದೆಷ್ಟೋ ಅಷ್ಟನ್ನು ನೋಡಿಕೊಂಡು, ನಿನ್ನೆಯನ್ನು ಮರೆತು, ಇಂದಿಗೆ ಬದುಕಿ, ನಾಳೆಗೆ ಯೋಜನೆ ಮಾಡುತ್ತಾ ನಮ್ಮ ಜೀವನವನ್ನು ಕಳೆಯುವುದೇ ಉತ್ತಮ ಮಾರ್ಗ. ಬೇರೆಯವರ ವಿಷಯಕ್ಕೆ ತಲೆ ಹಾಕುವುದರಿಂದ ನಮ್ಮ ಅಮೂಲ್ಯ ಸಮಯ ಹಾಳು. [ಕಿಚ್ಚನ ದಾಂಪತ್ಯದಲ್ಲಿ ಕಿಚ್ಚು : ಸುದೀಪ್ ಹೇಳಿದ್ದೇನು?]

ನಮಗೆ ಪ್ರಕೃತಿ ಮಾತೆ ಕರುಣಿಸಿರುವ ಈ 'ಬೇಡದ ಜನ್ಮ, ಅರ್ಥವಿಲ್ಲದ ವ್ಯರ್ಥ ಜೀವನ, ಅನಿವಾರ್ಯ ಸಾವು'ಗಳನ್ನು ಸಂತೋಷಚಿತ್ತದಿಂದ ಮುಗಿಸುವತ್ತ ಯೋಚಿಸಬೇಕು. ಸಾಧನೆ ಅಂದಾಗ ನನಗೆ ಜ್ಞಾಪಕ ಬರುವವರು ವಿಜ್ಞಾನಿ ಅಬ್ದುಲ್ ಕಲಾಂ ಸಾಹೇಬರು. ಜೀವನವೆಂದರೆ ಹಾಗಿರಬೇಕು. ಅವರಂತೆ ನಮ್ಮ ಜೀವನವನ್ನು ನಡೆಸುವ ಬಗ್ಗೆ ಚಿಂತಿಸೋಣ. ಹುಟ್ಟೋದ್ಯಾಕೆ, ಸಾಯೋದ್ಯಾಕೆ, ಏನಾದರೂ ಸಾಧಿಸಿ ಹೋಗೋಕ್ಕೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+