ಕೆಎಸ್‌ಆರ್‌ಟಿಸಿ ಆನ್‌ಲೈನೋ? ಏನು ಲೈನೋ?
ಕೆಎಸ್‌ಆರ್‌ಟಿಸಿಯಲ್ಲಿ ಆನ್‌ಲೈನ್ ಬುಕಿಂಗ್ ಸೇವೆಗಳು ಆರಂಭವಾಗಿವೆ. ಉಪಯೋಗಿಸಲು ಹೋದಾಗ ಏನ್‌ಲೈನ್ ಇದು? ಎನಿಸುತ್ತದೆ. ದಟ್ಸ್‌ಕನ್ನಡದ ಆನ್‌ಲೈನ್ ದೂರುಗಳಾದರೂ ನಿಮಗೆ ಕೇಳಿಸುತ್ತಾ... ಕೆಎಸ್‌ಆರ್‌ಟಿಸಿ ವೆಬ್ ಮಾಸ್ಟರ್?
- ಎಚ್. ವಿ. ಸೂರ್ಯನಾರಾಯಣ ಶರ್ಮಾ, ಬೆಂಗಳೂರು.
ಈ ಕುರಿತು ಸಾರಿಗೆ ಸಂಸ್ಥೆಗೆ ದೂರು ಸಲ್ಲಿಸಲು, ಸಂಸ್ಥೆಯ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿದೆ. ಅಲ್ಲಿ ಯಾವುದೇ ಈ-ಮೇಲ್ ವಿಳಾಸವಿಲ್ಲ. ನಮ್ಮನ್ನು ಸಂಪರ್ಕಿಸಿ ಎಂಬ ಕೊಂಡಿ ಕೆಲಸಮಾಡುತ್ತಿಲ್ಲ.
ದೂರವಾಣಿ ಮೂಲಕ ಹರ ಸಾಹಸ ಮಾಡಿ ( ಅವರ್ಬಿಟ್ ಅವರ್ಬಿಟ್ ಅವರ್ಯಾರು ಕ್ರಮದಲ್ಲಿ) ಷಡಕ್ಷರಿ ಎಂಬುವರನ್ನು ಸಂಪರ್ಕಿಸಿದಾಗ ‘ಇದು ಹೊಸದಾಗಿ ಪ್ರಾರಂಭವಾಗಿರುವ ಸೇವೆ ಸ್ವಲ್ಪ ತೊಂದರೆಇದೆ’ ಎಂದು ತಿಳಿಸಿದರು. ಅಲ್ಲದೆ ಇದು ಬ್ಯಾಂಕಿನವರ ತಪ್ಪು ಎಂದೂ ಕೊಸರಾಡಿದರು.
ನನ್ನ ಹಣದ ಬಗ್ಗೆ ವಿಚಾರಿಸಿದಾಗ ಇನ್ನೂ ಹತ್ತು ಹದಿನೈದು ದಿನಗಳಾಗಬಹುದು ಎಂದರು. ಟಿಕೆಟ್ ಬಗ್ಗೆ ವಿಚಾರಿಸಿದರೆ ಮತ್ತೊಮ್ಮೆ ಬುಕ್ ಮಾಡಿ ಎಂದರು, ಮತ್ತೊಮ್ಮೆ ಹೀಗೇ ಅದರೆ ಎಂದದ್ದಕ್ಕೆ ಅವರಲ್ಲಿ ಉತ್ತರವಿಲ್ಲ. ನನಗೀಗ ಹಣವೂ ವಾಪಸ್ ಇಲ್ಲಾ, ಟಿಕೆಟೂ ಇಲ್ಲ.
ಇಂತಹ ಸಂಗತಿಗಳನ್ನೆಲ್ಲಾ ಪುನಃ ಪುನಃ ಪರೀಕ್ಷೆಗೊಳಪಡಿಸಿ ನಂತರ ಮಾತ್ರವೇ ಸೇವೆಯ ಪ್ರಾರಂಭಮಾಡಬೇಕಲ್ಲವೇ ಎಂದದ್ದಕ್ಕೆ, ‘ಅದೆಲ್ಲಾ ನನಗೆ ಗೊತ್ತಿಲ್ಲ. ಯಾರಾದರೂ ವಿಚಾರಿಸಿದರೆ 15 ದಿನಗಳಾಗಬಹುದು ಎಂದು ಹೇಳಲು ನಮ್ಮ ಮೇಲಾಧಿಕಾರಿಗಳು ನನಗೆ ಸೂಚನೆ ನೀಡಿದ್ದಾರೆ. ಇಷ್ಟೇ ನನ್ನ ಕೆಲಸ’ ಎಂದರು!
ಈ ದಿನ ನಾನು ಸಾರಿಗೆ ಸಂಸ್ಥೆಗೆ ರಿಜಿಸ್ಟರ್ಡ್ ಅಂಚೆ ಮೂಲಕ ದೂರೊಂದನ್ನು ಸಲ್ಲಿಸಲಿದ್ದೇನೆ. ನನ್ನ ಹಣ ಎಂದಿಗೆ ವಾಪಸ್ ಬರುವುದೋ ಶಬರಿಯಂತೆ ಕಾಯಬೇಕೋ ಗೊತ್ತಿಲ್ಲಾ. ಏನಿದು ಅವತಾರ! ಸಾರಿಗೆ ಸಂಸ್ಥೆಯ ಅಪಕಾರ !












Click it and Unblock the Notifications