• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಓದುಗರ ಪತ್ರಗಳು : ಮೂರ್ತಿ ಮೈಸೂರಿಗೆ ಬರ್ತಾರಾ?

By Prasad
|
Letters to the editor
ಅಂತೂ ಸರಕಾರಕ್ಕೆ ಬುದ್ದಿ ಬಂತು. ಖ್ಯಾತ ಸಾಹಿತಿ ಎಸ್ಎಲ್ ಭೈರಪ್ಪ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದು ಸರಿಯಾಗಿದೆ. ಈಗಲಾದರೂ ಅವರನ್ನು ಗೌರವಿಸಬೇಕು ಅಂತ ತಿಳೀತಲ್ಲ, ದೇವರು ದೊಡ್ಡವನು. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಅನಂತ ಮೂರ್ತಿ ಈಗ ಏನು ಹೇಳುತ್ತಾರೆ? ದಸರಾಗೆ ಮೈಸೂರಿಗೆ ಹೋಗುತ್ತಾರಾ? [ದಸರಾ ಉದ್ಘಾಟನೆ : ಭೈರಪ್ಪಗೆ ಆಹ್ವಾನ]
* ವಿಜಯ ಭಾಸ್ಕರ್

***
ಅಯ್ಯೋ ಪಾಪ ಹೀಗಾಗಬಾರದಿತ್ತು! ಇಷ್ಟು ದಿನ ಕೋಟ್ಯಂತರ ಖರ್ಚು ಮಾಡಿ ಪಾದಯಾತ್ರೆ - ಉಚಿತ ವಿವಾಹಗಳನ್ನೆಲ್ಲ ಮಾಡಿ, ಪಾರ್ಟಿ ಕಟ್ಟಿದ್ದೆಲ್ಲ ಹೊಳೇಲಿ ತೊಳೆದ ಹುಣಸೆ ಹಣ್ಣಾಗಿ ಹೋಯ್ತು. ಅದು ಎಲೆಕ್ಷನ್ ಬರುವ ಸಮಯದಲ್ಲೇ ಇವೆಲ್ಲ ಆಗಬೇಕೆ? ಇವರ ಶಾಪ ಎಲ್ಲೋ ಅನಾಥರಾಗಿ ಕುಳಿತಿದ್ದ, ಇವರಿಂದಲೇ ಕರ್ನಾಟಕದಲ್ಲಿ ಅಧಿಕಾರದ ರುಚಿ ನೋಡಿದ ಹಾಗು ಈಗಲೂ ಅಧಿಕಾರ ಅನುಭವಿಸುತ್ತಿರುವ ಬಿಜೆಪಿ ನಾಯಕರಿಗೆ ತಟ್ಟದೆ ಇರದು! [ಬಂಧನದ ಭೀತಿಯಲ್ಲಿ ಶ್ರೀರಾಮುಲು]
* ನಾಗೇಶ್

***
ರೀ ಸದಾನಂದ ಗೌಡ್ರೆ, ಪ್ರವಾಹದ ಎದುರು ನೀವು ಈಜಲಿಕ್ಕೆ ಹೋಗಬೇಡಿ, ಕೊಚ್ಚಿಕೊಂಡು ಹೋಗ್ತಿರ. ನೀವು ಮುಖ್ಯಮಂತ್ರಿ ಪಟ್ಟದಿಂದ ಇಳಿದ ತಕ್ಷಣವೇ ನೋಡಿದಿರಾ, ಮಾನ್ಯ ಜಗದೀಶ್ ಶೆಟ್ಟರ್ ಮು.ಮಂ. ಆದತಕ್ಷಣ ರಾಜ್ಯದೆಲ್ಲಡೆ ಮಳೆಯಾಗಿ, ಎಲ್ಲ ನದಿಗಳು ಮೈದುಂಬಿ ಹರಿಯುತ್ತಿವೆ, ಜಲಾಶಯಗಳು ತುಂಬುತ್ತಿವೆ. ಇದರಲ್ಲೇ ಗೊತ್ತಾಗುತ್ತೆ, ನಿಮ್ಮ 11 ತಿಂಗಳ ಆಡಳಿತದಲ್ಲಿ ಜಾನುವಾರುಗಳಿಗೆ ಮೇವು ಇರಲಿಲ್ಲ, ರಾಜ್ಯದೆಲ್ಲೆಡೆ ಕುಡಿಯಲು ನೀರಿಲ್ಲದೆ ಟ್ಯಾಂಕರಿನಲ್ಲಿ ನೀರು ಸಾಗಿಸಿದ್ದು ನೆನಪಿಲ್ಲವೇ? ಇನ್ನು ನೀವು ರಾಜ್ಯಾಧ್ಯಕ್ಷ ಆದರಂತೂ ಅಧೋಗತಿ. [ಡಿವಿಎಸ್ ವರ್ಸಸ್ ಬಿಎಸ್‌ವೈ]
* ಕೇಶವನ್

***
ಮೊದ್ಲು ನಟಿ ಲಿಲಾವತಿ ಅಮ್ಮನವರಿಗೆ ಸೈಟ್ ಕೊಡ್ಸಿ. ಅದನ್ನ ಬಿಟ್ಟು ನಿನ್ನೆ ಮೊನ್ನೆ ಬಂದವರಿಗೆ ಯಾಕ್ರಿ ಸೈಟ್ ಕೊಡ್ತೀರ? ನಮ್ಮ ಜನಕ್ಕೆ ಬುದ್ದಿ ಬರೋದು ಯಾವಾಗ ಅಂತಾನೆ ಗೊತ್ತಿಲ್ಲ.....
* ಬಿಎಸ್ಕೆ
ಇವಳೇನು ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದಾಳೆಯೇ ಸೈಟ್ ಕೊಡೋದಕ್ಕೆ... [ನಟಿ ನಿಧಿ ಸುಬ್ಬಯ್ಯಗೆ ಸರಕಾರದಿಂದ ಸೈಟ್]
* ಅಜಿತ್

***
ಶನಿ ಗ್ರಹ ಸೂರ್ಯನ ಸುತ್ತ ತಿರುಗಲು 30 ವರ್ಷ ತೆಗೆದುಕೊಳ್ಳುತ್ತದೆ. 12 ರಾಶಿ ಎಂದರೆ ಒಂದೊಂದು ರಾಶಿಯಲ್ಲೂ 2.5 ವರ್ಷ ಇರುತ್ತದೆ. ಭೂಮಿಯಿಂದ ಸರಾಸರಿ 1227000000 (1.23 ಬಿಲಿಯನ್) ಕಿ.ಮೀ. ದೂರದಲ್ಲಿರುವ ಶನಿ ನಮ್ಮ ಮೇಲೆ ಪರಿಣಾಮ ಬೀರಲು ಹೇಗೆ ಸಾಧ್ಯ? [ಸಾಡೇಸಾತಿ ಎಂದರೇನು?]
* ಕೆಎಸ್ಎನ್ ಸಿಂಹ

***
ನಮ್ಮ ಕನ್ನಡ ಚಿತ್ರದ ಹೊಟ್ಟೆ ತುಂಬಿ ಊಟ ಮಾಡುವ ಮೊದಲೇ ಅನ್ನವನ್ನು ಕಸಿದು ತಿನ್ನುವ ಹಾಗೆ ಮಾಡುತ್ತಿದ್ದಾರೆ ಯಾಕೆ? ಚಿತ್ರ ರನ್ನಿಂಗ್ ಆಗೋಲ್ಲ ಅಂದ್ರೆ ಓಕೆ. ರನ್ನಿಂಗ್ ನಲ್ಲಿ ಇರುವ ಚಿತ್ರಕ್ಕೆ ಪ್ರೋತ್ಸಾಹ ಕೊಡುವುದನ್ನು ಬಿಟ್ಟು, ಅದನ್ನು (ಅನ್ಯ ಭಾಷಾ ಚಿತ್ರಕ್ಕಾಗಿ ಎತ್ತಂಗಡಿ) ಬೇರೆ ಮಾಡುತಿದ್ದಾರೆ. ಇದನ್ನು ಹೀಗಾಗಲಿಕ್ಕೆ ಬಿಡಬಾರದು ಕರ್ನಾಟಕದಲ್ಲಿ ಇದ್ದು ಕನ್ನಡ ಚಿತ್ರಕ್ಕೆ ಹೀಗೆ ಮಾಡುವವರನ್ನು ಬಿಡಬಾರದು. ಇದರ ಹಿಂದೆ ತೆಲುಗು ಅವರ ಕೈವಾಡ ಇದೆ ಎಂದು ನನಗೆ ಅನಿಸುತ್ತಿದೆ. ನಮ್ಮ ಕನ್ನಡ ಚಿತ್ರ ರನ್ನಿಂಗ್ ನಲ್ಲಿ ಇರುವಾಗ ಬೇರೆ ಭಾಷೆಯ ಚಿತ್ರ ರನ್ನಿಂಗ್ ಆಗಲಿಕ್ಕೆ ಬಿಡಬಾರದು. ನನಗು ತೆಲುಗು ಚಿತ್ರ ಅಂದ್ರೆ ಬಹಳ ಇಷ್ಟ. ಆದರೆ ಕನ್ನಡ ಮೊದಲು. [ಗಾಡ್ ಫಾದರ್ ಬಲಿ ತೆಗೆದುಕೊಂಡ ಜುಲಾಯಿ]
* ಸಂಘರ್ಷ

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Letter to the editor. Oneindia Kannada reader Vijay Bhaskar has welcomed govt's decision to invite Laureate Dr. SL Bhyrappa to inaugurate world famous Mysore Dasara. Another reader has questioned grant of site to actor Nidhi Subbaiah in Mysore, which he thinks does not deserve.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more