ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸರಿಗಮಪ’ದಲ್ಲಿ ಎಂ.ಡಿ.ಪಲ್ಲವಿ ಹೀಗೆ ವರ್ತಿಸಬಾರದಿತ್ತು!

By Staff
|
Google Oneindia Kannada News


ನಮಸ್ಕಾರ,

ಅಂತೂ ಚಿನ್ಮಯಿ ಅವರ ಆಯ್ಕೆಯಿಂದಾಗಿ ಸರಿಗಮಪ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು. ಜೀಟೀವಿಯಲ್ಲಿ ನೇರ ಪ್ರಸಾರವಾದ ಕಾರ್ಯಕ್ರಮದಲ್ಲಿ ಎಸ್‌. ಜಾನಕಿ ಮತ್ತು ಆರ್‌.ಎನ್‌. ಜಯಗೋಪಾಲ್‌ ಅವರ ದರ್ಶನ ಭಾಗ್ಯದೊರೆಯಿತು ನನಗೆ. ಥ್ಯಾಂಕ್ಸ್‌.

ಎಲ್ಲಾ ಸರಿ ಆದರೆ, ಪಲ್ಲವಿಯವರು ಜಾನಕಿಯವರ ಹಾಡು ಕೇಳಲಿಕ್ಕೆ ಸಭಾಂಗಣದಲ್ಲಿ ನೆರೆದವರೆಲ್ಲರನ್ನೂ ನಿಂತುಕೊಳ್ಳಿ ಎಂದು ಆದೇಶ ಕೊಟ್ಟಿದ್ದರ ಔಚಿತ್ಯ ನನಗರ್ಥವಾಗಲಿಲ್ಲ. ಜಾನಕಿ ಅತ್ಯುತ್ತಮ ಗಾಯಕಿ ಹೌದು. ಆದರೆ standing ovation ಕೊಡುವ ಸಂದರ್ಭ ಇದಾಗಿರಲಿಲ್ಲ ಎಂದು ನನ್ನ ಅನಿಸಿಕೆ.

ಎದ್ದು ನಿಂತು ಗೌರವಸೂಚಿಸುವ ಉತ್ಸಾಹ ತಂತಾನೆ ಬರಬೇಕೆ ವಿನಾ ಇನ್ನೊಬ್ಬರ ಸ್ಫೂರ್ತಿಯಿಂದ ಆಗಬಾರದು. ಪಲ್ಲವಿಯವರಿಗೆ ಜಾನಕಿ ಬಗ್ಗೆ ಅಪಾರ ಗೌರವವಿರಬಹುದು. ಆದರೆ, ಕೇಳುಗರನ್ನು ನಿಲ್ಲಲು ಹೇಳಿ ಅವರಿಗೆ ಗೌರವ ಸೂಚಿಸುವ ಪ್ರಮೇಯ ತಮಾಷೆಯಾಗಿತ್ತು. ಬೆಳೆಯುತ್ತಿರುವ ಪ್ರತಿಭೆ ಪಲ್ಲವಿ ಅವರಿಗೆ, ಜಾನಕಿಯ ಕೈವಸ್ತ್ರ ಆಗಲು ಇಷ್ಟವಿರಬಹುದು. ಆದರೆ ಆ ವಸ್ತ್ರದ ನೂಲು ನಾವೇಕೆ ಆಗಬೇಕು?

ಹಿನ್ನೆಲೆ : ಜಾನಕಿಯವರ ಕರ್‌ಚೀಫ್‌ ತಾವಾಗಬೇಕೆಂಬ ಆಸೆಯನ್ನು ಪಲ್ಲವಿ ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದ್ದರು. ಹ ಹಾ..

-ರಾಧಿಕಾ, ಬೆಂಗಳೂರು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X