ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ ಮೂರನೇ ದರ್ಜೆ

By * ಅರುಣ್
|
Google Oneindia Kannada News

Kannada neglected at Bangalore international airport
ನಮ್ಮ ನಾಡಿಗೆ ಉಪಯೋಗವಾಗಲೆಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲು ಸಾವಿರಾರು ರೈತರು ತಮ್ಮ ಭೂಮಿಯನ್ನು ನೀಡಿದ್ದಾರೆ. ಜೊತೆಗೆ ಕರ್ನಾಟಕ ಸರಕಾರವೂ ಸಹ ಹಣಕಾಸಿನ ನೆರವನ್ನು ನೀಡಿದೆ. ಆದರೆ ಕನ್ನಡದ ರೈತರ ಭೂಮಿಯನ್ನು, ಕರ್ನಾಟಕ ಸರಕಾರದ ಹಣವನ್ನು ಪಡೆದ ವಿಮಾನ ನಿಲ್ದಾಣ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಎಷ್ಟರ ಮಟ್ಟಿಗೆ ಮನ್ನಣೆ ನೀಡಿದೆ?

ಬೆಂಗಳೂರು ವಿಮಾನ ನಿಲ್ದಾಣದ ಕನ್ನಡ-ಕನ್ನಡಿಗ-ಕರ್ನಾಟಕ ವಿರೋಧಿ ಧೋರಣೆಯ ಕೆಲವು ಸ್ಯಾಂಪಲ್ ಗಳನ್ನು ಒಮ್ಮೆ ಗಮನಿಸಿ.

1. ವಿಮಾನ ನಿಲ್ದಾಣದಲ್ಲಿನ ಪಾರ್ಕಿಂಗ್ ಸ್ಟಿಕ್ಕರ್ ಗಳು ಕೇವಲ ಇಂಗ್ಲಿಷ್‌ನಲ್ಲಿವೆ.

2. ಸೂಚನಾ ಫಲಕಗಳಲ್ಲಿ ಕನ್ನಡವನ್ನು ಬಳಸಿದ್ದರೂ, ಕನ್ನಡಕ್ಕೆ ಕೊನೆಯ ಸ್ತಾನ ನೀಡಲಾಗಿದ್ದು, ಎಷ್ಟಾಗುತ್ತೋ ಅಷ್ಟು ಸಣ್ಣಕ್ಷರಗಳಲ್ಲಿ ಕಾಟಾಚಾರಕ್ಕೆ ಬರೆಸಿದ್ದಾರೆ.

3. ವಿಮಾನ ನಿಲ್ದಾಣದಲ್ಲಿರುವ ಕಾವಲುಗಾರರೊಡನೆ ಕನ್ನಡದಲ್ಲಿ ಮಾತನಾಡಿ ಅವರಿಂದ ಬೈಯಿಸಿಕೊಂಡ ಉದಾಹರಣೆಗಳಿವೆ.

4. ಹೊರಡುವ ಮತ್ತು ಬರುವ ವಿಮಾನಗಳ ಬಗ್ಗೆ ಟಿವಿಗಳಲ್ಲಿ ತೋರಿಸುವ ಮಾಹಿತಿ ಬರಿ ಇಂಗ್ಲಿಷ್ /ಹಿಂದಿಯಲ್ಲಿರುತ್ತದೆ.

5. ವಿಮಾನ ನಿಲ್ದಾಣದ ಒಳಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಸೂಚನೆಗಳನ್ನು ನೀಡಲಾಗುತ್ತಿದೆ.

6. ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳಗೆ ಇರುವ ಸ್ತಾನದ ಬಗ್ಗೆ ಹೇಳುವುದೇ ಬೇಡ.

ಹೀಗೆ ಇನ್ನೂ ಹಲವೆಡೆಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿಗೆ ಮನ್ನಣೆ ನೀಡಿ ಕನ್ನಡ ಭಾಷೆವನ್ನು ಹಿಂದಕ್ಕೆ ತಳ್ಳಲಾಗಿದೆ.

ಒಟ್ಟಾರೆಯಾಗಿ ಗಮನಿಸಿದರೆ, ಕನ್ನಡ-ಕನ್ನಡಿಗ-ಕರ್ನಾಟಕವನ್ನು ವಿಮಾನ ನಿಲ್ದಾಣದಲ್ಲಿ ಮೂರನೇ ದರ್ಜೆಯಂತೆ ನೋಡಲಾಗುತ್ತಿದೆ. ಕನ್ನಡಕ್ಕೆ ಬರೆ ಹಾಕಿ ಪರ ಭಾಷೆಗೆ ಮನ್ನಣೆ ನೀಡಲಾಗಿರುವುದು ನಿಜಕ್ಕೂ ದುರಂತವೇ ರಿ. ಜಗತ್ತಿನ ಹಲವಾರು ದೇಶಗಳಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ನೋಡಿದಾಗ ಅಲ್ಲೆಲ್ಲೂ ಅಂತಾರಾಷ್ಟ್ರೀಯ ಎಂದ ಮಾತ್ರಕ್ಕೆ ತಮ್ಮತನವನ್ನು ಮರೆತಿರುವುದು ಕಾಣುವುದಿಲ್ಲ. ಸ್ಥಳೀಯರಿಗೆ, ಸ್ಥಳೀಯ ಭಾಷೆಗೆ ಮನ್ನಣೆ ನೀಡುವುದರ ಮೂಲಕ ತಮ್ಮ ನಾಡಿನ ಜನರಿಗೆ ಉಪಯೋಗವಾಗುವಂತೆ ವ್ಯವಸ್ತೆಯನ್ನು ರೂಪಿಸಿದ್ದಾರೆ. ಆದರೆ, ನಮ್ಮ ವಿಮಾನ ನಿಲ್ದಾಣಕ್ಕೆ ನಮ್ಮ ನಾಡಿನ ಜನರು ಹೋಗಬೇಕೆಂದರೆ ಇಂಗ್ಲಿಷ್ ಅಥವಾ ಹಿಂದಿಯನ್ನು ಕಲಿತು ಹೋಗಬೇಕೆನ್ನುವ ಅನಿವಾರ್ಯತೆಯನ್ನು ನಿರ್ಮಿಸಿದ್ದಾರೆ. ಇದು ಏಕೆ ಎಂದು ಪ್ರಶ್ನಿಸುವ ಕನ್ನಡದ ಪ್ರಯಾಣಿಕರಿಗೆ ನಿಲ್ದಾಣದ ಅಧಿಕಾರಿಗಳು ಉದ್ದಟತನದ ಉತ್ತರಗಳನ್ನೂ ನೀಡಿರುವ ಉದಾಹರಣೆಗಳಿವೆ.

ಅಂತಾರಾಷ್ಟ್ರೀಯ ಅಂತ ಹೆಸರನ್ನು ಇಟ್ಟುಕೊಂಡ ಮಾತ್ರಕ್ಕೆ ನಮ್ಮತನವನ್ನು ಬಿಟ್ಟುಕೊಡುವುದು ಯಾತಕ್ಕಾಗಿ? ಅಂತಾರಾಷ್ಟ್ರೀಯವೇ ಆಗಿರಲಿ, ಮತ್ತೊಂದಾಗಲಿ ಕೊನೆಗೆ ವಿಮಾನ ನಿಲ್ದಾಣವಿರುವುದು ಕನ್ನಡದ ನೆಲದಲ್ಲೆ ಎನ್ನುವುದನ್ನು ಮರೆಯಬಾರದು. ಇದನ್ನು ಮರೆತಿರುವ ವಿಮಾನ ನಿಲ್ದಾಣಕ್ಕೆ ಮತ್ತು ಸರಕಾರದವರಿಗೆ ಪತ್ರ ಬರೆದು ಕನ್ನಡದ ನೆಲದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಮೊದಲ ಸ್ತಾನ ಸಿಕ್ಕೇ ಸಿಗಬೇಕು ಎನ್ನುವುದನ್ನು ತಿಳಿಸೋಣ. ವಿಮಾನ ನಿಲ್ದಾಣದ ಮತ್ತು ಕರ್ನಾಟಕ ಸರಕಾರದ ಮುಕ್ಯಮಂತ್ರಿಗಳ ಮಿಂಚೆ- [email protected], [email protected].

English summary
Kannada, Kannadiga and Karnataka has been neglected by Bangalore International airport authorities again and again. In parking place, direction boards, information about incoming and outgoing flights are all in English and Hindi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X