ನಂಬ್ರಿದೆ ನಂಬಿ ಶಿರಾಡಿ ಘಾಟ್ ಜ.15ಕ್ಕೆ ರೆಡಿಯಂತೆ

ಇತ್ತೀಚೆಗೆ ಸಕಲೇಶಪುರಕ್ಕೆ ಬಂದಿದ್ದ ಸದಾನಂದ ಗೌಡರು 'ಕೇಂದ್ರ ಸರ್ಕಾರವು ಶಿರಾಡಿ ಘಾಟ್ ರಸ್ತೆ ದುರಸ್ತಿ ಮಾಡುತ್ತದೆಯೋ ಬಿಡುತ್ತದೆಯೋ ಗೊತ್ತಿಲ್ಲ. ಆದರೆ, ಈ ಡೀವಿ ಭರವಸೆ ರಸ್ತೆ ತುಂಬಾ ಹಾಳಾಗಿರುವುದು ಗಮನಕ್ಕೆ ಬಂದಿದೆ.
6 ಕೋಟಿ ರೂ. ಬಿಡುಗಡೆ ಮಾಡಿ ಗುಂಡಿಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಕಮ ಕೈಗೊಳ್ಳುವಂತೆ ಇಂಜಿನಿಯರುಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದರು.
ಆದರೆ, ಇಲ್ಲಿನ ಕಾಮಗಾರಿ ಇನ್ನೂ ಆಮೆಗತಿಯಲ್ಲಿ ಸಾಗಿದೆ. ಕನಿಷ್ಠ ಒಂದು ವರ್ಷ ರಸ್ತೆ ಹಾಳಾಗದಂತೆ ಗುಣಮಟ್ಟ ಕಾಪಾಡಿಕೊಳ್ಳುವ ರಸ್ತೆ ನಿರ್ಮಿಸುವ ಭರವಸೆ ನೀಡಿದ್ದಾರ. ಕನಿಷ್ಠ ಮುಂದಿನ ಮಳೆಗಾಲದ ತನಕ ಡಾಂಬರು ರಸ್ತೆ ಮೇಲೆ ಕಾಣಿಸಿಕೊಂಡರೆ ನಮ್ಮ ಪುಣ್ಯ.
ಭರವಸೆಗಳ ಹೊಳೆಯಲ್ಲಿ ಮಿಂದ ರಸ್ತೆ: ಶಿರಾಡಿ ಘಾಟ್ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡುವ ಯೋಜನೆಗೆ ಅಗತ್ಯವಾಗಿರುವ 130 ಕೋಟಿ ರೂಗಳನ್ನು ಒದಗಿಸುವುದರಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಲೋಕೋಪಯೋಗಿ ಸಚಿವ ಸಿಎಂ ಉದಾಸಿ ಹೇಳಿದ್ದಾರೆ.
ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ದಟ್ಟಣೆ ಐದು ಪಟ್ಟು ಹೆಚ್ಚಾಗಿದ್ದು ರಸ್ತೆಯ ವಿನ್ಯಾಸವನ್ನೇ ಬದಲಿಸುವ ಅವಶ್ಯಕತೆ ಇದೆ ಎಂದು ಸರ್ಕಾರ ಹೇಳುತ್ತಿದೆ.
ಈ 130 ಕೋಟಿ ರೂ ನಿಧಿಗಾಗಿ ಕೂಡಾ ತಾತ್ಕಾಲಿಕವಾಗಿ ರಸ್ತೆಗೆ ತೇಪೆ ಹಾಕಲು ಮಾತ್ರ ಎಂಬುದನ್ನು ಮರೆಯುವಂತಿಲ್ಲ. ಒಟ್ಟಿನಲ್ಲಿ ಸದಾನಂದ ಗೌಡರ ಭರವಸೆ ನಿಜವಾದರೆ ತುಂಬಾ ಸಂತೋಷ.












Click it and Unblock the Notifications