ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಸ್ಸೆಲ್ಸಿ : ಹೇಗೆ ಮರೆಯಲಿ ಆ ದಿನ? ಆ ಕ್ಷಣ?

By Staff
|
Google Oneindia Kannada News


ಇಲ್ಲಿರುವ ಅನಿಸಿಕೆಗಳೂ ಮೂರು : ಭಾವನೆಗಳೂ ನೂರು

ಹಲೋ,

ನಾನು ಎಸ್‌ಎಸ್‌ಎಲ್‌ಸಿ ಎಕ್ಸಾಮ್‌ ಫೇಸ್‌ ಮಾಡಿದ್ದು 1984 ಮಾರ್ಚ್‌ನಲ್ಲಿ. ಆಗ ಮನೆಯಲ್ಲಿ ಯಾರೂ ನಮ್ಮನ್ನು ನಿದ್ದೆಗೆಟ್ಟು ಓದು ಎಂದು ಬಲವಂತ ಮಾಡ್ತಾಯಿರಲಿಲ್ಲ. ನಮ್ಮ ತಂದೆ ಹೇಳೋರು, ಎಕ್ಸಾಮ್‌ ಹಿಂದಿನ ದಿನ, ಬೇಗ ಮಲಗಬೇಕು, ನೆಮ್ಮದಿಯಾಗಿ ನಿದ್ರೆ ಮಾಡಿದ್ರೆ ಮಾತ್ರ, ಬೆಳಗ್ಗೆ ಮನಸ್ಸು ಪ್ರಶಾಂತವಾಗಿರುತ್ತೆ ಅಂತ. ಜೊತೆಗೆ ಅವರು ಯಾವಾಗಲೂ ಹೇಳ್ತಾಯಿದ್ರು, ಓದುವುದು ನಮ್ಮ ಭವಿಷ್ಯಕ್ಕಾಗಿ, ಹೆತ್ತವರ ಪ್ರತಿಷ್ಠೆ ಹೆಚ್ಚಿಸೋದಕ್ಕಲ್ಲ ಅಂತ. ಹಾಗಾಗಿ ಯಾರ ಅಂಕೆಯಿಲ್ಲದ ದಿನಗಳು. ನಿದ್ರೆಗೆಟ್ಟು ಓದಿದ ನೆನಪಿಲ್ಲ.

ಪರೀಕ್ಷೆ ಒಂದು ತಿಂಗಳಿದೇ ಅನ್ನುವಾಗ, ಕ್ರಾಫ್ಟ್‌ ಟೀಚರ್‌ ಕೈಲಿ ಬೈಸಿಕೊಂಡಿದ್ವಿ. ನಾನು ಹಾಳಾಗೋದಲ್ಲದೇ ಎಲ್ಲರನ್ನು ಹಾಳು ಮಾಡ್ತೀನಿ ಅಂತ. ನಾನು ಪಾಸಾಗೋಲ್ಲ ಅಂತ ಹೇಳಿದ್ರು(ಯಾಕೆಂದ್ರೆ ನನಗೆ ಅವರ ಕ್ಲಾಸ್‌ ಅಂದ್ರೆ ಅಲರ್ಜಿ, ಅವರ ಕ್ಲಾಸ್‌ಗೆ ಹೋಗ್ತಾನೆ ಇರಲಿಲ್ಲ. ಏನಾದರೂ ನೆಪ ಹೇಳಿ ತಪ್ಪಿಸಿಕೊಳ್ತಾಯಿದ್ದೆ). ಸಾಲದ್ದಕ್ಕೆ ಕತೆ ಪುಸ್ತಕ ಓದೋ ಹುಚ್ಚು ಬೇರೆ.

ನನ್ನಕ್ಕ ಒಂದು ಸಲ, ಹೆಡ್‌ಮಿಸ್‌ ಹತ್ತಿರ ಕಂಪ್ಲೆಂಟ್‌ ಮಾಡಿದ್ಲು. ಜಾಸ್ತಿ ಬೇರೆ ಪುಸ್ತಕ ಓದುತ್ತೀನಿ ಅಂತ. ನಿಮಗೆ ಗೊತ್ತಾ, ಮೇಡಂ ಏನು ಹೇಳಿರಬಹುದು ಅಂತ. ಅವರೇಳಿದ್ರು -ಅದಕ್ಕೆ ಅವಳಿಗೆ ಜನರಲ್‌ ನಾಲೆಡ್ಜ್‌ ಜಾಸ್ತಿ. ಓದಿನಲ್ಲಿ ಹಿಂದೆ ಇಲ್ಲದಿರುವಾಗ ತಲೆ ಕೆಡಿಸಿಕೊಳ್ಳೋ ಅಗತ್ಯ ಇಲ್ಲ ಅಂತ.

ಆಮೇಲೆ ನನ್ನ ದೊಡ್ಡಕ್ಕೆ, ಚಾಲೆಂಜ್‌ ಮಾಡಿದಳು. ನಾನು ಫಸ್ಟ್‌ ಕ್ಲಾಸ್‌ನಲ್ಲಿ ಪಾಸ್‌ ಆದ್ರೆ ಎಚ್‌ಎಂಟಿ ವಾಚ್‌ ಕೊಡಿಸ್ತೀನಿ ಅಂತ. ಅವಳಿಗೆ ಕಾನ್ಫಿಡೆನ್ಸ್‌, ಕತೆ ಪುಸ್ತಕ ಓದೋ ನಾನು, ಈ ಚಾಲೆಂಜ್‌ ಗೆಲ್ಲೋಕಾದ್ರೂ ಪಠ್ಯ ಪುಸ್ತಕ ಓದ್ತೀನಿ ಅಂತ. ಆದರೂ ಪ್ರಯೋಜನ ಏನು ಆಗಿರಲಿಲ್ಲ. ಸೈನ್ಸ್‌ ಎಕ್ಸಾಮ್‌ ದಿವಸ ಅಕ್ಕನದ್ರ ಇದ್ದ ‘ಹೊಸ ನೀರು’ ಕತೆ ಪುಸ್ತಕ ಕಂಪ್ಲೀಟ್‌ ಮಾಡಿದ್ಮೇಲೆ ಸ್ಕೂಲ್‌ ಕಡೆ ಮುಖ ತಿರುಗಿಸಿದ್ದು.

ಫಲಿತಾಂಶದ ಹಿಂದಿನ ದಿನ, ಫ್ರೆಂಡ್ಸ್‌ ಬಂದು ನಾಳೆ ರಿಸಲ್ಟ್‌ ಅಂತ ಹೇಳಿದ್ರು. ಎಂಥಾ ಆತ್ಮವಿಶ್ವಾಸ ನನ್ನದು. ನಾನು ಪಾಸಾಗಿಲ್ಲ ಅಂದ್ರೆ ಬೇರೆ ಯಾರು ಆಗ್ತಾರೆ ಅನ್ನೋ ಭಂಡ ಧೈರ್ಯ. ಸಂಜೆ ಶಾಲೆಗೋದ್ವಿ. ನನ್ನನ್ನು ನೋಡಿದ ಕ್ಲಾಫ್ಟ್‌ ಟೀಚರ್‌, ಬೇರೆ ಎಲ್ಲಾ ಟೀಚರ್ಸ್‌ನ ಕರೆದು ಹೇಳಿದ್ರು, -ಇವಳ ಧೈರ್ಯ ನೋಡಿ, ನಾಳೆ ಫಲಿತಾಂಶ ಅಂದ್ರೆ, ಇವತ್ತೇ ಸ್ಕೂಲ್‌ಗೆ ಬಂದಿದ್ದಾಳೆ.

Yes of course I had completed my exams with 87% (highest scorer of the school, and scoring above 80% was great at that time) and all my friends were through with 1st class. the same craft teacher said with full smile, that she was fully confident that I will complete my exams with colourfull wings.

ಆದರೇ ಅದೇ ನಾನು ನನ್ನ ಮಗಳ(ಪ್ರೆೃಮರಿ ಸ್ಕೂಲ್‌) ಎಕ್ಸಾಂ ಬಗ್ಗೆ ನಿದ್ರೆಗೆಟ್ಟು ತಲೆ ಕೆಡಿಸಿಕೊಳ್ತೇನೆ. ಎಂಥಾ ವಿಪರ್ಯಾಸ ಅಲ್ವಾ?

- ಜಯಲಕ್ಷ್ಮಿ. ಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X