ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ಸಮುದ್ರದಾಚೆಯಿಂದ ಜಯಶ್ರೀ ಅಜ್ಜಿ ಬರೆದುಕೊಂಡ ಪತ್ರವು...

By Staff
|
Google Oneindia Kannada News


ಕನ್ನಡವನ್ನೇ ಉಸಿರಾಗಿಸಿಕೊಂಡ ಹಿರಿಯಜೀವವೊಂದು ಸಪ್ತಸಾಗರಗಳಾಚೆಯಿಂದ ಕೂಗುತ್ತಿದೆ.. 75 ವರ್ಷಗಳಿಂದ ಕನ್ನಡಸೊಗಡಿನಲ್ಲೇ ಜೀವಿಸುತ್ತಿರುವ ಈ ಅಜ್ಜಿ, ಕನ್ನಡ ಕುಲಬಾಂಧವರಲ್ಲಿ ಏನನ್ನೋ ಅರಿಕೆ ಮಾಡಿಕೊಳ್ಳುತ್ತಿದ್ದಾರೆ.... ದೂರದಲ್ಲಿ ಯಾರೋ.. ಹಾಡುಹೇಳಿದಂತೆ...ಕೇಳಿಸುತ್ತಿದೆ...!!!

Chip of the old block : Jayashree Rajaram, (75) Oregonದಟ್ಸ್‌ಕನ್ನಡ ಓದುಗರ ಗಮನಕ್ಕೆ,

ಕರ್ನಾಟಕವೆಂದು ಹುಟ್ಟಿ ಈಗ 50 ವರ್ಷಗಳಾದವು. ನಮ್ಮವರು ಕನ್ನಡದ ಹಳೆಯ ಬರಹಗಾರರನ್ನು ಹುಡುಕಿ ಹುಡುಕೀ ಸನ್ಮಾನಿಸಲು ಹೊರಟಿರುವುದು ಹೃದಯಾನಂದಕರವಾದ ಮಾತು. ಆದರೆ, ಈ ಆದರಿಕೆ ಅನುಭವಿಸಲು ಕೇಳಿಬಾರದವರೆಷ್ಟೋ ಮಂದಿ ಸ್ವರ್ಗದಿಂದ ಇಣುಕಿ ನೋಡುತ್ತಿರಬಹುದು!

ಮತ್ತೊಂದು ಕಣ್ಣೀರ ಮಾತೆಂದರೆ, ಈಗಲೂ ತಮ್ಮ ತನು ಮನವನ್ನು ಕನ್ನಡಮ್ಮನ ಸೇವೆಗಾಗಿ ಮುಡಿಪಿಟ್ಟು ಕಡೆತೀರದಲ್ಲಿ ಒದ್ದಲಾಡುತ್ತಿರುವ ಬರಹಗಾರರಿಗೆ ಒಂದು ಅಮೂಲ್ಯ ಅವಕಾಶ ಮತ್ತೊಮ್ಮೆ ಜೀವ ಕೊಡುವುದಾದರೆ ಅದೆಂತಹ ಸಗ್ಗದ ಮಾತಲ್ಲವೆ? ಅಂತಹವರು ನೆರವು ಬಯಸಿದರೆ ತಪ್ಪಿಲ್ಲವೆನಿಸುತ್ತದೆ.

ಮಗದೊಂದು ಮಾತು. ದೂರ ಬಹುದೂರ ಸಾಗರಗಳಾಚೆ ಬಂದರೂ ತಾಯ ಮೋಹದಿಂದ ಬಳಲುತ್ತಿರುವ ಅನಿವಾಸಿ ಕನ್ನಡಿಗ ಬರಹಗಾರರಿಗೆ ನೆರವು ಬೇಕೆಂದು ಕೇಳಬೇಕಾಗಿದೆ. ನಾನೂ ಅಂತಹ ಒಬ್ಬ ಬರಹಗಾತಿ. ಬೆಂಗಳೂರು ಚಾಮರಾಜಪೇಟೆ (ಈಗಿನ ಸಿಟಿ ಇನ್‌ಸ್ಟಿಟ್ಯೂಟ್‌ ಎದುರು) ಮಕ್ಕಳಕೂಟದ ತೊಟ್ಟಿಲು ಹಬ್ಬಕ್ಕೆ, ಶ್ರೀಮತಿ ಆರ್‌. ಕಲ್ಯಾಣಮ್ಮ ನವರ ನೇತೃತ್ವದಲ್ಲಿ ನಡೆದ ಸಮಾರಂಭದ ಮೊದಲ ನೃತ್ಯ ನನ್ನದಾಗಿತ್ತು. ಶಂಕರಯ್ಯ ಹಾಲ್‌ನಲ್ಲಿ ಅದು ನಡೆದಾಗ , ಟೆನ್‌ ಸ್ಕೂಲಿನ ಮಕ್ಕಳು , ಶ್ರೀಮತಿ ಕಲ್ಯಾಣಮ್ಮ, ಕೆಲವು ಅಧ್ಯಾಪಕರು, ಆಚಾರ್ಯಪಾಠಶಾಲೆಯಿಂದ ನಾವು ಕೆಲವು ಮಂದಿ ಮಾತ್ರ ಇದ್ದೆವು.

ಅಂದಿನಿಂದ ಕತೆಗಾರ, ಜೀವನಪ್ರಕಾಶ, ಸಂಯುಕ್ತ ಕರ್ನಾಟಕ, ಜನವಾಣಿ, ಸುಧಾ, ಸ್ತ್ರೀರತ್ನ ಮುಂತಾದ ಪತ್ರಿಕೆಗಳಲ್ಲಿ ನನ್ನ ಕತೆ, ಕಾದಂಬರಿ, ಕವನಗಳು ಬರುತ್ತಿದ್ದವು. ಸುಧಾದಲ್ಲಿ ಬಂದ ‘ಕೋಲು ಕೋಲಣ್ಣ ಕೋಲೆ’ ಗೆ ಮೆಚ್ಚಿ ಬಹಳಷ್ಟು ಮಂದಿ ಪ್ರೋತ್ಸಾಹ ನೀಡಿದರು. ಅವರಲ್ಲಿ ಶ್ರೀಯುತ ಮಾಸ್ತಿಯವರು, ಶ್ರೀಮತಿ ಶಾರದಾ ಜಡೆ, ಶ್ರೀಮತಿ ಸುನಂದಮ್ಮನವರು ಪ್ರಮುಖರು. ಹೆಣ್ಣು ಹೆತ್ತವರೆಲ್ಲಾ ಅಭಿನಂದಿಸಿದ್ದಾರೆ.

ನಂತರ ಕೇಂದ್ರ ಸರಕಾರದ ಬಹುಮಾನ ಗಳಿಸಿದ ‘ಒಲವಿನ ಕರೆ’ಗೆ ಓಗೊಡದವರಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ವರ್ಷದಲ್ಲಿ ಮಕ್ಕಳ ಪುಸ್ತಕಗಳಾಗಿ ನನ್ನ ಎರಡು ಪುಸ್ತಕ ಎರಡೆರಡು ಸಲ ಪ್ರಕಟಿಸಿ ಓದುಗರಿಗೆ ನೀಡಿದ್ದಾರೆ. ಎಲ್‌. ಎಸ್‌. ಶೇಷಗಿರಿರಾಯರು ಹಂದರಕ್ಕೆ ಕತೆ ಹೊಂದಾಣಿಕೆ, ‘ಕತೆಗಾರ’ದಲ್ಲಿ ಬಹುಮಾನಗೊಂಡ ‘ಗೂಢಚಾರಿಣಿ ’ಯನ್ನು ಬೆಂಗಳೂರು ನಗರದ ಪೊಲೀಸ್‌ ಇಲಾಖೆ ಇಂದಿಗೂ ಹುಡುಕುತ್ತಿರಬೇಕು !

ಆದರೆ, ಇಂದು ನಾನು ಕಣ್ಣಿನಿಂದ ದೂರ, ಮನದಿಂದಲೂ ದೂರ ಅನ್ನುವಂತಾಗಿ ಪರನಾಡಿನಲ್ಲಿ ಪರದಾಡುತ್ತಿರುವೆ. ಆದರೂ ಕೆ.ವಿ. ಪುಟ್ಟಪ್ಪನವರ ಮಾತಿನಂತೆ ಎಲ್ಲಿದ್ದರೂ ಎಂತಿದ್ದರೂ ನೀ ಕನ್ನಡವಾಗಿರು, ಶ್ರೀಗಂಧವಾಗಿರು ಅನ್ನುವಂತೆ, ಈಗಲೂ ಇಲ್ಲಿನ ನಮ್ಮ ಭಾರತೀಯ ಮಕ್ಕಳಿಗಾಗಿ 70ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿ ಅವರ ಕೈಯಲ್ಲಿ ಆಡಿಸಿ ಆನಂದಿಸಿರುವೆ.

ನನ್ನ ಗುಡ್ಡೆ ಬಿದ್ದಿರುವ ಸಾಹಿತ್ಯ ರಚನೆಯನ್ನು ಅಚ್ಚು ಮೂಲಕ ಹೊರತರಲು ನಮ್ಮ ಮುದ್ರಣಕಾರರು ಮುಂದೆಬರುವರೆ? ಪಬ್ಲಿಷರು ಕೈಚಾಚಿ ಸಹಾಯ ಮಾಡುವರೆ? ಎಂದು ಕೇಳಬಹುದೆ?

ಇಂತೀ,

ಶ್ರೀಮತಿ ಜಯಶ್ರೀ ರಾಜಾರಾಂ, ಅಲ್ಬೇನಿ, ಅರೇಗಾನ್‌, ಯು.ಎಸ್‌.ಎ.

  • ನನ್ನ ಇ-ಮೇಲ್‌ ಅಡ್ರೆಸ್ಸು M್ಕಚ್ಜ228146ಃಚಟ್ಝ.್ಚಟಞ
  • ಫೋನು ನಂಬರು : (1.541-791-3902), (1.678-682-9737), (1.716-689-7304)
  • ಬೆಂಗಳೂರಿನದು : 080-23619681, 080-23313633
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X