ಹತ್ತು ಲೇಖನಗಳಿಗೆ 10 ವೈವಿಧ್ಯಮಯ ಪ್ರತಿಕ್ರಿಯೆ

ನಾವು ಬರೆಯುವ ಲೇಖನಗಳಿಗೆ ಅದರಲ್ಲಿರುವ ಹೂರಣದಿಂದ ಮಾತ್ರವಲ್ಲ ನಮ್ಮ ಓದುಗರು ಬರೆಯುವ ಪ್ರತಿಕ್ರಿಯೆಗಳಿಂದ ಹೆಚ್ಚಿನ ತೂಕ ಬರುತ್ತದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಇತ್ತೀಚಿನ ದಿನಗಳಲ್ಲಿ ಲೇಖನಗಳಿಗೆ ಕಾಮೆಂಟುಗಳ ಮಹಾಪೂರವೇ ಹರಿದುಬರುತ್ತಿದೆ.

ಅವುಗಳಲ್ಲಿ ಸಭ್ಯ ಮತ್ತು ಯೋಗ್ಯವಾಗಿರುವಂಥ ಎಲ್ಲ ಕಾಮೆಂಟುಗಳನ್ನು ಮಾಡರೇಟ್ ಮಾಡುತ್ತೇವೆ. ಲೇಖನಗಳಲ್ಲಿ ಕಂಡುಬಂದ ತಪ್ಪುಗಳನ್ನು ಎತ್ತಿತೋರಿಸುವಂಥ ಪತ್ರಗಳನ್ನು ಕೂಡ ಅಂಗೀಕರಿಸುತ್ತೇವೆ. ತಪ್ಪು ಮಾಹಿತಿ ತಪ್ಪು ಎಂದು ಕಂಡುಬಂದಲ್ಲಿ ಕೂಡಲೆ ತಿದ್ದುಪಡಿ ಮಾಡಿ ನಂತರ ಕಾಮೆಂಟುಗಳನ್ನು ಅಂಗೀಕರಿಸುತ್ತೇವೆ.

ಆದರೆ, ಕೆಲ ಬಾರಿ ಕಾಮೆಂಟುಗಳನ್ನು ಅಂಗೀಕರಿಸುವಲ್ಲಿ ಸ್ವಲ್ಪ ತಡವಾಗಿದ್ದೂ ಇದೆ. ತಡವಾಗಿದ್ದಕ್ಕೆ ಕ್ಷಮೆ ಕೋರುತ್ತಾ, ನಿಮ್ಮ ವಸ್ತುನಿಷ್ಠ ಪ್ರತಿಕ್ರಿಯೆಗಳ ಅಭಿಯಾನ ಹೀಗೇ ಮುಂದುವರಿಯಲಿ ಎಂದು ಆಶಿಸುತ್ತ, ಲೇಖನಗಳಲ್ಲಿ ಪ್ರಕಟವಾಗಿರುವ ಕೆಲ ಉತ್ತಮ ಕಾಮೆಂಟುಗಳನ್ನು ಹೆಕ್ಕಿ ಇಲ್ಲಿ ಓದುಗರಿಗಾಗಿ ನೀಡಲಾಗಿದೆ. ಎಲ್ಲ ಓದುಗರಿಗೆ ಮತ್ತು ಪ್ರತಿಕ್ರಿಯಿಸಿದವರಿಗೆ ಧನ್ಯವಾದಗಳು.

ಕನ್ನಡದ ಬಿಗ್ ಬಾಸ್, ಕಿತ್ತಾಟ ಯಾಕೆ?

ಕನ್ನಡದ ಬಿಗ್ ಬಾಸ್, ಕಿತ್ತಾಟ ಯಾಕೆ?

ಅಲ್ಲ ಸ್ವಾಮಿ, ಪ್ರೋಗ್ರಾಮ್ ಶುರುವಾಗಿ ಇನ್ನು ಎರಡು ಮೂರು ದಿನ ಕೂಡ ಆಗಿಲ್ಲ ಆಗಲೇ ಯಾಕೆ ಎಲ್ಲರೂ ಹೀಗೆ ಕಿತ್ತಾಡ್ತಾ ಇದ್ದೀರಾ? ಸ್ವಲ್ಪ ದಿನ ಕಾಯ್ದು ನೋಡಿ ಸ್ವಾಮಿ. ನರೇಂದ್ರ ಸ್ವಾಮಿ ಮತ್ತು ನರ್ಸ್ ಜಯಲಕ್ಷ್ಮಿ ಅವರದು ವಿಭಿನ್ನ ವ್ಯಕ್ತಿತ್ವ ಉಳ್ಳವರು. ಅಂಥವರನ್ನು ಒಟ್ಟಿಗೆ ಇರಲು ಬಿಟ್ಟರೆ ಆಗುವ ಎಡವಟ್ಟುಗಳನ್ನು ತೋರಿಸುವುದೇ ಈ ಕಾರ್ಯಕ್ರಮದ ಉದ್ದೇಶ. - ವೇಣಿ.

ನೀರಿಲ್ಲದ ಹೋಳಿ ಹಬ್ಬ ಬೇಕೆ?

ನೀರಿಲ್ಲದ ಹೋಳಿ ಹಬ್ಬ ಬೇಕೆ?

ಹೋಳಿ ಹಬ್ಬ ಆಚರಿಸುವ ಒಂದು ದಿನದ ಬಗ್ಗೆ ಯಾಕೆ ಎಷ್ಟು ಚರ್ಚೆ? ಪ್ರತಿ ದಿನ ನಾವು ನಮ್ಮ ಮನೆ ಮುಂದೆ ರಸ್ತೆಗೆ ಎಷ್ಟು ನೀರನ್ನು ನಮ್ಮ ಕೈಯಾರೆ ಚೆಲ್ಲುತ್ತೇವೆ? ಅದನ್ನು ಯಾಕೆ ಉಳಿಸಬಾರದು? ಒಂದು ಕಾರ್ ತೊಳಿಯಲಿಕ್ಕೆ 2 ಬಕೆಟ್ ನೀರು ಸಾಕು. ಅದು ಬಿಟ್ಟು ಪೈಪ್ ಹಾಕಿಕೊಂಡು ಕಾರು ತೊಳಿಯುವ ಅವಶ್ಯಕತೆ ಏನು? ರಸ್ತೆಗಳಲ್ಲಿ ಪೈಪ್ ಒಡೆದು ಹೋಗಿ ಎಷ್ಟೊಂದು ನೀರು ವೇಸ್ಟ್ ಆಗುತ್ತೆ ಅದರ ಬಗ್ಗೆ ಯಾಕೆ ಚರ್ಚೆ ಮಾಡೋಲ್ಲ? - ಮುರಳಿ.

ಪ್ರೋಗ್ರಾಂನಿಂದ ನಯಾ ಪೈಸೆ ಉಪಯೋಗವಿಲ್ಲ

ಪ್ರೋಗ್ರಾಂನಿಂದ ನಯಾ ಪೈಸೆ ಉಪಯೋಗವಿಲ್ಲ

ಎಲ್ಲರಿಗೂ ನಮಸ್ಕಾರ, ನಾನು ನಿಮ್ಮೆಲ್ಲ ಕಾಮೆಂಟ್ಸ್ ಗಳನ್ನು ನೋಡಿದೆ. ಆದರೆ ಇಲ್ಲಿ ಯಾರೂ ಯಾರನ್ನೂ ತೆಗಳುವಂತಿಲ್ಲ. ಇದು ಪ್ರತಿಯೊಬ್ಬರ ವೈಯಕ್ತಿಕ ಅಭಿಪ್ರಾಯ. ನನ್ನ ಪ್ರಕಾರ, ಈ ಪ್ರೋಗ್ರಾಂನಿಂದ ನಯಾ ಪೈಸೆ ಉಪಯೋಗವಂತು ಇಲ್ಲ. ಯಾವದೇ ಕೆಲಸ ಮಾಡಿದ್ರು ಅದರಿಂದ ಉಪಯೋಗವಾಗಬೇಕು. ಕಡೆ ಪಕ್ಷ ನಾಲೆಜ್ ಆದ್ರೂ ಇಂಪ್ರೂವ್ ಆದ್ರೆ ಓಕೆ ಇರ್ತಿತ್ತು. @ಸುಭಾಷ್ ಇವರ ಕಾಮೆಂಟ್ಸ್ 100% ಸರಿಯಾಗಿದೆ. ಯಾರದ್ರೂ ಸಾದನೆ ಮಾಡಿರೋರನ್ನು ಸೆಲೆಕ್ಟ್ ಮಾಡ್ತಿದ್ರೆ ಅಥವಾ ಇಲ್ಲಿ ಕೆಲವರು ಹೇಳಿದ ಹಾಗೆ ಯಾರಿಗೆ ದುಡ್ಡಿನ ಅಗತ್ಯ ಇರುತ್ತದೋ ಅವರನ್ನು ಸೆಲೆಕ್ಟ್ ಮಾಡಬೇಕಿತ್ತು. ಅವ್ರಿಗೆ ಈ ಪ್ರೊಗ್ರಾಮ್ನಿಂದ ಹೆಲ್ಪ್ ಆಗ್ತಿತ್ತು. - ರಘುರಾಮ್

ಡಿವಿಎಸ್ ಮೇಲೆ ರೇಣುಕಾಚಾರ್ಯ ಆಪಾದನೆ

ಡಿವಿಎಸ್ ಮೇಲೆ ರೇಣುಕಾಚಾರ್ಯ ಆಪಾದನೆ

ಸದಾನಂದ ಗೌಡ್ರು ನಿಜವಾಗಿ ಇವನಿಂದ ಹಣ ತಗೊಂಡಿದ್ರೆ, ಹಣ ಕೊಟ್ಟವನನ್ನು ಮತ್ತು ತಗೊಂದವರನ್ನು ಮೊದಲು ಒಳಗೆ ಹಾಕಬೇಕು. ಇಷ್ಟು ದಿವಸ ಯಾಕೆ ಸುಮ್ಮನಿದ್ದರು. ಮೊದಲೇ ಹೇಳೋಕೆ ಏನಾಗಿತ್ತು ನಿನ್ನ ಬಾಯಿಗೆ? ಈಗ ಬಿಜೆಪಿ ಬಿಟ್ಟು ಕೆಜೆಪಿ ಸೇರೋಕೆ ಈ ನೆಪ ಬೇಕಾಗಿತ್ತಾ? ಮೊದಲು ಹಾಳಾಗಿ ಹೋಗೊ, ಆ ಕೆಜೆಪಿ ಸೇರ್ಕೊ. - ಶ್ರೀಪಾದ ದೇಸಾಯಿ

ಕನ್ನಡದ ಕೋಟ್ಯಾಧಿಪತಿಗೆ ವಂದನೆ

ಕನ್ನಡದ ಕೋಟ್ಯಾಧಿಪತಿಗೆ ವಂದನೆ

ವಂದನೆ, ವಂದನೆ ಸಾವಿರಾರು ವಂದನೆ. ಕರ್ನಾಟಕದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ವಂದನೆ. ಮುದ್ದಾದ ಈ ಹೃದಯವಂತನಿಗೆ ಒಮ್ಮೆ ಅವಕಾಶ ನೀಡಿ ಈ ನನ್ನ ಜನ್ಮವನ್ನು ಪಾವನ ಮಾಡಬಾರದೆ? ಪ್ರೀತಿ ಮಾತೆಯ ಮಗನಾದ ಈ ಪ್ರಿಯತಮನಿಗೆ ಅವಕಾಶ ಸಿಗುತ್ತದೆಂದು ನಾ ನಂಬಿರುವೆ. ಎನ್ನ ಪ್ರೀತಿ ದೇವತೆ ನೀಡದೆ ಇರುವಳೇ? ಚ್ಹೇ ಚ್ಹೇ ಆಗದು ಆಗದು? ಕೋಟ್ಯಧಿಪತಿಯಿಂದ ನಾ ಮೇಲೆ ಬರುವೆ, ಅದರಿಂದಲೇ ನಾ ಮುಂದೆ ಬಾಳುವೆ? ಆ ಪುನಿತ್ ಸರ್ ನೀಡಿದ ಕರುಣೆ ನಾ ಮೀರುವುದು ಉಂಟೀನು? ಈ ಮಣ್ಣಲಿ ಹುಟ್ಟಿದ ಋಣವ ನಾ ಮರಿಯುವುದು ಉಂಟೇನು? ನನ್ನ ಅತ್ಮಸ್ಥೈರ್ಯ, ನಂಬಿಕೆ, ನನ್ನ ಎಂದಿಗೂ ಕೈ ಬಿಡುವುದಿಲ್ಲ. ನನ್ನ ನಂಬಿಕೆ ನನ್ನನ್ನ ಕಾಯುವುದು. - ರಮೇಶ್ ಚಿನ್ನು.

ಯಡಿಯೂರಪ್ಪ ಇಲ್ಲದ ಬಿಜೆಪಿ ಕಂಗಾಲಾಗಿದೆ

ಯಡಿಯೂರಪ್ಪ ಇಲ್ಲದ ಬಿಜೆಪಿ ಕಂಗಾಲಾಗಿದೆ

ಯಡಿಯೂರಪ್ಪ ಇಲ್ಲದ ಬಿಜೆಪಿ ಕಂಗಾಲಾಗಿದೆ. ಇದನ್ನೇ ಬಿಜೆಪಿಯವರ ಸೋಲಿನ ಭಯ ಅನ್ನೋದು. ನರೇಂದ್ರ ಮೋದಿ ಸಹ ಫೋನಾಯಿಸಿ ನೀವೆ ಬಿಜೆಪಿ ಅಧ್ಯಕ್ಷರಾಗಿ ಪಕ್ಷ ಕಟ್ರಿ ಎಂದು ಕೇಳಿಕೊಂಡಿದ್ದರೂ ಬಿಎಸ್‌ವೈ ಹಿಂತಿರುಗಿ ನೋಡಿಲ್ಲ, ನೋಡಲ್ಲ ಕೂಡ. "ಕೆಜೆಪಿ ಅಧಿನಾಯಕ ಯಡಿಯೂರಪ್ಪ ಅವರು ಬಯಸಿದಲ್ಲಿ ಅವರ ಜತೆ ಮತ್ತೆ ಮೈತ್ರಿ ಮಾಡಿಕೊಳ್ಳುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿರುವುದಂತೂ ನಿಜ". ಕುರ್ಚಿಯ ಕಾಲ ಮುಗೀತಲ್ಲ... ಮತ್ತೆ ಅಧಿಕಾರ ಸಿಗುವುದಾದರೆ ಅದು ಯಡಿಯೂರಪ್ಪರಿಂದ ಸಾಧ್ಯ ಅನ್ನೊ ನಗ್ನ ಸತ್ಯ ಈ ಮಕ್ಕಳಿಗೆ ಈಗ ನೆನಪಾಯಿತೆ? ಅಂದು ಬೆನ್ನಿಗೆ ಚೂರಿ ಹಾಕುವಾಗ ಈ ಬುದ್ದಿ ಇರಲಿಲ್ಲವ?

ತುಮಕೂರು ಜಿಲ್ಲೆ ವಿಧಾನಸಭೆ ಕ್ಷೇತ್ರಗಳ ಪರಿಚಯ

ತುಮಕೂರು ಜಿಲ್ಲೆ ವಿಧಾನಸಭೆ ಕ್ಷೇತ್ರಗಳ ಪರಿಚಯ

ಸ್ವಾಮಿ ತಾವುಗಳು ತುಮಕೂರು ಜಿಲ್ಲೆಯ ಪರಿಚಯವನ್ನು ಮಾಡಿದ್ದಕ್ಕೆ ತುಂಬ ತುಂಬ ಧನ್ಯವಾದಗಳು. ಆದರೆ ತುಮಕೂರು ಜಿಲ್ಲೆಯಲ್ಲೇ ಇರುವ ಯಾವ ಸರಕಾರಿ ಸಹಾಯವಿಲ್ಲದೆ ದಿನ ನಿತ್ಯ ವಿದ್ಯಾಭ್ಯಾಸ ಮಾಡುವ ಸಾವಿರಾರು ಮಕ್ಕಳಿಗೆ ಊಟ ವಸತಿ ಮತ್ತು ಮಠಕ್ಕೆ ಬಂದ ಭಕ್ತಾದಿಗಳಿಗೆ ಅನ್ನದಾನ ಮಾಡುತ್ತಾ ಸುಮಾರು 400 ವರ್ಷ ಇತಿಹಾಸವುಳ್ಳ, ಮುಖ್ಯವಾಗಿ ಕುಂಚಿಟಿಗರ ಮಹಾಪೀಠ ಸ್ಪಟಿಕಪುರಿ ಅಂದರೆ ಪಟ್ಟನಾಯಕನಹಳ್ಳಿ ನಂಜಾವಧೂತರ ಮಠ ನಿಮಗೆ ಕಾಣಲಿಲ್ಲವೇ? - ದೇವರಾಜು.

ಒಳ್ಳೇದು ಮಾಡಿದ್ರೆ ಶನಿ ಕೆಟ್ಟದ್ದು ಮಾಡಲ್ಲ

ಒಳ್ಳೇದು ಮಾಡಿದ್ರೆ ಶನಿ ಕೆಟ್ಟದ್ದು ಮಾಡಲ್ಲ

ನನ್ನದೂ ಕೂಡ ಇದೆ ರಾಶಿ ನಕ್ಷತ್ರ. 4 ವರ್ಷಗಳ ಕಾಲ ಶನಿ ಮಹಾತ್ಮನ ಪ್ರಭೆಯಿಂದ ತುಂಬಾ ತೊಂದರೆಗೆ ಒಳಗಾಗಿದ್ದೆ. ಜೀವನಾನೆ ಸಾಕು ಅಂತ ಅನಿಸಿಬಿಟ್ಟಿತ್ತು. ಹಿಂದೆ ನಾನು ಮಾಡಿದ ಸಣ್ಣ ಪುಟ್ಟ ತಪ್ಪುಗಳನ್ನೂ ನೆನೆದು ದೇವರಲ್ಲಿ ಕ್ಷಮೆ ಬೇಡಿ ಒಳ್ಳೆಯ ದಾರಿಯಲ್ಲೇ ನಡೆಯುತ್ತೇನೆ ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ. ನಂತರ ಎಲ್ಲ ಒಳ್ಳೇದೆ ಆಗುತ್ತಿದೆ. ಒಂದು ಸಣ್ಣ ತಪ್ಪು ಯೋಚನೆ ಮನದಲ್ಲಿ ಬಂದರೂ ಶನಿ ಮಹಾತ್ಮನ ಹಾಗೂ ಆಂಜನೇಯನ ಭಯ ಕಾಡುತ್ತದೆ. ಇಬ್ಬರನ್ನೂ ಪೂಜಿಸಿ - ಒಳ್ಳೆದಾಗುತ್ತದೆ. - ಕನ್ನಡಿಗ.

ಸೆಟ್ ಟಾಪ್ ಬಾಕ್ಸ್, ದೂರು ನೀಡುವುದು ಎಲ್ಲಿ?

ಸೆಟ್ ಟಾಪ್ ಬಾಕ್ಸ್, ದೂರು ನೀಡುವುದು ಎಲ್ಲಿ?

ಚಾಮರಾಜಪೇಟೆಯ ನಾಗರಿಕರಾದ ನಾವುಗಳು ದೂರುವುದೇನೆಂದರೆ, ನಮ್ಮ ಏರಿಯಾದಲ್ಲಿ ಯಾವುದೇ ತರಹದ ಹೆದರಿಕೆಯಿಲ್ಲದೆ ಟಿವಿ ಆಪರೇಟರ್ಸ್ ಗಳು ಒಂದು ಸೆಟ್ ಟಾಪ್ ಬಾಕ್ಸ್ ಗೆ 1,500 ರೂಪಾಯಿಗಳನ್ನು ಜನರಿಂದ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಎಲ್ಲಿ ದೂರಬೇಕೆಂಬುದು ಗೊತ್ತಿಲ್ಲ . ಇದನ್ನೇ ದೂರೆಂದು ತಿಳಿದು ಅವರ ಮೇಲೆ ಕ್ರಮ ತೆಗೆದುಕೊಳ್ಳಿ. ನಮಸ್ಕಾರಗಳು.

ಗುಬ್ಬಿಗಳು ಎಲ್ಲಿ ಹಾರಿಹೋದವೋ?

ಗುಬ್ಬಿಗಳು ಎಲ್ಲಿ ಹಾರಿಹೋದವೋ?

ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ ಫೋಟೋ ಒಂದರ ಸಂದಿಯಲ್ಲಿ ಕಸ ಕಡ್ಡಿಯನ್ನು ಹಾಕಿ ಗುಬ್ಬಿ ಗೂಡು ಕಟ್ಟಿತ್ತು. ಆಮೇಲೆ ಅದರಲ್ಲಿ ಮೊಟ್ಟೆಯಿಟ್ಟು ಮರಿಯಾಗಿ ಅವು ದೊಡ್ಡವಾಗಿ ಹಾರಿ ಹೋದವು. ಈಗ ಕಳೆದ 10 ವರ್ಷಗಳಿಂದ ನಾನು ಒಂದೇ ಒಂದು ಗುಬ್ಬಿಯನ್ನೂ ನೋಡಿಲ್ಲ. ಗುಬ್ಬಿ ಹಾಗೂ ಇತರ ಪ್ರಾಣಿ ಪಕ್ಷಿಗಳನ್ನು ನಾವು ಸಂರಕ್ಷಿಸಬೇಕು. ಉತ್ತಮವಾದ ಲೇಖನ. ಇಂಥ ಲೇಖನಗಳು ಇನ್ನಷ್ಟು ಬರಲಿ. - ವಿರಾಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+