ಕೃತಘ್ನ ಮಾತ್ರ ಹಸುವಿನ ಕೆಚ್ಚಲಿಗೆ ಚೂರಿ ಹಾಕುತ್ತಾನೆ

"ಗೋವು ಪವಿತ್ರವಾದರೆ ಮೀನು ಕೂಡ ಅಷ್ಟೇ ಪವಿತ್ರ. ಗೋಹತ್ಯೆ ನಿಷೇಧಿಸುವುದಾದರೆ ಮೀನು ಹತ್ಯೆಯನ್ನೂ ನಿಷೇಧಿಸಿ. ಬ್ರಾಹ್ಮಣರು ಮೀನು ತಿನ್ನಲ್ವಾ? ಸಸ್ಯಾಹಾರ ಮತ್ತು ಮಾಂಸಾಹಾರ ಅವರವರ ಆಯ್ಕೆ" ಎಂದು ದಕ್ಷಿಣ ಭಾರತದ ಜನಪ್ರಿಯ ಮತ್ತು ಪ್ರಬುದ್ಧ ನಟ ಕಮಲ್ ನೀಡಿರುವ ಹೇಳಿಕೆಗೆ ಪ್ರತಿಯಾಗಿ ರಘು ಶರ್ಮಾ ಎಂಬ ಓದುಗರು ಬರೆದಿರುವ ಪತ್ರ ಇಲ್ಲಿದೆ. ಯಾರು ಸರಿ, ಯಾರು ತಪ್ಪು ನೀವೇ ನಿರ್ಧರಿಸಿ.

***

ತನ್ನ ನಾಲಿಗೆ ರುಚಿ, ಮಾನಸಿಕ ಸ್ವಾಸ್ಥ್ಯ ಹಿಡಿದಿಟ್ಟುಕೊಳ್ಳದ ಮನುಷ್ಯ ನಾಯಿ, ನರಿ, ಹಂದಿ, ಕೋಳಿ, ಹಾವು, ಕಪ್ಪೆ, ಜಿರಳೆ ಮುಂತಾದ ಎರಡು ಕಾಲಿನಿಂದ ಹಿಡಿದು, ಸಾವಿರ ಕಾಲಿನ ಹುಳದವರೆಗೂ ತಿಂದು ತೇಗಿ ಮಾನವತ್ವ ಮರೆತು ದಾನವತ್ವ ಮೆರೆಯುತ್ತಾನೆ. [ಬ್ರಾಹ್ಮಣರು ಗೋಮಾಂಸ ತಿಂದಿದ್ದಾರೆ: ಕಮಲ್]

Debate on cow slaughter : Response to Kamal statement

ಕಾಮಾತುರನಿಗೆ ತನ್ನ ಸ್ವಂತ ತಾಯಿ, ತಂಗಿ, ಅಕ್ಕ ಎನ್ನುವ ವ್ಯತ್ಯಾಸ ತಿಳಿಯದೆ ತನ್ನ ಚಪಲ ತೀರಿಸಿಕೊಳ್ಳಲು ಕುರುಡುತನದಿಂದ ಮುಂದಾಗುತ್ತಾನೋ ಹಾಗೇ ಜಿಹ್ವಾ ಚಾಪಲ್ಯಕ್ಕೆ ಬಿದ್ದ ಮೃಗಕ್ಕೆ ದೇವರು ಸಕಲ ಜೀವರಾಶಿಗಳನ್ನು ಸೃಷ್ಟಿಸಿದ್ದು ತನ್ನ ನಾಲಿಗೆ ರುಚಿಗೆ ಎನ್ನುವ ಸ್ವಾರ್ಥಕ್ಕೆ ಬೀಳುತ್ತಾನೆ.

ಹಾಗೇ ನೋಡಿದರೆ ತಿನ್ನುವುದರಲ್ಲಿ ಹೆಚ್ಚುಗಾರಿಕೆ ಇಲ್ಲ. ಬದಲಾಗಿ ಕೋಟಿ, ಕೋಟಿ ಕೊಟ್ಟರೂ ಅದನ್ನು ಎಡಗೈನಲ್ಲೂ ಮುಟ್ಟಲಾರೆ ಎನ್ನುವಂತನ ಛಲಗಾರಿಕೆ ಮೆಚ್ಚುಗೆಗೆ, ಅಭಿನಂದನೆಗಳಿಗೆ ಪಾತ್ರವಾಗಬೇಕು. [ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ?]

ಭಗವಂತನ ಸೃಷ್ಟಿಯ ಚರಾಚರಗಳ ಅಸ್ತಿತ್ವಕ್ಕೆ ಗೌರವ ಹಾಗು ಪ್ರಮುಖವಾಗಿ ತನ್ನ ಸ್ವಾರ್ಥಕ್ಕೆ, ಉದ್ಧಟತನಕ್ಕೆ ಕಡಿವಾಣ ಹಾಕಲು, ನಮ್ಮ ಹಿರಿಯರು ನಾಲ್ಕು ಕಾಲುಗಳ ಗುಂಪಿನಿಂದ ಹಸು, ಹಂದಿ, ಹುಲಿ, ಸಿಂಹ ಹರಿದಾಡುವ ಸರಿಸೃಪಗಳ ಗುಂಪಿನಿಂದ ನಾಗರಹಾವು, ಹಾರಾಡುವ ಪಕ್ಷಿಗಳ ಗುಂಪಿನಿಂದ ಗರುಡ, ನವಿಲು, ಕಾಗೆ, ಗೂಬೆ, ನೀರಿನಲ್ಲಿ ಬದುಕುವ ಮೀನು, ಆಮೆ, ಇತ್ಯಾದಿಗಳೆಲ್ಲವನ್ನು ನಮ್ಮ ದೇವರುಗಳ ವಾಹನಗಳನ್ನಾಗಿ ಮಾಡಿ ಅವುಗಳನ್ನೆಲ್ಲ ಗೌರವಿಸಿದರು.

ಹಾಲು ಕೊಟ್ಟು ಮನುಜ ಕುಲವನ್ನು ಸಲಹುವ ಹಸು, ಗೋಮಾತೆಯಾದರೆ, ಎತ್ತು, ನಂದಿಯಾಗಿ ಶಿವನಿಗೆ ವಾಹನವಾಯಿತು. ಹೀಗೆ ಸಿಂಹ ದುರ್ಗೆಗೆ, ಹುಲಿ ಅಯ್ಯಪ್ಪನಿಗೆ, ಇಲಿ ಗಣಪನಿಗೆ, ನವಿಲು ಶಣ್ಮುಖನಿಗೆ ವಾಹನವಾಗಿ ಗೌರವಕ್ಕೆ, ಪ್ರೀತಿಗೆ ಪಾತ್ರವಾಯಿತು. ಈ ಎಲ್ಲ ಆಚರಣೆಗಳ ಒಳಾರ್ಥ ಇಷ್ಟೇ. ಸೃಷ್ಟಿಯಲ್ಲಿ ಎಲ್ಲರಿಗೂ ಬದುಕುವುದು ಮೂಲಭೂತ ಹಕ್ಕು.

ಬದುಕು, ಬದುಕಲು ಬಿಡು' ಎಂಬ ಭಗವಾನ ಮಹಾವೀರರ ತತ್ವ ಬದುಕಿಗೆ ಅದರ್ಶವಾಗಬೇಕೆ ಹೊರತು ಭಗವಂತ ಸೃಷ್ಟಿ ತನಗಾಗಿಯೇ ಎನ್ನುವ ಸ್ವಾರ್ಥ ಬುದ್ಧಿ ಬಿಡದ ಹೊರತು ಮನುಕುಲದ ಏಳಿಗೆ ಕನಸಿನ ಮಾತಾಗುತ್ತದೆ.

ಹುಟ್ಟಿ ಒಂದೆರಡು ವರ್ಷ ತಾಯಿ ಹಾಲು ಕುಡಿದು, ಮುಂದೆ ಸಾಯುವವರೆಗೂ ಹಸುವಿನ ಹಾಲು ಕುಡಿದು ತನ್ನ ದೇಹ ಕೊಬ್ಬಿಸುವ ಕೃತಘ್ನ ಮಾತ್ರ ಹಸುವಿನ ಕೆಚ್ಚಲಿಗೆ ಚೂರಿ ಹಾಕುತ್ತಾನೆ. ಮಾನವ ಮಾನವತ್ವದಿಂದ ದೈವತ್ವದ ಸ್ವರ್ಗಕ್ಕೆ ಏರಬೇಕೋ, ಇಲ್ಲ ದಾನವತ್ವದ ಪಾತಾಳಕ್ಕೆ ಕುಸಿಯಬೇಕೋ ಎನ್ನುವುದನ್ನು ಪ್ರಜ್ಞಾವಂತರೆಲ್ಲರೂ ಯೋಚಿಸಬೇಕಾದ ಅಂಶ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+