ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮೈಸೂರಿಗೆ ಕೆಟ್ಟ ಹೆಸರು ಬರಬಾರದು..’

By Staff
|
Google Oneindia Kannada News


ಹಿನ್ನೆಲೆ : ನಾನು , ಮೈಸೂರಿನವರಾದ ಗಿರಿ, ಅವಿನಾಶ ಎಲ್ಲಾ ಸೇರಿ ಗುರಂಗಾವದ ಮಿತ್ರನಾದ ರಿಷಿ ಜೊತೆ, ಮೊನ್ನೆ ಮೈಸೂರಲ್ಲಿ ಸುತ್ತಾಡಿದೆವು. ಮೈಸೂರು ಅರಮನೆ ಒಳಭಾಗವೆಲ್ಲಾ ಸುತ್ತಾಡಿ, ಅವರಣದಲ್ಲಿರುವ ಚಪ್ಪಲಿ ಸ್ಟ್ಯಾಂಡಿನ ಬಳಿಗೆ ಬಂದಾಗ...

Mysore Palace‘ಎಲ್ಲಯ್ಯಾ ನನ್ನ ಚಪ್ಪಲಿ? ನಾವು ನಾಲ್ಕು ಜೊತೆ ಚಪ್ಪಲಿಗೆ ಟೋಕನ್‌ ತಗೊಂಡಿದ್ವಿ. ಈಗ ನೋಡಿದರೇ ಮೂರು ಜೊತೆ ವಾಪಸ್ಸು ಕೊಡ್ತಾ ಇದೀಯಾ. ಇಲ್ಲಿ ಯಾಕೆ ಕೆಲ್ಸಾ ಮಾಡ್ತಾ ಇದೀಯಾ?’ ಅಂತ ಅವಿನಾಶ ಚಪ್ಪಲಿ ಕಾಯುವವನ ಜೊತೆ ವಾದ ಮಾಡ್ತಾ ಇದ್ದ.

ಚಪ್ಪಲಿ ಕಾಯುವವನು ‘ ಸೋಮಿ, ನಿಮ್ಮ ಕಾಲು ಹಿಡಕೋತಿನಿ, ಹೆಂಗಾರ ಅಡ್ಜುಸ್ಟ್‌ ಮಾಡಿಕೊಳ್ಳಿ’

‘ಅಡ್ಜುಸ್ಟ್‌ ಹೇಗೆ ಮಾಡಕೊಳ್ಳದು? ನೀ ಇರೋದು ಯಾಕೆ ಇಲ್ಲಿ? ನಿನಗೆ ಕಾಸು ಕೊಡದು ಚಪ್ಪಲಿ ಕಾಯಾಕೆ ತಾನೆ? ನಾಲ್ಕು ಜೊತೆಯಲ್ಲಿ ಕಾಸ್ಟ್ಲಿಯಿರೋ ನಂದೇ ಚಪ್ಪಲಿ ಯಾಕೆ ಕಳಿಬೇಕು...ಕಳದರೇ ಎಲ್ಲಾ ಜೊತೆ ಕಳಿಬೇಕು’

‘ಇಲ್ಲೇ ಮೇಲಿನ ಸಾಲುನಲ್ಲಿ ಇಟ್ಟಿದ್ದೆ. ಯಾರೋ ಹುಡಗರು ಎತ್ಕೋಂಡು ಹೋದ್ರು....’

ಅವಿನಾಶ ಒಳಗಡೆ ಹೋಗಿ ಚಪ್ಪಲಿಗಳ ಸಾಗರದಲ್ಲಿ ತನ್ನ ಚಪ್ಪಲಿ ಹುಡಕಲು ಶುರು ಮಾಡಿದ... ಜೊತೆಗೆ ಇದ್ದ ನಾವು ಅವನಿಗೆ ಸಹಾಯ ಮಾಡತೊಡಗಿದೆವು. ನನಗೆ ಮತ್ತು ಗಿರಿಗೆ ಚಪ್ಪಲಿ ಮಾತ್ರ ಕದ್ದೊಯ್ದಿದಾರೆ ಅಂತ ಖಂಡಿತವಾಗಿ ಅನಿಸತೊಡಗಿತು. ಇದೇ ಸಮಯದಲ್ಲಿ ಒಂದು ಅಂಧ್ರದ ಗ್ಯಾಂಗು ತಮ್ಮ ಎರಡು ಜೊತೆ ನೈಕೆ ಶೂಸ್‌ ಕಾಣ್ತಾ ಇಲ್ಲಾ ಅಂತ ಹುಡಕಲು ಶುರು ಮಾಡಿದಾಗ, ಅವಿ ಅವರ ಜೊತೆ ಸೇರಿ ಮತ್ತೆ ಗಲಾಟೆ ಶುರು ಮಾಡಿದ.

ಆಗ ಅಲ್ಲಿದ್ದ ಖಾಕಿ ಮೀಸೆ ಬಂದು ‘ಗಲಾಟೆ ಯಾಕೆ? ’ ಅಂದದ್ದೇ ತಡಾ, ಚಪ್ಪಲಿ ಕಳೆದುಕೊಂಡು ಸಿಟ್ಟಿನಲ್ಲಿ ಇದ್ದ ಅವಿ, ‘ಇಲ್ಲೇನು ನೀವು ಅಲ್ಲಾಡಸಕೊಂಡು ಡ್ಯೂಟಿ ಮಾಡ್ತಾ ಇರೋದು?’ ಅಂತ ಮರ್ಮಕ್ಕೆ ತಾಗುವಂತೆ ಮಾತಾಡಿ , ‘ನಾನು ಬೇರೆಯವರ ಚಪ್ಪಲಿ ಎತ್ಕೋಂಡು ಹೋಗತೀನಿ.’ ಎಂದ.

ಮೀಸೆ, ‘ಆದೇಗೆ ಎತ್ಕೋಂಡು ಹೊಯಿತೀಯಾ? ನೀನು ಯಾರು , ಎತ್ತ ಅಂತ’ ಕುಲಗೋತ್ರ ವಿಚಾರಿಸೋಕೆ ಬಂದ. ಅದಕ್ಕೆ ಅವಿ ಸೊಪ್ಪು ಹಾಕದೇ ನಾನು ಮೈಸೂರಿನವನೇ ಅಂತ ಗುರುಗುಟ್ಟಿದ.

‘ನಮ್ಮ ಸಾರ್‌ ಹತ್ರ ಕರೆದುಕೊಂಡು ಹೋಗತೀನಿ , ಇಲ್ಲಿ ಗಲಾಟೆ ಮಾಡಬೇಡಿ, ಅಲ್ಲಿ ಕಂಪ್ಲೇಂಟ್‌ ಕೊಡಿ’ ಅಂತ ಮೀಸೆ ಹೇಳಿ, ಕರಕೊಂಡು ಹೋದ. ಅಲ್ಲಿ ಹೋದರೆ ಆ ಸಾರ್‌, ಅರಮನೆ ಕಚೇರಿಯಲ್ಲಿ ದೂರು ಕೊಡಿ ಅಂತ ಸಾಗಹಾಕಿದ.

ನಾವು ಕಚೇರಿಗೆ ಹೋದಾಗ, ಇದೇ ಸಮಯದಲ್ಲಿ ಮಂಗಳೂರಿನ ಕಡೆ ಮಾಣಿ ಎಂಟ್ರಿ ಕೊಟ್ಟು, ‘ಎಂಥ ಮಾರಾಯ, ಎಂಥ ಕೆಲಸ ಅಗೋಯಿತು. ಶೂಸ್‌ ತಕ್ಕೊಂಡು 2 ವಾರ ಬೇರೆ ಅಗಿರಲಿಲ್ಲ... ಕದ್ದುಕೊಂಡು ಹೋಗಿದ್ದಾರೆ, ಇವರದೆಲ್ಲಾ ಇಲ್ಲೊಂದು ಗ್ಯಾಂಗು ಇದೆ, ಇದೇನು ಅರಮನೆ ಆವರಣವಾ? ಇಲ್ಲಾ ಕಳ್ಳರ ಮನೇನಾ? ಬರೆಗಾಲಲ್ಲಿ ನಡೆಯುಂತೆ ಅಯಿತಲ್ಲಾ’ ಅಂತ ಒಂದೇ ಸಮನೆ ಪಿರಿಪಿರಿ ಮಾಡತೊಡಗಿದ.

ನಾವೆಲ್ಲ ಸೇರಿದ್ದರಿಂದ ಅಧಿಕಾರಿ ಕೊಣೆ ತುಂಬಿ ಹೋಗಿತ್ತು. ಅಧಿಕಾರಿ ಆ ಕೆಲಸದವನಿಗೆ ‘ನಿನ್ನ 2 ವರ್ಷದ ಸಂಬ್ಳ ಕಟ್‌ ಮಾಡಿದ್ರು, ಆ ಕಾಸು ಗಿಟ್ಟೊಲ್ಲಾ, ಯಾರಿಗೆ ಕೊಟ್ಟಿದೀಯಾ ಹೇಳು’ಅಂದಾಗ ಆತ ಕಪ್ಪೆ ವಟಗುಟ್ಟುವಂತೆ ‘ಯಾರ್ರೊ ಹುಡಗರು ಎತ್ಕೊಂಡರು, ಏನೋ ಅಗಿಬಿಟ್ಟಿತ್ತು ’ ಎಂದು ಹಳೇ ಪ್ಲೇಟ ಹಾಕತೊಡಗಿದ.

ಹಿಂದಿನ ದಿನ ಜಾತ್ರೆಯ ಕಾರಣದಿಂದ ಮೇಲುಕೋಟೆಯ ಚೆಲುವನರಸಿಂಹ ದರ್ಶನವಾಗದ ಹತಾಶೆ, ಬಲಮುರಿಯಲ್ಲಿ ಅಟ್‌ ಲೀಸ್ಟ್‌ ಈಜು ಮಾಡಲು ಇರದಷ್ಟು , ನೀರು, ಕೆಅರ್‌ ಎಸ್‌ಗೆ ಕಳೆದ 51 ದಿನಗಳಿಂದ ಬಂದ್‌ ಮಾಡಿದ ಕೋಪ, ಮೊದ್ಲೆ ಸಿಟ್ಟಿನಲ್ಲಿದ್ದ, ಅವಿಗೆ ಕೆಲಸಗಾರನ ಮಾತು ಕೇಳಿ ಪಿತ್ತ ನೆತ್ತಿಗೆ ಏರಿತು.

‘ಮಗನೇ, ಸಾವಿರಾರು ರೂಪಾಯಿ ಚಪ್ಪಲ್ಲು/ ಶೂಸ್‌ ಮಾತ್ರ ಹೇಗೆ ಕದ್ದುಹೊಯಿತು? ಬಾಕಿ ಎಲ್ಲಾ ಯಾಕೆ ಕಳೆದಿಲ್ಲಾ... ನೀವೆಲ್ಲಾ ಸೇರಿ ಚೋರ್‌-ಬಜಾರಿನಲ್ಲಿ ಮಾರಿ, ಕಾಸು ಗಳಿಸಿಕೊಳ್ಳತಾ ಇದೀರಾ... ನಿನ್ನ ಸುಮ್ನೆ ಬಿಡಬಾರದು’ ಅನ್ನುತ್ತಾ ಉಗಿದ... ಈ ಬಯ್ಗುಳ ಭಾವಗೀತೆಗೆ ಕೋರಸ್‌ ಆಗಿ, ಆಂಧ್ರದ ಅಮ್ಮಾಯಿ ಮತ್ತು ಮಂಗಳೂರಿನ ಮಾಣಿ ಸೇರಿಕೊಂಡರು.

ಇಂತಿಪ್ಪ ಘಟನೆಗಳು ನಡೆದ ಮೇಲೆ , ಅಲ್ಲಿರುವ ಅಧಿಕಾರಿ ‘ನೀವೆಲ್ಲಾ ಒಂದು ಅರ್ಜಿ ಬರೆದುಕೊಡಿ. ನಾವು ಅದರ ಮೇಲೆ ವಿಚಾರಣೆ ಮಾಡಿ , ಆತನ ಸಂಬಳದಿಂದ ಕಾಸು ಕಟ್‌ ಮಾಡಿ ನಿಮಗೆ ಪೋಸ್ಟ್‌ ಮೂಲಕ ಕಳಿಸಿಕೋಡುತ್ತೇವೆ ’ಅಂತ ಹೇಳಿದ.

ಸರ್ಕಾರಿ ಕೆಲಸ ದೇವರ ಕೆಲಸ... ಈ ಸರ್ಕಾರಿ ಕೆಲಸ ಸದಾ ನಿಧಾನ. ಕೊಡೋದು ಕೊಟ್ಟರು, ಬಸವನಹುಳುವಿಗಿಂತ ವೇಗವಾಗಿ ಹೋಗೋದಿಲ್ಲ ಅನ್ನೋದು ಖಚಿತವಾಗಿ ಅವಿ ಹೊರಬಂದ.

‘we should teach him lesson. ಮುಂದೆ ಬರೋರು ತೊಂದರೆ ಅನುಭವಿಸಬಾರದು, ನಮ್ಮ ಮೈಸೂರಿಗೆ ಕೆಟ್ಟ ಹೆಸ್ರು ಬರಬಾರದು’ ಅಂತ ಹೇಳಿ ಕಾರಿನತ್ತ ನಡೆದ. ‘ಮೊಸ್ಟಲಿ ಚಪ್ಪಲಿ ಸ್ಟಾಂಡಿನಲ್ಲಿ ಚಪ್ಪಲಿ ಕಳೆದುಕೊಂಡ ಮೊದಲ ಬಕರಾ ನಾನೇ ಇರಬೇಕು’ ಅಂತ ಹೇಳಿ, ಗಿರಿ ಮನೆಯತ್ತ ಕಾರು ನಡೆಸಿದ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X