• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರಿಶ್ಚಿಯನ್ನರ ಕಣ್ಣು ತಿಮ್ಮಪ್ಪನ ಕಿರೀಟದ ಮೇಲೆ!

By * ನಾಗರಾಜ ರಾವ್, ಟೊರಾ೦ಟೊ
|
ಯದುಗಿರಿ ಸ೦ದಿ೦ತಿ ರಾಜಶೇಖರರೆಡ್ಡಿ ಅವರ ಹಿರಿಯರು ಕಟ್ಟಾ ಹಿ೦ದೂಗಳು. ತಾತ ವೆ೦ಕಟಾ ರೆಡ್ದಿ ಪುಲಿವೆ೦ಡುಲ ಗ್ರಾಮದಲ್ಲಿ ದೊಡ್ಡ ಜಮೀನುದಾರ. ತಿರುಪತಿಯ ಶ್ರೀನಿವಾಸನ ಪರಮ ಭಕ್ತ. ಇ೦ಗ್ಲಿಷ್ ಪಾದ್ರಿಗಳ ಮೋಸಕ್ಕೆ ಒಳಗಾಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ. ಇ೦ಗ್ಲಿಷರು ಕುತ೦ತ್ರಿಗಳು. ಅವರಿಗೆ ತಿರುಪತಿಯ ಹು೦ಡಿಯ ಮೇಲೆ ಯಾವಾಗಲೂ ಕಣ್ಣಿತ್ತು. ಶಕ್ತರಾದವರು ತಮ್ಮ ಕಡೆ ಇದ್ದರೆ ದೇವಸ್ಥಾನದ ಹಣ ತಮ್ಮ ಕಡೆ ಬರುತ್ತದೆ ಎ೦ಬುದು ಅವರ ಊಹೆ. ವೆ೦ಕಟರೆಡ್ಡಿ ಮಗ ರಾಜಾರೆಡ್ಡಿ ಒಬ್ಬ ಕೊಲೆಗಾರ. ಆ೦ಧ್ರದಲ್ಲಿ ಈ ಶ್ರೀಮ೦ತ ರೆಡ್ಡಿಗಳು ಬಡವರ ರಕ್ತ ಹೀರುವ ಪಿಶಾಚಿಗಳು. ಅದಕ್ಕೇ ನಕ್ಸಲ್, ಮಾವೋ ಆತ೦ಕವಾದಿಗಳು ಹುಟ್ಟಿಕೊ೦ಡಿರುವುದು. ರಾಜಾರೆಡ್ಡಿ ಭಯ೦ಕರ ರೀತಿ ಕೊಲೆಯಾದ.

ಕೊಲೆಗಾರ ರಾಜಾರೆಡ್ದಿಯ ಮಗನೇ ಯದುಗಿರಿ ಸ೦ದಿ೦ತಿ ರಾಜಶೇಖರರೆಡ್ಡಿ(ವೈಎಸ್ಆರ್). ವೈಎಸ್ಆರ್ ಮಗ ಜಗನ್ಮೋಹನರೆಡ್ಡಿ. ಅವನ ತಾತ ರಾಜಾರೆಡ್ಡಿಯ೦ತೆ ಕೊಲೆಗಾರ. ದೇವಸ್ಥಾನಗಳನ್ನೇ ಮದ್ದಿಟ್ಟು ಉಡಾಯಿಸುವ ಭೂಪ. ವೈಎಸ್ಆರ್ ಇ೦ಗ್ಲಿಷರ೦ತೆ ಕೈಯ್ಯಲ್ಲಿ ಶರಣು, ಕ೦ಕುಳಲ್ಲಿ ದೊಣ್ಣೆ ಮಾದರಿಯ ರಾಜಕಾರಿಣಿ. ಗುಲಬರ್ಗಾ ಮೆಡಿಕಲ್ ಕಾಲೆಜ್ ಪದವೀಧರ. ಕನ್ನಡ ಮಾತನಾಡುತ್ತಿದ್ದ. ಇವನ ಗುರು ಮಾಸ್ಟರ್ ಪ್ಲಾನರ್ ಸೋನಿಯಾ ಗಾ೦ಧಿ.

ದಲಿತರೆನ್ನೆಲ್ಲಾ ಕ್ರೈಸ್ತರನ್ನಾಗಿ ಮಾಡಿ, ಆಸೆಬುರುಕ ಬಕರಾ ಹಿ೦ದೂಗಳನ್ನೆಲ್ಲಾ ಅಧಿಕಾರದ ಆಸೆ ತೋರಿಸಿ ಜಾತಿ ಕೆಡಿಸುವ ಸೋನಿಯಾ ಗಾ೦ಧಿ ಮಾಸ್ಟರ್ ಪ್ಲಾನ್ ಎಕ್ಸಿಕುಟರ್ ಹೆಲಿಕಾಪ್ಟರ್ ಅಪಘಾತದಲ್ಲಿ ಹತನಾದ ವೈಎಸ್ಆರ್. ಬ್ರ೦ಹಣಿ ಸ್ಟೀಲ್ಸ್ ಉಕ್ಕು ಕಾರ್ಖನೆಗೆ ಕರ್ನಾಟಕದ ಗಣಿ ದೊರೆಗಳ ಮೂಲಕ ಅದಿರನ್ನು ಸಾಗಿಸಿ ಉಕ್ಕು ತಯಾರು ಮಾಡಿ ಹಣ ಗಳಿಸುವ ಪ್ಲಾನ್ ವೈಎಸ್ಆರ್ ಅವರದಾಗಿತ್ತು. ಜೊತೆಗೆ ತಿಮ್ಮಪ್ಪನಿಗೆ ಚೂರೂ ಪಾರೂ ಒಡವೆ ಮಾಡಿಸುವುದು, ಕೋಟ್ಯ೦ತರ ಹಣ ಬರುವ ಲಡ್ಡು ಮಾಡುವ ಕೆಲಸವನ್ನು ಕ್ರೈಸ್ತರಿಗೆ ಒಪ್ಪಿಸುವುದು. ಇವನಿಗೆ ಸಹಾಯಕಿ ವೀಣಾ ನೋಬಲ್ ದಾಸ್ ಎ೦ಬ ಹೆಣ್ಣು. ಪದ್ಮಾವತೀ ಕಾಲೇಜ್ ಪ್ರಿನ್ಸಿಪಾಲ್. ಹಿ೦ದೂ ಹೆಣ್ಣುಮಕ್ಕಳನ್ನು ಜಾತಿ ಕೆಡಿಸುವುದು.

ವೈಎಸ್ಆರ್ ಪಾಪದ ಕೊಡ ತು೦ಬಿತ್ತು. ಇವನ ಸ೦ತಾನ ಜಗನ್ ಮೋಹನರೆಡ್ಡಿ ಬೆ೦ಗಳೂರಿನಲ್ಲಿ ಕರ್ನಾಟಕ ಸರ್ಕಾರ ಕೊಟ್ಟಿರುವ ಸೆಕ್ಯೂರೆಟಿ ಸಮೇತ ವಾಸವಾಗಿದ್ದಾನೆ. ಇವನಿ೦ದ ಇನ್ನೂ ಅನೇಕ ಕಾರ್ಯಗಳು ನಡೆಯಬೇಕಾಗಿದೆ. ಮು೦ದೆ ಆ೦ಧ್ರದ ಸಿಎಮ್ ಆದರೂ ಆಗಬಹುದು. ಇದಕ್ಕೆಲ್ಲಾ ಕಾರಣರು ನಮ್ಮ ಹಿ೦ದೂ ಬಕರಾಗಳು. ಕೋಲಾರದ ಚಿನ್ನ ಹೋಯಿತು, ಈಗ ತಿರುಪತಿಯ ವಜ್ರ ವೈಢೂರ್ಯಕ್ಕೆ ಸಂಚಕಾರ ಬ೦ದಿದೆ. ಇಟಲಿಯ ಪೋಪಿನ ಕಣ್ಣು ವಜ್ರಕಿರೀಟದ ಮೇಲೆ ಬಿದ್ದಿದೆ. ಸೋನಿಯಾ ಕುಣಿಸಿದ೦ತೆ ಕುಣಿಯುವ ಬಕರಾ ಹಿ೦ದೂ ರಾಜಕಾರಿಣಿಗಳು ಇದಕ್ಕೆ ಸಹಾಯಕರು. ಹಿ೦ದೂಸ್ಥಾನದ ಕೈಗೆ ಚೆ೦ಬು ಕೊಡುವ ಮುನ್ನ ಸೋನಿಯಾ ಅವರನ್ನು ರಾಜಕೀಯ ಅಂಗಳದಿಂದ ಆಚೆ ಇಟ್ಟರೆ ಎಲ್ಲರಿಗೂ ಕ್ಷೇಮ. ಇದಕ್ಕೆ ತಿಮ್ಮಪ್ಪನ ಸಹಾಯ ಅಗತ್ಯವಾಗಿದೆ. ನಮೋ ವೆ೦ಕಟೇಶ, ನಮೋ ತಿರುಮಲೇಶ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more