SCV ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ತರಲು ACE Pro ಪರಿಚಯಿಸಿದ ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್
ಪರಿಚಯ ಮಾಡಿಕೊಳ್ಳಿ ಹೊಚ್ಚ ಹೊಸ Tata ACE Pro -ಪೆಟ್ರೋಲ್, ಬೈ-ಫ್ಯೂಯೆಲ್ ಮತ್ತು ಎಲೆಕ್ಟ್ರಿಕ್ ಶಕ್ತಿಯ ಮೂಲಕ ಚಾಲನೆ ಮಾಡಲು ನಿರ್ಮಾಣ ಮಾಡಲಾದ ಭಾರತದ ಹೆಚ್ಚು ಅಗ್ಗದ ಬೆಲೆಯ ನಾಲ್ಕು-ಚಕ್ರದ ಮಿನಿ ಟ್ರಕ್. ನೀವು ಹೊಸ ವ್ಯವಹಾರವನ್ನು ಆರಂಭಿಸುತ್ತಿರಲಿ ಅಥವಾ ವ್ಯವಹಾರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿರಲಿ, ಈ ಚಿಕ್ಕ ಟ್ರಕ್ ಎಲ್ಲಾ ದೊಡ್ಡ ಅವಕಾಶಗಳನ್ನು ನಿಮ್ಮೆದುರು ತೆರೆದಿಡುತ್ತದೆ.
ವೇಗವಾಗಿ ಮುನ್ನುಗುತ್ತಿರುವ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ, ಗಾತ್ರ, ವೇಗ ಮತ್ತು ಸುಸ್ಥಿರತೆ ಎಲ್ಲವೂ ಪ್ರಮುಖ ಪಾತ್ರ ವಹಿಸುತ್ತವೆ. ಇ-ಕಾಮರ್ಸ್ ಕ್ಷೇತ್ರವು ಪ್ರವರ್ಧಮಾನಕ್ಕೆ ಬರುತ್ತಿದೆ ಮತ್ತು ಕೊನೆಯ ಮೈಲಿಯ ವಿತರಣೆ ಮಾಡುವಿಕೆಯು ಸಹ ಆಧುನಿಕ ವಾಣಿಜ್ಯ ಕ್ಷೇತ್ರದ ಅತೀ ಮುಖ್ಯ ಕಾರ್ಯವಾಗಿರುವುದರಿಂದ, ವ್ಯವಹಾರಗಳಿಗೆ ಚುರುಕಾದ, ದಕ್ಷ ಮತ್ತು ಭವಿಷ್ಯಕ್ಕೆ ಸನ್ನದ್ಧವಾಗಿರುವ ವಾಹನಗಳ ಅಗತ್ಯವಿದೆ. ಇಂಗಾಲದ ಪ್ರದೂಷಣೆಯನ್ನು ಕಡಿಮೆ ಇಟ್ಟುಕೊಂಡು ದೊಡ್ಡಮಟ್ಟದ ಕಾರ್ಯಕ್ಷಮತೆಯನ್ನು ನೀಡಲು ವಿನ್ಯಾಸಗೊಳಿಸಲಾದ ಮುಂದಿನ ಪೀಳಿಗೆಯ ಸಣ್ಣ ವಾಣಿಜ್ಯ ವಾಹನವಾದ (SCV) ಆದ Tata ACE Pro ನಿಮ್ಮ ಭರವಸೆಯಾಗಿದೆ. ಕಾಂಪ್ಯಾಕ್ಟ್ ಆದರೂ ಶಕ್ತಿಯುತವಾಗಿರುವ ACE Pro ಎನ್ನುವುದು ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್‌ನ ದಿಟ್ಟ ಹೊಸ ಕೊಡುಗೆಯಾಗಿದ್ದು, ಇದು ಭಾರತದಲ್ಲಿ ಕೊನೆಯ ಮೈಲಿಯ ತನಕ ಸಾಗುವ ಭೂದೃಶ್ಯವನ್ನು ಮರುರೂಪಿಸಲು ಸಜ್ಜಗೊಂಡಿದೆ.
ನೀವು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಫ್ಲೀಟ್ ಆಪರೇಟರ್ ಆಗಿರಲಿ ಅಥವಾ ಮೊದಲ ಬಾರಿಯ ಉದ್ಯಮಿಯಾಗಿರಲಿ, ಪೆಟ್ರೋಲ್, ಬೈ-ಫ್ಯೂಯೆಲ್ (CNG + ಪೆಟ್ರೋಲ್) ಮತ್ತು ಎಲೆಕ್ಟ್ರಿಕ್ ಇಂಧನದ ಮೂಲಕ ಚಾಲನೆ ಮಾಡಲು ACE Pro ಲಭ್ಯವಿದೆ - ಇದನ್ನು ಇಂದಿನ ಲಾಜಿಸ್ಟಿಕ್ಸ್ ವಿಭಾಗದಲ್ಲಿನ ಇತ್ತೀಚಿನ ಬೇಡಿಕೆಗಳನ್ನು ಪೂರೈಸಲು ರೂಪಿಸಲಾಗಿದೆ.
ಪರಂಪರೆಗೆ ಹೊಸರೂಪ ನೀಡಲಾಗಿದೆ
ಅಂದಾಜು ಎರಡು ದಶಕಗಳ ಹಿಂದೆ ಮೂಲ ACE ಅನ್ನು ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಅನ್ನು ಪರಿಚಯಿಸಿದಾಗ, ಅದು 25 ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿಗೆ ಸಾಮರ್ಥ್ಯ ನೀಡಿದ ಚಿಕ್ಕ ಟ್ರಕ್‌ಗಳ ಹೊಸ ವರ್ಗವನ್ನು ನಿರ್ಮಿಸಿತು. ACE Pro ಮೂಲಕ ಆ ಪರಂಪರೆ ಇನ್ನೂ ಬಲಶಾಲಿಯಾಗಿ ಬೆಳೆದಿದೆ. ಕೇವಲ ₹3.99 ಲಕ್ಷದ ಆರಂಭಿಕ ಬೆಲೆಯಲ್ಲಿ, Tata ACE Pro ಭಾರತದ ಅಗ್ಗದ ನಾಲ್ಕು-ಚಕ್ರದ ಮಿನಿ ಟ್ರಕ್ ಆಗಿದ್ದು, ಇದನ್ನು ಕಾರ್ಯಕ್ಷಮತೆ, ಲಾಭ ಮತ್ತು ಪ್ರಗತಿಯನ್ನು ನೀಡುವುದಕ್ಕಾಗಿ ನಿರ್ಮಿಸಲಾಗಿದೆ.
"ಹೊಚ್ಚ ಹೊಸ Tata ACE Pro ಮೂಲಕ, ಹೊಸ ಪೀಳಿಗೆಯ ಕನಸುಗಾರರಿಗಾಗಿ ನವೀನ ಉದ್ದೇಶದೊಂದಿಗೆ ನಮ್ಮ ಪರಂಪರೆಯನ್ನು ನಾವು ನಿರ್ಮಿಸುತ್ತಿದ್ದೇವೆ." ಎನ್ನುತ್ತಾರೆ ಟಾಟಾ ಮೋಟಾರ್ಸ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆದ ಗಿರೀಶ್ ವಾಘ್.

ನಿಮಗೆ ಬೇಕಾದ ಇಂಧನವನ್ನು ಆಯ್ದುಕೊಳ್ಳಿ: ಪೆಟ್ರೋಲ್, ಬೈ-ಫ್ಯೂಯೆಲ್ ಅಥವಾ ಎಲೆಕ್ಟ್ರಿಕ್
ಬಹುಮುಖವಾದ ಮಾಡ್ಯುಲಾರ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿರುವ, ACE Pro, ಮೂರು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ:
• ಪೆಟ್ರೋಲ್: ದೃಢವಾದ 694cc ಇಂಜಿನ್ 30bhp ಮತ್ತು 55Nm ರಷ್ಟು ಟಾರ್ಕ್ ಉತ್ಪಾದಿಸುತ್ತದೆ ಮತ್ತು ಮೂಲಕ ಸಾಮಾನ್ಯ ಕಾರ್ಗೋ ಬಳಕೆಗಾಗಿ ಶಕ್ತಿ ಮತ್ತು ಇಂಧನ ಎಕಾನಮಿಯ ಸೂಕ್ತ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.
• ಬೈ-ಫ್ಯೂಯೆಲ್ (CNG + ಪೆಟ್ರೋಲ್): ವೆಚ್ಚವನ್ನು ತಗ್ಗಿಸುವ ಬಯಕೆಯನ್ನು ಹೊಂದಿರುವ ಆಪರೇಟರ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿರುವ ಈ ರೂಪಾಂತರವು CNG ಮೋಡ್‌ನಲ್ಲಿ 26bhp ಮತ್ತು 51Nm ಅನ್ನು ನೀಡುತ್ತದೆ ಮತ್ತು ಇದು ಶ್ರೇಣಿ ಮತ್ತು ನಮ್ಯತೆಯನ್ನು ವಿಸ್ತರಿಸಲು 5-ಲೀಟರ್ ಪೆಟ್ರೋಲ್ ಟ್ಯಾಂಕ್ ಅನ್ನು ಹೊಂದಿದೆ.
• ಎಲೆಕ್ಟ್ರಿಕ್ (EV): 38bhp, 104Nm ಟಾರ್ಕ್ ಮತ್ತು ಪ್ರತಿ ಚಾರ್ಜ್‌ಗೆ 155 ಕಿಮೀ ವ್ಯಾಪ್ತಿಯೊಂದಿಗೆ, ನಗರ ಪ್ರದೇಶದ ಲಾಜಿಸ್ಟಿಕ್ಸ್‌ಗೆ ACE Pro EV ಸೂಕ್ತವಾಗಿದೆ. ಇದು IP67-ರೇಟೆಡ್ ಬ್ಯಾಟರಿ ಮತ್ತು ಮೋಟಾರ್ ಅನ್ನು ಹೊಂದಿದ್ದು, ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸುತ್ತದೆ.
ಬಲವಾಗಿ ಕಾರ್ಯನಿರ್ವಹಿಸುವ ಪೇಲೋಡ್
ಅತ್ಯುತ್ತಮ ದರ್ಜೆಯ 750 ಕೆಜಿ ಪೇಲೋಡ್ ಮತ್ತು 6.5-ft (1.98 m) ಲೋಡ್ ಡೆಕ್ ಮೂಲಕ, ಸಣ್ಣ-ಪ್ರಮಾಣದ ಲಾಜಿಸ್ಟಿಕ್ಸ್‌ಗೆ ಬಲವಾದ ದೃಢತೆಯನ್ನು ACE Pro ತರುತ್ತದೆ. ಇದರಲ್ಲಿ ಫ್ಯಾಕ್ಟರಿ-ಫಿಟ್ಟೆಡ್ ಫ್ಲಾಟ್‌ಬೆಡ್ ಅಥವಾ ಹಾಫ್-ಡೆಕ್ ಆಯ್ಕೆಗಳಿದ್ದು ಕಂಟೈನರ್, ರೀಫರ್ ಮತ್ತು ಮುನ್ಸಿಪಲ್ ಬಾಡಿ ಫಿಟ್ಮೆಂಟ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ, ಈ ಮೂಲಕ ಇದು ಇ-ಕಾಮರ್ಸ್‌ನಿಂದ ಹಿಡಿದು ಕೋಲ್ಡ್-ಚೈನ್ ಪೂರೈಕೆಯವರೆಗೆ ಎಲ್ಲದಕ್ಕೂ ಸೂಕ್ತವಾದ ಹೊಂದಿಕೆ ಆಗಿದೆ.
ಗರಿಷ್ಠ ಆರಾಮದಾಯಕತೆಗಾಗಿ ಚಾಲಕರಿಗೆ ಮೊದಲ ಆದ್ಯತೆ ನೀಡುವ ವಿನ್ಯಾಸ
ನಗರದ ಬೀದಿಗಳು ಅಥವಾ ಒರಟಾದ ಭೂಪ್ರದೇಶಗಳಲ್ಲಿ ಮಾಡುವ ದೀರ್ಘ ಶಿಫ್ಟ್‌ನ ಕೆಲಸವು ಆರಾಮದಾಯಕತೆಯನ್ನು ಬಯಸುತ್ತದೆ, ಇದನ್ನು ಪೂರೈಸುವುದಕ್ಕಾಗಿಯೇ ACE Pro ವಿಶಾಲವಾದ, ಎರ್ಗೋನಾಮಿಕ್ ಕ್ಯಾಬಿನ್, ಸಾಕಷ್ಟು ವಿಶಾಲವಾದ ಸ್ಟೋರೇಜ್ ಮತ್ತು AIS096-ಅನುಸರಣೆ ಮಾಡುವ ಕ್ರ್ಯಾಶ್-ಟೆಸ್ಟ್ ಮಾಡಲಾದ ವಿನ್ಯಾಸವನ್ನು ನೀಡುತ್ತದೆ. ಚಾಲಕರು ಈ ರೀತಿಯ ವೈಶಿಷ್ಟ್ಯಗಳಿಂದ ಪ್ರಯೋಜನ ಪಡೆಯುತ್ತಾರೆ:
• ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್
• ಐಚ್ಛಿಕ ಇನ್‌ಫೋಟೈನ್‌ಮೆಂಟ್ ಸಿಸ್ಟಮ್
• ಆಯಾಸ-ಮುಕ್ತವಾದ ಚಾಲನೆಗಾಗಿ ಆರಾಮದಾಯಕವಾದ ಸೀಟಿಂಗ್
ಇವುಗಳು ಕೇವಲ ವೈಶಿಷ್ಟ್ಯಗಳಷ್ಟೇ ಅಲ್ಲ; ಇವುಗಳು ಒತ್ತಡವನ್ನು ತಗ್ಗಿಸಲು, ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಉತ್ಪಾದಕೀಯತೆಯನ್ನು ವೃದ್ಧಿಸುವ ಸಾಧನಗಳು ಸಹ ಆಗಿವೆ.
ವ್ಯವಹಾರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ತಂತ್ರಜ್ಞಾನ
ಟಾಟಾ ಮೋಟಾರ್ಸ್‌ನ ಫ್ಲೀಟ್ ಎಡ್ಜ್ ಪ್ಲಾಟ್‌ಫಾರ್ಮ್‌ನ ಬೆಂಬಲವನ್ನು ACE Pro ಹೊಂದಿದ್ದು, ಭಾರತದಾದ್ಯಂತ 8 ಲಕ್ಷ ಸಂಪರ್ಕಿತ ವಾಹನಗಳಿವೆ. ಇದು ಇವುಗಳ ಅನುಕೂಲತೆಯನ್ನು ಒದಗಿಸುತ್ತದೆ:
• ನೈಜ-ಸಮಯದ ವಾಹನದ ಸ್ಥಿತಿಗತಿಯ ಮೇಲ್ವಿಚಾರಣೆ
• ಚಾಲಕರ ನಡವಳಿಕೆಯ ಟ್ರ್ಯಾಕಿಂಗ್
• ಪ್ರೆಡಿಕ್ಟಿವ್ ಮೈಂಟೇನೆನ್ಸ್ ಅಲರ್ಟ್ಸ್
• ಗೇರ್ ಶಿಫ್ಟ್ ಅಡ್ವೈಸರ್ ಮತ್ತು Reverse Parking Assistance ರಿವರ್ಸ್ ಪಾರ್ಕಿಂಗ್ ಅಸಿಸ್ಟೆನ್ಸ್‌ನಂತಹ ನ್ಯಾವಿಗೇಶನ್ ಸಾಧನಗಳು
ಫ್ಲೀಟ್ ಮಾಲೀಕರು ಮತ್ತು ಸಾಗಣೆದಾರರಿಗೆ ಇದರಿಂದ ಹೆಚ್ಚು ಅಪ್‌ಟೈಮ್, ಉತ್ತಮ ಇಂಧನ ನಿರ್ವಹಣೆ ಮತ್ತು ಕಡಿಮೆ ನಿರ್ವಹಣಾ ವೆಚ್ಚಗಳು ಪ್ರಯೋಜನ ದೊರೆಯುತ್ತದೆ
ದೇಶದಾದ್ಯಂತದ ನೆಟ್‌ವರ್ಕ್, ತಡೆರಹಿತ ಮಾಲೀಕತ್ವ
ದೂರದ ಊರುಗಳ ತನಕವೂ ವಿಸ್ತರಿಸಿರುವ 2, 500ಕ್ಕೂ ಹೆಚ್ಚು ಸರ್ವೀಸ್ ಮತ್ತು ಸ್ಪೇರ್ಸ್ ಔಟ್‌ಲೆಟ್‌ಗಳು ಮತ್ತು ಸ್ಟಾರ್ ಗುರು ನೆಟ್‌ವರ್ಕ್ ಮೂಲಕ, ಟಾಟಾ ಮೋಟಾರ್ಸ್ ನಿರಂತರ ಬೆಂಬಲವನ್ನು ಖಾತ್ರಿಪಡಿಸುತ್ತದೆ. EV-ನಿರ್ದಿಷ್ಟ ವರ್ಕ್‌ಶಾಪ್‌ಗಳು ಮತ್ತು 24x7 ರಸ್ತೆಬದಿಯ ಸಹಾಯವು ವ್ಯವಹಾರಗಳನ್ನು ಯಾವುದೇ ಅಡೆತಡೆಯಿಲ್ಲದೆ ಸಾಗುವಂತೆ ಮಾಡುತ್ತದೆ.
ಹಣಕಾಸಿನ ಅಗತ್ಯವಿದೆಯೇ? ಈ ಸೌಕರ್ಯಗಳನ್ನು ನೀಡುವುದಕ್ಕಾಗಿ ಪ್ರಮುಖ ಬ್ಯಾಂಕ್‌ಗಳು ಮತ್ತು NBFC ಗಳ ಜೊತೆಗೆ ಟಾಟಾ ಕೈಜೋಡಿಸಿದೆ:
• ತ್ವರಿತ ಸಾಲದ ಅನುಮೋದನೆಗಳು
• ಅನುಕೂಲಕರ EMI ಯೋಜನೆಗಳು
• ಕಸ್ಟಮೈಸ್ ಮಾಡಲಾದ ಫಂಡಿಂಗ್ ಆಯ್ಕೆಗಳು
ನೀವು ಟಾಟಾದ ಡಿಜಿಟಲ್ ಸೇಲ್ಸ್ ಪ್ಲಾಟ್‌ಫಾರ್ಮ್ ಆದ ಫ್ಲೀಟ್ ವರ್ಸ್ ಮೂಲಕ ಆನ್‌ಲೈನ್‌ನಲ್ಲಿ ನಿಮ್ಮ ಆದ್ಯತೆಯ ACE Pro ವೇರಿಯೆಂಟ್ ಅನ್ನು ಬುಕ್ ಮಾಡಬಹುದು ಅಥವಾ ರಾಷ್ಟ್ರವ್ಯಾಪಿ ಇರುವ ಅವರ 1,250 ಕಮರ್ಷಿಯಲ್ ವೆಹಿಕಲ್ ಡೀಲರ್‌ಶಿಪ್‌ಗಳಿಗೆ ಭೇಟಿ ನೀಡಬಹುದು.
ಆಧುನಿಕ ಭಾರತಕ್ಕಾಗಿ ನಿರ್ಮಿಸಲಾಗಿದೆ
ACE Pro ಸರಣಿಯನ್ನು-ವಿಶೇಷವಾಗಿ EV ಅನ್ನು ಇಂದಿನ ಬೇಡಿಕೆಯ ಕೊನೆಯ-ಮೈಲಿಯ ತನಕದ ವಿತರಣೆಯ ಆರ್ಥಿಕತೆಗಾಗಿ ವಿನ್ಯಾಸಗೊಳಿಸಲಾಗಿದೆ. ದಿನಸಿ ಮತ್ತು ಕೊರಿಯರ್‌ಗಳಿಂದ ಹಿಡಿದು ಮೊಬೈಲ್ ಮಾರಾಟ ಮತ್ತು ಕೋಲ್ಡ್-ಚೈನ್ ಲಾಜಿಸ್ಟಿಕ್ಸ್ ತನಕ, ಪ್ರತಿಯೊಂದು ರೂಪಾಂತರವೂ ಭಾರತದ ಉದ್ಯಮಿಗಳ ವಿಶಿಷ್ಟ ಅಗತ್ಯಗಳನ್ನು ಪೂರೈಸುತ್ತದೆ.
"ಅದರ ಬಹು-ಇಂಧನ ಆಯ್ಕೆಗಳು, ಸುಲಭವಾದ ಕೈಗೆಟುಕುವ ಮತ್ತು ವರ್ಧಿತ ಚಾಲನಾ ಸಾಮರ್ಥ್ಯದೊಂದಿಗೆ, ವೈವಿಧ್ಯಮಯ ಬಳಕೆಯ ಸಂದರ್ಭಗಳಲ್ಲಿ ಉತ್ತಮ ಮೌಲ್ಯವನ್ನು Tata ACE Pro ನೀಡುತ್ತದೆ" ಎನ್ನುತ್ತಾರೆ ಟಾಟಾ ಮೋಟಾರ್ಸ್‌ನ SCVPU ಇದರ ವೈಸ್ ಪ್ರೆಸಿಡೆಂಟ್ ಮತ್ತು ಬ್ಯುಸಿನೆಸ್ ಹೆಡ್ ಆದ ಪಿನಾಕಿ ಹಲ್ದಾರ್.
ಒಂದು ವೇದಿಕೆ, ಹಲವು ಕನಸುಗಳು
ನಿಮ್ಮ ಡೆಲಿವರಿ ವ್ಯವಹಾರವನ್ನು ಪ್ರಾರಂಭಿಸುವ ಸಮಯ ನಿರ್ದಿಷ್ಟ ಕೆಲಸಗಾರರಾಗಿರಲಿ ಅಥವಾ ಫ್ಲೀಟ್ ಅನ್ನು ನಿರ್ವಹಿಸುವ ಬೆಳೆಯುತ್ತಿರುವ ಉದ್ಯಮವಾಗಿರಲಿ, Tata ACE Pro ಎಂಬುದು ವಿಶ್ವಾಸಾರ್ಹ ಪಾಲುದಾರವಾಗಿದೆ. ಪ್ರತಿ ಇಂಧನದ ಆದ್ಯತೆ, ಸ್ಮಾರ್ಟ್ ತಂತ್ರಜ್ಞಾನ ಮತ್ತು ಉದ್ಯಮದ ಪ್ರಮುಖ ಬೆಂಬಲದ ಆಯ್ಕೆಗಳೊಂದಿಗೆ, ಇದು ಕೇವಲ ಟ್ರಕ್‌ಗಿಂತ ಹೆಚ್ಚಾಗಿದೆ -ಇದು ಅವಕಾಶಕ್ಕಾಗಿನ ಒಂದು ವೇದಿಕೆಯಾಗಿದೆ.
Tata ACE Pro: ಪೆಟ್ರೋಲ್. CNG. EV. ಒಂದು ಗುರಿ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications