keyboard_backspace

ಸಿಡಿ ಪ್ರಕರಣದ ತನಿಖೆಯಲ್ಲಿ ಎಸ್ಐಟಿ ತಂಡ ಎಡವಿದ್ದು ಎಲ್ಲಿ?

By ಒನ್ಇಂಡಿಯಾ ಡೆಸ್ಕ್
Google Oneindia Kannada News

ಬೆಂಗಳೂರು, ಮಾರ್ಚ್‌ 30 : ಸಿಡಿ ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳು ಮುಗೀತು. ಬಹುಶಃ ರಾಜ್ಯದ ಇತಿಹಾಸದಲ್ಲಿ ಒಂದು ಪ್ರಕರಣ ಈ ಪರಿ ಸುದ್ದಿಯಾಗಿದ್ದೇ ಇಲ್ಲ. ಸಿಡಿ ಸಂತ್ರಸ್ತ ಯುವತಿ ಎಸ್ಐಟಿ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ ಎಂದು ಹೇಳಿ ಕೊನೆಗೂ ನ್ಯಾಯಾಲಯದಲ್ಲಿ ಸ್ವ ಇಚ್ಛಾ ಹೇಳಿಕೆ ದಾಖಲಿಸಿ ಆಗಿದೆ. ಈ ಪ್ರಕರಣದ ಎಲ್ಲಾ ಬೆಳವಣಿಗೆ ನೋಡಿ ಹೇಳುವುದಾದರೆ, ಎಸ್ಐಟಿ ರಚನೆಯಾಗಿಯೇ ಹದಿನೇಳು ದಿನ ಕಳೆದಿವೆ.

ಕೈಯಲ್ಲಿದ್ದ ಮೂರು ಪ್ರಕರಣದಲ್ಲಿ ಒಂದು ಪ್ರಕರಣದಲ್ಲಾದರೂ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದೇ ಆದಲ್ಲಿ "ಸಿಡಿ ಪುರಾಣಕ್ಕೆ ಬ್ರೇಕ್ ಬೀಳುತ್ತಿತ್ತು ಎಂಬ ವಿಶ್ಲೇಷಣೆ ಸಾರ್ವಜನಿಕ ವಲಯದಲ್ಲಿ ಬಹುದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಕಾನೂನು ತಜ್ಞರು ಕೂಡ ಇದೇ ಆಯಾಮದಲ್ಲಿ ಈ ಪ್ರಕರಣವನ್ನು ವಿಶ್ಲೇಷಣೆ ಮಾಡಿದ್ದಾರೆ. ಟೆರಿಫಿಕ್ ಅಧಿಕಾರಿಗಳನ್ನೇ ಒಳಗೊಂಡಿರುವ ಎಸ್ಐಟಿ ಅಧಿಕಾರಿಗಳು ಪ್ರಕರಣ ನಿಭಾಯಿಸುವಲ್ಲಿ ಎಡವಿದರೇ ಎಂಬ ಸಂದೇಹ ಮೂಡುತ್ತದೆ. ಈ ಕುರಿತ ಸಮಗ್ರ ವಿವರ ಇಲ್ಲಿದೆ.

ದೂರು ದಾಖಲಾಗಿದ್ದು ಮಾ. 2

ದೂರು ದಾಖಲಾಗಿದ್ದು ಮಾ. 2

ರಮೇಶ್ ಜಾರಕಿಹೊಳಿ ಎಕಾಂತದಲ್ಲಿ ಕಳೆದ ಅಶ್ಲೀಲ ಸಿಡಿ ಮಾ. 2 ರಂದು ಹೊರಬಿತ್ತು. ಸಂತ್ರಸ್ತೆ ಎನ್ನಲಾದ ಸಿಡಿ ಯುವತಿ ದೂರು ನೀಡಲಿಲ್ಲ. ಬದಲಿಗೆ ದಿನೇಶ್ ಕಲ್ಲಹಳ್ಳಿ ಎಂಬಾತ ದೂರು ನೀಡಿ ನಡೆದುಕೊಂಡ ರೀತಿಯೇ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಸಿಡಿ ಲೇಡಿ ಬರುವ ವರೆಗೂ ಪೊಲೀಸರು ಎಫ್ಐಆರ್ ದಾಖಲಿಸಲಿಲ್ಲ. ಸಿಡಿ ಬಿಡುಗಡೆ ಬಳಿಕ ಜಲ ಸಂಪನ್ಮೂಲ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬಳಿಕ ಬಹುದೊಡ್ಡ ತಿರವು ಪಡೆದುಕೊಂಡಿತು. ದಿನಕ್ಕೊಂದು ತಿರುವು ಪಡೆಯಿತು, ಹನಿಟ್ರ್ಯಾಪ್, ಬ್ಲಾಕ್ ಮೇಲ್ ಎಂಬ ಆರೋಪಗಳು ಹೊರ ಬಿದ್ದವು. ಇದಕ್ಕೆ ಪೂರಕ ಕೆಲವು ಸಾಕ್ಷಾಧಾರಗಳು ಹೊರ ಬಿದ್ದವು.

ಇದಾದ ಬಳಿಕ ಸ್ವತಃ ಈ ಪ್ರಕರಣ ತನಿಖೆಗಾಗಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಎಸ್ಐಟಿ ರಚನೆ ಆಯಿತು. ಎಸ್ಐಟಿ ರಚನೆ ಆದ್ರೂ ತನಿಖೆ ನಡೆಸಲು ಎಫ್ಐಆರ್ ಇರಲಿಲ್ಲ. ರಮೇಶ್ ಜಾರಕಿಹೊಳಿಯೇ ಇದೊಂದು ನಕಲಿ ಸಿಡಿ. ನನಗೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದರು. ಆನಂತರ ಈ ಷಡ್ಯಂತ್ರದ ಹಿಂದೆ ಮಹಾನಾಯಕ ಇದ್ದಾನೆ ಎಂಬ ಆರೋಪಗಳು ಕೇಳಿ ಬಂದವು.

ಸಿಡಿಲೇಡಿ ಸ್ವ ಇಚ್ಛಾ ಹೇಳಿಕೆ ಬಳಿಕ ಜಾರಕಿಹೊಳಿಗೆ ಇರೋದು ಕೇವಲ 24 ಗಂಟೆ !ಸಿಡಿಲೇಡಿ ಸ್ವ ಇಚ್ಛಾ ಹೇಳಿಕೆ ಬಳಿಕ ಜಾರಕಿಹೊಳಿಗೆ ಇರೋದು ಕೇವಲ 24 ಗಂಟೆ !

ಡಿ.ಕೆ. ಶಿವಕುಮಾರ್ ಹೆಸರನ್ನು ಸಿಡಿಲೇಡಿ ಪೋಷಕರೇ ಪ್ರಸ್ತಾಪಿಸಿದರು. ತನ್ನ ಮಗಳು ಅಪಹರಣವಾಗಿದ್ದಾಳೆ ಎಂದು ದೂರು ನೀಡಿದರು. ಆನಂತರ ನಡೆದ ಬೆಳವಣಿಗೆಯಿಂದ ಕೆಲ ದಿನಗಳ ಹಿಂದಷ್ಟೇ ಸಿಡಿ ಲೇಡಿ ತನ್ನ ವಕೀಲರ ಮೂಲಕ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ಸಲ್ಲಿಸಿದಳು. ಅದು ಎಫ್ಐಆರ್ ಆದ ಬಳಿಕ ಎಸ್ಐಟಿ ಅಧಿಕಾರಿಗಳ ಬಗ್ಗೆ ನಂಬಿಕೆ ಇಲ್ಲ. ನಾನು ನ್ಯಾಯಾಧೀಶರ ಮುಂದೆ ಹಾಜರಾಗಿ ಸ್ವ ಇಚ್ಛಾ ಹೇಳಿಕೆ ದಾಖಲಿಸುತ್ತೆನೆ ಎಂದು ಕೋರ್ಟ್‌ ಮೊರೆ ಹೋದಳು. ಅದರಲ್ಲಿ ಆಕೆ ಯಶಸ್ವಿಯೂ ಆದಳು.

ಎಸ್ಐಟಿ ಅಧಿಕಾರಿಗಳ ತಾಕತ್ತು

ಎಸ್ಐಟಿ ಅಧಿಕಾರಿಗಳ ತಾಕತ್ತು

ಎಸ್‌ಐಟಿ ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ನೋಡಿದರೆ ಎಲ್ಲರೂ ಖಡಕ್ ಅಧಿಕಾರಿಗಳೇ . ಸೌಮೇಂದು ಮುಖರ್ಜಿ, ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಸೌಮೇಂದು ಮುಖರ್ಜಿ ಯಾವುದೇ ಕ್ಲಿಷ್ಟ ಪ್ರಕರಣದ ತನಿಖೆಯನ್ನು ಯಶಸ್ವಿಯಾಗಿ ತನಿಖೆ ನಡೆಸಲು ಯಶಸ್ವಿಯಾದವರು. ಸೌಮೇಂದು ಮುಖರ್ಜಿಗೆ ಒಂದು ಟೀಮ್ ಲೀಡ್ ಮಾಡುವಲ್ಲಿ ನಿಸ್ಸೀಮರು ಎಂಬ ಹೆಸರಿದೆ.

ಇನ್ನು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ರಾಜ್ಯದ ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣವನ್ನು ಜಾಲಾಡಿಸುವಲ್ಲಿ ಯಶಸ್ವಿಯಾದವು. ಅನೇಕ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಂ.ಎನ್. ಅನುಚೇತ್, ಪತ್ರಕರ್ತೆ ಗೌರಿ ಲಂಕೇಶ್ ನಿಗೂಢ ಹತ್ಯೆ ಪ್ರಕರಣವನ್ನು ಪತ್ತೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿರುವ ತನಿಖಾಧಿಕಾರಿ. ಡಿಸಿಪಿ ರವಿಕುಮಾರ್, ಬಾಣಸವಾಡಿಯಲ್ಲಿ ಯುವತಿ ಮೇಲಿನ ರೇಪ್, ರುದ್ರೇಶ್ ಹತ್ಯೆ ಪ್ರಕರಣ ಸೇರಿದಂತೆ ಯಾವುದೇ ಪ್ರಕರಣದ ತನಿಖೆಯಲ್ಲಿ ಇವರು ಕಡ್ಡಾಯವಾಗಿ ಇರುತ್ತಾರೆ. ಯಾವ ಪ್ರಕರಣವನ್ನೂ ಪತ್ತೆ ಮಾಡದೇ ಕೂತವರೇ ಅಲ್ಲ ಎಂಬ ಖ್ಯಾತಿ ಪಡೆದಿದ್ದಾರೆ.

ಇನ್ನು ಇನ್‌ಸ್ಪೆಕ್ಟರ್ ಪ್ರಶಾಂತಬಾಬು ತಾಂತ್ರಿಕವಾಗಿ ನಿಪುಣ ಅಧಿಕಾರಿ. ಬಹುಶಃ ಯಾವ ಪ್ರಕರಣದಲ್ಲೂ ಇಂತಹ ಖಡಕ್ ಅಧಿಕಾರಿಗಳ ತಂಡ ರಚನೆ ಆಗಿಲ್ಲ. ಅಂತಹ ತಂಡ ವಿದ್ದರೂ ಸಹ ಸಿಡಿ ಪ್ರಕರಣದಲ್ಲಿ ಎಡವಿದ್ದು ಎಲ್ಲಿ ? ಈ ಪ್ರಕರಣ ಸಂಬಂಧ ಎಸ್ಐಟಿ ರಚನೆಯಾದ ಮೂರೇ ದಿನಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ಭರವಸೆ ಮೂಡಿಸಿದ್ದರು. ಆದರೆ, ಹೆಜ್ಜೆ ಹೆಜ್ಜೆಗೂ ತಪ್ಪಿದರೇ ಎಂಬ ಅನುಮಾನ ಮೂಡಿಸುತ್ತದೆ. ಹೀಗಾಗಿಯೇ ಈ ಸಿಡಿ ಪ್ರಕರಣ ಈ ಹಂತಕ್ಕೆ ನಿಂತಿದೆ ಎಂದೇ ಹೇಳಲಾಗುತ್ತಿದೆ.

ಆಯ್ಕೆ ನಂಬರ್ 1

ಆಯ್ಕೆ ನಂಬರ್ 1

ಎಸ್ಐಟಿ ರಚನೆಯದ ಕೂಡಲೇ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದರು. ಈ ಪ್ರಕರಣ ಸಂಬಂಧ ಶಂಕಿತ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ ಕೂಡಲೇ ಮಹತ್ವದ ಸಾಕ್ಷಾಧಾರಗಳು ಲಭ್ಯವಾದವು. ಕೆಲವು ಶಂಕಿತರು ವಿಚಾರಣೆಗೆ ಒಳಪಟ್ಟರು. ಈ ಪ್ರಕರಣದಲ್ಲಿ ಪ್ರಮುಖ ಶಂಕಿತರೆನ್ನಲಾದ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಕೂಡಲೇ ವಶಕ್ಕೆ ಪಡೆಯುವಲ್ಲಿ ವಿಫಲರಾದರು. ಸಂತ್ರಸ್ತ ಯುವತಿ ಸೇರಿದಂತೆ ನಾಪತ್ತೆಯಾಗಿರುವ ಶಂಕಿತರ ಪೈಕಿ ಒಬ್ಬರನ್ನು ವಶಕ್ಕೆ ಪಡೆದಿದ್ದಲ್ಲೇ ಪ್ರಕರಣ ಇಷ್ಟೊತ್ತಿಗೆ ಯಾವಾಗಲೋ ಮುಗಿದು ಹೋಗುತ್ತಿತ್ತು. ಮೊದಲ ಹೆಜ್ಜೆಯಲ್ಲೇ ಶಂಕಿತಗರ ಪತ್ತೆ ಮಾಡುವಲ್ಲಿ ವಿಫಲರಾಗಿದ್ದು ದೊಡ್ಡ ಯಡವಟ್ಟು.

ವಿಶೇಷ ಕೋರ್ಟ್ ಮುಂದೆ ಸಿಡಿ ಲೇಡಿ ಹಾಜರು, ಹೇಳಿಕೆ ದಾಖಲುವಿಶೇಷ ಕೋರ್ಟ್ ಮುಂದೆ ಸಿಡಿ ಲೇಡಿ ಹಾಜರು, ಹೇಳಿಕೆ ದಾಖಲು

ಆಯ್ಕೆ ನಂಬರ್ 2

ಆಯ್ಕೆ ನಂಬರ್ 2

ಸಿಡಿ ಸಂತ್ರಸ್ತ ಯುವತಿ ಅಪಹರಣಕ್ಕೆ ಒಳಗಾಗಿದ್ದಾಳೆ ಎಂದು ಆರೋಪಿಸಿ ಆಕೆಯ ಪೋಷಕರು ಅಪಹರಣ ಪ್ರಕರಣ ದಾಖಲಿಸಿದರು. ಈ ಪ್ರಕರಣ ಸಂಬಂಧ ಆರೋಪಿತರ ಪತ್ತೆಗೆ ಎಸ್ಐಟಿ ಹೆಚ್ಚು ಮಹತ್ವ ನೀಡಿದಂತೆ ಕಾಣಲಿಲ್ಲ. ಬೆಳಗಾವಿಯಲ್ಲಿ ಕೇಸು ನೀಡಿದರೂ, ಅದು ಆರ್‌.ಟಿ.ನಗರಕ್ಕೆ ವರ್ಗಾವಣೆಯಾಗಿ ಅಂತಿಮವಾಗಿ ಎಸ್ಐಟಿ ಕದ ತಟ್ಟಿತು. ಈ ಪ್ರಕರಣದಲ್ಲಾದರೂ ಶಂಕಿತರನ್ನು ಪತ್ತೆ ಮಾಡಿದ್ದರೂ ಈ ಪ್ರಕರಣ ಈ ಹಂತ ತಲುಪುತ್ತಿರಲಿಲ್ಲ. ಬದಲಿಗೆ ಅಸಲಿ ಸತ್ಯ ಹೊರಗೆ ಬಂದು ಬಿಡುತ್ತಿತ್ತು. ಇದೂ ಮಾಡುವಲ್ಲಿ ಕೂಡ ಎಸ್ಐಟಿ ವಿಫಲವಾಯಿತು.

ಆಯ್ಕೆ ನಂಬರ್ 3

ಆಯ್ಕೆ ನಂಬರ್ 3

ರಮೇಶ್ ಜಾರಕಿಹೊಳಿ ಎಫ್ಐಆರ್ ದಾಖಲಿಸುತ್ತಿದ್ದಂತೆ ಸಿಡಿಲೇಡಿ ವಿಡಿಯೋ ಪದೇ ಪದೇ ಹೇಳಿಕೆ ಬಿಡುಗಡೆ ಮಾಡಿದಳು. ಶಂಕಿತ ಆರೋಪಿ ಕೂಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದರು. ಇದಾದ ಕೆಲವೇ ದಿನಗಳ ಬಳಿಕ ಸಿಡಿಲೇಡಿಯೇ ವಕೀಲರ ಮೂಲಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದಳು. ಅದರ ಆಧಾರದ ಮೇಲೆ ಎಫ್ಐಆರ್ ಕೂಡ ಆಯಿತು. ಈ ವೇಳೆ ಸಿಡಿಲೇಡಿಗೆ ಎಸ್ಐಟಿ ಭರವಸೆ ಮೂಡಿಸಿ ತನಿಖಾ ವ್ಯಾಪ್ತಿಗೆ ಒಳಪಡಿಸಬೇಕಿತ್ತು.

ಆಕೆಯೇ ಸ್ವಯಂ ಪ್ರೇರಿತವಾಗಿ ಎಸ್ಐಟಿ ಅಧಿಕಾರಿಗಳ ಮುಂದೆ ಬಂದು ಹೇಳಿಕೆ ದಾಖಲಿಸುವ ವಾತಾವರಣ ನಿರ್ಮಿಸಬೇಕಿತ್ತು. ಅದರ ಭಾಗವಾಗಿ ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೆ ಒಳಪಡಿಸಬೇಕಿತ್ತು. ಈ ಮೂಲಕ ಆಕೆ ಸ್ವತಃ ಎಸ್ಐಟಿ ಅಧಿಕಾರಿಗಳ ಮುಂದೆ ಬಂದು ಹೇಳಿಕೆ ನೀಡಲು ಎಸ್ಐಟಿ ಅಧಿಕಾರಿಗಳು ಆದ್ಯತೆ ನೀಡಬೇಕಿತ್ತು. ಆಕೆ ಇನ್ನೇನು ನ್ಯಾಯಾಧೀಶರ ಮುಂದೆ ಸ್ವ ಇಚ್ಛಾ ಹೇಳಿಕೆ ದಾಖಲಿಸಲು ಕೋರ್ಟ್ ಮೊರೆ ಹೋದ ಬಳಿಕ ಎಸ್ಐಟಿ ಅಧಿಕಾರಿಗಳು ಮಾಡಿದ ಪ್ರಯತ್ನ ಕೈ ಗೂಡಲಿಲ್ಲ. ಹೀಗಾಗಿ ಈ ಆಯ್ಕೆಯಲ್ಲೂ ಸಹ ಎಸ್ಐಟಿ ಅಧಿಕಾರಿಗಳು ವಿಫಲರಾದರೇ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ವಕೀಲ ಸಮುದಾಯದಲ್ಲಿ ಇದು ಬಹುದೊಡ್ಡ ಚರ್ಚೆ ಕೂಡ ಹುಟ್ಟು ಹಾಕಿದೆ.

ಜಾರಕಿಹೊಳಿ ಎಡವಟ್ಟು ಕಾರಣವೇ ?

ಜಾರಕಿಹೊಳಿ ಎಡವಟ್ಟು ಕಾರಣವೇ ?

ಇನ್ನು ಅಶ್ಲೀಲ ಸಿಡಿ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಈಗಾಗಲೇ ಮಹತ್ವದ ಸಾಕ್ಷಿ ಗಳನ್ನು ಕಲೆ ಹಾಕಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ತನ್ನದು ಹನಿಟ್ರ್ಯಾಪ್ ಎಂದು ಹೇಳುತ್ತಿಲ್ಲ. ಆ ಸಿಡಿ ನಕಲಿ, ನನಗೆ ಗೊತ್ತಿಲ್ಲ. ಆ ಸಿಡಿಲೇಡಿ ಗೊತ್ತಿಲ್ಲ ಎಂಬ ವಾದಕ್ಕೆ ಗಂಟು ಬಿದ್ದಿದ್ದಾರೆ. ಇದು ಎಸ್ಐಟಿ ಅಧಿಕಾರಿಗಳ ಪಾಲಿಗೆ ದೊಡ್ಡ ತಲೆನೋವು ತಂದಿಟ್ಟಿತು. ಹೀಗಾಗಿ ಸಾಕ್ಷಾಧಾರಗಳು ಮುಂದೆ ಇದ್ದರೂ ಏನೂ ಮಾಡದ ಅಸಹಾಯಕ ಸ್ಥಿತಿ ತಲುಪಿದರೂ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಪ್ರಕರಣದ ಎಲ್ಲಾ ಬೆಳವಣಿಗೆ ನೋಡಿದರೆ, ಎಸ್ಐಟಿ ಪೊಲೀಸರು ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಇನ್ನೂ ಈಗಲಾದರೂ ಎಸ್ಐಟಿ ಅಧಿಕಾರಿಗಳು ತಲೆ ಮರೆಸಿಕೊಂಡಿರುವ ಶಂಕಿತರನ್ನು ಪತ್ತೆ ಮಾಡುತ್ತಾರಾ ?

English summary
Ramesh Jarkiholi CD Case: SIT officials took wrong move and made no arrests in the case till it is formed 17days back. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X