ಊಟಕ್ಕೆ ಮೀನು ಸಿಗದಂತೆ ಮಾಡಿದ ಸಂತೋಷ್ ಹೆಗ್ಡೆ

ಬೇಲೆಕೇರಿ ಬಂದರಿನಲ್ಲಿ ವ್ಯವಹಾರ ನಡೆಸಲು 10 ಕಂಪೆನಿಗಳಿಗೆ ವಹಿಸಿಕೊಡಲಾಗಿದ್ದು , ಅದರಲ್ಲಿ ಮೂರು ಕಂಪೆನಿಗಳು ವಹಿವಾಟು ಆರಂಭಿಸಿವೆ. ಆದರೆ ಹೆಚ್ಚಿನ ಕಂಪೆನಿಗಳು ಬಂದರು ಪ್ರದೇಶದ ಜಾಗ ಅತಿಕ್ರಮಿಸಿ ವ್ಯವಹಾರ ನಡೆಸುತ್ತಿದ್ದರು. ಕರಾವಳಿ ತೀರದಲ್ಲಿ ಕಡಲ್ಕೊರೆತೆ ಹೆಚ್ಚಿದೆ.
ಕಳೆದ ಐದು ವರ್ಷದ ಅವಧಿಯಲ್ಲಿ ಬಂದರು ಪ್ರದೇಶದಲ್ಲಿ ನಾಲ್ಕು ಅದಿರು ತುಂಬಿದ್ದ ಬಾರ್ಜುಗಳು ಮುಳುಗಿವೆ. ಇದರಿಂದ ಜಲಚರ ಜೀವಿಗಳಿಗೆ ಭಾರೀ ಮಾಲಿನ್ಯ ಸಮಸ್ಯೆ ಉಂಟಾಗಿದೆ.
ಮೀನು ಇಲ್ಲಾ ಕಂಪನಿ ಕೆಲ್ಸನೂ ಇಲ್ಲ: ಮೀನುಗಳು ಸಾಯಲಾರಂಭಿಸಿರುವುದಲ್ಲದೆ ಅವುಗಳ ಸಂತಾನೋತ್ಪತ್ತಿ ನಿಂತು ಹೋಗಿ ಮೀನುಗಾರರು ಮೀನಿಗಾಗಿ ಪರದಾಡುವಂತಾಗಿದೆ. ಮುಳುಗಿರುವ ಬಾರ್ಜುಗಳ ಅವಶೇಷಗಳಿಂದಾಗಿ ಮೀನುಗಾರರ ಬಲೆಗಳು ಮತ್ತು ನಾವೆಗಳು ಪದೇ ಪದೇ ನಷ್ಟವಾಗುತ್ತಿವೆ.
ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್‌ಎಚ್‌ಆರ್‌ಸಿ) ಮಧ್ಯ ಪ್ರವೇಶಿಸಿದ ಬಳಿಕ 2010ರಲ್ಲಿ ಜೆಟ್ಟಿಗಳ ವಿಸ್ತರಣೆ ಕಾರ್ಯ ನಿಂತಿದ್ದು, ಮೀನುಗಾರರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ದಿನಗಳಲ್ಲಿ ಕೆಲವು ಕಂಪೆನಿಗಳು ತಮ್ಮ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ ಸಮುದ್ರ ಭಾಗದಲ್ಲಿ ಒಂದು ಲಕ್ಷ ಚದರ ಅಡಿ ಜಾಗ ಕಬಳಿಸಿವೆ.
ಬಂದರು ಪ್ರದೇಶವನ್ನು ಎಲ್ಲ ರೀತಿಯಿಂದಲೂ ಅಪಾಯಕ್ಕೊಡ್ಡಿರುವ ಕಂಪೆನಿಗಳ ವಿರುದ್ಧ ದಂಡ ಹೇರಬೇಕು. ಪರಿಸರ ಮಾಲಿನ್ಯ ಉಂಟಾಗಿ ಮೀನು ಕ್ಷಾಮ ಎದುರಾದ ಮೇಲೆ ಮೀನುಗಾರರು ತಮ್ಮ ಕಸುಬು ನಿಲ್ಲಿಸಿ ಕಂಪೆನಿಗಳಿಗೆ ಸೇರಿಕೊಂಡಿದ್ದರು.
ಆದರೆ ಈಗ ಅದಿರು ರಫ್ತು ನಿಷೇಧದಿಂದ ಈ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ರೀತಿಯಿಂದಲೂ ನಿರುದ್ಯೋಗಿಗಳನ್ನಾಗಿಸಿದ ಕಂಪೆನಿಗಳು ಈಗ ಪರಿಹಾರ ನೀಡಬೇಕು ಎಂದು ಸ್ಥಳೀಯ ಕಾರ್ಮಿಕರು (ಮಾಜಿ ಮೀನುಗಾರು!) ಆಗ್ರಹಿಸಿದ್ದಾರೆ.
ಮೀನುಗಾರರ ಸ್ಥಿತಿ ಹೀಗಾದರೆ ರೈತರ ದುಸ್ಥಿಃತಿ ಇನ್ನೂ ಹೆಚ್ಚಿದೆ. ಇಲ್ಲಿ ಹೆಚ್ಚಿನವರು ಸಣ್ಣ ಹಿಡುವಳಿದಾರರಾಗಿದ್ದು, ಇಲ್ಲಿಗೆ ಅದಿರುವ ಲಾರಿಗಳು ಲಗ್ಗೆ ಇಡುವ ಮುನ್ನ ಬೇಸಾಯ ಉತ್ತಮವಾಗಿತ್ತು.
ಅದಿರು ರಫ್ತು ಕಾಲದಲ್ಲಿ ಇಲ್ಲಿ ಬಂದರು ಪ್ರದೇಶ ಮತ್ತು ಹೊರಗೂ ಅದಿರು ಸಂಗ್ರಹಿಸಿಡಲಾಗುತ್ತಿತ್ತು. ಕೆಲವು ರೈತರ ಕೃಷಿ ಭೂಮಿಯಲ್ಲಿ ಅದಿರು ರಫ್ತು ಕಂಪೆನಿಗಳು ರೈತರಿಗೆ ಬಾಡಿಗೆ ನೀಡಿ ಅದಿರು ಸಂಗ್ರಹಿಸಿವೆ. ಆದ್ದರಿಂದ ಆ ಕೃಷಿ ಭೂಮಿಯೆಲ್ಲ ಈಗ ಬಂಜರಾಗಿದ್ದು , ರೈತರು ಬೇಸಾಯ ಮಾಡಲಾದೆ ಕಂಗೆಟ್ಟಿದ್ದಾರೆ.












Click it and Unblock the Notifications