ಅಕ್ಕ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟ
ಉದಯೋನ್ಮುಖ ಕಥೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಈಬಾರಿ ಅಕ್ಕ' ಒಂದು ಕಥಾಸ್ಪರ್ಧೆಯನ್ನು ಏರ್ಪಡಿಸಿತ್ತು. ನಗದು ಬಹುಮಾನಗಳನ್ನು ಒಳಗೊಂಡ ಕಥಾಸ್ಪರ್ಧೆಯಲ್ಲಿ ವಿಜೇತರ ಹೆಸರುಗಳು ಇಂತಿವೆ.
ಮೊದಲನೇ ಬಹುಮಾನ: ನವೀನ ಭಟ್ ಗಂಗೋತ್ರಿ (ದೀಪ ತೋರಿದೆಡೆಗೆ')
ಎರಡನೇ ಬಹುಮಾನ: ಸಿರಿ ಹುಲಿಕಲ್ ('ನಡೆದಷ್ಟೂ ದಾರಿ ದೂರ')
ಮೂರನೇ ಬಹುಮಾನ: ವೈ.ಎಂ. ಶರಣ್ ಹಂಪಿ (ಸಾವಿನ ಮನೆ').
ಸ್ಪರ್ಧೆಗೆ ಬಂದಿದ್ದ ನೂರೈವತ್ತು ಕಥೆಗಳನ್ನು ಓದಿ ಫಲಿತಾಂಶ ನಿರ್ಧರಿಸಿದವರು ಡಾ.ವೀಣಾ ಶಾಂತೇಶ್ವರ, ಅಬ್ದುಲ್ ರಶೀದ್ ಮತ್ತು ಎಸ್.ದಿವಾಕರ್. ಕೃತಿಯ ಪ್ರಧಾನ ಸಂಪಾದಕರು ಡಾ.ಮೈ.ಶ್ರೀ.ನಟರಾಜ್ ಮತ್ತು ಸಹಸಂಪಾದಕಿಯರಾದ ನಳಿನಿ ಮೈಯ ಮತ್ತು ತ್ರಿವೇಣಿ ಶ್ರೀನಿವಾಸ ರಾವ್. ಸಮ್ಮೇಳನ ಸಾಹಿತ್ಯ ಸಮಿತಿಯ ಸಹ ಅಧ್ಯಕ್ಷ ಮತ್ತು ಸಲಹೆಗಾರರು ಎಚ್.ವೈ.ರಾಜಗೋಪಾಲ್.
ಕಥಾಸ್ಪರ್ಧೆಗೆ 150ಕ್ಕೂ ಹೆಚ್ಚು ಕಥೆಗಳು ಬಂದಿದ್ದರಿಂದ ಅಂತಿಮ ಸುತ್ತಿಗೆ ಹದಿನೈದರ ಬದಲಾಗಿ ಇಪ್ಪತ್ತು ಅತ್ಯುತ್ತಮ ಕಥೆಗಳನ್ನು ಆಯಲಾಗಿತ್ತು. ಈ ಎಲ್ಲ ಇಪ್ಪತ್ತು ಕಥೆಗಳ ಕಥಾಸಂಕಲನ 'ದೀಪ ತೋರಿದೆಡೆಗೆ'ಯನ್ನು ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು. ಒಟ್ಟು 2500 ಪ್ರತಿಗಳನ್ನು ಮುದ್ರಿಸಲಾಗಿದ್ದು, ಕಥೆಗಾರರಿಗೆ ಎರಡೆರಡು ಪ್ರತಿಗಳನ್ನು ನೀಡಲಾಗುವುದು ಎಂದು ಸಂಪಾದಕೀಯ ಮಂಡಳಿ ಹೇಳಿದೆ.
ಸ್ಮರಣಸಂಚಿಕೆ ಮತ್ತು ಅಕ್ಕ ಪ್ರಕಟಣೆಗಳು : ಕನ್ನಡಿಗರ ಸಮ್ಮೇಳನ ಕೊನೆಗೂ ಉಳಿಸಿಹೋಗುವುದು ನೆನಪಿನ ಬುತ್ತಿಗಳು ಮತ್ತು ಅಳಿಸಲಾಗದ ಅಕ್ಷರಸಂಪತ್ತುಗಳು. ಈ ಸಮ್ಮೇಳನದಲ್ಲಿ ಒಟ್ಟು ಐದು ಪುಸ್ತಕಗಳು ಅಕ್ಕ' ವತಿಯಿಂದ ಸಮ್ಮೇಳನಾರ್ಥಿಗಳ ಕೈಚೀಲ ಸೇರಿದವು. ಸಮ್ಮೇಳನ ಸ್ಮರಣ ಸಂಚಿಕೆ ಸಿಂಚನ', ಉದಯೋನ್ಮುಖ ಕಥೆಗಾರರ ಕಥಾಸಂಕಲನ ದೀಪ ತೋರುವೆಡೆಗೆ', ವೈಚಾರಿಕ ಪ್ರಬಂಧ ಸಂಪುಟ ಕನ್ನಡ ಪ್ರಜ್ಞೆ' (ಸಂಪಾದಕ: ಸತೀಶ್ ಹೊಸನಗರ), ಮಕ್ಕಳಿಗಾಗಿಯೇ ಹೊರತಂದ ವಿಶೇಷ ಸಂಚಿಕೆ ಗುಬ್ಬಿಗೂಡು' (ಸಂಪಾದಕಿ: ಮೀರಾ ಪಿ.ಅರ್) ಮತ್ತು ಸಮ್ಮೇಳನ ಕಾರ್ಯಕ್ರಮಗಳ ದಾಖಲೆ ರಂಜಿನಿ' ಇವೇ ಆ ಐದು ಹೊತ್ತಗೆಗಳು. ಈ ಎಲ್ಲ ಕೃತಿಗಳ ಪ್ರಕಟಣೆಯ ಹಿಂದೆ ನುರಿತ ಸಂಪಾದಕವರ್ಗದ, ಪ್ರಬುದ್ಧ ಮತ್ತು ಉತ್ಸಾಹಿ ಲೇಖಕರ ಲೇಖನ ವ್ಯವಸಾಯ ಕನ್ನಡ ಸಾಹಿತ್ಯದ ಫಲಗಳಲ್ಲಿ ತನ್ನ ಛಾಪನ್ನು ಬಹುಕಾಲ ಕಾಪಿಡುವುದರಲ್ಲಿ ಸಂಶಯವಿಲ್ಲ.
ಬಿಡುಗಡೆಯ ಸಂಭ್ರಮ : ಲಹರಿ ರೆಕಾರ್ಡಿಂಗ್ ಕಂಪೆನಿ ಅಕ್ಕ' ಸಮ್ಮೇಳನ ನಿಮಿತ್ತ ಹೊರತಂದ ಮುನ್ನೂರು ಹಾಡುಗಳ ಧ್ವನಿಸಂಪುಟವನ್ನು ಅಕ್ಕ ಅಧ್ಯಕ್ಷ ಅಮರನಾಥ ಗೌಡ ಬಿಡುಗಡೆ ಮಾಡಿದರು. ಲಹರಿಯ ವೇಲು ಉಪಸ್ಥಿತರಿದ್ದರು. ಪ್ರೊ.ಕೃಷ್ಣೇಗೌಡರ ಹಾಸ್ಯರಸಾಯನದ ಸಿ.ಡಿ ಸಂಪುಟ (ಹಾಸ್ಯದ ಹೊನಲು') ವನ್ನೂ ಅಮರನಾಥ ಗೌಡ ಬಿಡುಗಡೆ ಮಾಡಿದರು. ಶನಿವಾರ ಬಿಡುಗಡೆಯ ಭಾಗ್ಯ ಕಂಡ ಇನ್ನೊಂದು ಕೃತಿ ಮನು ಬಳಿಗಾರ್ ಅವರ ಕೆಲವು ಕತೆಗಳು'. ಸಿ.ಡಿಗಳು ಮತ್ತು ಪುಸ್ತಕ ಪರಿಚಯ ಕಪ್ಪಣ್ಣ ಮತ್ತು ಯಶವಂತ ಸರದೇಶಪಾಂಡೆ ಅವರಿಂದ.
ಅಕ್ಕ ಸಮ್ಮೇಳನ ಸೌಂದರ್ಯ ಸ್ಪರ್ಧೆಯ ಚಿತ್ರಪಟ
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications