ಓದುಗರ ಓಲೆ : ಇವರೇನು ಮಹಾ ಭವಿಷ್ಯ ಹೇಳೋದು?

* ಇನ್ ಸೈಟ್
***
ಮಳೆ ಬೆಳೆ ಬಗ್ಗೆ ಯಾವಾಗಲೂ ತಲೆ ಕೆಡಿಸಿಕೊಳ್ಳದೆ ಬರೀ ರಾಜಕೀಯ ದೊಂಬರಾಟ ಎಲ್ಲರಿಗೂ ತಿಳಿದಿರುವ ವಿಷಯ. ಇವತ್ತು ರಾಜಕೀಯದಲ್ಲಿ ಅಂಬೆಗಾಲಿಡುವವರೂ ಕೂಡ ಇಂತಹ ಭವಿಷ್ಯವನ್ನು ಹೇಳುತ್ತಾರೆ. ಅಂತಹದರಲ್ಲಿ ಇವರೇನು ಮಹಾ ಭವಿಷ್ಯ ಹೇಳೋದು? ಇವರಿಗೆ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಮಳೆ ಬಗ್ಗೆ ಬೆಳೆ ಬಗ್ಗೆ ಭವಿಷ್ಯ ಹೇಳಲಿ. ಅದು ಬಿಟ್ಟು ಯಾವಾಗಲೂ ಸರ್ಕಾರ ಬೀಳಿಸುವ ಬಗ್ಗೇನೆ ಭವಿಷ್ಯ ಹೇಳೋ ಅಗತ್ಯ ಇಲ್ಲವೇ ಇಲ್ಲ. ಇದು ಬಿಟ್ಟು ಸ್ವಲ್ಪ ಮಳೆ ಆಗುವ ಬಗ್ಗೆ ದೇವರಲ್ಲಿ ಕೇಳಿ ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳಿ. [ಕೋಡಿಮಠ ಶ್ರೀಗಳ ಭವಿಷ್ಯ]
* ಮುತ್ತು
***
ಬಿಜೆಪಿ ಯಡಿಯೂರಪ್ಪನ ಮನೆಯ ಆಸ್ತಿಯಲ್ಲವಾದ್ರೂ ಸದಾನಂದ ಗೌಡರ ನಿಯತ್ತು ಏನು ಅನ್ನೋದು ಈಗ ಬಹಿರಂಗವಾಯ್ತು. ಈ ಹೀನ ಬುದ್ಧಿಯಿಂದಲೇ ಅಧಿಕಾರ ಕಳೆದುಕೊಂಡಿದ್ದು. ಈಗ ಈತನಿಗೂ ಯಡಿಯೂರಪ್ಪಗೂ ಏನು ಉಳೀತು ವ್ಯತ್ಯಾಸ ಉಳಿಯಿತು? ಎಲ್ಲರೂ ಕಳ್ಳರೇ. [ಗೌಡರ ಮೂರು ಷರತ್ತು]
* ಅರವಿಂದ್
***
ತಾಕತ್ತಿದ್ರೆ ಜೆಡಿಎಸ್‌ಗೆ ಸದಾನಂದ ಅವರನ್ನು ಮುಖ್ಯಮಂತ್ರಿ ಅಂತ ಹೇಳಿ ಎಲೆಕ್ಷನ್‌ಗೆ ಹೋಗಲಿ, ಯಾಕೆ ಜಾತಿ ಬಗ್ಗೆ ಮಾತಾಡುತ್ತ ಬೇಳೆ ಬೆಳೆಸಿ ಕೊಳ್ಳುತ್ತಾ ಇದ್ದಾರೆ? ಹೇಗೂ ಸದಾ ಮುಖ್ಯಮಂತ್ರಿ ಆದದ್ದು ಜಾತಿಯಿಂದಲೇ ಅಂತ ಅವರೇ ಹೇಳಿದ್ದರು. ದೇವೇಗೌಡರು ನಿಜವಾಗಿ ವಕ್ಕಲಿಗರೆ ಆಗಿದ್ರೆ ಸದಾಗೆ JDSದಿಂದ ಮುಖ್ಯಮಂತ್ರಿ ಆಗುವುದಕ್ಕೆ ಅವಕಾಶ ಮಾಡಿಕೊಡಲಿ. (ಇದಕ್ಕೆ ಅಪ್ಪ ಮಕ್ಕಳು ಬಿಟ್ರೆ ತಾನೇ?) ಯಾಕಂದ್ರೆ ಅದು ದೇವೇಗೌಡರ ಕುಟುಂಬದ ಪಕ್ಷ ತಾನೆ? [ಡಿವಿಎಸ್ ಪರ ನಿಂತ ನಂಜಾವದೂತ ಸ್ವಾಮೀಜಿ]
* ಅನಿಲ್ ಗೌಡ, ಶಿರಾ
***
ಗುರುಗಳೇ, ಅರಿಷಡ್ವರ್ಗಗಳನ್ನು ಗೆದ್ದು ಸಾಧನೆ ಮಾಡಿ, ಚೀಪ್ ಪಾಲಿಟಿಕ್ಸ್ ಮಾಡಿ ಪ್ರಚಾರ ಗಿಟ್ಟಿಸಬೇಡಿ. ಸಮಾಜವನ್ನು ಕಟ್ಟುವ ಕೆಲಸ ಮಾಡಿ, ಒಡೆಯುವ ಕೆಲಸ ಮಾಡಬೇಡಿ. ಅದು ಸರಿ, ದೇವೇಗೌಡ ಫ್ಯಾಮಿಲಿಯವ್ರು ಎಷ್ಟು ಗೌಡ ನಾಯಕರನ್ನು ಸೃಸ್ತಿಸಿದ್ದಾರೆ ಹೇಳಿ? ನಿಮಗೆ ನಿಜವಾಗಲೂ ರಾಜಕೀಯ ಬೇಕಾ, ಕಾವಿ ತೆಗೆದಿಟ್ಟು ಬನ್ನಿ. ಇಲ್ಲ ಸ್ವಾಮಿಜಿಯಾಗಿ ಸಾಧಿಸಿ. ಸದಾರನ್ನ ಗೌಡ ಅಂತ CM ಮಾಡಿಲ್ಲ, ಇಳಿಸ್ತಾನೂ ಇಲ್ಲ. ಸ್ವಲ್ಪ ಯೋಚಿಸಿ. ನಿಮ್ಮ ಪತ್ರಿಕಾ ಹೇಳಿಕೆಗಳನ್ನ ನೋಡಿದಿವಿ ಬಹಳ ಬೇಸರವಾಯಿತು. ಸ್ವಲ್ಪ ದಿನ ಕುಳಿತು ಸಾಧನೆ ಕಡೆ ಗಮನ ಕೊಡಿ..... [ರಾಜಕೀಯದ ಬಗ್ಗೆ ಸ್ವಾಮೀಜಿ ಏನು ಹೇಳ್ತಾರೆ]
* ಮೋಹನ್












Click it and Unblock the Notifications