ಭಾರತದಿಂದ ಗಲ್ಫ್ ರಾಷ್ಟ್ರಕ್ಕೆ 63 ಮಹಿಳೆಯರ ಸಾಗಾಟ
ತಿರುವನಂತಪುರ, ಡಿಸೆಂಬರ್, 14: ಕೇರಳದಲ್ಲಿ ಬೆಳಕಿಗೆ ಬಂದ ವೇಶ್ಯಾವಾಟಿಕೆ ಜಾಲ ಒಂದೊಂದೇ ಶಾಕಿಂಗ್ ಮಾಹಿತಿಯನ್ನು ನೀಡುತ್ತಿದೆ. ಪೊಲೀಸರಿಗೆ ಸಿಕ್ಕಿರುವ ದಾಖಲೆಯಂತೆ 63 ಮಹಿಳೆಯರನ್ನು ಈ ಜಾಲ ಬಹರೇನ್ ಗೆ ಸಾಗಿಸಿದೆ.
ಜಾಯ್ಸ್ ಜೋಷಿ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದ ತಂಡ, ನಿಡುಂಬಸಿರಿ, ಮಧುರೈ, ಚೆನ್ನೈ ಮತ್ತು ಮುಂಬೈ ವಿಮಾನ ನಿಲ್ದಾಣಗಳ ಮುಖೇನ ಮಹಿಳೆಯರನ್ನು ವಿದೇಶಕ್ಕೆ ಸಾಗಾಟ ಮಾಡಿತ್ತು ಎಂಬ ಅಂಶ ಬಯಲಿಗೆ ಬಂದಿದೆ. ಒಂದೂವರೆ ವರ್ಷದ ಅವಧಿಯಲ್ಲಿ ವಿಮಾನಯಾನ ಸೇವೆಯ ಕೆಲ ಅಧಿಕಾರಿಗಳ ನೆರವನ್ನು ಪಡೆದುಕೊಂಡು ಕೆಲಸ ಮಾಡಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.[ಕೇರಳದ ಹೈಟೆಕ್ ವೇಶ್ಯಾವಾಟಿಕೆ ಜಾಲ ಭೇದಿಸಿದ್ದು ಹೇಗೆ?]

ಬಹರೇನ್ ನಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಿ ಮಹಿಳೆಯರನ್ನು ಸಾಗಾಟ ಮಾಡಲಾಗುತ್ತಿತ್ತು. ಒಮ್ಮೆ ಗಲ್ಫ್ ರಾಷ್ಟ್ರಕ್ಕೆ ಪ್ರವೇಶ ಮಾಡಿದ ಮಹಿಳೆಯರ ವೀಶಾ ಮತ್ತಿತರ ದಾಖಲೆಗಳನ್ನು ಸುಪರ್ದಿಗೆ ತೆಗೆದುಕೊಂಡವರು ಅವರನ್ನು ಅಲ್ಲಿಯೇ ಬಂಧಿಯಾಗಿ ಮಾಡುತ್ತಿದ್ದರು. ಕೇರಳ ಡಿಜಿಪಿ ಟಿಪಿ ಸೆನ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಈ ಎಲ್ಲ ಸಂಗತಿಗಳನ್ನು ಬಯಲಿಗೆ ತಂದಿದೆ.[ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದ ಕಿಸ್ ಆಫ್ ಲವ್ ನಾಯಕಿ]
ಕಳೆದ ತಿಂಗಳು ಕಾರ್ಯಾಚರಣೆ ನಡೆಸಿದ್ದ ಕೇರಳ ಪೊಲೀಸರು ಆನ್ ಲೂನ್ ಸೆಕ್ಸ್ ಜಾಲವನ್ನು ಭೇದಿಸಿದ್ದರು. ಕಿಸ್ ಆಫ್ ಲವ್ ಅಭಿಯಾನದ ಆರಂಭಿಸಿದ್ದ ರಾಹುಲ್ ಪಶುಪಾಲನ್ ಮತ್ತು ಆತನ ಪತ್ನಿ ರೇಶ್ಮಿ ಆರ್ ನಾಯರ್ ಅವರನ್ನು ಬಂಧಿಸಿದ್ದರು. ನಂತರ ಒಂದೊಂದೆ ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಆತಂಕಕಾರಿ ಸಂಗತಿಗಳು ತಿಳಿದು ಬಂದಿದ್ದವು.












Click it and Unblock the Notifications