ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮಪ್ಪ ಚಿರಂಜೀವಿ : ಗಿರಿಜಾ ಮೇಘನಾಥ್ ಕವನ

By * ಗಿರಿಜಾ ಮೇಘನಾಥ್; ನಾರ್ತ್ ಕೆರೊಲಿನಾ
|
Google Oneindia Kannada News

Ramachandra
ಅಪ್ಪಾ... ಏಳು-ವರುಷ ಏಳು-ಯುಗವಾಯಿತೆಂದು
ಅಕ್ಕನ ಬಿಟ್ಟಿರಲಾರದೆ ಅಕ್ಕನ ಬಳಿ ಹೋದಿರಾ ಅಪ್ಪಾ...
ಅಕ್ಕ (ಅಮ್ಮ)ನ ಪ್ರೀತಿ-ಪ್ರೇಮವನ್ನು ನಮ್ಮಲ್ಲಿ ತುಂಬುತ್ತಾ
ಅಕ್ಕ ಇಲ್ಲಾ ಎನ್ನುವ ನೋವನ್ನು ನಿಮ್ಮ ವಾತ್ಸಲ್ಯ ಮರೆಮಾಡಿತ್ತು

ಬಯಸಲಿಲ್ಲಾ ನೀವು ಯಾರಿಂದ ಯಾವುದನ್ನು ಏನನ್ನೂ
ಅಜ್ಞಾನ ಅಹಂಕಾರವೆಂಬುದು ತಲೆಎತ್ತಿದ್ದಿಲ್ಲ
ಕೈ ನೀಡಿ ಬರಲಿ ಕೈ ನೀಡದೇ ಬರಲಿ ಬರಿಗೈಲಿ ಹಿಂದಿರುಗಿದವರ್ಯಾರೂ ಇಲ್ಲಾ
ಹಸನ್ಮುಖ ಕಿರು-ಹುಸಿನಗೆಯೇ ಸ್ಫೂರ್ತಿ ನಮಗೆಲ್ಲಾ

ಅಪ್ಪಾ ಹದವಾದ ನಿಮ್ಮ ಬುದ್ದಿಮಾತು ನಡೆ-ನುಡಿ
ಪ್ರೋತ್ಸಾಹ ತುಂಬಿದ ಮಾತುಗಳನ್ನು ಕೇಳಲು
ಮನ ಕಾತುರದಿಂದ ಪುನಃ ...ಪುನಃ ಕೇಳಬೇಕೆಂದು...
ದಾಹ ತಾಳಲಾರದಂತೆ ಹಾತೊರೆಯುತ್ತಿತ್ತು...ಹಾತೊರೆಯುತಿದ್ದೆವಪ್ಪಾ
ನೀವು ಪ್ರೀತಿಯಿಂದ ಕರೆಯುತ್ತಿದ್ದ ಹೆಸರುಗಳು ಕಿವಿಯಲ್ಲಿ ಗುಂಯ್‌ಗುಡುತ್ತಿದ್ದವಪ್ಪಾ

ನೀವು ಕಲಿಸಿದ ಶ್ರದ್ದೆ-ಭಕ್ತಿ , ಹಿತವಚನಗಳೇ... ಬಾಳಿನಲ್ಲಿ
ನಮ್ಮೆಲ್ಲರಿಗೂ ದಾರಿ-ದೀಪವಾಗಿ ಹರಸುತ್ತಾ ಬೆಳೆಸುತ್ತಾ....ಮಾರ್ಗ-ದರ್ಶನವಾಗಿದ್ದವಪ್ಪಾ
ಸದಾ ಮನದುಂಬಿ ಕೂಗುತಿದೆ...ನಾವೇ ಭಾಗ್ಯವಂತರು ಪುಣ್ಯವಂತರೆಂದು
ನಿಮ್ಮ ಮಕ್ಕಳು ಮೊಮ್ಮಕ್ಕಳು ಸಾಧಿಸಿದ ಸಾಧನೆ
ಪುಟ್ಟದ್ದೋ ದೊಡ್ದದ್ದೋ ... ಎಲ್ಲವೂ ನಿಮಗರ್ಪಿತವಪ್ಪಾ

ದೂರ ಕರೆಮಾಡಿ ಅಪ್ಪಾ...ಎಂದು ಕರೆದಾಗ ಆಗುವ ಆನಂದ ಏನೆಂದು ಹೇಳಲಿ
ನಿಮ್ಮಿಂದ ಬರುವ ಸಿಹಿ-ಸಕ್ಕರೆ ಜೇನಿಗಿಂತ ಸವಿಯಾದ
ಪ್ರೀತಿ ತುಂಬಿದ...ಆ ನಿಮ್ಮ ದ್ವನಿ ಕೇಳಿ ಅತೀವ ಉಲ್ಲಾಸ-ಉತ್ಸಾಹದಿಂದ
ಗರಿ-ಕೆದರಿ ಕುಣಿವ ನವಿಲಿನಂತೆ ಚೇತನ ತುಂಬಿ ಮನ ಸಂತೋಷದಿಂದ ತುಳುಕುತ್ತಿತ್ತು
ಅದ ಕೇಳಲು ಮನ ಹಾತೊರೆದು ಅರಸುತ್ತಿದೆಯಪ್ಪಾ...

ಬಂದೆವಾ...ನೀವಿಲ್ಲದ ಮನೆಗೆ ನೂರ-ಇಪ್ಪತ್ಮೂರು ದಿನಗಳ ನಂತರ
ಸಂಕಟ ದುಃಖ ಬೇಸರ ಹೊತ್ತು ತಾಯಿನಾಡಾದ ತವರೂರು ತಂದೆತಾಯಿ ಮನೆಗೆ
ಸ್ವಾಗತಿಸಿತು ಮುಂಬಾಗಿಲಿನಲ್ಲೇ ಸ್ಮಿತವದನದ ಆ ನಿಮ್ಮ ಚಿತ್ರಪಟ
ಈಗ ಬಂದಿರಾ ಬನ್ನಿ-ಬನ್ನಿ, ಬಾ...ಮಗ ಬಾ ಬಾ... ಎನ್ನುವಂತಿತ್ತು
ದುಃಖ ಉಕ್ಕಲಿಲ್ಲ ಕಣ್ಣೀರು ಸುರಿಯಲಿಲ್ಲ ಮರೆತೆನಾಕ್ಷಣ ನಾನೆಲ್ಲ.

ಅನಾಥರಾದೆವಾ...ನಾವೆಲ್ಲಾ ಎಂದು ದುಃಖಿಸುತ್ತಿರುವಾಗ
ಮಿನುಗಿತು ಮನದಾಳದಿಂದ ಅನಾಥರಲ್ಲ ನೀವು ಅನಾಥರಲ್ಲಾ... ಎಂದು
ಕಣ್ಣೀರೋರಸಿ ಕಣ್ತೆರೆದು ನೋಡಿದಾಗ ಕಂಡೆನಾ ನಿಮ್ಮನ್ನು....
ಲಕ್ಷ್ಮಿ-ನಾರಾಯಣ, ಶಿವ-ಪಾರ್ವತಿಯರಂತೆ ಜೊತೆಯಾಗಿ ಎಲ್ಲೆಲ್ಲೂ....
ಕಣ್ಮುಚ್ಚಿತು ಕೈ-ಜೋಡಿಸಿದವು ಭಕ್ತಿ-ಭಾವದಿಂದ
ಮನ ನುಡಿಯಿತಪ್ಪಾ ನಮ್ಮಪ್ಪ ಚಿರಂಜೀವಿ ಶ್ರೀರಾಮಚಂದ್ರ ಎಂದು
ಇದೋ ನಿಮಗೆ ನಮ್ಮೆಲ್ಲರ ನಮೋ ನಮಃ

English summary
My beloved father : Kannada poem by Girija Meghanath, North Carolina, USA in the memory of her father.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X