ಯಡಿಯೂರಪ್ಪಇನ್ನೂ ನಿಜ ಜನನಾಯಕ

Yeddyurappa
ತನ್ನ ರಾಜಕೀಯ ವೃತ್ತಿ ಜೀವನದಲ್ಲಿ ಹಲವಾರು ಹೋರಾಟ ನಡೆಸಿ, ಬೆಳೆದು ಬಂದ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದು ಬಿಜೆಪಿ ಪಕ್ಷದವರ ಜೊತೆ ಅವರ ಕೆಲ ರಾಜಕೀಯ ವಿರೋಧಿ ವಲಯದಲ್ಲೂ ಬೇಸರ ವ್ಯಕ್ತ ವಾಗಿರುವುದು ನಿಜ.

ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಹತ್ತಿರದಿಂದ ಬಲ್ಲವರು ಬಹಳಷ್ಟು ಜನರಿದ್ದಾರೆ. ವಿರೋಧ ಪಕ್ಷದ ಕೆಲ ನಾಯಕರೂ ಹೇಳುವ ಹಾಗೆ ಯಡ್ಡಿ ಒಬ್ಬ ಹುಟ್ಟು ಹೋರಾಟಗಾರ, ಛಲಗಾರ, ಸೋಲನ್ನು ಬೇಗನೆ ಒಪ್ಪಿಕೊಳ್ಳದ ಗಟ್ಟಿ ರಾಜಕಾರಿಣಿ.

ಯಡಿಯೂರಪ್ಪ ಅವರನ್ನು ಹತ್ತಿರದಿಂದ ಬಲ್ಲ ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಹಲವಾರು ಬಾರಿ ಹೇಳಿದಂತೆ, ಯಡಿಯೂರಪ್ಪ ಒಬ್ಬ ಹೋರಾಟದಿಂದ ಬೆಳೆದು ಬಂದ ರೀತಿ ನೋಡಿದರೆ ಅಚ್ಚರಿ ಆಗುತ್ತದೆ. ಅವರ ಸಮಯಪಾಲನೆ ಮೆಚ್ಚುವಂತದ್ದು. ವಿರೋಧ ಪಕ್ಷದಲ್ಲಿದ್ದಾಗ ಅವರು ಹೋರಾಟ ಬಹಳಷ್ಟು ರಾಜಕಾರಿಣಿಗಳಿಗೆ ಅನುಕರಣೆಗೆ ಯೋಗ್ಯವಾದಂತದ್ದು.

ಕಾಂಗ್ರೆಸ್ ನಾಯಕ ಬಿ ಎಂ ಹಸನಬ್ಬ ಕೂಡ ರಾಜಕೀಯ ವ್ಯಕ್ತಿಯಾಗಿ ಯಡಿಯೂರಪ್ಪ ಯುವ ನಾಯಕರಿಗೆ ಸ್ಫೂರ್ತಿ. ಎಲ್ಲಕ್ಕಿಂತ ಮೆಚ್ಚ ಬೇಕಾಗಿರುವುದು ಅವರ ಸಮಯಪಾಲನೆ. ಹೋರಾಟದ ಛಲ, ನಗರಸಭೆಯ ಸದಸ್ಯನಾಗಿ ಮುಖ್ಯ;ಮಂತ್ರಿಯಾಗಿ ಬೆಳದು ಬಂದ ರೀತಿ ಅಚ್ಚರಿ ಮೂಡದೆ ಇರದು ಎನ್ನುತ್ತಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ವೈಯಕ್ತಿಕವಾಗಿ ಬಿಎಸ್ವೈ ಬಂಧನ ನನಗೆ ಬೇಸರ ತಂದಿದೆ. ನನಗೆ ಈ ಘಟನೆಯಿಂದ ಖಂಡಿತ ಸಂತಸ ತಂದಿಲ್ಲ. ಯಡಿಯೂರಪ್ಪ ಅವರ ಲಘುವಾಗಿ ಮಾತನಾಡುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇನ್ನು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಬಿಜೆಪಿ ಅಧಿಕಾರಕ್ಕೆ ಬಂದಾಗಿಂದ ಯಡಿಯೂರಪ್ಪ ವಿರುದ್ದ ಎಂದೂ ಧ್ವನಿ ಎತ್ತಿದವರಲ್ಲ.

ಬಿಎಸ್ವೈ ಬಂಧನವಾದ ನಂತರ ಕೂಡ ಶಾಸಕರು ಮತ್ತು ಸಚಿವರುಗಳಿಂದ ಅವರಿಗೆ ಬೆಂಬಲ ವ್ಯಕ್ತವಾಗುತ್ತಿರುವುದನ್ನು ನೋಡಿದರೆ ಇನ್ನೂ ಈ ನಾಯಕರುಗಳು ಯಡಿಯೂರಪ್ಪ ಅವರನ್ನೇ ತನ್ನ ನಾಯಕರೆಂದೇ ಈ ಹೊತ್ತಿಗೂ ನಂಬಿದ್ದಾರೆ.

ಆದರೆ... ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ಬೆಲೆ ಕೊಡಲೇ ಬೇಕು ಮತ್ತು ಅದುವೇ ಅಂತಿಮ ಕೂಡ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+