ಎಚ್ಚೆತ್ತ ಮಂಗಳೂರು, ನಿದ್ದೆಗೆ ಜಾರಿದ ಮೈಸೂರು

Attack on women : Mangalore wakes up, Mysore sleeps
ಮೊನ್ನೆ ಯಶವಂತಪುರ - ಮೈಸೂರು ರೈಲಿನಲ್ಲಿ ಒಬ್ಬ ಅಮಾಯಕ ಹೆಣ್ಣು ಮಗಳ ಮೇಲೆ ಆದಂಥ ದೌರ್ಜನ್ಯ ನೆನಪಿಸಿಕೊಳ್ಳಿ. ಮತ್ತೆ ಶನಿವಾರ ಸಂಜೆ ಮಂಗಳೂರಿನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆದ ದಾಳಿ, ಎರಡನ್ನೂ ಹೋಲಿಸಿ ನೋಡಿ.

ಮೈಸೂರಿನ ವಿಚಾರದಲ್ಲಿ ಒಬ್ಬ ಬಡ ಅಮಾಯಕ ಹುಡುಗಿ, ದಿನಗೂಲಿ ಕೆಲಸ ಮಾಡುವ ಹುಡುಗಿ, ಮೇಲಾಗಿ ಅನಾಥೆ, ಅವಳು ಹೋಗಿದ್ದು ಕೆಲಸಕ್ಕೆ, ಮೈ ತುಂಬಾ ಬಟ್ಟೆ ಇದ್ದಂಥ ಹುಡುಗಿ, ಅವಳ ಮೇಲೆ ದೌರ್ಜನ್ಯ ಎಸಗಿದವರು ನಾಲ್ಕು ಜನ ಮುಸ್ಲಿಂ ಯುವಕರು.

ಅವಳ ಹೆಸರು ಆಶಾ. ಅವಳ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿ ಆನಂತರ ಚಲಿಸುತ್ತಿರುವ ರೈಲಿನಿಂದ ಅವಳನ್ನು ತಳ್ಳಿದ್ದಾರೆ ಎಂದು ಆರೋಪ. ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅದೇ ಮಂಗಳೂರಿನಲ್ಲಿ ಇದ್ದದ್ದರಲ್ಲಿ ಶ್ರೀಮಂತರ ಮನೆ ಹುಡುಗರು & ಹುಡುಗಿಯರು. ಅವರು ಹೋಗಿದ್ದು ಎಂಜಾಯ್ ಮಾಡುವುದಕ್ಕೆ. ಅದು ಬರ್ತ್ ಡೇ ನೇ ಆಗಿರಲಿ ಅಥವಾ ಏನೇ ಆಗಿರಲಿ.

ಮೈಸೂರಿನ ಬಡ ಹುಡುಗಿಯ ವಿಷಯಕ್ಕೆ ಆದ ಪ್ರತಿಭಟನೆಗೂ ಮತ್ತು ಮಂಗಳೂರಿನ ಗಲಭೆಗೂ ಇರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿ. ನಮ್ಮ ಯಾವ ರಾಜಕಾರಣಿಗಳೂ ಮಂಗಳೂರು ಘಟನೆಗೆ ಕೊಟ್ಟ ಪ್ರಾಮುಖ್ಯತೆಯನ್ನು ಮಂಡ್ಯ ಘಟನೆಗೆ ನೀಡಲಿಲ್ಲ.

ಮಾಧ್ಯಮದವರೂ ಸಹಿತ ಮಂಗಳೂರಿಗೆ ಕೊಟ್ಟಂಥ ಪ್ರಾಮುಖ್ಯತೆಯನ್ನು ಮೈಸೂರಿನ ಹುಡುಗಿಗೆ ಕೊಡಲಿಲ್ಲ. ಯಾವ ಸಂಘಟನೆಯವರೂ ಪ್ರತಿಭಟನೆ ಮಾಡಲಿಲ್ಲ. ಮಂಗಳೂರನ್ನು ಬಂದ್ ಮಾಡಿದ ಹಾಗೆ ಮೈಸೂರನ್ನು ಏಕೆ ಬಂದ್ ಮಾಡಲಿಲ್ಲ. ಏಕೀ ತಾರತಮ್ಯ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+