ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಗಂಧದ ಗುಡಿ’ ಅಂ. ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾಗತ

By Staff
|
Google Oneindia Kannada News


ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕುವೆಂಪು, ವಿಶ್ವೇಶ್ವರಯ್ಯ, ಟಿಪ್ಪೂ, ದೇವೇಗೌಡ, ಸೋನಿಯಾ ಗಾಂಧಿ -ಹೀಗೆ ನಾನಾ ಮಂದಿಯ ಹೆಸರುಗಳು ಕೇಳಿ ಬರುತ್ತಿವೆ. ಆದರೆ ನನ್ನದೊಂದು ಸಲಹೆ. ನಿಮಗಿದು ಒಪ್ಪಿಗೇನಾ?

ಇದು ಇತ್ತೀಚೆಗೆ ಭಾರತೀಯ ವಿಮಾನ ಕಾರ್ಖಾನೆ ಆವರಣದಲ್ಲಿ ನಡೆದ ಘಟನೆ. ಪರರಾಜ್ಯದ ಗುತ್ತಿಗೆದಾರನೊಬ್ಬ ಕನ್ನಡಿಗ ಗುತ್ತಿಗೆ ಕಾರ್ಮಿಕರನ್ನು ಗುಳೇ ಎಬ್ಬಿಸಿದ. ಕಡಿಮೆ ಸಂಬಳಕ್ಕೆ ತನ್ನ ರಾಜ್ಯದಿಂದಲೇ ಕೆಲಸಗಾರರನ್ನು ಕರೆತಂದು ನೇಮಿಸಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿ ಆಕ್ರೋಶಕ್ಕೊಳಪಡಿಸಿದ. ಈ ಸಂಗತಿಯನ್ನು ನಾವು ಜೀರ್ಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.

ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರ ಕನ್ನಡ ಪರ ಸಂಘಟನೆಗಳು ಕಾರ್ಯೋನ್ಮುಖರಾಗಿ ಪ್ರತಿಭಟನೆ ನಡೆಸಿ ಹೊಸ ಗುತ್ತಿಗೆದಾರನನ್ನು ತಡೆಹಿಡಿದು ಕನ್ನಡ ಕಾರ್ಮಿಕರಿಗೆ ಮತ್ತೆ ಕೆಲಸ ದೊರಕಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವುದು ಒಂದೆಡೆ ಸಂತಸವಾದರೂ, ಕನ್ನಡಿಗರ ಹಿತಕ್ಕೆ ಮಾರಕವಾಗುವ ಇಂತಹ ಸನ್ನಿವೇಶಗಳಿಗೆ ನಮ್ಮ ಅಧಿಕಾರಿಗಳು, ಆಡಳಿತಗಾರರು, ಯಾವುದೇ ರೀತಿಯಲ್ಲಿ ಸ್ಪಂದಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಯಥಾಪ್ರಕಾರ ವಿಷಾದಕರ.

ಇದರ ಬೆನ್ನಲ್ಲೇ ದೇವನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಬೆಂಗಳೂರಿನ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾವ ಹೆಸರಿಡಬೇಕು ಎಂಬ ವಿಷಯ ಮಾಧ್ಯಮಗಳಲ್ಲಿ ಈಗಾಗಲೇ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ.

ಕನ್ನಡದ ನಾಡು ನುಡಿ ಕಟ್ಟಲು ಶ್ರಮಿಸಿದ ಕೆಂಪೇಗೌಡ, ವಿಶ್ವೇಶ್ವರಯ್ಯ, ಟಿಪ್ಪೂ, ಬಸವಣ್ಣ, ಕುವೆಂಪು, ದೇವೇಗೌಡ, ರಾಜಕುಮಾರ್‌ ಇತರ ಮಹನೀಯರ ಹೆಸರುಗಳು ತೇಲಿ ಬರುತ್ತಿರುವುದು ಸಂತಸವೇ! ಕನ್ನಡದ ಒಂದು ಹೆಸರು ಅಲ್ಲಿ ರಾರಾಜಿಸಬೇಕು ಎಂಬುದೇ ಕನ್ನಡಿಗರೆಲ್ಲರ ಆಶಯವೂ ಸಹ. ಆದರೆ ಇವರಲ್ಲಿ ಎಲ್ಲರೂ ಧೀಮಂತರೆ ಮತ್ತು ಎಲ್ಲರಿಗೂ ಆ ಗೌರವದ ಅರ್ಹತೆಯಿದೆ.

ಕನ್ನಡದ ಒಂದು ಹೆಸರನ್ನು ಅನುಮೋದಿಸುವುದರ ಜತೆಗೆ ಈಗಿನ ಹಳೆಯ ವಿಮಾನ ನಿಲ್ದಾಣದ ವಿದ್ಯಮಾನವನ್ನು ಗಮನಿಸಿ, ಮೊದಲಿಗೆ ಸಮಸ್ತ ಕನ್ನಡಿಗರೆಲ್ಲರೂ ಎಚ್ಚರಗೊಂಡು, ನಿರ್ಮಾಣವಾಗುತ್ತಿರುವ ಹೊಸ ವಿಮಾನ ನಿಲ್ದಾಣದಲ್ಲಿ ಸರ್ಕಾರ ಸಂಪೂರ್ಣ ಕನ್ನಡ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಆಗ್ರಹ ಪಡಿಸಬೇಕು.

ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ವಿಮಾನ ನಿಲ್ದಾಣ ಪ್ರಾಧಿಕಾರ, ಸ್ಥಳೀಯ ಮತ್ತು ವಿದೇಶದ ವಿಮಾನ ಸಂಸ್ಥೆಗಳು, ಜಾಹೀರಾತು ಸಂಸ್ಥೆಗಳು, ಗುತ್ತಿಗೆದಾರರು, ವಿದೇಶಾಂಗ ಮತ್ತು ವಲಸೆಗೆ ಸಂಬಂಧಿಸಿದ ಕಚೇರಿಗಳು ಐಞಞಜಿಜ್ಟಚಠಿಜಿಟ್ಞ ಮತ್ತು ಇತರೆ ಯಾವುದೇ ಆಡಳಿತ ಯಂತ್ರಗಳು ಸಂಪೂರ್ಣವಾಗಿ ಕನ್ನಡದಲ್ಲಿ ವ್ಯವಹರಿಸಬೇಕು. ಇಂತಹ ವಾತಾವರಣವನ್ನು ನಮ್ಮ ಸರ್ಕಾರ ಕಟ್ಟುನಿಟ್ಟಿನ ಆದೇಶ ಮತ್ತು ಕಾನೂನು ಜಾರಿ ಮೂಲಕ ಸೃಷ್ಟಿಸಬೇಕು. ಇತರರಿಂದ ಹೇಳಿಸಿಕೊಳ್ಳದೆ, ಈ ಕಾಳಜಿ ನಮ್ಮ ಸರ್ಕಾರಿ ಅಧಿಕಾರಿಗಳಲ್ಲಿ ಸಹಜವಾಗಿ ಜಾಗೃತವಾಗಿರಬೇಕು.

ನಾಡು ನುಡಿಗೆ ಶ್ರಮಿಸಿದ ಎಲ್ಲಾ ಗಣ್ಯರ ಮತ್ತು ಇಲ್ಲಿನ ಸ್ಥಳೀಯ ಸಂಸ್ಕೃತಿ ಪರಿಚಯಿಸುವ ಕಲಾಕೃತಿ, ಬರಹ, ಕೆತ್ತನೆ, ಪುತ್ಥಳಿಗಳ ಸ್ಥಾಪನೆ ವಿಮಾನ ನಿಲ್ದಾಣದ ಆವರಣ-ಪಡಸಾಲೆಗಳಲ್ಲಿ ಮೂಡಿಸುವ ಪ್ರಯತ್ನ ನಡೆಸಬೇಕು. ವಿಮಾನ ನಿಲ್ದಾಣಕ್ಕೆ ಎಲ್ಲಾ ವರ್ಗ-ಜಾತಿ-ಪಂಗಡಗಳೂ ಸಮ್ಮತಿ ಸೂಚಿಸಬಹುದಾದ, ಕರ್ನಾಟಕದ ಹೆಮ್ಮೆಯನ್ನು-ಸುವಾಸನೆಯನ್ನು ಸೂಸುವ, ನೈಸರ್ಗಿಕವಾದ, ಒಂದು ಸಮಾನ ವೈಶಿಷ್ಟ್ಯವುಳ್ಳ ‘ಗಂಧದ ಗುಡಿ’ ಹೆಸರನ್ನು ನಾನಿಲ್ಲಿ ಸೂಚಿಸುತ್ತಿದ್ದೇನೆ.

ಹೊಸ ವಿಮಾನ ನಿಲ್ದಾಣಕ್ಕೆ ನಾವು ಕಾಲಿಡುತ್ತಿದ್ದಂತೆಯೇ ‘ಚಿನ್ನದ ನಾಡು-ಗಂಧದ ಬೀಡು ಭಾರತದ ಗಂಧದ ಗುಡಿ ವಿಮಾನ ನಿಲ್ದಾಣಕ್ಕೆ ನಿಮಗೆಲ್ಲ ಆತ್ಮೀಯ ಸ್ವಾಗತ ’ ಎಂಬ ಘೋಷಣೆ ಮಧುರವಾದ ಸ್ವರದಲ್ಲಿ ಹೊರಡುತ್ತಿದ್ದರೆ ಎಂತಹ ಮಜವಿರುತ್ತದೆ ಎಂದು ನಿಮಗನಿಸುತ್ತಿಲ್ಲವೆ!

ಈ ಗಂಧದ ಗುಡಿ ಹೆಸರನ್ನಿಡುವುದರಿಂದ, ಕನ್ನಡ ಬಲ್ಲವನಿಗೆ ವಿಮಾನ ನಿಲ್ದಾಣದಲ್ಲಿ ಕೆಲಸ ಮತ್ತು ಕನ್ನಡದ ಕಂಪನ್ನು ಇತರ ಭಾರತೀಯರಿಗೆ ಮತ್ತು ವಿದೇಶಿಯರಿಗೆ ತಲುಪಿಸುವ ಪ್ರಯತ್ನ ಸಾಧ್ಯವಾಗುತ್ತದೆ. ಒಬ್ಬರನ್ನು ಒಬ್ಬರು ಅರಿತುಕೊಳ್ಳುವ, ವೈವಿಧ್ಯತೆಯನ್ನು ಬೆಸೆಯುತ್ತ ದೇಶದ ಏಕತೆಯನ್ನು ಸಾರುವ ಬಹುದೊಡ್ಡ ಸಾಧನ ಸಹ ಇದಾಗಿದೆ ಎಂದು ನಮ್ಮ ಸರ್ಕಾರ ಅರಿಯಬೇಕಿದೆ.

ನಿಮ್ಮ ಗಮನಕ್ಕಾಗಿ ಈ ಮಾಹಿತಿ »


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X