ನ್ಯೂ ಜೆರ್ಸಿ ಅಕ್ಕ ಸಮ್ಮೇಳನದ ಮುನ್ನಾ ನೋಟ

ಸಮ್ಮೇಳನದ ಆಯೋಜನೆ ಅಕ್ಕ ಮೂಲ ಸಂಸ್ಥೆಯಿಂದ. ಅಕ್ಕ ಪದಾಧಿಕಾರಿಗಳ ಪಟ್ಟಿ ಹೀಗಿದೆ. ಆದರೆ, ಸಮ್ಮೇಳನವನ್ನು ವ್ಯವಸ್ಥೆ ಮಾಡುವ ಪ್ರಾಥಮಿಕ ಜವಾಬ್ದಾರಿ ಸ್ಥಳೀಯ ಕನ್ನಡ ಕೂಟ ಅಥವಾ ಕನ್ನಡ ಸಂಘದ ಹೆಗಲೇರುತ್ತದೆ. ಈ ಬಾರಿ ಈ ಹೊಣೆಹೊತ್ತ ಬಳಗದ ಹೆಸರು ನ್ಯೂ ಜೆರ್ಸಿ ರಾಜ್ಯದ ಕನ್ನಡ ಸಂಘ 'ಬೃಂದಾವನ'. ಈ ಕೂಟದಲ್ಲಿ ಪದಾಧಿಕಾರಿಗಳ ಆಯ್ಕೆ ಎರಡು ವರ್ಷಕ್ಕೊಮ್ಮೆ ಜರುಗುತ್ತದೆ. ಡಿಸೆಂಬರ್ 09ಕ್ಕೆ ಐದು ವರ್ಷ ಪೂರೈಸುತ್ತಿರುವ ಬೃಂದಾವನದ 2008-10 ನೇ ಸಾಲಿನ ಪದಾಧಿಕಾರಿಗಳ ನೋಟ್ ಪ್ಯಾಡ್ ನೋಡಿ.
ಸ್ಥಳೀಯ ಕನ್ನಡ ಸಂಘದ ಆಶ್ರಯದಲ್ಲಿ ಸಮ್ಮೇಳನ ವ್ಯವಸ್ಥೆಯಾದರೂ ಕೂಡ, ಬೃಹತ್ ಪ್ರಮಾಣದ ವಿಶ್ವ ಸಮ್ಮೇಳನ ಜವಾಬ್ದಾರಿ ನಿರ್ವಸುವುದಕ್ಕೆಂದೇ ವಿಶೇಷ ಸಮಿತಿಗಳನ್ನು ರಚಿಸಲಾಗುತ್ತದೆ. ಇದುವರೆಗೆ ಐದು ಸಮ್ಮೇಳನಗಳು ಜರುಗಿವೆ. ಆದರೆ ಈ ಬಾರಿಯ ವಿಶೇಷತೆಯೆಂದರೆ ಬೃಂದಾವನ ಸಂಘದ ಜತೆಗೆ ಅಕ್ಕಪಕ್ಕ ರಾಜ್ಯಗಳಾದ ನ್ಯೂಯಾರ್ಕ್, ಡೆಲವೇರ್, ಪೆನ್ಸಿಲ್‌ವೇನಿಯಾ ಹಾಗೂ ಕನೆಕ್ಟಿಕಟ್ ರಾಜ್ಯಗಳ ಕನ್ನಡ ಸಂಘಗಳ ಮಾನವ ಸಂಪನ್ಮೂಲ ಕಲೆತು ವಿಶಾಲ ಸಮ್ಮೇಳನ ಸಮಿತಿ ರಚನೆಯಾಗಿದೆ.
ಸುಮಾರು ಒಂದು ನೂರು ಸ್ವಯಂಸೇವಕರಿರುವ ಈ ಮಾತೃ ಸಮಿತಿಯಿಂದ ಆಯ್ದ ನಾನಾ ಉಪ ಸಮಿತಿಗಳು ಇರುತ್ತವೆ. ಈ ಸಲ ಒಟ್ಟು 33 ಸಮಿತಿಗಳನ್ನು ರಚಿಸಲಾಗಿದ್ದು ಒಂದೊಂದೂ ಸಮಿತಿಗಳಿಗೆ ನಿರ್ದಿಷ್ಟ ಜವಾಬ್ದಾರಿ ಇರುತ್ತದೆ. ಸಮಿತಿಯ ಹೆಸರು, ಸದಸ್ಯರು, ಜವಾಬ್ದಾರಿಯ ಕ್ಷೇತ್ರ ಮತ್ತು ಅವರವರ ದೂರವಾಣಿ ಸಂಖ್ಯೆಗಳು ಹಾಗೂ ಈ ಮೇಲ್ ವಿಳಾಸಗಳು ಕೋಷ್ಟಕದಲ್ಲಿ ಅಡಕವಾಗಿದೆ. ಉಪಯೋಗಿಸಿ. ಗಮನಾರ್ಹ ಸಂಗತಿಯೆಂದರೆ ಸಮಿತಿಯು ಯುವಕ ಯುವತಿಯರಿಂದ ತುಂಬಿ ತುಳುಕುತ್ತಿದೆ. ಪ್ರಸನ್ನವದನರಾಗಿರುವ ಸಗಟು ಸಮಿತಿಯ ಗ್ರೂಪ್ ಫೋಟೋ ಮೇಲೆ ಕಣ್ಣಾಡಿಸಿ.
ವಿಶಾಲ ಉತ್ತರ ಅಮೆರಿಕಾದಲ್ಲಿ ವಾಸಿಸುವ ಕನ್ನಡ ಕೂಟಗಳ ಮಾತೃ ಸಂಸ್ಥೆ ಅಕ್ಕನಿಗೆ ಎರಡು ವರ್ಷಗಳಿಗೊಮ್ಮೆ ಆಯ್ಕೆಯಾಗುವ ಪದಾಧಿಕಾರಿಗಳಲ್ಲದೆ, ಮೂಲಭೂತವಾಗಿ ಸಂಸ್ಥೆಗೆ ಮಾರ್ಗದರ್ಶನ ಮಾಡುವುದಕ್ಕೆ ಅಕ್ಕ ವಿಶ್ವಸ್ಥ ಮಂಡಳಿ ಇರುತ್ತದೆ. ಮಂಡಳಿಯಲ್ಲಿ 11 ಸದಸ್ಯರಿರುತ್ತಾರೆ. ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ಹಾಗೂ ಸಮ್ಮೇಳನದ ಅಡ್ವೈಸರ್ ಅಮರ್ ನಾಥ ಗೌಡ. ಅವರೊಂದಿಗೆ ದಟ್ಸ್ ಕನ್ನಡ ಡಾಟ್ ಕಾಂ ಡಿಸೆಂಬರ್ 22ರ ಮಂಗಳವಾರ ನಡೆಸಿದ ಸಂದರ್ಶನದ ಆಯ್ದ ಭಾಗಗಳು ಹೀಗಿವೆ. ಓದಿ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications