ಮಂಗಟ್ಟೆ ಹಕ್ಕಿಯನ್ನು 'ಮಣ್ಣು' ಮಾಡಿದ ಭಟ್ಟರು

ಮೊದಲ ಲೇಖನ ಪ್ರಕಟವಾದ ನಂತರ ನಮ್ಮೊಳಗಿನ ಕೆಲ ಓದುಗದೊರೆಗಳಾದರೂ ಕನ್ನಡದಲ್ಲಿ ಈ ಹಕ್ಕಿಗೆ ಏನೆನ್ನುತ್ತಾರೆ ಎಂಬುದನ್ನು ಭಟ್ಟರ ಗಮನಕ್ಕೆ ತಂದಿರಬಹುದು. ಆದರೂ ಭಟ್ಟರು ಲೇಖನದ ಮೊದಲಲ್ಲಿ ಮಾತ್ರ ಕಂಸಿನಲ್ಲಿ "ಮಂಗಟ್ಟಿ ಹಕ್ಕಿ"ಯನ್ನು ಕೂಡಿಸಿ, ಲೇಖನದ್ದುದ್ದಕ್ಕೂ ಹಾರ್ನ್‌ಬಿಲ್ ಹಕ್ಕಿಯನ್ನು ಮೆರೆಸಿ, "ಮಂಗಟ್ಟೆ ಹಕ್ಕಿ"ಯನ್ನು ಮಣ್ಣು ಮಾಡಿರುವುದು ನ್ಯಾಯವೇ? ಹಕ್ಕಿಯನ್ನು ಉಳಿಸುವ ಕೆಲಸಮಾಡುವ ಲೇಖನದಲ್ಲಿಯೇ, ಶಬ್ದವನ್ನು ಕೊಲ್ಲುವ ಕೆಲಸಮಾಡುವುದು ತಪ್ಪಲ್ಲವೇ?
ಹೊಸ ವಸ್ತು/ತತ್ವ/ತಥ್ಯ ಚಾಲ್ತಿಗೆ ಬಂದಾಗ ಅದಕ್ಕೆ ಸಂಬಂಧ ಪಟ್ಟ ಪದಗಳು ಕನ್ನಡದಲ್ಲಿ ಇಲ್ಲದಿರುವುದರಿಂದ ಅದಕ್ಕೆ ಮೂಲ ಇಂಗ್ಲಿಷು/ಇತರ ಭಾಷೆಯ ಶಬ್ದಕ್ಕೆ ಕನ್ನಡದ ಸಂಸ್ಕಾರ ಕೊಟ್ಟು ನಮ್ಮದಾಗಿಸಿಕೊಂಡು ಉಪಯೋಗಿಸುತ್ತೇವೆ, ತಪ್ಪೇನಿಲ್ಲ. ಉದಾ: ಮೋಬೈಲ್ ಫೋನ್, ಇಂಟರ್‌ನೆಟ್ ಇತ್ಯಾದಿ. ಈಗಾಗಲೇ ಕೆಲ ಬೇರೆ ಭಾಷೆಯ ಪದಗಳು ಬಂದು ಕನ್ನಡದಲ್ಲಿ ಒಂದಾಗಿ ಹೋಗಿವೆ - ಉದಾ ಕಾರು, ಬಸ್ಸು, ರಿಕ್ಷಾ ಇತ್ಯಾದಿ. ಅವುಗಳ ಉಪಯೋಗ ತಡೆಯಲಾಗದು, ಹೋಗಲಿ ಬಿಡಿ.
ಶ್ಲೇಷೆಗಾಗಿಯೋ- ತಮಾಷೆಗಾಗಲೋ ಕನ್ನಡದ ನಡುವೆ ಪರಭಾಷೆಯ ಪದ ಬಂದರೆ ನಂಜಿಕೊಂಡು ಹೊಟ್ಟೆಗೆ ಹಾಕಿಕೊಳ್ಳಬಹುದು. ಆದರೆ ನೂರಾರು ವರುಷಗಳಿಂದ ಉಪಯೋಗದಲ್ಲಿರುವ ಪ್ರಾಣಿ-ಪಕ್ಷಿ-ಮರ-ಬಳ್ಳಿ-ಜಾಗಗಳನ್ನು ಸೂಚಿಸುವ ಪದಗಳನ್ನು ಮೂಲೆಗೆ ತಳ್ಳಿ ಇಂಗ್ಲಿಷು ಪದಗಳಿಗೆ ಶರಣು ಹೋಗುವುದು ಸರಿಯಾ? ಈ ಪ್ರಾಣಿ-ಪಕ್ಷಿ-ಮರ-ಬಳ್ಳಿ-ಜಾಗಗಳನ್ನು ಸೂಚಿಸುವ ಪದಗಳು ಬಹಳಷ್ಟು ಸಲ ರೂಢನಾಮಗಳಷ್ಟೇ ಆಗಿರದೇ ಒಂದರ್ಥದಲ್ಲಿ ಅನ್ವರ್ಥಕನಾಮಗಳೂ ಆಗಿರುತ್ತವೆ. ಉದಾಹರಣೆಗೆ "ಬಾಲದಂಡೆ ಹಕ್ಕಿ" ಎಂದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಹೂವಿನ ದಂಡೆಯಂತಹ ಬಾಲವುಳ್ಳ ಹಕ್ಕಿಯ ಚಿತ್ರ ಬರುವುದಿಲ್ಲವೇ? (ಚಿತ್ರ ನೋಡಿ) ಹಾಗೆಯೇ "ನಾಮದ ಕೋಳಿ" ಎಂದರೆ ಹಣೆಯ ಮೇಲೆ ಪಟ್ಟಿ ಇರುವ ಹಕ್ಕಿ ಎಂದು ಊಹಿಸಿಯೇ ಬಿಡುತ್ತಿರಲ್ಲವೇ? ಹೀಗಾಗಿ ರೂಢಿಗತ ಪದಗಳ ಉಪಯೋಗ ಸಂಶಯಾತೀತವಾಗಿ ಆಮದು ಪದಗಳ ಉಪಯೋಗಕ್ಕಿಂತ ಲಾಭಕರ. ಅಲ್ಲ ಅಂತೀರಾ?
ಇದರಲ್ಲಿ ಭಟ್ಟರಿಗೆ ಗೊತ್ತಿಲ್ಲದ್ದು ಏನೂ ಇಲ್ಲ. ಆದರೂ ಹೀಗೇಕೆ? ತಮ್ಮ ಪತ್ರಿಕೆಯಲ್ಲಿ "ಪದೋನ್ನತಿ" ತರಹದ ಅಂಕಣಗಳ ಮೂಲಕ, "ಅಂಡೆಪಿರ್ಕಿ" ತರಹದ ಕನ್ನಡ ಪದಗಳನ್ನು ಪುನರಜ್ಜೀವನಗೊಳಿಸುವ ಮೂಲಕ ಕನ್ನಡ ಪದಗಳನ್ನು ಚಾಲ್ತಿಯಲ್ಲಿಡುವ ಕಾಯಕದಲ್ಲಿ ತೊಡಗಿರುವ ಭಟ್ಟರು ಹೀಗೆ ಕನ್ನಡ ಪದದ ತಿಥಿ ಮಾಡುವ ತಪ್ಪು ಮಾಡಿದ್ದಾರೆ ಎಂದರೆ ನಂಬುವುದೇ ಕಷ್ಟ. ನನ್ನ ಈ ಬರಹ ಮತ್ತು ಹತ್ತು ಹಲವು ಓದುಗರ ಕಾಮೆಂಟುಗಳನ್ನು ಓದಿ, ಅಂಡೆಪಿರ್ಕಿಗಳು ಎಂದು ತಳ್ಳಿಹಾಕದೇ, ಮುಂದಿನ ಬರಹಗಳಲ್ಲಾದರೂ "ಮಂಗಟ್ಟೆ ಹಕ್ಕಿ"ಗೆ ಆದ ಅನ್ಯಾಯವನ್ನು ಸರಿಪಡಿಸುತ್ತಾರೆ ಎಂದು ಆಶಿಸೋಣ.
ಭಟ್ಟರ ಜೊತೆಗೆ ನನ್ನದು ಇನ್ನೊಂದು ಭಿನ್ನಾಭಿಪ್ರಾಯವಿದೆ. ಮಂಗಟ್ಟೆ ಹಕ್ಕಿಯನ್ನು ಭಟ್ಟರು ಹಕ್ಕಿಗಳ ಲೋಕದ ಐಶ್ವರ್ಯ ರೈ ಎಂಬ ಲೇವಲ್ಲಿಗೆ ವರ್ಣಿಸಿದ್ದಾರೆ. ಮಂಗಟ್ಟೆ ಸುಂದರ ಹಕ್ಕಿಯಾದರೂ, ನಾನೇನಾದರೂ ಹಕ್ಕಿಗಳ ಸೌಂದರ್ಯ ಸ್ಪರ್ಧೆಗೆ ನಿರ್ಣಾಯಕನಾಗಿ ಹೋದರೆ ಕಿರೀಟತೊಡಿಸುವುದು ಬಣ್ಣ-ಬಣ್ಣದ ಬಾಲಹೊಂದಿರುವ ಬಾಲದಂಡೆ ಹಕ್ಕಿಗೆ ಹೊರತು ಮಂಗಟ್ಟಿಗೆ ಅಲ್ಲ! ಅಂದಹಾಗೆ ಬಾಲದಂಡೆಹಕ್ಕಿಯನ್ನು ಕಾಣಬೇಕೆಂದರೆ ನೀವು ದೂರ ಹೋಗಬೇಕಾಗಿಲ್ಲ, ಬೆಂಗಳೂರಿನ ಲಾಲ್‌ಬಾಗಿನಲ್ಲೂ ಅದು ನಿಮಗೆ ಕಾಣಬಹುದು!
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications