ಗಂಡು ಜಾತಿಯ ಮೇಲೆ ಹೆಣ್ಣಿನ ಸೇಡಿನ ನಂಜು

ನಮ್ಮ ಅಜ್ಜಿಯ ಜನಪದ ಕತೆಗಳಲ್ಲಿ,
ಯಾವಾಗಲು ಇರುತಿದ್ದ ಒಬ್ಬ ಕಠಾರಿವೀರ
ಕುದುರೆ ಓಡಿಸುತ, ಒಬ್ಬಳನೆ ಪ್ರೀತಿಸುತಾ
ಸುಂದರ ಸೊಗಸುಗಾರ ಕುದುರೆ ಸವಾರ...
ಬಾಯಿಬಿಟ್ಟು ಕೇಳುತಿದ್ದರು ನಮ್ಮ ಸೀತಾ, ವನಿತಾ ಗೀತಾ...
ಎಲ್ಲಾ ಕಾಲಕ್ಕೂ ಎಲ್ಲಾ ಹುಡುಗಿಯರಿಗೆ ಬೇಕು
ಅದೇ ಸುಂದರ ಸೊಗಸುಗಾರ ರಾಜಕುಮಾರ
ಇಗೆಲ್ಲಾ ಅಜ್ಜಿ ಕತೆಗಳ ರಾಜಕುಮಾರೆಲ್ಲ
ಸಾಫ್ಟ್‌ವೇರ್ ತುಂಡುಗಳಾದಂತೆ ನನ್ನ ಗುಮಾನಿ
ಅನುಮಾನವಿದ್ದರೆ ಹುಡುಗಿಯರನ್ನು ಕೇಳಿ ಸ್ವಾಮಿ
ಅಮೇರಿಕಾ ವೀಸಾವಿದ್ದವನು ಪಾಶುಪತಾಸ್ತ್ರ ಪಡೆದಂತೆ
ವಿದೇಶಕ್ಕೆ ಹೋಗಿ ಮರಳಿ ಬಂದವನು
ಸ್ವರ್ಗಾರೋಹಣ ಮಾಡಿ ಮರಳಿ ಬಂದಂತೆ
ಮರಳಿ ಬರದೇ ಇದ್ದವನು, ಭೂಪತಿ ಗಂಡಂತೆ!
ಅತಲ, ವಿತಳ, ಪಾತಾಳದಲ್ಲಿ ಹುಡುಕಿದರೂ
ನಮ್ಮ ಪೂಜಾರಿ, ರೈತ, ಮೇಸ್ತ್ರಿಗೆ ಹೆಣ್ಣು ಸಿಕ್ಕೊಲ್ಲ!
ಕಾರಣ ನಿಮಗೇ ಗೊತ್ತಲ್ಲ...
ಎಲ್ಲಾ ಹೆಣ್ಣು ಮಕ್ಕಳದು ಒಂದೇ ಹರಕೆ
ಸಿಗಲಿ ನಮಗೆ ಸಾಫ್ಟ್‌ವೇರ್ ಗಂಡೊಂದು
ಹುಟ್ಟಲಿ ನಮ್ ಹೊಟ್ಟೆಲಿ ಸಾಫ್ಟ್‌ವೇರ್ ತುಂಡೊಂದು!
ಈ ತನಕ ಕಾಡಿದ ಗಂಡುಜಾತಿಯ ಬಗ್ಗೆ
ಹೀಗೂ ಇರಬಹುದೇ... ಸೇಡಿನ ನಂಜು?
-2-
ಧರ್ಮ ಕೊಟ್ಟಳೇ ಮೀರಲಾರದ ಪುಕ್ಕಲ ಗಂಡು
ನೋಡಲಾರನೇಕೆ ಧರ್ಮ ಬೇಲಿಯ ಜಿಗಿದಿಂದು?
ಅಪ್ಪಣೆ ಕೊಡಿಸಬೇಕಾದ ನಮ್ಮ ಜಗದ್ಗುರು
ಎಲ್ಲಿ ಹೋದರು ಎಂದು ಹೊಡುಕಿದರೆ..
ಅವರು... ದೈವಾಂಶ ಸಂಭೂತರು
ಗೊಸಂತತಿಯ ಸಂರಕ್ಷಣೆಯಲ್ಲಿ ತಲ್ಲಿನರು!












Click it and Unblock the Notifications