ಕೃಷ್ಣ ದೇವರಾಯ ತೆಲುಗು ಪಕ್ಷಪಾತಿಯೇ?
;?
ಇತಿಹಾಸವನ್ನು ತಪ್ಪುತಪ್ಪಾಗಿ ಅರ್ಥೈಸುವ ಪರಿಪಾಠಕ್ಕೆ ಧಿಕ್ಕಾರ! ಕಾಗೆಗುಬ್ಬಿ ಕಥೆ ನಮಗೆ ಬೇಡ!
- ವಿ.ಎನ್.ಯತೀಶ್, ಬೆಂಗಳೂರು
ಕನ್ನಡಿಗರು ಹೆಮ್ಮೆಪಡುವ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯ ತೆಲುಗು ಪಕ್ಷಪಾತಿಯಾಗಿದ್ದ. ಆತನ ಆಸ್ಥಾನದ ಅಷ್ಟ ದಿಗ್ಗಜರಲ್ಲಿ ಒಬ್ಬನೂ ಕನ್ನಡಿಗನಿರಲಿಲ್ಲ ಎಂಬ ಅಂಶ ಬಹುಮಂದಿಗೆ ತಿಳಿದಿಲ್ಲ.
ವಿರೂಪಾಕ್ಷ ಸಂಸ್ಕೃತಿಯನ್ನು ತಿರುಪತಿ ಸಂಸ್ಕೃತಿಯನ್ನಾಗಿ ಪರಿವರ್ತಿಸಿದ ಕೃಷ್ಣ ದೇವರಾಯನ ಪುನರಾವಲೋಕನ ನಡೆಯಬೇಕಿದೆ. ಇತಿಹಾಸದ ಪುಟಗಳನ್ನು ಕೆದಕಿ ನೋಡುವ ಮೂಲಕ ಕಟು ಸತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು.
ಅದೇ ರೀತಿ ಮಹಾರಾಷ್ಟ್ರದ ಶಿವಾಜಿಯ ಬಗ್ಗೆ ನಮ್ಮಲ್ಲಿ ಅಜ್ಞಾನವಿದೆ. ಆತನ ಮೂಲ ಕರ್ನಾಟಕದ ಹೊಯ್ಸಳ ವಂಶ. ಹೊಯ್ಸಳರ ಭೈರಪ್ಪ ನಾಯಕ ಮಹಾರಾಷ್ಟ್ರಕ್ಕೆ ವಲಸೆ ಹೋದ ಮೇಲೆ ಹೊಯ್ಸಳ ಶಬ್ದವೇ ಭೋಸಲೆ ಎಂದಾಯಿತು ಎನ್ನಲಾಗಿದೆ. ಐತಿಹಾಸಿಕ ಸ್ಥಳಗಳಲ್ಲಿನ ಗೈಡ್‌ಗಳು ಐತಿಹಾಸಿಕ ಕತೆಗಿಂತ ಕಟ್ಟುಕತೆಗಳನ್ನು ಹೇಳುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ.
ಕದಂಬರು ಮೊದಲ ಅರಸರು ಎನ್ನುವುದು ಹಸಿಸುಳ್ಳು. ಮಯೂರವರ್ಮ, ಕಾಕುಸ್ಥವರ್ಮ ಎಂಬ ಹೆಸರುಗಳೇ ಅವರ ಪರಕೀಯತೆಯನ್ನು ಸಾರುತ್ತವೆ. ಈ ವಿಚಾರಗಳ ಬಗ್ಗೆ ಖಚಿತವಾಗಿ ಮಾತನಾಡುವ ಖ್ಯಾತ ಸಂಶೋಧಕ ಮತ್ತು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ, ಹೆಚ್ಚಿನ ಅಧ್ಯಯನ ನಡೆಸಿದ್ದಾರೆ. ಇಂತಹ ಪುಬುದ್ಧ ಅಧ್ಯಯನಗಳು ಹೊಸ ಸಂಗತಿಗಳತ್ತ ಬೆಳಕು ಚೆಲ್ಲಲಿ.












Click it and Unblock the Notifications