ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಪ್ರಯಾಣ ಹಾಗೂ ನಮ್ಮೂರ ಬಸ್ಸು!

By Staff
|
Google Oneindia Kannada News


ಪ್ರಪಂಚ ಎಲ್ಲ ಸುತ್ತಿ-ಬಂದರೂ ನಮ್ಮೂರೇ ಚೆನ್ನ, ನಮ್ಮೋರೇ ಚೆನ್ನ, ನಮ್ಮೂರೆ ಚೆನ್ನ.

ಮಿತ್ರರೇ,

ಏನೋ ಈ ಕಂಪ್ಯೂಟರ್‌ನ ಕಟ್ಟಿಕೊಂಡು ವಿಮಾನದಲ್ಲಿ ಸುತ್ತುವದಕ್ಕಿಂತ ನಮ್ಮೂರ ಬಸ್ಸಿನ ಫುಟ್‌ ಬೋರ್ಡ್‌ ಪ್ರಯಾಣವೇ ಲೇಸು ಅನಿಸುತ್ತೆ. ಈ ಉಸಿರು ಕಟ್ಟಿಸುವ ಟೈ ಕಟ್ಟಿಕೊಂಡು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ, ಅಮೇಲೆ ಟ್ರಾನ್ಸಿಟ್‌ ಅಂತೆಲ್ಲಾ ನಿದ್ದೆಗೆಟ್ಟು ವೇಳೆ ಕಳೆಯೋದು ನನಗಂತೂ ಯಮ-ಯಾತನೆ ಅನಿಸುತ್ತೆ.

A Private Busಮಜಾ ನೋಡಿ, ಅದೇ ನಮ್ಮೂರ ಬಸ್ಸು ಅರ್ಧ ಗಂಟೆ ತಡವಾದರೆ ನಾವು ಬಾಯಿಗೆ ಬಂದ ಹಾಗೆ ಶಾಪ ಹಾಕುತ್ತೇವೆ. ಬಸ್ಸಿಗೆ ನಾವು ಕೊಡುವ ದರ, ನಮ್ಮ ಜನ-ಜಂಗುಳಿ, ಭೃಷ್ಟಾಚಾರ ಇತ್ಯಾದಿಗಳನ್ನೆಲ್ಲ ಗಣನೆಗೆ ತೆಗೆದುಕೊಂಡರೆ ನಮ್ಮ ಸಾರಿಗೆ ವ್ಯವಸ್ಥೆ ಓಕೆ ಅನಿಸುತ್ತೆ ಅಲ್ಲವೇ?

ವಿಮಾನ ನಿಲ್ದಾಣದಲ್ಲಿ ದಿನವಿಡೀ ಕಳೆದರೂ ನಾವು ನಾಲ್ಕು ಮಾತನಾಡಿರೋಲ್ಲ. ಎಲ್ಲಾ ಟೈ ಕಟ್ಟಿಕೊಂಡು ಮೌನವೃತ ಆಚರಿಸುವವರೇ ಜಾಸ್ತಿ. ಅದೇ ನಮ್ಮ ಬಸ್‌ ಸ್ಟ್ಯಾಂಡ್‌ನಲ್ಲಿ ಇಡೀದಿನ ಕಳೆದರೂ ಗೊತ್ತಾಗೊದೇ ಇಲ್ಲ. ಪರಿಚಿತರು, ಅಪರಿಚಿತರು ಎಲ್ಲರ ಜೊತೆನೂ ಪಟ್ಟಾಂಗ ಹೊಡೆಯಬಹುದು. ಕಾಲೇಜ್‌ ಹುಡುಗರಿಗಂತೂ ಬಸ್‌ ಸ್ಟಾಂಡ್‌ ಅಂದರೆ ಪಂಚಪ್ರಾಣ. ಸಾರಿಗೆ ವ್ಯವಸ್ಥಾಪಕರಿಗಿಂತ ಇವರಿಗೆ ಬಸ್‌ ಬರುವ ಹೋಗುವ ವೇಳೆ ಬಾಯಿಪಾಠವಾಗಿರುತ್ತದೆ. ಅದರಲ್ಲೂ ‘ಫಿಗರ್‌’ ಗಳು ಇರುವ ಬಸ್‌ಗಳ ಕಡೆಯಂತೂ ವಿಶೇಷ ಗಮನ!

ಒಮ್ಮೆ ಜೊಹಾನ್ಸಬರ್ಗ್‌ ನಿಂದ ಕೇಪ್‌ ಟೌನ್‌ಗೆ ಪ್ರಯಾಣ ಮಾಡುವಾಗ ವಿಮಾನ ಸರಿಯಾದ ಸಮಯಕ್ಕೆ ಗಮ್ಯ ಸ್ಥಳ ತಲುಪಿತು. ಸೋಜಿಗದ ಸಂಗತಿ ಎಂದರೆ ಹವಾಮಾನ ವೈಪರೀತ್ಯ, ತಾಂತ್ರಿಕ ತೊಂದರೆ ಏನೂ ಇಲ್ಲ. ಆದರೂ ನಾವು ವಿಮಾನದಿಂದ ಇಳಿಯಲಾಗುತ್ತಿಲ್ಲ . ಏಕೆ ಗೊತ್ತೆ? -ವಿಮಾನದಿಂದ ಕೆಳಗೆ ಇಳಿಯುವ ಏಣಿಯೇ ಬಂದಿರಲಿಲ್ಲ!! ನಾವೆಲ್ಲ ನಗುತ್ತ ಹಾಗೆ 20 ನಿಮಿಷ ಕಾಯುತ್ತ ಕುಳಿತಿದ್ದೆವು.

ನನ್ನ ಗೆಳೆಯ ಅರುಣ್‌ ಪಡಕಿ ಹೇಳುವಂತೆ, ಅದೇ ನಮ್ಮ ಜನರೇ ಆಗಿದ್ದರೆ ಗೊಣಗುತ್ತ ಹಿಡಿ ಶಾಪ ಹಾಕುತ್ತ ಕೂಗಾಡುತ್ತಿದ್ದೆವು. ಏಕೋ ಒಮ್ಮೊಮ್ಮೆ ನಾವು ಸುಮ್ಮನೆ ಸರ್ಕಾರವನ್ನು ಎಲ್ಲದಕ್ಕೂ ಬೈಯುತ್ತ ಕೂರುವ ಬದಲು, ನಮ್ಮ ಕೈಯಲ್ಲಿ ಈ ವ್ಯವಸ್ಥೆಯನ್ನು ಇನ್ನೂ ಸುಧಾರಿಸುವುದು ಹೇಗೆ ಎಂದು ಯೋಚಿಸುವದು ಒಳಿತು ಎಂದು ಅನಿಸುತ್ತೆ.

ಓಹ್‌ ನನ್ನ ಬಸ್‌ಗೆ ಟೈಮ್‌ ಆಯ್ತು. ಕರ್ಚಿಫ್‌ ಎಸೆದು ಸೀಟು ಹಿಡಿಯಬೇಕು! ಮತ್ತೆ ಸಿಗೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X