ನೆಲಮಂಗಲದಲ್ಲಿ ದುಡ್ಡು ಕೊಟ್ಟರೆ ದಾಖಲೆ ಇಲ್ಲದೆಯೇ 'ಆಧಾರ್' ಸಿಗುತ್ತೆ!
ಕೇಂದ್ರ
ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯಾದ 'ರಾಷ್ರೀಯ ಆಧಾರ್ ಗುರುತಿನ ಚೀಟಿ' ವಿತರಣೆ ಕಾರ್ಯಕ್ರಮ ಅನೇಕ ಗೊಂದಲಗಳ ನಡುವೆಯೂ ಚಾಲ್ತಿಯಲ್ಲಿದೆ. id="toptextpromo">ಅದರೆ
ನೆಲಮಂಗಲದಲ್ಲಿ ಈ ಯೋಜನೆ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿರುವುದು ದುರಂತ. ಇಲ್ಲಿನ 'ರಾಷ್ರೀಯ ಆಧಾರ್ ಗುರುತಿನ ಚೀಟಿ' ವಿತರಣಾ ಏಜೆನ್ಸಿಯವರು ದಿನ ಒಂದಕ್ಕೆ 50 ಮುಂಗಡ ಟೋಕನ್ ನೀಡುವ ವ್ಯವಸ್ಥೆ ಮಾಡಿಕೊಂಡು ಮುಂದಿನ ಮೂರು ನಾಲ್ಕು ತಿಂಗಳುಗಳ ನಂತರದ ದಿನಾಂಕ ನೀಡಿ ಕಳುಹಿಸುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅದರೆ
ದಲ್ಲಾಳಿಗಳ ಮೂಲಕ 100 ರೂಪಾಯಿಗಳನ್ನು ಕೊಟ್ಟರೆ ಯಾವುದೇ ದಾಖಾಲಾತಿ ಹೊಂದಿಲ್ಲದವರಿಗೂ ಆಧಾರ್ ಗುರುತಿನ ಚೀಟಿ ನೋಂದಣಿಯನ್ನು ಆ ದಿನವೇ ಮಾಡಿ ಕೊಡಲಾಗುತ್ತಿದೆ. ಅಂದರೆ ಹಣ ನೀಡಿದವರಿಗೆ ಒಂದೇ ದಿನದಲ್ಲಿ, ಹಣ ನೀಡದಿದ್ದರೆ ಮೂರ್ನಾಲ್ಕು ತಿಂಗಳು ಕಾಯಬೇಕು. ಇದು ಸರಿಯೇ? ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ?











Click it and Unblock the Notifications