ವಿರೋಧ ಪಕ್ಷದಲ್ಲಿದ್ದಾಗ ಯಡ್ಡಿ ಮಾಡಿದ್ದೇನು?

What dis BSY do when he was oppn leader
ಈಗಾಗಲೇ ಎರಡೂವರೆ ವರ್ಷಗಳ ಅಧಿಕಾರ ಪೂರೈಸಿರುವ ಯಡಿಯೂರಪ್ಪ ನವರು ಈವರೆಗಿನ ಆಡಳಿತದಲ್ಲಿ ಒಂದಾದರೂ ಮೆಚ್ಚತಕ್ಕ ಸಾಧನೆ ಮಾಡಿದ್ದಾರೆಯೇ? ಈಗ ದೇವೇಗೌಡರ ಕಾಲದ ಅಕ್ರಮಗಳನ್ನು ಶೋಧಿಸುವ ಮೂಲಕ ತಲೆಯಲ್ಲಿ ಕರಿ ಬೆಕ್ಕು ಹುಡುಕುವ ಘನ ಸಾಧನೆ ಮಾಡಲು ಹೊರಟಿದ್ದಾರೆ.

ಕುಮಾರಸ್ವಾಮಿಯವರು ತಮ್ಮ ಜಾತಕ ಜಾಲಾಡಿರುವುದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲು ಹೊರಟಿರುವ ಯಡಿಯೂರಪ್ಪನವರು ಆಡಳಿತದ ಬಗ್ಗೆ ಅದೆಷ್ಟು ಗಮನ ಕೊಡುತ್ತಿದ್ದಾರೆ ? ಕುಮಾರಸ್ವಾಮಿ ಅವರಿಗೇನೂ ಕೆಲಸವಿಲ್ಲ.

ಸಂಸದರಾಗಿ ದೆಹಲಿಗೆ ಹೋಗುವುದನ್ನು ಕಡಿಮೆ ಮಾಡಿರುವ ಎಚ್‌ಡಿಕೆ, ಯೂಡಿಯೂರಪ್ಪನವರ ಅಕ್ರಮ ಬಯಲಿಗೆ ತರುವುದನ್ನೇ ಪ್ರದಾನ ಕಾಯಕ ಮಾಡಿಕೊಂಡಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿ ಬೆಟ್ಟದಷ್ಟು ಕೆಲಸ ಹೊಂದಿರುವ ಯಡಿಯೂರಪ್ಪನವರು 'ಎಲ್ಲಾ ಬಿಟ್ಟು ಮಗ ಭಂಗಿ ನೆಟ್ಟ" ಎಂಬಂತೆ 12 ವರ್ಷದ ಹಿಂದಿನ ಅವ್ಯವಹಾರಗಳಿಗೆ ಕೈ ಹಾಕುತ್ತಿದ್ದಾರೆ.

ಆಗ ಇದೇ ಮುಖ್ಯಮಂತ್ರಿ ಗಳು ವಿರೋಧ ಪಕ್ಷದಲ್ಲಿರಲಿಲ್ಲವೇ? ಆಗ ಕೇಳಬೇಕಿದ್ದ ಪ್ರಶ್ನೆಯನ್ನು ಈಗ ಕೇಳಿ ಏನು ಪ್ರಯೋಜನ ? ಅಚ್ಚರಿ ತರುವ ವಿಚಾರವೆಂದರೆ, ಕುಮಾರಸ್ವಾಮಿ ಅವರು ದಾಖಲೆಗಳನ್ನು ಇರಿಸಿಕೊಂಡು ಯಡಿಯೂರಪ್ಪ ವರ ಜನ್ಮ ಜಾಲಾಡುತ್ತಿದ್ದರೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನಿದ್ರೆ ಮಾಡುತ್ತಿದೆ.

ಈವರೆಗೂ ಯಡಿಯೂರಪ್ಪನವರ ಯಾವುದೇ ಅಕ್ರಮಗಳನ್ನು ಬಹಿರಂಗ ಪಡಿಸುವ ಗೋಜಿಗೆ ಹೋಗಲಿಲ್ಲ . ಕಳ್ಳನನ್ನು ಹಿಡಿಯಬೇಕಾದ ಪೊಲೀಸರೇ ಕಳ್ಳನೊಂದಿಗೆ ಶಾಮೀಲಾದಂತಿದೆ ಕಾಂಗೆಸ್ಸಿನ ಸ್ಥಿತಿ. ಇದನ್ನೆ ಗಮನಿಸುವಾಗ ಸಿಎಂ ಕಾಂಗ್ರೆಸ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎನಿಸದಿರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+