ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಡವೇ ಹೆಚ್ಚು, ಸಂಪಿಗೆ ಕಡಿಮೆ

By Staff
|
Google Oneindia Kannada News

Suresh Ramachandraಪ್ರಿಯ ಶ್ಯಾಮ್‌ ಅವರೆ,

ನಿಮ್ಮ ಲೇಖನ ಓದಿದೆ. ಹೀಗಿದೆ ನಮ್ಮ ಅನಿಸಿಕೆಗಳು.

ಇದು ಟೀಕೆ-ಟಿಪ್ಪಣಿಗಳಿಗೆ ಸಮಯವಲ್ಲ. ಸ್ಫೂರ್ತಿ, ಪ್ರೋತ್ಸಾಹದ ಬರಹಕ್ಕೆ ತಕ್ಕ ಸಮಯ.

ದಯವಿಟ್ಟು ಸಮ್ಮೇಳನಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅನೇಕ ಮಂದಿ ಸ್ವಯಂಸೇವಕರನ್ನು ತಮ್ಮ ಬರಹದ ಮೂಲಕ ಉತ್ತೇಜಿಸಿ. ನಿಮ್ಮ ಮುಂದಿನ ಬರಹ ಕಾವೇರಿ-ಅಕ್ಕ ಮತ್ತು ಎಲ್ಲ ಕನ್ನಡಿಗರನ್ನು ಒಂದುಗೂಡಿಸುವಂತಾಗಲಿ ಎಂದು ಆಶಿಸುತ್ತೇವೆ.

ಸಮ್ಮೇಳನದ ಹಾದಿಯಲ್ಲಿ ಕಲ್ಲು-ಮುಳ್ಳುಗಳು ಬಂದೇ ಬರುತ್ತದೆ. ಈ ಎಲ್ಲ ಅಡೆ-ತಡೆಗಳನ್ನು ಮೆಟ್ಟಿ 'ಕನ್ನಡವೇ ಸತ್ಯ" ಎಂಬ ಗುರಿಯೊಂದಿಗೆ ನಾವೆಲ್ಲ ಸೇರಿ ಸಮ್ಮೇಳನವನ್ನು ಯಶಸ್ವಿಗೊಳಿಸೋಣ.

ಕೆಂಡ ಸಂಪಿಗೆಯ ಬರಹದಲ್ಲಿ ಕೆಂಡದ ಅಂಶವೆ ಹೆಚ್ಚಾಗಿದೆ! ನಿಮ್ಮ ಮುಂದಿನ ಬರಹ ಸಂಪಿಗೆಯ ಕಂಪನ್ನು ಮಾತ್ರ ನೀಡಲಿ ಎಂದು ಆಶಿಸುತ್ತೇವೆ. ಸಮ್ಮೇಳನದ ಎಲ್ಲ ವಿಷಯಗಳಿಗು ಅಧಿಕೃತ ವಕ್ತಾರರಾದ ಸಂಚಾಲಕರನ್ನು ಸಂಪರ್ಕಿಸಿ. ಸಮ್ಮೇಳನದ ನಂತರ ನಿಮ್ಮ ಅನಿಸಿಕೆಗಳನ್ನು ಸ್ವಾಗತಿಸುತ್ತೇವೆ.

ತಮ್ಮ ವಿಶ್ವಾಸಿ,

ಸುರೇಶ್‌ ರಾಮಚಂದ್ರ ಮತ್ತು ರವಿ ಡಂಕಣಿಕೋಟೆ
ಸಂಚಾಲಕರು, 4ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ
ವಾಷಿಂಗ್‌ಟನ್‌ ಡಿ.ಸಿ
25/07/06

*

ಎಲ್ಲಕ್ಕಿಂತ ಕನ್ನಡ ಪ್ರೀತಿಯೇ ಹೆಚ್ಚು!

ಪ್ರಿಯ ಸುರೇಶ್‌ ಮತ್ತು ರವಿ ಡೆಂಕಣಿಕೋಟೆ ಅವರಿಗೆ,

ಸಮಸ್ತ ಕನ್ನಡಿಗರಿಗೆ ತಿಳಿದಿರುವ ಹಾಗೆ ದಟ್ಸ್‌ಕನ್ನಡ.ಕಾಂ ಯಾವತ್ತೂ ಕನ್ನಡ ಮತ್ತು ಕನ್ನಡಿಗರ ಪರವಾಗಿಯೇ ನಿಲ್ಲುತ್ತದೆ.

ಕನಕಪುರ ರಸ್ತೆಯ ಫ್ಯಾಮಿಲಿ ಮಾರ್ಟ್‌ನಲ್ಲಿ ಕನ್ನಡ ಮಾತ್ರ ತಿಳಿದ ಮೂರು ವರ್ಷದ ಮಗು ಕಳೆದು ಹೋಗಲಿ, ಉತ್ತರ ಅಮೆರಿಕಾದಲ್ಲಿ 4000 ಮಂದಿ ಪ್ರೌಢ ಕನ್ನಡಿಗರು ಕಲೆತು ಸಮ್ಮೇಳನ ನಡೆಸಲಿ.. ನಮ್ಮ ಕನ್ನಡದ ಪ್ರೀತಿ ಬದಲಾಗುವುದಿಲ್ಲ. ಅದು ಅಸ್ಖಲಿತ.

ನೀವೇ ಹೇಳಿದ ಹಾಗೆ ಹಾದಿಯಲ್ಲಿ ಕಲ್ಲು ಮುಳ್ಳುಗಳು ಇದ್ದೇ ಇರುತ್ತವೆ. ಪಾದರಕ್ಷೆಗಳನ್ನು ತೊಟ್ಟುಕೊಂಡು ಹೆಜ್ಜೆ ಹಾಕೋಣ. ಆಗಸಕ್ಕೆಸೆದ ಕಲ್ಲಿನಂತಿರೋಣ!

ನನಗೆ ಮತ್ತು ನಮ್ಮ ಪತ್ರಿಕೆಗೆ ಚೆನ್ನಾಗಿ ಗೊತ್ತು : ಸಮ್ಮೇಳನಕ್ಕೆ ನೀವೆಲ್ಲ ಹಗಲಿರುಳು ನಿಸ್ವಾರ್ಥವಾಗಿ ಶ್ರಮಿಸುತ್ತಿದ್ದೀರಿ. ನಿಮ್ಮ ಕನಸುಗಳೆಲ್ಲ ನನಸಾಗಲಿ. ಶುಭಾಶಯಗಳು.

- ಶಾಮ್‌, ಸಂಪಾದಕ
ದಟ್ಸ್‌ ಕನ್ನಡ.ಕಾಂ
ಬೆಂಗಳೂರು
26/07/06

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X