ಸಂಸತ್ತಿನಲ್ಲಿ ನಮ್ಮ ಸಂಸದರು ದನಿ ಎತ್ತಲ್ಲ ಏಕೆ?
ಸಂಸತ್ತಿನಲ್ಲಿ
ಕರ್ನಾಟಕದ ಬೇಕು ಬೇಡಗಳ ಕುರಿತು ಧ್ವನಿ ಎತ್ತಬಲ್ಲ ಸಮರ್ಥ ಸಂಸದರಿಲ್ಲದಿರುವುದು ದುರ್ದೈವದ ಸಂಗತಿ. ಇದರಿಂದಾಗಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯ ಸತತವಾಗಿ ನಡೆದೇ ಇದೆ. ಎಲ್ಲಾ ಪ್ರಯೋಜನಗಳನ್ನು ಉತ್ತರದ ರಾಜ್ಯಗಳವರು ಪಡೆದುಕೊಳ್ಳುತಿದ್ದಾರೆ ಹಾಗೂ ಮಂತ್ರಿ ಮಂಡಲದಲ್ಲಿಯೂ ಸಹ ಕಾಟಚಾರಕ್ಕೆ ಎಂಬಂತೆ ಮೂರ್ನಾಲ್ಕು ಸಂಸದರನ್ನು ಮಂತ್ರಿಗಳನ್ನಾಗಿ ಮಾಡಿ ಅವರಿಗೆ ಯಾವುದೇ ಮಹತ್ವದ ಖಾತೆಗಳನ್ನು ಕೊಡದೇ ಕರ್ನಾಟಕಕ್ಕೆ ಪ್ರಾತಿನಿಧ್ಯ ಕೊಟ್ಟಿರುವುದಾಗಿ ಕಾಂಗ್ರೆಸ್ ನಾಯಕರು ಸಮಜಾಯಿಸಿ ನೀಡುತ್ತಿದ್ದಾರೆ. ಕೇಂದ್ರದಲ್ಲಿ ಉತ್ತರದವರ ಪ್ರಬಲ ಲಾಬಿ ಇದ್ದು ಎಲ್ಲಾ ಅನುಕೂಲತೆಗಳ ಸಿಂಹಪಾಲನ್ನು ಅವರೇ ಪಡೆಯುತ್ತಿದ್ದಾರೆ. id="toptextpromo">ಆದರೆ
ಕರ್ನಾಟಕದ ಸಂಸದರು ಭಾಷಾಜ್ಞಾನದ ಕೊರತೆ, ತಂತಮ್ಮ ಕ್ಷೇತ್ರಗಳ, ರಾಜ್ಯದ ಬೇಕು ಬೇಡಗಳ ಬಗೆಗಿನ ಅನಾಸಕ್ತಿ, ರಾಜಕೀಯ ಅಥವಾ ಅಧಿಕಾರ ವಲಯದಲ್ಲಾಗಲಿ, ತಮ್ಮ ಬೇಡಿಕೆಗಳನ್ನು ಸಮರ್ಥವಾಗಿ ಬಿಂಬಿಸುವ ಸಾಮರ್ಥ ಇರದಿರುವುದರಿಂದ ಕರ್ನಾಟಕ ಕೇಂದ್ರ ಸರಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. id='are-slot-1' class='oiad oi-axt oiadv'> id='top-searched-articles'>ಇದಕ್ಕೆ
ಪರಿಹಾರವೆಂದರೆ ಸಂಸದರು ಸ್ವತಃ ಭಾಷಾ ಸಾರ್ಮಥ್ಯ ಪಡೆಯಬೇಕು. ಇಲ್ಲದಿದ್ದರೆ ಸಹಾಯಕರನ್ನು (ಹಿಂದಿ, ಇಂಗ್ಲಿಷ್ ಬಲ್ಲವರ) ನೇಮಿಸಿಕೊಳ್ಳಬೇಕು. ಇದರಿಂದಾಗಿ ಬಾಕಿ ಉಳಿದ ತಮ್ಮ ಕ್ಷೇತ್ರಗಳ ಕೆಲಸಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗಬಲ್ಲದು. ಇಲ್ಲದಿದ್ದರೆ ಧೈರ್ಯವಾಗಿ ಕನ್ನಡದಲ್ಲಿ ಅಥವಾ ಮಾನ್ಯತೆ ಪಡೆದಿರುವ ಯಾವುದೇ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯಬೇಕು. [ href="/topic/%E0%B2%B8%E0%B2%82%E0%B2%B8%E0%B2%A4%E0%B3%8D%E0%B2%A4%E0%B3%81">ಸಂಸತ್ತು]











Click it and Unblock the Notifications