ಈ ಪತ್ರ ಮೋದಿ ಅಭಿಮಾನಿಯಾಗಿ ಬರೆಯುತ್ತಿಲ್ಲ!

ಹೊಟ್ಟೆ ಉರಿಯುತ್ತೆ ರೀ.... ದೇಶ ಸ್ನೇಹಿ ಶಕ್ತಿಗಳನ್ನು ಹೇಗಾದರೂ ಮಟ್ಟ ಹಾಕಲೇಬೇಕು ಎಂದು ಪಣ ತೊಟ್ಟವರಂತೆ ಕಾಂಗ್ರೆಸ್ ಆಪ್ ನವರು ಕಾಣುತ್ತಿದ್ದಾರೆ. ಯಾವ ಯುಪಿಎ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಮೇಲೆದ್ದ ಕೇಜ್ರಿವಾಲ್ ಇವತ್ತು ಅದೇ ಕಾಂಗ್ರೆಸ್ ಜೊತೆ ಕೈ ಜೋಡಿಸುತ್ತಿದ್ದಾರೆ. ಭಾರತೀಯರ ಸ್ಥಿತಿ ಶೋಚನೀಯ!

ನಿಜವಾಗಿಯೂ ಒಬ್ಬ ಭಾರತೀಯರಾಗಿ ನೀವು ಆಲೋಚನೆ ಮಾಡಿ. ನಿಮ್ಮ ಬಾಷೆ, ಪ್ರಾಂತ್ಯ ರಾಜ್ಯ ಬಿಕ್ಕಾತುಗಳನ್ನು ಬದಿಗೊತ್ತಿ ದೇಶದ ಬಗ್ಗೆ ದೇಶಕ್ಕೆ ಮೋದಿಯವರ ಅನಿವಾರ್ಯತೆ ಬಗ್ಗೆ ಆಲೋಚಿಸಿ. ವಾಸ್ತವತೆಯ ಅರಿವಾಗುತ್ತದೆ. ಗುಜರಾತ್ ಅಭಿವೃದ್ದಿ ಆಗಿರೋದು ಮೋದಿ ಸಮಯದಲ್ಲೇ, ಅಭಿವೃದ್ದಿಗೆ ಕಾರಣ ಮೋದಿ ಸರ್ಕಾರ. ಈ ಮಾತನ್ನು ಚಿಕ್ಕ ಮಗುವಿನಲ್ಲಿ ಕೇಳಿದರು ಉತ್ತರ ಸಿಗಬಹುದು.

ಆದರೆ ಈ ಕಾಂಗ್ರೆಸ್ಸ್ ಆಪ್ ನವರು ಹೇಳುತ್ತಿರುವುದೇನು? ಅಷ್ಟಕ್ಕೂ ಕೇಜ್ರಿವಾಲ್ ಗೆ ಮಹಾನ್ ಭ್ರಷ್ಟಾಚಾರಿ ಸೋನಿಯಾ, ವದ್ರಾ, ರಾಹುಲ್ ಮುಂತಾದವರಲ್ಲಿ ಕಾಣದ ತಪ್ಪು ನರೇಂದ್ರ ಮೋದಿಯವರಲ್ಲಿ ಕಂಡಿದ್ದೇನು? ನಾನು ಮೋದಿಯವರ ಅಭಿಮಾನಿಯಾಗಿ ಬರೆಯುತ್ತಿಲ್ಲ. ಇಲ್ಲ, ಇಲ್ಲಿ ನನ್ನ ಕಾಮೆಂಟ್‌ಗಳನ್ನು ಟೀಕಿಸುವವರ ಹೊಟ್ಟೆ ಉರಿಸೋದಕ್ಕೆ ಬರೆಯುತ್ತಿಲ್ಲ. ದೇಶದ ಹಿತವನ್ನು ಅರಿತು ಬರೆಯುತ್ತಿದ್ದೇನೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

An open letter by Narendra Modi fan

ಒಂದು ವಿಚಾರ ಗಮನಿಸಿ, ಕಾಂಗ್ರೆಸ್ ಆಪ್ ಅಥವಾ ಇವತ್ತು ತೃತೀಯ ರಂಗ ಅಂತ ಕಟ್ಟಿಕೊಂಡಿರೋ ಮೂರ್ಖರ ಪಡೆ ಇದೆಯಲ್ಲ... ಇದರಲ್ಲಿ ಏನಾದ್ರೂ ವ್ಯತ್ಯಾಸ ಕಾಣುತ್ತಿದೆಯಾ ನಿಮಗೆ? ಮಾತೆತ್ತಿದರೆ ಅಲ್ಪ ಸಂಖ್ಯಾತರ ಓಲೈಕೆ, ಹಗರಣ, ಇತ್ಯಾದಿ ಇತ್ಯಾದಿ.. ನಾನೇನು ಬಿಜೆಪಿಯವರು ಸುಭಗರು ಅಂತ ಅನ್ನಲ್ಲ... ಯಡ್ಡಿ ರಾಮುಲು ರೆಡ್ಡಿ ಮುಂತಾದವರು ಭ್ರಷ್ಟರೆ.

ಆದರೆ ಇವತ್ತು ನರೇಂದ್ರ ಮೋದಿಯವರ ಅನಿವಾರ್ಯ ಭಾರತಕ್ಕಿದೆ. ಚೀನಾ ಭಾರತದ ವಿರುದ್ದ ಹಸ್ತಕ್ಷೇಪ ಮಾಡುತ್ತಿದ್ದರೂ, ಪಾಕ್ ನಮ್ಮ ಸೈನಿಕರ ತಲೆ ಕಡಿದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಆದರೆ ಮೊನ್ನೆ ಚುನಾವಣೆ ಭಾಷಣದಲ್ಲೇ ಚೀನಾಕ್ಕೆ ಖಡಕ್ ಉತ್ತರ ಕೊಟ್ಟವರು ನರೇಂದ್ರ ಮೋದಿ. ನರೇಂದ್ರ ಮೋದಿ ಅನ್ನೋದು ಅಭಿವೃದ್ದಿಗೆ ಇನ್ನೊದು ಹೆಸರು.

ಇವತ್ತಿಗೂ ಆವರ ಹೆಸರಿನ ಜೊತೆ ಗೋಧ್ರಾ ಹತ್ಯಾಕಾಂಡ ಟ್ಯಾಗ್ ಹಾಕಿಕೊಂಡಿದೆ. ಆದರೆ 2002ರಿಂದ ಇಲ್ಲಿಯ ತನಕ ಅಲ್ಲಿ ಒಂದೇ ಒಂದು ಕೋಮುಗಲಭೆ ಆಗಿಲ್ಲ ಅಂದರೆ ಅವರ ಕಾರ್ಯಕ್ಷಮತೆ ಎಂತಹದು ತಿಳಿದುಕೊಳ್ಳಿ. ಇವತ್ತು ಕಾಂಗ್ರೆಸ್ಸ್ ಆಡಳಿತದ ಅಥವಾ ಬೇರೆ ಪಕ್ಷಗಳು ಆಳ್ವಿಕೆ ನಡೆಸುತ್ತಿರುವ ರಾಜ್ಯಗಳನ್ನೇ ಗಮನಿಸಿ. ವರ್ಷಕ್ಕೆ ನೂರಾರು ಗಲಬೆಗಳು. ಆದರೆ ಅವನ್ನು ಕೇಳೋರೇ ಇಲ್ಲ. ಅವರಿಗೆ ಕಾಣೋದು ಒಂದೇ ಗೋಧ್ರಾ ಗೋಧ್ರಾ ಗೋಧ್ರಾ. ಮಾಧ್ಯಮಗಳು ಕೂಡ ಇದಕ್ಕೆ ಹೊರತಾಗಿಲ್ಲ.

ಕೊನೆಯದಾಗಿ ಒಂದು ಮಾತು. ಮೋದಿಯವರು ಪ್ರಧಾನಿ ಆಗಿಲ್ಲ ಅಂದರೆ ಅವರ ಪರ ಬೊಬ್ಬೆ ಹಾಕೋ ನಮಗೆ ಏನು ನಷ್ಟ ಇಲ್ಲ. ನಮಗೆ ಒಂದು ದಿನ ಬೇಸರ ಆಗಬಹುದು ಅಥವಾ ನಮ್ಮನ್ನು ಟೀಕಿಸುವವರು ಜೈಕಾರ ಹಾಕಬಹುದು. ನಮಗೇನು ಚಿಂತೆ ಇಲ್ಲ. ಆದರೆ ದೇಶಕ್ಕೆ ತುಂಬಲಾರದ ನಷ್ಟ ಆಗತ್ತೆ ಅನ್ನುವುದು ನಿಮಗೆ ನೆನಪಿರಲಿ. ಈ ನಷ್ಟ ಏನೆಂಬುದು ನಂತರ ನಿಮ್ಮ ಅರಿವಿಗೆ ಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+