ಬುದ್ಧ ನಸು ನಗಲಿ! ಮನದ ಕೊಳೆ ತೊಲಗಲಿ!


ರಾಮನಗರದ ಹಂದಿಗೊಂದಿಯಲ್ಲಿನ ಏಕಶಿಲಾ ಬೆಟ್ಟ ವನ್ನು ಕೊರೆದು, 712 ಅಡಿ ಎತ್ತರದ ಬುದ್ಧ ಪ್ರತಿಮೆ ನಿರ್ಮಾಣಕ್ಕೆ ಪ್ರಯತ್ನಗಳು ನಡೆದಿವೆ. ಈ ಉದ್ದೇಶಕ್ಕಾಗಿ ಯೋಜನೆಯ ರೂವಾರಿಯಾದ ಸಂಘ ಮಿತ್ರ ಪ್ರತಿಷ್ಠಾನ, 10ಎಕರೆ ಭೂಮಿ ನೀಡುವಂತೆ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದು ತೀವ್ರ ವಿವಾದಕ್ಕೆ ದಾರಿ ಮಾಡಿದೆ. ಯೋಜನೆಯಿಂದ ಈ ಭಾಗದ ಪ್ರಾಣಿ-ಪಕ್ಷಿಗಳು ಸಂಕಷ್ಟಕ್ಕೆ ಸಿಲುಕುತ್ತವೆ ಎನ್ನುವ ವಾದ ಪರಿಸರವಾದಿಗಳಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಓದುಗರೊಬ್ಬರು ಬರೆದ ಪತ್ರ ಇಲ್ಲಿದೆ.

  • ಎಚ್‌. ವಿ. ಸೂರ್ಯನಾರಾಯಣ ಶರ್ಮ, ಬೆಂಗಳೂರು
    [email protected]
Buddhaತನ್ನ ತಾಯ್ನಾಡಿನಲ್ಲೇ ಬೌದ್ಧ ಧರ್ಮ ಕ್ಷೀಣಿಸಲು ಕಾರಣವಾದ ಅಂಶಗಳನ್ನು ಅನೇಕರು ತಮ್ಮ ತಮ್ಮ ಪೂರ್ವಾಗ್ರಹಗಳೊಂದಿಗೆ ಗುರುತಿಸಿದ್ದಾರೆ. ಪೂಜ್ಯ ದಲೈಲಾಮಾ ಅವರು ಈ ಕುರಿತ ಸರಿಯಾದ ತಿಳಿವಳಿಕೆ ಹೊಂದಿದವರಾಗಿದ್ದಾರೆ, ಉಳಿದವರು ಆಳವಾದ ಅಧ್ಯಯನವನ್ನೇನೂ ಮಾಡದೆ ಬೌದ್ಧ ಧರ್ಮದ ಅವನತಿಗೆ ಆದಿಶಂಕರರ ದೌರ್ಜನ್ಯ, ವೈದಿಕ ಪುರೋಹಿತಶಾಹಿಗಳ ಕುತಂತ್ರ ಕಾರಣವೆಂದು ಅಪಪ್ರಚಾರದಲ್ಲಿ ತೊಡಗಿರುತ್ತಾರೆ.

ಈ ಸ್ವಘೋಷಿತ ಬುದ್ಧಿ ಜೀವಿಗಳಿಗೆ ಬೌದ್ಧಮತದ ಮೂಲ ತತ್ವಗಳು ಹಾಗೂ ವೈದಿಕ ಪರಂಪರೆಯ ಉಪನಿಷತ್ತುಗಳಲ್ಲಿರುವ ವೈಚಾರಿಕತೆಯ ಸಾಮ್ಯತೆಗಳ ಅರಿವು ಎಳ್ಳಷ್ಟೂ ಇಲ್ಲ. ಭಾರತದ ಸನಾತನ ಸಂಸ್ಕೃತಿಗೆ ಮಸಿ ಬಳಿಯುವ ಉತ್ಸಾಹ ಮಾತ್ರ ಇವರಲ್ಲಿ ಕಾಣಿಸುತ್ತಿದೆ.

ಕಾಲದಿಂದ ಕಾಲಕ್ಕೆ ಧಾರ್ಮಿಕ ಆಚರಣೆಗಳಲ್ಲಿನ ಮೂಲ ಆಶಯಗಳು ಮರೆಯಾಗಿ ಕೇವಲ ಬಾಹ್ಯ ಆಚರಣೆಗಳೇ ಪ್ರಾಧಾನ್ಯತೆಯನ್ನು ಪಡೆದು, ಅದು ದುರಾಚಾರಗಳಿಗೂ ಹೊರಳುವ ಸಂಕ್ರಮಣ ಕಾಲದಲ್ಲಿ ಮಹಾತ್ಮರ ಅವತಾರವಾಗಿ ಹೊಸ ವಿಚಾರ/ದೃಷ್ಟಿಕೋನ ಅರಳುತ್ತದೆ. ಈ ವಿಚಾರಗಳಿಂದ ಆಕರ್ಷಿತರಾದವರ ಗುಂಪು ಹೊಸ ಧರ್ಮವಾಗಿ ರೂಪುಗೊಂಡು ಪ್ರವರ್ಧಮಾನಕ್ಕೆ ಬರಲಾರಂಭಿಸುತ್ತದೆ. ಒಂದು ಹಂತದಲ್ಲಿ ಮತ್ತೆ ಜಾರುವಿಕೆ ಆರಂಭವಾಗುತ್ತದೆ. ಈಗ ಪ್ರಚಲಿತವಿರುವ ಬೌದ್ಧ ಧರ್ಮ, ಭಗವಾನ್‌ ಬುಧ್ಧನ ಮೂಲ ಆಶಯಗಳಿಗೆ ಎಷ್ಟು ಹತ್ತಿರವಿದೆ ಎಂಬುದು ಅಧ್ಯಯನ ಯೋಗ್ಯವಾದ ಕುತೂಹಲಕರವಾದ ವಿಷಯ.

ಏನಾಗಿದೆ ನೋಡಿ ? : ರಾಮನಗರದಲ್ಲಿ ಸ್ಥಾಪಿಸಲುದ್ದೇಶಿಸಿರುವ ಬುದ್ಧ ಪ್ರತಿಮೆಯು ಯೋಜನೆಯಿಂದ ನಿಷ್ಪಾಪಿ ಪ್ರಾಣಿ-ಪಕ್ಷಿ ಸಂಕುಲಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಅವುಗಳ ಸಂತತಿ ಅಳಿಯುತ್ತದೆ ಎಂದು ಗುರ್ತಿಸಲಾಗಿದೆ. ಇದು ಬುದ್ಧನ ಉಪದೇಶಗಳಿಂದ, ಆದರ್ಶಗಳಿಂದ ನಾವು ಗಾವುದಗಾವುದ ದೂರಸರಿದಿರುವುದನ್ನು ಬಿಂಬಿಸುತ್ತದೆ.

ಸಕಲಜೀವಿಗಳಲ್ಲಿ ಮೈತ್ರಿ ಕರುಣೆಯನ್ನು ಬೋಧಿಸಿದ ಭಗವಾನ್‌ ಬುದ್ಧ, ತನದೊಂದು ಪ್ರತಿಮೆಗಾಗಿ ಇತರ ಜೀವ ಜಾಲಕ್ಕೆ ಎಳ್ಳಷ್ಟು ನೋವನ್ನು ಸಹಿಸಲಾರ. ದುರದೃಷ್ಟವಶಾತ್‌ ಅವನ ಸಂಘಮಿತ್ರರಿಗೆ ಈ ಪ್ರಾಣಿದಯೆ ಅನುಕಂಪಗಳು ಅಪರಿಚಿತವಾಗಿರುವುದು ನಗೆಪಾಟಲಿನ ಸಂಗತಿ.

ಸ್ವಪ್ರತಿಷ್ಠೆ ಮತ್ತು ವಿವಿಧ ಲೌಕಿಕ ಪ್ರಯೋಜನಗಳ ಗುರಿಗಾಗಿ ಪ್ರತಿಷ್ಠಾನ ಹುನ್ನಾರ ನಡೆಸಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಯೋಜನೆಗೆ ಪರವಾನಗಿ ಗಿಟ್ಟಿಸುವ ದುರಾಲೋಚನೆಯನ್ನು ಹೊಂದಿದೆ. ಪೂಜ್ಯ ದಲೈಲಾಮಾ ಅವರು ಮಧ್ಯ ಪ್ರವೇಶಿಸಿ, ಈ ಕುಕೃತ್ಯವನ್ನು ತಪ್ಪಿಸಬೇಕು.

ಬುದ್ಧ ವಿಗ್ರಹ ಸ್ಥಾಪಿಸುವ ಯೋಜನೆಯನ್ನು ಬೇರಾವುದಾದರೂ ನಿರ್ವಿವಾದಿತ ಸ್ಥಳಕ್ಕೆ ವರ್ಗಯಿಸಿದಲ್ಲಿ ಬುದ್ಧನ ಉಪದೇಶಗಳ ಆಚರಣೆಯಾಗುತ್ತದೆ. ಇಲ್ಲದಿದ್ದರೆ ‘ಗೋಪುರಂಗಳೊರುಳಿಸಿ ನಮಿಪೆವೆಂಬರು ಜನರು ಜೀವನಕೆ ಸೋಂಕಿಸರು ಮಂಕುತಿಮ್ಮ’ ಎಂಬ ಮಾತಿನ ಸಾಕ್ಷಾತ್ಕಾರವಷ್ಟೆ!

ಮುಖಪುಟ / ಓದುಗರ ಓಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+